Moving text

Mandya District Police

DAILY CRIME REPORT DATED : 09-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮನೆ ಕಳ್ಳತನ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 279, 304(ಎ) ಐ.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ನಾಗಯ್ಯ, ಚಾಗಲ್ಪೇಟೆ ಬೀದಿ, ಬೇಥಂ ಚರ್ಲಮಂಡಲ, ಡೂನ್ ತಾ., ಕನರ್ೂಲ್ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವಿವರವೇನೆಂದರೆ ನಮ್ಮ ಬೈಕ್  ಕೆಎ-11/ಹೆಚ್-8723 ಅನ್ನು ಚಾಲನೆ ಮಾಡುತ್ತಿದ್ದ ಮೋಟಾರ್ ಸೈಕಲ್ ಸವಾರ ರಾಜು ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಿರ್ಲಕ್ಷತೆಯಿಂದ ಸಡನ್ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸಮೇತ ನಾನು ಹಾಗೂ ರಾಜು ಇಬ್ಬರು ಕೆಳಗೆ ಬಿದ್ದಾಗ  ರಾಜುರವರು ನನಗೆ ತಲೆ ನೋಯ್ಯುತ್ತಿದ್ದು ತಲೆ ಸುತ್ತುತ್ತಿದೆ ಎಂದು ಹೇಳಿದ್ದರಿಂದ ಮಂಡ್ಯ ಜಿಲ್ಲಾ ಆಸ್ಪತ್ರೆ ಬಂದು ಬೆಳಿಗ್ಗೆ ವ್ಶೆದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಲಾಗಿ ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಆಂಬ್ಯೂಲೆನ್ಸ್ ಒಂದರಲ್ಲಿ ನಿಮ್ಹಾನ್ಸ್ ಆಸ್ಪತ್ರೆಗೆ ಕೆರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಬಿಡದಿ ಸಮೀಪದಲ್ಲಿ ಮೃತ ಪಟ್ಟಿದ್ದರಿಂದ ಈತನ ಸಾವಿಗೆ ರಾಜುರವರ ಅತಿವೇಗ ನಿರ್ಲಕ್ಷತೆಯ ಚಾಲನೆಯೇ ಕಾರಣವಾಗಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸ್ಪೋಟಕ ವಸ್ತುಗಳ ಕಾಯಿದೆ ಅಧಿನಿಯಮ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 285,286-511 ಐಪಿಸಿ ಹಾಗು ಕಲಂ.4 ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಆಕ್ಟ್ 1908

ದಿನಾಂಕ: 09-01-2013 ರಂದು ಪಿರ್ಯಾದಿ ಎಂ.ವೆಂಕಟರಾಮಪ್ಪ. ಪಿ.ಎಸ್.ಐ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀರಂಗಪಟ್ಟಣ ತಾ: ಜಕ್ಕನಹಳ್ಳಿ ಗ್ರಾಮದ ನಿಂಗೇಗೌಡ ಬಿನ್ ಸಿದ್ದೇಗೌಡ, ಎಂಬುವರಿಗೆ ಸೇರಿದ ಕಲ್ಲುಕೋರೆಯ ಹತ್ತಿರ ಬೆಳಿಗ್ಗೆ 07-00 ಗಂಟೆಗೆ ಹೋಗಿ, ನೋಡಲಾಗಿ ಇಬ್ಬರು ವ್ಯಕ್ತಿಗಳಿದ್ದು, ಒಬ್ಬ ವ್ಯಕ್ತಿ ಕಂಪ್ರೆಸರ್ ಟ್ರಾಕ್ಟರ್ ಮೇಲೆ ಕುಳಿತು, ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಿದ್ದು, ಸದರಿಯವರು ಕಲ್ಲು ಕೋರೆಯಲ್ಲಿ ಟ್ರಾಕ್ಟರ್ ಹಾಗೂ ಕಂಪ್ರೆಸರ್ ಟ್ರಾಕ್ಟರನ್ನು ನಿಲ್ಲಿಸಿಕೊಂಡು, ಕಂಪ್ರೆಸರ್ ಜಾಕ್ ಮೂಲಕ ಕಲ್ಲುಕೋರೆಯಲ್ಲಿ ಕುಳಿಗಳನ್ನು ಹೊಡೆಯುತ್ತಿದ್ದರು. ಹತ್ತಿರ ಹೋಗಲಾಗಿ, ಕೆಲಸ ಮಾಡುತ್ತಿದ್ದ ಇಬ್ಬರೂ ನಮ್ಮನ್ನು ನೋಡಿ  ಕಂಪ್ರೆಸರ್ ಟ್ರಾಕ್ಟರ್ ಮತ್ತು ಟ್ರಾಕ್ಟರ್ ಹಾಗೂ ವಸ್ತುಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾರೆ. ಆರೋಪಿಗಳು 1] ನರಸಿಂಹ, 2] ರಘು, 3] ಸಾಕಮ್ಮ ಮತ್ತು 4] ನಿಂಗೇಗೌಡ ಜಕ್ಕನಹಳ್ಳಿ ಗ್ರಾಮ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 09-01-2013 ರಂದು ಪಿರ್ಯಾದಿ ಡಿ.ಸಿ.ಪಲ್ಲವಿ, ಸಲಹೆಗಾರರು, ಜ್ಞಾನಸಿಂಧು ಸ್ವಧಾರ್ ಕೇಂದ್ರ, ನೂರಡಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಲಕ್ಷ್ಮಿ ಕೋಂ ಮಂಜುನಾಥ, 24 ವರ್ಷ, ಜ್ಞಾನಸಿಂಧು ಸ್ವಧಾರ್ ಕೇಂದ್ರ, ನೂರಡಿ ರಸ್ತೆ, ಮಂಡ್ಯ ಸಿಟಿ ಎಂಬುವರು ಬಾಲಕಿಯರ ಬಾಲಮಂದಿರದಲ್ಲಿರುವ ತಮ್ಮ ಮಗಳನ್ನು ನೋಡಿಕೊಂಡು ಬರುವುದಾಗಿ ಹೇಳಿ ಹೋದವಳು ಅಲ್ಲಿ ತಮ್ಮ ಮಗಳನ್ನು ನೋಡಿಕೊಂಡು ವಾಪಸ್ ತಮ್ಮ ಕೇಂದ್ರಕ್ಕೆ ಬಾರದೆ ಎಲ್ಲಿಯೋ ಹೊರಟು ಹೋಗಿರುತ್ತಾಳೆ. ಇದುವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಲಕ್ಷ್ಮಿಯನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನೆ ಕಳ್ಳತನ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ಟಿ. ವೆಂಕಟೇಗೌಡ ಬಿನ್. ಲೇಟ್. ತಮ್ಮೇಗೌಡ, 60 ವರ್ಷ, ಒಕ್ಕಲಿಗರು, ನಿವೃತ್ತ ಶಿಕ್ಷಕರು, ನಾರಣಾಪುರಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಮಾಂಗಲ್ಯ, ಕತ್ತಿನ ನೆಕ್ಲೆಸ್, ಕತ್ತಿನ ಚೈನು. 1 ಜೊತೆ ಚಿನ್ನದ ಪ್ಯಾನ್ಸಿ ಓಲೆ, ಕಿವಿ ಓಲ, ಚಿನ್ನದ ಉಂಗುರ, ಮಗುವಿನ ಉಂಗುರ, ದೇವರ ಚಿನ್ನದ ತಾಳಿ  ನಗದು ಹಣ -5000 [ಐದು ಸಾವಿರ] ಒಟ್ಟು ಅಂದಾಜು ಬೆಲೆ-ಸುಮಾರು 1,10,000-00 ರೂ.ಗಳನ್ನು ಯಾರೋ ಕಳ್ಳರು. ಬೀರುವಿನ ಪಕ್ಕ ಗೋಡೆಗೆ ನೇತು ಹಾಕಿದ್ದ ಕೀ ಗಳನ್ನು ತೆಗೆದುಕೊಂಡು ಬೀಗ ತೆಗೆದು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 09-01-2013 ರಂದು ಪಿರ್ಯಾದಿ ಬಿ.ಆರ್.ಉಮಾ ಮಹಿಳಾ ಎ,ಎಸ್.ಐ. ಮಂಡ್ಯ ಪೂರ್ವ ಪೊಲೀಸ್ ಠಾಣೆ ರವರು ನೀಡಿದ ದೂರು ಒಬ್ಬ ಅಪರಿಚಿತ ಗಂಡಸು, 45 ವರ್ಷ ವಯಸ್ಸು ರವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ  ಚಿಕಿತ್ಸೆಗಾಗಿ ದಾಖಲಿಸಿದ್ದು ಅಂದಿನಿಂದ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು  ಚಿಕಿತ್ಸೆ ಪಲಕಾರಿಯಾಗದೆ  ಆಸ್ಪತ್ರೆಯಲ್ಲಿ ಮೃತಪಟ್ಟರುವುದಾಗಿ ಡೆತ್ ಮೆಮೋ ನೀಡಿದ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 

No comments:

Post a Comment