ಪೊಲೀಸ್ ಸೂಪರಿಂಟೆಂಡೆಂಟ್ ರವ ರವರ ಕಛೇರಿ
ಮಂಡ್ಯ ಜಿಲ್ಲೆ. ಮಂಡ್ಯ. ದಿಃ 03-03-2012
ಪತ್ರಿಕಾ ಪ್ರಕಟಣೆ
ಮಂಡ್ಯ ಉಪ-ವಿಭಾಗದ ಅಪರಾಧ ಪತ್ತೆ ದಳದಿಂದ 3 ಮಂದಿ ಆರೋಪಿಗಳ ಬಂಧನ, ಇವರುಗಳಿಂದ 50,000-00 ರೂ ಮೌಲ್ಯದ ಚಿನ್ನದ ಮಾಂಗಲ್ಯ ಸರ, ನಗದು ಹಣ 50,000-00 ರೂಗಳ ವಶ
ಮಂಡ್ಯ ಉಪ-ವಿಭಾಗದ ಅಪರಾದ ಪತ್ತೆ ದಳದವರು ದಿನಾಂಕಃ 01-03-2012 ರಂದು ಮಂಡ್ಯ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗಸ್ತಿನಲ್ಲಿದ್ದಾಗ 3 ಜನ ಆಸಾಮಿಗಳು ಬಸ್ ಪ್ರಯಾಣಿಕರಂತೆ 2-3 ಬಸ್ಸಿಗೆ ಹತ್ತಿ ಇಳಿಯುತ್ತಿದ್ದವರ ಮೇಲೆ ಅನುಮಾನ ಬಂದು ವಶಕ್ಕೆ ತೆಗೆದುಕೊಂಡು ಬಂದು ವಿಚಾರಣೆಗೊಳಪಡಿಸಲಾಗಿ ಈಗ್ಗೆ ಸುಮಾರು 2 ತಿಂಗಳ ಹಿಂದೆ ಮಂಡ್ಯ ರೈಲ್ವೇ ಸ್ಟೇಷನ್ನಲ್ಲಿ ಬೆಂಗಳೂರು ಕಡೆಗೆ ಹೋಗಲು ಟ್ರೈನ್ ಹತ್ತುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಹಾಗೂ 1 ವರ್ಷದ ಹಿಂದೆ ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮೈಸೂರಿಗೆ ಹೋಗಲು ಬಸ್ ಹತ್ತುತ್ತಿದ್ದ ಆಸಾಮಿಯ ಪ್ಯಾಂಟ್ ಜೇಬಿನಲ್ಲಿದ್ದ 2 ಲಕ್ಷರೂಗಳನ್ನು ಕಳುವು ಮಾಡಿದ್ದು ಈ ಪೈಕಿ ಹಣವನ್ನು ಖರ್ಚು ಮಾಡಿಕೊಂಡು ಉಳಿದಿದ್ದ 50,000 ರೂಗಳನ್ನು ಹಾಗೂ ಒಂದು ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 1 ಲಕ್ಷ ರೂ ಆಗಿರುತ್ತೆ.
ಆರೋಪಿಗಳ ಹೆಸರು-ವಿಳಾಸ
1] ಅಸ್ಲಂಪಾಷ @ ಅಸ್ಲಂ,ಬಿನ್ ಸೈಯದ್ ಪಾಷ, 38 ವರ್ಷ, ಆಟೋ ಚಾಲಕ, ವಾಸ ಕೇರಾಫ್ ಸಾಮಿದಾ ಬೇಗಂ, ಪುಲಿಕೇಶಿ ರಸ್ತೆ ಕೈಲಾಸ್ ಪುರಂ, ಕನ್ನಡ ಸ್ಕೂಲ್ ಹಿಂಬಾಗ ಮೈಸೂರು ಸಿಟಿ,
2] ಮುಕ್ರಂ ಬಿನ್ ಗೌಸ್ ಅಹಮದ್, 28 ವರ್ಷ, ಮುಸ್ಲಿಂ, ಪೈಂಟ್ ಕೆಲಸ, ಬೀಡಿ ಕಾಲೋನಿ ಹತ್ತಿರ, 5 ನೇ ಬ್ಲಾಕ್, ಚಾಮರಾಜನಗರ ಟೌನ್,
3] ಜಾಕೀರ್ ಬಿನ್ ಲೇ|| ಷರೀಫ್ ಅಹಮದ್, 32 ವರ್ಷ, ಮುಸ್ಲಿಂ, ಸ್ಟೀಮ್ ಇಟ್ಟಿಗೆ ಕೆಲಸ, ನಂ 170, 6 ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ ಮಂಡ್ಯ ನಗರ ವೃತ್ತ ನಿರೀಕ್ಷಕರಾದ ಶ್ರೀ ಕೆ.ಆರ್. ಕಾಂತರಾಜ್ ಮತ್ತು ಮಂಡ್ಯ ಉಪ-ವಿಭಾಗದ ಅಪರಾಧ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳಾದ ಶ್ರೀ. ಕೌಶಲೇಂದ್ರಕುಮಾರ್ ರವರು ಪ್ರಶಂಶಿಸಿರುತ್ತಾರೆ.
No comments:
Post a Comment