ಮಂಡ್ಯ ಜಿಲ್ಲಾ ಪೊಲೀಸ್
ಅಪರಾಧ ಅಂಕಿ ಅಂಶಗಳ ಪಕ್ಷಿನೋಟ
ಪತ್ರಿಕಾ ಪ್ರಕಟಣೆ
ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ (2011 ಏಪ್ರಿಲ್, ಮೇ ಮತ್ತು ಜೂನ್ ಮಾಹೆ) ವರದಿಯಾದ ಮತ್ತು ಪತ್ತೆಯಾದ ಅಪರಾಧ ಪ್ರಕರಣಗಳ ಅಂಕಿಅಂಶಗಳು.
ವರದಕ್ಷಿಣೆ ಕಿರುಕುಳ ಪ್ರಕರಣಗಳು - 22
ಮಾನಭಂಗ ಪ್ರಕರಣಗಳು - 16
ರಸ್ತೆ ಅಪಘಾತ ಪ್ರಕರಣಗಳು - 99
ಜೂಜಾಟದ ಪ್ರಕರಣಗಳು - 103
ವೇಶ್ಯಾವಾಟಿಕೆ ಪ್ರಕರಣಗಳು - 4
ಮೇಲ್ಕಂಡ ಅಪರಾಧ ಶೀರ್ಷಿಕೆಗಳಲ್ಲಿ ಕಳುವಾಗಿರುವ ಮಾಲುಗಳ ಒಟ್ಟು ಮೌಲ್ಯ : ರೂ 1,53,41,980/- (ಚಿನ್ನ ಮತ್ತು ಬೆಳ್ಳಿಯ ಆಭರಣಗಳು, ನಗದು, ವಾಹನಗಳು, ಮೊಬೈಲ್ ಹಾಗೂ ಇತರೆ)
ಇದೇ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಮಾಲುಗಳ ಒಟ್ಟು ಮೌಲ್ಯ : ರೂ. 39,36,126/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)
ಇದೇ ಅವಧಿಯಲ್ಲಿ ವಾರಸುದಾರರಿಗೆ ಹಿಂದಿರುಗಿಸಿದ ಮಾಲುಗಳ ಒಟ್ಟು ಮೌಲ್ಯ : ರೂ. 22,21,726/- ( ಚಿನ್ನಾಭರಣಗಳು, ವಾಹನಗಳು, ಮೊಬೈಲ್ ಮತ್ತು ಇತರೆ)
ಇದೇ ಅವಧಿಯಲ್ಲಿ ಕಳವು ಪ್ರಕರಣಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ 5 ಸಿಪಿಐ, 18 ಪಿಎಸ್ಐ, 15 ಎಎಸ್ಐ, 16 ಹೆಚ್.ಸಿ ಮತ್ತು 141 ಪಿಸಿ ರವರುಗಳಿಗೆ ` 29,235/- ನಗದು ಬಹುಮಾನ ನೀಡಲಾಗಿದೆ.
ಇದೇ ಅವಧಿಯಲ್ಲಿ ನ್ಯಾಯಾಲಯದಲ್ಲಿ 52 ಅಪಘಾತ ಪ್ರಕರಣಗಳು , 5 ಕಳವು ಪ್ರಕರಣಗಳು, 12 ಕೆ.ಪಿ.ಕಾಯ್ದೆ ಮತ್ತು 1 ಕೊಲೆ ಪ್ರಯತ್ನ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಆರೋಪಿಗಳಿಗೆ ಶಿಕ್ಷೆಯಾಗಿರುತ್ತದೆ.
ಈ 3 ತಿಂಗಳ ಅವಧಿಯಲ್ಲಿ 5 ಹಲ್ಲೆ, 1 ಅಪಘಾತ, 5 ವರದಕ್ಷಿಣೆ ಕಿರುಕುಳ, 2 ಎಸ್.ಸಿ/ಎಸ್.ಟಿ, 1 ಕೊಲೆ, 7 ಕಳವು, ಮತ್ತು 1 ಅಪಹರಣ ಪ್ರಕರಣಗಳು ನ್ಯಾಯಾಲಯದಲ್ಲಿ ಬಿಡುಗಡೆಯಾಗಿರುತ್ತದೆ.
ಇದೇ ಅವಧಿಯಲ್ಲಿ 21 ಹಲ್ಲೆ, 3 ಕಳವು, 5 ಅಪಘಾತ, 1 ವರದಕ್ಷಿಣೆ ಕಿರುಕುಳ, 1 ದರೋಡೆ ಪ್ರಯತ್ನ ಮತ್ತು 1 ಎಸ್.ಸಿ./ಎಸ್.ಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಇತರೆ ರೀತಿಯಲ್ಲಿ ವಿಲೇವಾರಿಗೊಂಡಿರುತ್ತದೆ.