ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-01-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ವಂಚನೆ ಪ್ರಕರಣ ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಸಾಮಾನ್ಯ/ವಾಹನ/ಮರಳು ಕಳವು ಪ್ರಕರಣಗಳು :
1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಪುಟ್ಟಮ್ಮ ಕೋಂ. ಲೇಟ್. ಸಿದ್ದಯ್ಯ, ಪಿ.. ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಪಾಂಡವಪುರ ತಾಲ್ಲೋಕು ವದೇಸಮುದ್ರ ಗ್ರಾಮದ ಸವರ್ೆ ನಂ 207/1ಬಿ ನಲ್ಲಿ 11 ಗುಂಟೆ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಭತ್ತವನ್ನು ಬೆಳೆದಿದ್ದು, ದಿನಾಂಕ: 04-01-2013 ರಂದು ಭತ್ತದ ಬೆಳೆ ಕುಯಿದಿದ್ದು, ದಿನಾಂಕ 04-01-2013 ರಂದು ಸಾಯಂಕಾಲ 07-0 ಗಂಟೆಯಲ್ಲಿ ಆರೋಪಿಗಳಾದ ಪ್ರಭಾವತಿ ಮತ್ತು ಇತರೆ ಮೂರು ಜನರು, ಎಲ್ಲರೂ ಗಾಣದಾಳು ಗ್ರಾಮ, ಮಂಡ್ಯ ತಾಲ್ಲೋಕು ರವರುಗಳು ಭತ್ತದ ಬೆಳೆಯನ್ನು ಕದ್ದು ಸಾಗಿಸಿರುತ್ತಾರೆ, ತಾವು ಬೆಳೆದಿದ್ದ ಭತ್ತದ ಬೆಳೆಯನ್ನು ಕೊಡಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 379 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಜ್ಞಾನ ಪ್ರಕಾಶ ಬಿನ್ ಎಂ. ಜೀವಿಯರ್, ಕ್ಯಾತುಂಗೆರೆ, ಮಂಡ್ಯ ತಾ. ರವರುಗಳು ನೀಡಿದ ದೂರಿನ ವಿವರವೇನೆಂದರೆ ಕೆಎ-11-ಜೆ-8173 ರ ಸುಜುಕಿ ಸಮುರಾಯ್ ಮೋ/ಸೈನ್ನು ತಮ್ಮ ಮನೆ ಮುಂದೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿರುವುದಾಗಿ ಇದರ ಅಂದಾಜು ಬೆಲೆ 13000-00 ರೂಗಳಾಗುತ್ತೆ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 5/13 ಕಲಂ. 379 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಎಂ.ಸ್ವಾಮಿ ಬಿನ್. ಮಹದೇವಯ್ಯ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದರಿಯಾ ದೌಲತ್ ಪಾಕರ್ಿಂಗ್ ಸ್ಥಳದಲ್ಲಿ ಕೆಎ-11-ಎಲ್-5019 ಟಿ.ವಿ.ಎಸ್. ಮೆಪೈಡ್ ನ್ನು ನಿಲ್ಲಿಸಿದ್ದು ದರಿಯಾದೌಲತ್ ಒಳಗೆ ಹೋಗಿ ವಾಪಸ್ಸು ಬಂದು ನೋಡಲಾಗಿ ಅಲ್ಲಿ ಇರುವುದಿಲ್ಲ ಯಾರೂ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 379 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಅಜರ್ುನ್ ಬಿನ್. ಹುಚ್ಚೇಗೌಡ, ವಾಸ ನಂ. 334, 2ನೇ ಕ್ರಾಸ್, ಕುವೆಂಪುನಗರ ರವರು ನೀಡಿದ ದೂರಿನ ವಿವರವೇನೆಂದರೆ ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 20,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
5. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 379-188-353-506 ರೆ.ವಿ. 34 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ತಿಮ್ಮಯ್ಯ, ರೆವಿನ್ಯೂ ಇನ್ಸ್ಪೆಕ್ಟರ್, ಆತಗೂರು ಹೋ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಹೆಚ್.-09-ಎಎಲ್-880ರ ಚಾಲಕ ಮತ್ತು ಮಾಲೀಕ, ಅಲ್ಲಿಗೆ ಬಂದು ನಮ್ಮ ಜೊತೆ ಸುಮಾರು ಐದು ಗಂಟೆವರೆಗೆ ಸತಾಯಿಸಿ ಜೆಸಿಬಿ ತೆಗೆದುಕೊಂಡು ಹೋಗದಂತೆ ಬೆದರಿಕೆ ಹಾಕಿ, ಸಕರ್ಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾನೆ. ನಂತರ ಅದೇ ಜೆಸಿಬಿಯನ್ನು ಅದರ ಚಾಲಕನ ಸಹಾಯದಿಂದ ಕೊಪ್ಪ ಪೊಲೀಸ್ ಠಾಣೆ ಬಳಿ ತಂದು ಠಾಣಾಧಿಕಾರಿಯವರಿಗೆ ಈ ಜೆಸಿಬಿಯನ್ನು ಮಾಲೀಕನಿಗೆ ದಂಡ ವಿಧಿಸುವವರೆಗೆ ತಮ್ಮ ವಶದಲ್ಲಿ ಇಟ್ಟುಕೊಳ್ಳಲು ಕೋರಿ ಪತ್ರ ನಿಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಮಹಾದೇವಿ ಕೋಂ. ಕೃಷ್ಣೇಗೌಡ, ಕರೋಟಿ ಗ್ರಾಮ, ಕಸಬಾ ಹೋ|| ಕೆ.ಆರ್.ಪೇಟೆ ತಾ|| ರವರು ನೀಡಿದ ದೂರು ಏನೆಂದರೆ ನೇತ್ರಾವತಿ ಬಂಡಿಹೊಳೆ ಗ್ರಾಮ || ರವರು ಹೊಟ್ಟೆನೋವು ಬಾಧೆಯನ್ನು ತಾಳಲಾರದೆ ಸಂಜೆ 04-00 ಗಂಟೆ ಸಮಯದಲ್ಲಿ ನೇಣು ಹಾಕಿಕೊಂಡಿದ್ದು ನಂತರ ಆಕೆಯನ್ನು ಪ್ರೀತಿ ಮತ್ತು ಯತೀಶ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ನನ್ನ ಮಗಳು ಮೃತಪಟ್ಟಿರುತ್ತಾಳೆ. ಆಕೆಯ ಸಾವಿನಲ್ಲಿ ಯಾವುದೇ ರೀತಿಯ ಅನುಮಾನವಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ವೆಂಕಟರಮಣ ಬಿನ್. ವೆಂಕಟಯ್ಯ, ಧನಗೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಮದರೆ ವೆಂಕಟೇಶ ಕೂಲಿಕೆಲಸ, ಧನಗೂರು ಗ್ರಾಮ, ಮಳವಳ್ಳಿ ತಾ. ರವರು ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಕ್ರಿಮಿನಾಶಕ ಔಷಧಿ ಕುಡಿದು ಒದ್ದಾಡುತ್ತಿದ್ದವನನ್ನು 108 ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 420 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಬಿ.ಶಿವಕುಮಾರ್ ಬಿನ್. ಲೇಟ್. ಸಿ.ಬೋರೇಗೌಡ, ಅಧ್ಯಕ್ಷರು, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಕೆನೆರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ. 0527201371 ರ ಶ್ರೀ ಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕುಣಿಗಲ್ ರವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ನೀವು ಕೊಟ್ಟಿದ್ದ ಚೆಕ್ ಕಳೆದು ಹೋಗಿದೆ, ಮತ್ತೊಂದು ಚೆಕ್ ಕೊಡಿ ಎಂದು ಕೇಳಿದಾಗ ಕಳೆದುಹೋಗಿರುವ ಚೆಕ್ನ ಬಗ್ಗೆ ಪರಿಶೀಲಿಸಲಾಗಿ ದಿನಾಂಕ: 31-10-2012 ರಂದು ಸದರಿ ಚೆಕ್ನಿಂದ ಕುಣಿಗಲ್ನ ಕೆನರಾ ಬ್ಯಾಂಕ್ ಶಾಖೆಯ ಕರೆಂಟ್ ಅಕೌಂಟ್ ನಂ 0527201371 ರಲ್ಲಿ ಶ್ರೀಅಂಬೇಡ್ಕರ್ ಎಸ್ಸಿ/ಎಸ್ಟಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಣಿಗಲ್ ಇವರ ಖಾತೆಗೆ 10,000-00 ರೂ ಹಣ ಜಮಾ ಆಗಿರುವುದಾಗಿ ತಿಳಿದುಬಂದಿದ್ದು ಸದರಿಯವರು ಹಣ ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾರೆಂದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment