ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-01-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಅಪಹರಣ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 06-01-2013 ರಂದು ಪಿರ್ಯಾದಿ ಎಸ್ಎಲ್ ರವಿಕುಮಾರ ಬಿನ್. ಲೇ|| ಲಿಂಗೇಗೌಡ, ಸಿಂಧಘಟ್ಟ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಎಸ್.ಎಲ್. ರವಿಕುಮಾರ್ ರವರ ಹೆಂಡತಿ ಎಸ್.ಆರ್. ಭಾಗ್ಯ ಅವರಿಗೆ ಈಗ್ಗೆ 8 ತಿಂಗಳಿನಿಂದ ಹೊಟ್ಟೆಯಲ್ಲಿ ಹುಣ್ಣಾಗಿದ್ದು ಹುಣ್ಣಿನಿಂದ ಹೊಟ್ಟೆನೋವು ಜಾಸ್ತಿಯಾಗಿ ಹೊಟ್ಟೆನೋವಿನ ಔಷಧಿಯೆಂದು ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಚಿಕತ್ಸೆ ಫಲಕಾರಿಯಾಗದೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರಗೆ ಸೇರಿಸಿದ್ದು ದಿನಾಂಕ: 05-01-2013 ರಂದು ಸಂಜೆ 07-20 ಗಂಟೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 363 ಐ.ಪಿ.ಸಿ.
ದಿನಾಂಕ: 06-01-2013 ರಂದು ಪಿರ್ಯಾದಿ ಜಯರಾಮು ಬಿನ್. ದೊಡ್ಡಕರಿಯಯ್ಯ, ದೇವೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಾಡೆ ಗ್ರಾಮ ಪಂಚಾಯ್ತಿಯಲ್ಲಿ ಅದ್ಯಕ್ಷರು ಹಾಗು ಉಪಾದ್ಯಕ್ಷರ ಚುನಾವಣೆ ನಡೆಯುವ ಸಂದರ್ಭದಲ್ಲಿ ನನ್ನ ಹೆಂಡತಿ ಜಯಮ್ಮಳನ್ನು ಆರೋಪಿಗಳು ಕರೆದುಕೊಂಡು ಬಂದಿದ್ದರು, ಆ ಸಮಯದಲ್ಲಿ ನನ್ನ ಮಕ್ಕಳಾದ ರಾಜೇಶ್. ಯೋಗಿಶ್. ಗಿರೀಶ್ ರವರು ನಮ್ಮ ತಾಯಿಯನ್ನು ಏಕೆ ಕರೆದುಕೊಂಡು ಹೋಗಿದ್ದೀರಾ? ನಮ್ಮ ತಾಯಿಯ ಹತ್ತಿರ ಮಾತನಾಡಲು ಬಿಡಿ ಎಂದು ಕೇಳಿದಾಗ ಅಲ್ಲೆ ಇದ್ದ ಆರೋಪಿಗಳಾದ 1] ಡಿ.ಕೆ.ದೇವೇಗೌಡ, 2]ಡಿ.ಎಲ್.ಶ್ರೀದರ ಬಿನ್ ಲಕ್ಷ್ಮೇಗೌಡ, 3] ಡಿ.ಎನ್.ರಮೇಶ್ ನಂಜೇಗೌಡ, ದೇವೇಗೌಡನಕೊಪ್ಪಲು, 4] ಯಜಮಾನ್ ಪ್ರಕಾಶ್ 5] ಡಿ.ರಾಜಪ್ಪ, 6] ಹೆಚ್.ಮೋಹನ್ ಕುಮಾರ್, 7] ಎನ್.ವಿಜೇಂದ್ರ, ಎಲ್ಲರೂ ಚಿಕ್ಕಾಡೆ ಗ್ರಾಮ, ನನ್ನ ಮಕ್ಕಳಿಗೆ ಹೀನಾಮಾನವಾಗಿ ಬೈಯ್ದು ಜಾತಿ ನಿಂದನೆ ಮಾಡಿದ್ದು ಈ ಹಿನ್ನಲೆಯಲ್ಲಿ ಚುನಾವಣೆ ರದ್ದಾಗಿರುತ್ತೆ. ಆದರೂ ಸಹ ನನ್ನ ಹೆಂಡತಿಯನ್ನು ನಮ್ಮ ಮನೆಗೆ ಕಳುಹಿಸಿಕೊಡದೆ ಮೇಲ್ಕಂಡವರು ಮತ್ತೆ ಅವರ ಜೊತೆ ಕರೆದುಕೊಂಡು ಹೋಗಿರುತ್ತಾರೆ, ಆದುದ್ದರಿಂದ ಅಪಹರಿಸಿರುವ ನನ್ನ ಹೆಂಡತಿಯನ್ನು ಪತ್ತೆ ಮಾಡಿ ನಮ್ಮ ಸ್ವಾದೀನಕ್ಕೆ ಕೊಡಿಸಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment