ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-01-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ, 1 ಅಪಹರಣ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ರಾಬರಿ ಪ್ರಕರಣ ಹಾಗು 22 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ವಾಹನ ಕಳವು ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 379 ಐ.ಪಿ.ಸಿ.
ದಿನಾಂಕ: 12-01-2013 ರಂದು ಪಿರ್ಯಾದಿ ಸಂಜೀವಯ್ಯ ಬಿನ್. ಲೇಟ್. ಹನುಮಯ್ಯ, ಚನ್ನೇಗೌಡನದೊಡ್ಡಿ, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಬಾಬ್ತು ಕೆಎ-11/ಎಕ್ಸ್-1985 ಮೊಪೆಡ್ ಸ್ಕೂಟರ್ ನ್ನು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 363-366(ಎ) ಐ.ಪಿ.ಸಿ.
ದಿನಾಂಕ: 12-01-2013 ರಂದು ಪಿರ್ಯಾದಿ ರಾಜನಾಯ್ಕೆ ಬಿನ್. ವೆಂಕಟೇಶ ನಾಯ್ಕ, ಬಿ,ಬಿ, ತಾಂಡ ಗ್ರಾಮ, ಬಳ್ಳಾರಿ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀನಿವಾಸ ವಡ್ಡರಹಳ್ಳಿ ಗ್ರಾಮ ಕೆ ಆರ್ ಪೇಟೆ ತಾ| ರವರು ದಿನಾಂಕ 10.01.2013 ರಂದು ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ಪಿರ್ಯಾದಿಯವರು ತಮ್ಮ ಶೆಡ್ ನಲ್ಲಿ ಮಲಗಿದ್ದಾಗ ಅವರ 15 ವರ್ಷದ ತಂಗಿಯನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಆದ್ದುದ್ದರಿಂದ ತಾವುಗಳು ನನ್ನ ತಂಗಿಯನ್ನು ಅಪಹರಣ ಮಾಡಿರುವ ಮೇಲ್ಕಂಡ ಶ್ರೀನಿವಾಸ ಎಂಬಾತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 12-01-2013 ರಂದು ಪಿರ್ಯಾದಿ ಶಿವಣ್ಣ.ಬಿ. ಬಿನ್. ಬೋರಲಿಂಗೇಗೌಡ ಬಿ.ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ರಂಜಿತಾ ಬಿನ್. ಬಿ.ಶಿವಣ್ಣ, 19 ವರ್ಷ, ಬಿ. ಆರ್. ಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮನೆಯವರು ಯಾರೂ ಮನೆಯಲ್ಲಿ ಇಲ್ಲದ ಸಮಯದಲ್ಲಿ ಪಿರ್ಯಾದಿಯವರ ಮಗಳು ಮನೆಯಿಂದ ಹೊರಟು ಹೋಗಿದ್ದು ವಾಪಸ್ ಬಂದಿರುವುದಿಲ್ಲಾ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆ ಆಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 392 ಐ.ಪಿ.ಸಿ.
ದಿನಾಂಕ: 12-01-2013 ರಂದು ಪಿರ್ಯಾದಿ ಉಮಾಮಣಿ ಕೋಂ. ರಮೇಶ್ ಕುಮಾರ್, 42 ವರ್ಷ, ಬ್ರಾಹ್ಮಣರು, ಗೃಹಿಣಿ, ಪೂರ್ಣಯ್ಯನ ಬೀದಿ, ಶ್ರೀರಂಗಪಟ್ಟಣ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಉತ್ತರಾದಿ ಮಠದ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಮೋಟಾರ್ ಸೈಕಲ್ ನಲ್ಲಿ ಎದುರಿನಿಂದ ಬಂದ ಮೂವರು ಪಿರ್ಯಾದಿಯವರ ಕತ್ತಿಗೆ ಕೈ ಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು ಅದು ಸುಮಾರು 30 ಗ್ರಾಂ. ಇದ್ದು ಬೆಲೆ ಸುಮಾರು 90.000/- ರೂ ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment