ಶ್ರೀರಂಗಪಟ್ಟಣ ಪೊಲೀಸ್ ಠಾಣೆ
ದಿನಾಂಕ 14-05-11 ರಂದು ಪಿರ್ಯಾದಿ ಶ್ರೀ ಪ್ರಭಾಕರ್ ರಾವ್ ಸಿಂದೆ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀರಂಗಪಟ್ಟಣ ವೃತ್ತ ರವರ ದೊರೆತ ಮಾಹಿತಿಯಂತೆ ಶ್ರೀರಂಗಪಟ್ಟಣ ಟೌನ್ ನ ಬಾಲಾಜಿ ಲಾಡ್ಜ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 1] ಸೂಯದ್ ರೂಹುಲ್ಲಾ ಬಿನ್ ಸೈಯದ್ ಖಲಿಂ, 2] ಹಸೀನಾ ಕೋಂ ರಷೀದ್ , 3] ಮೊಹಮದ್ ಖಲಿಂ ಉಲ್ಲಾ, 4] ಲುಗ್ನಾ ಬಿನ್ ಜುಬೇರಾ. 5] ಪುಂಟಲೀಕ ಇತರರನ್ನು ಮತ್ತು 1940 ರೂ ಹಣವನ್ನು ಮತ್ತು ಒಂದು ಮೋಟಾರ್ ಬೈಕ್ ನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಗಳ ವಿರುದ್ದ ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ 317/11 ಕಲಂ 3-4-5-6-7 ಐ.ಟಿಪಿ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ
ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ
ದಿನಾಂಕ 13-05-11 ರಂದು ಪಿರ್ಯಾದಿ ಶ್ರೀ ಎಲ್ ಕೆ ರಮೇಶ ಅರಕ್ಷಕ ನಿರೀಕ್ಷಕರು ಮಳವಳ್ಳಿ ಪುರ ಪೊಲಿಸ್ ಠಾಣೆ ರವರು ಗಸ್ತಿನಲ್ಲಿರು ಬೇಕಾದರೆ ಬೆಳ್ಳಿಗೆ 10-45 ಗಂಟೆ ಸಮಯಲ್ಲಿ ಆರೋಪಿಗಳಾದ ಅನ್ವರ್ ಪಾಷ ಮತ್ತು ಜಯಚಂದ್ರ ಮುಸ್ಲಿಂ ಬ್ಲಾಕ್ ಅರಳಿ ಕಟ್ಟೆಯ ಬಳಿ. ಕುಳಿತುಕೊಂಡು ರಸ್ತೆಯಲ್ಲಿ ಬರುವ ಸಾರ್ವಜಿಕರನ್ನು ಕರೆದು ಐ.ಪಿ.ಎಲ್ ನಡೆಸುತ್ತಿರುವ ಕ್ರಕೇಟ್ ಪಂದ್ಯಾವಳಿಯಲ್ಲಿ. ಒಬ್ಬ ರಾಯಲ್ ಚಾಲೆಂಕರ್ಸ್ ಬೆಂಗಳೂರು ತಂಡ ಗೆಲ್ಲುತ್ತದೆ ಅಂತ ಹಣ ಕಟ್ಟಿಸಿಕೊಳ್ಳುತ್ತಿದ್ದ. ಮತ್ತೊಬ್ಬ ಕೊಲ್ಕತಾ ನೈಟ್ ರೈಡರ್ಸ್ ತಂಡ ಗೆಲ್ಲುತ್ತದೆ ಎಂದು ಕೂಗಿ ಹೇಳುತ್ತಾ ಹಣವನ್ನು ಪಣಾವಗಿ ಕಟ್ಟಿಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಾ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಡನೆ ದಾಳಿ ಮಾಡಿದ್ದಾಗ ಆರೋಪಿ ಅನ್ವರ್ ಪಾಷ ಬಳಿ ಶೋಧಿಸಿದಾಗ 22.510-00 ಒಂದು ನೋಕಿಯಾ ಮೊಬೈಲ್ ಮತ್ತು ಜಯಚಂದ್ರ ಶೋಧಿಸಿದಾಗ 32.500-00 ರೂ ನಗದು ಹಣ ಮತ್ತು 3 ನೋಕಿಯಾ ಮೋಬೈಲ್ ಗಳಿದ್ದ ಹಣವನ್ನು ವಶಕ್ಕೆ ತೆಗೆದು ಕೊಂಡು ಮೇಲ್ಕಂಡ ಆರೋಪಿಗಳ ವಿರುದ್ದಾ ಮಳವಳ್ಳಿ ಟೌನ್ ಪೊಲೀಸ್ ಠಾಣೆ ಮೊ.ಸಂ . 64/11 ಕಲಂ 87 ಕೆ.ಪಿ ಕಾಯಿದೆ ಮತ್ತು 420 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿ ತನಿಖೆ ಕ್ರಮ ಕೈಗೊಂಡಿರುತ್ತೆ
No comments:
Post a Comment