Moving text

Mandya District Police

Mandya Rural PS Cr.No.50/2012 u/s 302-201 IPC

             ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
           ಮಂಡ್ಯಜಿಲ್ಲೆ. ಮಂಡ್ಯ 
ದಿನಾಂಕಃ 28-03-2012 
        
                                                                                 ಪತ್ರಿಕಾ ಪ್ರಕಟಣೆ.
 
                                      ಕೆರಗೋಡು ಪೊಲೀಸ್ ಠಾಣಾ ಮೊ.ಸಂ  50/2012 ಕಲಂ 302-201 ಐಪಿಸಿ

      ದಿನಾಂಕಃ21-3-2012 ರ ಬೆಳಿಗ್ಗೆ 8-30 ಗಂಟೆಯಲ್ಲಿ ಕೆ.ಗೌಡಗೆರೆಯ ಶಿವರಾಮುರವರ ಜಮೀನಿನಲ್ಲಿರುವ ತೆರೆದ ಬಾವಿಯಲ್ಲಿ ಒಂದು ಗಂಡಸಿನ ಸುಮಾರು 26ವರ್ಷ ಪ್ರಾಯದ ಶವ ತೇಲುತ್ತಿದ್ದು.  ಶವದ ಎರಡು ಕಾಲುಗಳನ್ನು ಕಲ್ಲು ಸೇರಿಸಿ ಕಟ್ಟಿದ್ದು ತಲೆಯ ಭಾಗದಿಂದ ಪ್ಲಾಸ್ಟಿಕ್ ಕವರಿಗೆ ಕಲ್ಲು ಸೇರಿಸಿ ಹಾಕಿ ಕಟ್ಟಿದ್ದು ಶವದ ತಲೆಯಲ್ಲಿ , ಬಲ ಕೆನ್ನೆಯಲ್ಲಿ, ಕುತ್ತಿಗೆಯಲ್ಲಿ ಹರಿತವಾದ ರಕ್ತಗಾಯಗಳಿದ್ದು , ಮೃತನು ಎಸ್.ಐ.ಕೋಡಿಹಳ್ಳಿಯ ಶಿವಣ್ಣರವರ ಮಗ ಕೆ.ಎಸ್.ಸುನೀಲ್ ಆಗಿದ್ದು.  ಈತನನ್ನು ಯಾರೋ ದುಷ್ಕಮರ್ಿಗಳು ಯಾವುದೋ ದ್ವೇಷದಿಂದ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಬಾವಿ ನೀರಿಗೆ ಹಾಕಿ ಮೃತನ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿದ್ದು.  ಈ ಬಗ್ಗೆ ಬಿ.ಎಸ್.ಕಾಂತರವರು ಕೊಟ್ಟ ದೂರಿನ ಮೇರೆಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆಯ ಕೈಗೊಳ್ಳಲಾಯಿತು.

   ಈ ಕೇಸಿನಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಸಿಪಿಐ ಕೃಷ್ಣಮೂರ್ತಿರವರ ನೇತೃತ್ವದಲ್ಲಿ  ಒಂದು ತಂಡವನ್ನು ರಚಿಸಲಾಗಿತ್ತು. ಈ ತಂಡವು ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಗಳಾದ 1. ರವಿ 2. ವರದರಾಜು 3. ಮಹೇಶ ರವರುಗಳನ್ನು ದಿಃ26-03-2012 ರಂದು ಬಂಧಿಸಿ ಕೊಲೆಗೆ ಸಂಬಂಧಪಟ್ಟಂತಹ ಸಾಕ್ಷಿ ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿ-2 ವರದರಾಜುವಿನ ಪತ್ನಿಯೊಡನೆ ಮೃತ ಸುನೀಲ್ ಅನೈತಿಕ ಸಂಬಂಧ ಹೊಂದಿದ್ದನೆಂಬ ಸಂಶಯದ ಮೇಲೆ ಕೊಲೆ ಮಾಡಿರುತ್ತಾರೆ. ಮೃತ ಸುನೀಲನಿಂದ ತೆಗೆದುಕೊಂಡು ಹೋಗಿದ್ದ 60,000=00 ಬೆಲೆ ಬಾಳುವ ಹೊಸ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ನ್ನು ಅಮಾನತ್ತುಪಡಿಸಿರುತ್ತಾರೆ.  

   ಈ ತಂಡದಲ್ಲಿ ಸಿಪಿಐ ಕೃಷ್ಣಮೂತರ್ಿರವರ ಮಂಡ್ಯ ಗ್ರಾಮಾಂತರ ವೈತ್ತ ಹಾಗು ಎ.ಎಸ್.ಐ. ಜಾರ್ಜ್ ವಿಲ್ಸನ್, ಸಿಬ್ಬಂದಿಗಳಾದ ರಮೇಶ್, ಚಿಕ್ಕಯ್ಯ, ಬಾಲಾಜಿ,  ಪ್ರದೀಪ್ಕುಮಾರ್, ಮರಿಯಪ್ಪ ಆರ್.ಬ್ಯಾಳಿ, ರಾಘವೇಂದ್ರ ಇಂಗಳಗಿ, ಶ್ರೀರಾಮ, ಸೋಮಶೇಖರ ರವರು ಕಾರ್ಯ ನಿರ್ವಹಿಸಿದ್ದು.  ಇವರ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಸಂಶಿಸಿ ಮೆಚ್ಚಿ ಬಹುಮಾನ ಘೋಷಿಸಿರುತ್ತಾರೆ. 

No comments:

Post a Comment