ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಾಬರಿ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ವಾಹನ ಕಳವು ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ರಾಬರಿ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 394 ಐ.ಪಿ.ಸಿ.
ದಿನಾಂಕ: 07/08-01-2013 ರಂಧೂ ಪಿರ್ಯಾದಿ ಕಣಿರಾಜ್, ಶಂಕರಪ್ಪ ಲೇಔಟ್. ಹಾಲಹಳ್ಳಿ ಬಡಾವಣೆ,ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಎಂ.ಡಿ.ಸಿ.ಸಿಯ ಸಮೀಪ ಹೋಗುತ್ತಿದ್ದಾಗ ಬರ್ಹಿದೆಸೆ ಮಾಡಲು ಮೋಟರ್ ಬೈಕ್ ನಿಲ್ಲಿಸಿ ರಿಸಸ್ ಮಾಡಿದ ನಂತರ ಮೋಟರ್ ಸೈಕಲ್ ಅನ್ನು ಸ್ರ್ಟಾಟ್ ಮಾಡುತ್ತಿದ್ದಾಗ ಅದೆ ರಸ್ತೆಯಲ್ಲಿ ಪಿರ್ಯಾದಿ ಮುಂದೆ ಒಂದು ಬೈಕ್ನಲ್ಲಿ ಮೂರು ಜನ ಮುಂದಕ್ಕೆ ಹೋಗಿ ವಾಪಸ್ಸು ಬೈಕ್ ಅನ್ನು ತಿರುಗಿಸಿಕೊಂಡು ಬಂದು ಮೋಟಾರ್ ಸೈಕಲ್ ಸಾಟ್ ಮಾಡುತ್ತಿದ್ದ ಪಿರ್ಯಾದಿ ಮುಖಕ್ಕೆ ಒಬ್ಬ ಕಾರದ ಪುಡಿಯನ್ನು ಎರಚಿದ, ಮತ್ತೊಬ್ಬ ಪಿರ್ಯಾದಿ ಕೈಯಲ್ಲಿಂದ್ದ ಹಣದ ಬ್ಯಾಗ್ ಅನ್ನು ಕಿತ್ತುಕೊಂಡನ್ನು ಮತ್ತು ಆಸ್ಪತ್ರೆ ಕಡೆಗೆ ಮೂರು ಜನರು ಹೊರಟು ಹೋದರು ಅವರನ್ನು ಪತ್ತೆ ಹಚ್ಚಿ ಮುಂದಿನ ಕ್ರಮ ಜರುಗಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 08-01-2013 ರಂದು ಪಿರ್ಯಾದಿ ವೈ.ಬಿ.ಸಿದ್ದೇಗೌಡ, ಕುವೆಂಪುನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಪಿ.ಗಾಯಿತ್ರಿ ಕೋಂ. ವೈ.ಬಿ.ಸಿದ್ದೇಗೌಡ, ಕ್ರಾಸ್, ಕುವೆಂಪುನಗರ, ಮಂಡ್ಯ ಸಿಟಿ ರವರು ದಿನಾಂಕ: 07-01-2013 ರಂದು ಕೆಎಸ್ಆರ್ಟಿ ನಿಲ್ದಾಣ, ಮಂಡ್ಯ ಸಿಟಿಯಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 12/13 ಕಲಂ. 379 ಐ.ಪಿ.ಸಿ.
ದಿನಾಂಕ: 08-01-2013 ರಂದು ಪಿರ್ಯಾದಿ ಕೆಂಪಯ್ಯ ಬಿನ್ ಸಣ್ಣೇಗೌಡ, 3ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಮೋಟಾರ್ ಸೈಕಲನ್ನು ಮಂಡ್ಯದ ಸರ್.ಎಂ.ವಿ. ಕ್ರೀಡಾಂಗಣದ ಮುಂಭಾಗ ಬೀಗ ಹಾಕಿ ನಿಲ್ಲಿಸಿ ಸ್ಟೇಡಿಯಂ ನಲ್ಲಿ ವಾಯುವಿಹಾರ ಮಾಡುತ್ತಿದ್ದು ನಂತರ ವಾಪಸ್ ಸಂಜೆ 06-30ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 15,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 08-01-2013 ರಂದು ಪಿರ್ಯಾದಿ ಜಯರತ್ನಮ್ಮ ಕೊಂ..ಈಶ್ವರ. 6 ನೇ ನಂಬರ್, ಗರೀಬಿ ಸೈಟ್, ಕೆ.ಎಂ.ದೊಡ್ಡಿ ಟೌನ್. ಮದ್ದೂರು ತಾಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 08-01-2013 ರ ಹಿಂದಿನ ದಿನಗಳಲ್ಲಿ ಪಿರ್ಯಾದಿಯವರು ಗಾರ್ಮೆಂಟ್ ಕೆಲಸಕ್ಕೆ ಹೋಗಿದ್ದಾಗ ಕೆ.ಎಂ.ದೊಡ್ಡಿ ಟೌನ್ ಪಿರ್ಯಾದಿ ಮನೆಯಲ್ಲಿಯೆ ಇದ್ದ ಅವರ ಗಂಡ ಈಶ್ವರನು ಯಾವುದೋ ಕಾರಣಕ್ಕೆ ಮನೆಯ ಸೂರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment