ಪತ್ರಿಕಾ ಪ್ರಕಟಣೆ
ಮಂಡ್ಯ ನಗರದ ನೂರಡಿ ರಸ್ತೆಯಲ್ಲಿ ಹೊಂಚುಹಾಕುತ್ತಿದ್ದ 5 ಜನ ದರೊಡೆಕಾರರಾದ ಕೈಲಾಸಮೂರ್ತಿ @ ಟೈಗರ್ ಮತ್ತು ಇತರೆ 4 ಜನ ದರೋಡೆಕೋರರ ಬಂಧನ, ಇವರು ಸುಲಿಗೆ ಮಾಡಿದ 1 ಮಾರುತಿ ಕಾರ್, 1 ಮೋಟಾರ್ ಸೈಕಲ್, 2 ಲ್ಯಾಪ್ ಟಾಪ್ ಮತ್ತು 72 ಗ್ರಾಂ ತೂಕದ ಚಿನ್ನದ ಆಭರಣಗಳು ವಶ, ಇವುಗಳ ಒಟ್ಟು ಮೌಲ್ಯ 5.5 ಲಕ್ಷ ರೂಗಳು.
ದಿನಾಂಕ:28-08-2011 ರಂದು ಸಂಜೆ 7.30 ಗಂಟೆ ಸಮಯದಲ್ಲಿ ಮಂಡ್ಯ ನಗರದ ಪಶ್ಚಿಮ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಸಾರ್ವಜನಿಕರ ಸಹಾಯದಿಂದ ಮಂಡ್ಯದ ನೂರಡಿ ರಸ್ತೆಯಲ್ಲಿರುವ ರಾಜಸ್ಥಾನ್ ಜ್ಯೂಯೆಲರಿ ಅಂಗಡಿಯ ಬಳಿ ದರೋಡೆ ಮಾಡಲು ಹೊಂಚುಹಾಕುತ್ತಿದ್ದ ಆಸಾಮಿಗಳನ್ನು ಕಾರ್ ಮತ್ತು ಮೋಟಾರ್ ಸೈಕಲ್ ಸಮೇತ ಹಿಡಿದುಕೊಂಡು ವಶಕ್ಕೆ ತೆಗೆದುಕೊಂಡಿರುತ್ತಾರೆ.
ಆರೋಪಿಗಳ ಹೆಸರು ಮತ್ತು ವಿಳಾಸ ಕೆಳಕಂಡಂತಿರುತ್ತದೆ.
1.ಕೈಲಾಸ್ ಮೂರ್ತಿ @ ಮೂರ್ತಿ @ ಟೈಗರ್ ಬಿನ್ ಪೆರುಮಾಳ್, 22 ವರ್ಷ, ತಮಿಳು ಗೌಂಡರ್ ಜನಾಂಗ, ಆಕ್ಟೀವ್ ಜಿಮ್ ಕೋಚರ್, ವಾಸ ಕೇರಾಪ್ ಕುಡ್ಲುಗೇಟ್, ಮುನಿಯಪ್ಪ ರೆಡ್ಡಿ ಬಿಲ್ಡಿಂಗ್, ಬೆಂಗಳೂರು
2.ವಿಶ್ವನಾಥಶೆಟ್ಟಿಗಾರ್ ಬಿನ್ ಶ್ರೀನಿವಾಸ್ ಶೆಟ್ಟಿಗಾರ್, 26 ವರ್ಷ, ವಾಸ ಕೋರಮಂಗಲ, ಬೆಂಗಳೂರು, ಸ್ವಂತ ಸ್ಥಳ, ಅಮಾಸೆಬೈಲ್, ಕುಂದಾಪುರ, ತಾಲ್ಲೋಕು, ಉಡುಪಿ ಜಿಲ್ಲೆ.
3.ಕೃಷ್ಣಚಾರ್ @ ಕೃಷ್ಣ ಬಿನ್ ಶ್ರೀನಿವಾಸಚಾರ್, 23 ವರ್ಷ, ಬ್ರಾಹ್ಮಣ ಜನಾಂಗ, ವಾಸ ನಂ 246/ಎ, 3 ನೇ ಮೈನ್, 3 ನೇ ಕ್ರಾಸ್, ಕೆಂಪೇಗೌಡ ನಗರ, ಬೆಂಗಳೂರು.
4.ನಯಾಜ್ ಖಾನ್ @ ನಯಾಜ್ ಬಿನ್ ಸಮೀವುಲ್ಲಾ, 27 ವರ್ಷ, ವಾಸ ಎಸ್.ಎನ್.ಮೆಡಿಕಲ್, ಕೊರಟಗೆರೆ, ತುಮಕೂರು ಜಿಲ್ಲೆ.
5.ಮಹಮದ್ ಅರೀಪ್ @ ಅರೀಪ್ ಬಿನ್ ಅಬ್ದುಲ್ ರೆಹಮಾನ್, 27 ವರ್ಷ, ವಾಸ ಸಾಲಿಗ್ರಾಮ, ಕುಂದಾಪುರ ತಾಲ್ಲೋಕು, ಉಡುಪಿ ಜಿಲ್ಲೆ.
ಈ ಪ್ರಕರಣದ ವಿಚಾರಣೆ ಕಾಲದಲ್ಲಿ ಮೇಲ್ಕಂಡ ಆರೋಪಿಗಳು ದಿ:25-05-2011 ರಂದು ಬೆಂಗಳೂರಿನ ಉತ್ತರಹಳ್ಳಿ ಪೂರ್ಣಪ್ರಜ್ಞಾ ಲೇಔಟ್ ವಾಸಿಯಾದ ಎನ್.ಎಸ್.ಚಂದ್ರಶೇಖರ್ ಎಂಬುವವರ ಮನೆಗೆ ನುಗ್ಗಿ ಲಾಂಗ್ ತೋರಿಸಿ ಹೆದರಿಸಿ ಬೀರುವನ್ನು ತೆಗದು ಅದರಲ್ಲಿದ್ದ ಚಿನ್ನದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಅವರ ಬಾಬ್ತು ಮಾರುತಿ ಜೆನ್ ಎಸ್ಟಿಲೊ ಕಾರ್.ನಂ. ಕೆಎ-05 ಎಂಎಫ್ 9419 ಕಾರ್ ಕೀಯನ್ನು ಕಿತ್ತಕೊಂಡು ಪರಾರಿಯಾಗಿ ಹೋಗಿದ್ದು, ಈ ಬಗ್ಗೆ ಸುಬ್ರಮಣ್ಯಪುರಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ದಿ:20-06-2011 ರಂದು ಬೆಂಗಳೂರಿನ ಬನಶಂಕರಿ 2 ನೇ ಹಂತದ 24 ನೇ ಕ್ರಾಸ್ ನಲ್ಲಿ ವಾಸವಿರುವ ಶ್ರೀಮತಿ ಲಕ್ಷ್ಮೀ ರಾಮಣ್ಣ ಎಂಬುವವರ ಮನೆಗೆ ನುಗ್ಗಿ ಪಿರ್ಯಾದಿ ಲಕ್ಷ್ಮೀ ಎಂಬುವವರಿಗೆ ಬೆದರಿಸಿ ಬೀರುವನ್ನು ಜಖಂಗೊಳಿಸಿ ತೆಗೆದು ಅದರಲ್ಲಿದ್ದ 10 ಗ್ರಾಂನಷ್ಟು ಚಿನ್ನದ ಆಭರಣಗಳು, ನಗದು, ಮನೆಯಲ್ಲಿಟ್ಟಿದ್ದ ಒಟ್ಟು 6.1/2 ನಷ್ಟು ಬೆಳ್ಳಿಯ ಸಾಮಾನುಗಳನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದು, ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳು ಚಂದ್ರಶೇಖರ್ ರವರ ಬಾಬ್ತು ಮೇಲ್ಕಂಡ ಕಾರ್ ಕೆಎ-06-ಎಂ-6043 ಎಂದು ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸದರಿ ಕಾರ್ ನಲ್ಲಿ ಮಂಡ್ಯದಲ್ಲಿ ಕೃತ್ಯವೆಸಗಲು ಬಂದಿರುವುದು ತನಿಖೆಯಿಂದ ಧೃಡಪಟ್ಟಿರುತ್ತದೆ. ಸದರಿ ಕಾರ್ ಸೇರಿದಂತೆ ಆರೋಪಿಗಳು ಸುಲಿಗೆ ಮಾಡಿ ಮಾರಾಟ ಮಾಡಿದ 72 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 2 ಲ್ಯಾಪ್ ಟಾಪ್, 2 ಕ್ಯಾಮೆರಾಗಳನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಅಂದಾಜು ಮೌಲ್ಯ 5.5 ಲಕ್ಷ ರೂಗಳು. ಈ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಪೊಲೀಸರು ಬಲೆ ಬೀಸಿರುತ್ತಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಕೌಶಲೇಂದ್ರಕುಮಾರ್, ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎ.ಎನ್.ರಾಜಣ್ಣ, ಮಂಡ್ಯ ಉಪವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ಚೆನ್ನಬಸವಣ್ಣ.ಎಸ್.ಎಲ್. ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕಾಂತರಾಜ್.ಕೆ.ಆರ್. ರವರ ಮಾರ್ಗದರ್ಶನದಲ್ಲಿ ಮಂಡ್ಯ ಪಶ್ಚಿಮ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಕೆ.ಪ್ರಭಾಕರ್, ಮಂಡ್ಯ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಸಿ.ಕೆ.ಪುಟ್ಟಸ್ವಾಮಿ, ಕೆ.ಎಸ್.ಶಿವಲಿಂಗೇಗೌಡ, ನಿಂಗಣ್ಣ, ನಾರಾಯಣ, ಮಂಜುನಾಥ್, ತಿಲಕ್ ಕುಮಾರ್, ಪರಶುರಾಮ, ಪುಟ್ಟಸ್ವಾಮಿ, ಲಿಂಗರಾಜು, ನಟರಾಜು,ಭರತ್, ಪ್ರಕಾಶ್, ಮಹೇಶ, ಮುದ್ದುಮಲ್ಲಪ್ಪ, ಜೀಪ್ ಚಾಲಕರಾದ ರವಿ, ಯೋಗೇಶ್ ಇವರುಗಳು ಈ ಪತ್ತೆ ಕಾರ್ಯದಲ್ಲಿ ಪಾಲ್ಗೋಂಡಿರುತ್ತಾರೆ.
No comments:
Post a Comment