ಪತ್ರಿಕಾ ಪ್ರಕಟಣೆ
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೋಕು ಕಛೇರಿಯಲ್ಲಿ 'ಡಿ'ಗ್ರೋಪ್ ನೌಕರರಾಗಿದ್ದ ಶ್ರೀಮತಿ ಮಂಜುಳಾ ಎಂಬುವವರ ಮನೆಯಲ್ಲಿ ದಿನಾಂಕ:19-08-2011 ರಂದು ಮಂಜುಳಾ ರವರು ಮಧ್ಯಾಹ್ನ ಊಟದ ನಂತರ ಮನೆ ಬೀಗ ಹಾಕಿಕೊಂಡು ಕಛೇರಿ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಯಾರೋ ಮನೆಯ ಬೀಗ ಹೊಡೆದು 1 ಲಕ್ಷ 25 ಸಾವಿರ ರೂ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಠಾಣೆಯಲ್ಲಿ ಮೊ.ಸಂ.211/2011 ಕಲಂ 454-380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಕೆ.ಆರ್.ಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎನ್.ಎಸ್.ಸಂದೇಶ ಕುಮಾರ್ ರವರು ಕಳ್ಳತನ ಮಾಡಿದ ಆರೋಪಿ ಅಜ್ಜೇಗೌಡ @ ಅಜ್ಜ @ ರಾಜ @ ರಿವಾಲ್ವರ್ ರಾಜ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ, ಆತನನ್ನು ದಸ್ತಗಿರಿ ಮಾಡಿ ಆತನಿಂದ ಕಳುವಾಗಿದ್ದ ಈ ಕೆಳಕಂಡ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆತನು ಒಂದು ಮೊಬೈಲ್ ಮತ್ತು 10 ಗ್ರಾಂ 2 ಚಿನ್ನದ ಉಂಗುರಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದು, 2 ಬಳೆ, 2 ಜೊತೆ ಓಲೆ, 1 ಚಿನ್ನದ ನಾಣ್ಯ, 2 ಚಿನ್ನದ ಗುಂಡುಗಳನ್ನು ಚನ್ನರಾಯಪಟ್ಟಣದ ಅಶೋಕ ಜ್ಯೂಯೆಲರ್ಸ್ ಮತ್ತು ಪೂರ್ಣಿಮಾ ಬ್ರೋಕರ್ಸ್ ಇವರಲ್ಲಿ ಮಾರಾಟ ಮಾಡಿರುತ್ತಾನೆಂದು ಸದರಿ ಎಲ್ಲಾ ಒಡವೆಗಳನ್ನು ಮೇಲ್ಕಂಡ ಆರೋಪಿಯಿಂದ ವಶಪಡಿಸಿಕೊಂಡಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಆರೋಪಿಯನ್ನು ದಸ್ತಗಿರಿ ಮಾಡಲು ಶ್ರಮವಹಿಸಿದ್ದ ಸಿಪಿಐ, ಕೆ.ಆರ್.ಪೇಟೆ ವೃತ್ತ ರವರಾದ ಶ್ರೀ ಎಸ್.ಎನ್.ಸಂದೇಶಕುಮಾರ್ ಮತ್ತು ಕೆ.ಆರ್.ಪೇಟೆ ಪಿಎಸ್.ಐ ರವರಾದ ಶ್ರೀ ಹರಿವರ್ಧನ ಹಾಗೂ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ
No comments:
Post a Comment