Moving text

Mandya District Police

DAILY CRIME REPORT DATED : 11-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-01-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳವು ಪ್ರಕರಣಗಳು,  1 ಅತ್ಯಾಚಾರ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  2 ವಂಚನೆ ಪ್ರಕರಣಗಳು,  1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಕಳವು ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 41 ಕ್ಲಾಸ್[ಡಿ], 102 ಸಿ.ಆರ್.ಪಿ.ಸಿ. ಕೂಡ 379 ಐಪಿಸಿ

ದಿನಾಂಕ: 11-01-2013 ರಂದು ಪಿರ್ಯಾದಿ ಮಂಜು.ಕೆ.ಎಂ. ಪಿ.ಎಸ್.ಐ. ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ತನ್ನ ಊರು ತಿಮ್ಮನಕೊಪ್ಪಲು ಎಂದು ಮತ್ತೋಂದು ಬಾರಿ ಕೆ.ಆರ್.ನಗರ ಎಂದು ತನ್ನ ಹೆಸರನ್ನು ಸುಬ್ರಮ್ಮಣಿ ಎಂದು ತಿಳಿಸಿದ್ದು ಬೈಕ್ನ ಬಗ್ಗೆ ವಿಚಾರ ಮಾಡಿದಾಗ ಸದರಿ ಬೈಕ್ಗೆ ಸಂಭಂದಪಟ್ಟ ದಾಖಲಾತಿಗಳು ಯಾವುದು ತನ್ನ ಬಳಿ ಇಲ್ಲವೆಂದು ಸದರಿ ಬೈಕ್ ಕಳ್ಳತನದ್ದಾಗಿರುವುದಾಗಿ ತಿಳಿಸಿದ ಮೇರೆಗೆ ಬೈಕ್ ನಂಬರ್ ನೋಡಲಾಗಿ ಕೆ.ಎ.08-ಎಸ್-2027 ಎಂದು ಇದ್ದು ಸದರಿ ಬೈಕ್ ಹಾಗು ಆಸಾಮಿಯನ್ನು ಠಾಣೆಗೆ ಬೆಳಗಿನ ಜಾವ 05-00 ಗಂಟೆಗೆ ಕರೆದುಕೊಂಡು ಬಂದು ಸ್ವಯಂ ವರದಿ ತಯಾರಿಸಿರುತ್ತೆ.


 2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 7/12 ಕಲಂ. 41 ಕ್ಲಾಸ್. (ಡಿ) 102 ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಕೃಷ್ಣೇಗೌಡ, ಸಿಪಿಸಿ-678, ನಗರ ಠಾಣೆ ರವರು ನೀಡಿದ ದೂರು ಏನೆಂದರೆ 1] ಸಲೀಂ @ ಸಲ್ಮಾನ್ 2] ರವಿ ಬಿನ್ ಇಂದುಪುರ್ ಟೌನ್ ಆಂಧ್ರಪ್ರದೇಶ 3] ವಜ್ರಮುನಿ @ ವಜ್ರ ಹೊಳಲು ರವರುಗಳ ಬಳಿ ಇದ್ದ ಸಬ್ಮಸರ್ಿಬಲ್ ಪಂಪ್ ಬಗ್ಗೆ ವಿಚಾರಿಸಲಾಗಿ ಪಾಂಡವಪುರ ಟೌನ್ನ ವಿ.ಸಿ. ಕಾಲುವೆಯಲ್ಲಿ ಕಳ್ಳತನ ಮಾಡಿದ್ದು ಈ ದಿನ ಕೆ.ಆರ್.ಪೇಟೆಗೆ ಗುಜರಿ ಅಂಗಡಿಗೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದರು. ಇವರ ಬಗ್ಗೆ ಅನುಮಾನ ಬಂದು ಸದರಿ ಆಸಾಮಿಗಳನ್ನು ಮಾಲಿನ ಸಮೇತ ಮಧ್ಯಾಹ್ನ 03-15 ಗಂಟೆಗೆ ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಹಲಗೂರು ಪೊಲೀಸ್ ಠಾಣೆ ಮೊ.ನಂ. 8/13 ಕಲಂ. 427-379-511 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಕೆ.ನಾಗರಾಜು, ಕಾರ್ಯನಿರ್ವಾಹಕ ಅಭಿಯಂತರರು. ಟಿ.ಕೆ.ಹಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಹೆಚ್.ಬಸಾಪುರ ಗ್ರಾಮದ ಬಳಿ ಇರುವ ಬೆಂಗಳೂರಿಗೆ ಕುಡಿಯುವ ಶುದ್ದ ನೀರಿನ 4ನೇ ಘಟ್ಟ 2ನೇ ಹಂತದ ನೀರಿನ ಪೈಪಿಗೆ ಅಳವಡಿಸಿರುವ ಸ್ಕೋರ್ ವಾಲ್ವ್ ನ್ನು ಯಾರೋ ದುಷ್ಕರ್ಮಿಗಳು  ಹೊಡೆದು ನಾಶ ಮಾಡಿ ಅದನ್ನು ಕಳ್ಳತನ ಮಾಡಲು ಪ್ರಯತ್ನಪಟ್ಟಿದ್ದು ಇದರಿಂದ ಲಕ್ಷಾಂತರ ಲೀಟರ್ ನೀರು ಸೋರಿಕೆಯಾಗಿರುತ್ತೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅತ್ಯಾಚಾರ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 6/13 ಕಲಂ. 376 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಜಯರಾಮ್ ಬಿನ್. ಲೇಟ್. ಕೆಂಪೇಗೌಡ, ಸಿಂಗ್ರೀಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮಣ್ಣೇಗೌಡ ಬಿನ್ ಸಿಂಗ್ರೀಗೌಡ, ಸಿಂಗ್ರೀಗೌಡನಕೊಪ್ಪಲು ಗ್ರಾಮ ರವರು ಒಂದು ತಿಂಗಳ ಹಿಂದೆ ನನ್ನ ದೊಡ್ಡ ಮಗಳು ಸೌಮ್ಯ ಎಂಬ ಆಕೆಯನ್ನು ಬಾಣಂತನಕ್ಕೆ ಕರೆದುಕೊಂಡು ಬಂದಾಗ ನನ್ನ 2ನೇ ಮಗಳು ಗರ್ಭಿಣಿ  ಎಂದು ತಿಳಿದು ಬಂದಿರುತ್ತದೆ ಅವಳನ್ನು ಯಾರು ಗರ್ಭವತಿಯಾಗಲು ಕಾರಣ ಎಂದು ಕೇಳಿದಾಗ ಎದುರು ಮನೆ ತಮ್ಮಣ್ಣ ಎಂದು ತಿಳಿಸಿರುತ್ತಾಳೆ ಅವರು ನಮ್ಮ ಚಿಕ್ಕಪ್ಪ ಸಿಂಗ್ರೀಗೌಡನ ಮಗನಾದ ತಮ್ಮಣ್ಣೇಗೌಡ ಆಗಿರುತ್ತಾನೆ ಸದರಿ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

1. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 2/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಪಿ.ಜೆ ಲಕ್ಷ್ಮಣ, ಕಾರ್ಯನಿರ್ವಾಹಕ ಅಭಿಯಂತರರು, ಕವಿನಿನಿ, ಶಿವನಸಮುದ್ರರವರು ನೀಡಿದ ದೂರಿನ ಸಾರಾಂಶವೇನೆಂದರೆ ಶಿವನಸಮುದ್ರದ ಹೆಡ್ವಕ್ವಾಟರ್ ಒಂದು ಅನಾಥ ಗಂಡು ಶವ ನೀರಿನಲ್ಲಿ ತೇಲುತ್ತಿದೆ ತಾವು ಬಂದು ಮುಂದಿನ ಕ್ರಮ ಕೈಗೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 2. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಯು.ಡಿ.ಆರ್. 3/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ರಾಜಮ್ಮ ಕೊಂ. ನಾಗರಾಜೇಗೌಡ, ಹೊಡಕೆಶೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಸೀಮೆಎಣ್ಣೆ ಸ್ವವ್ಗೆ ಪಂಪು ಮಾಡಿದಾಗ ಹೆಚ್ಚು ಸೀಮೆಎಣ್ಣೆ ಹೊರ ಸುರಿದ್ದಿದ್ದು ಬೆಂಕಿಕಡ್ಡಿ ಗೀಚಿದಾಗ ಒಂದೇ ಸಲಕ್ಕೆ ಬೆಂಕಿ ಹತ್ತಿಕೊಂಡು ನವೀನಳಿಗೆ ಸುಟ್ಟಗಾಯವಾಗಿದ್ದರಿಂದ ಮೈಸೂರಿನ ಸುಟ್ಟಗಾಯಗಳ ವಾಡರ್ಿಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ನವೀನಳು ದಿನಾಂಕ: 11-01-13 ರಂದು ಬೆಳಗ್ಗೆ 07-00 ಗಂಟೆ ಸುಮಾರಿಗೆ ಚಿಕಿತ್ಸೆ ಪಡೆಯುತ್ತಿದ್ದ ವಾಡರ್ಿನಲ್ಲೇ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಂಚನೆ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ನಾಗಮ್ಮ ಕೋಂ. ಲೇಟ್. ಶಿವಸ್ವಾಮಿ, ಆಲಕೆರೆ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ   ಅಪರಿಚಿತ ಸುಮಾರು 25 ವರ್ಷ ವಯಸ್ಸಿನ ಗಂಡಸು ಮತ್ತು 30 ವರ್ಷ ವಯಸ್ಸಿನ ಹೆಂಗಸು ಪಿರ್ಯಾದಿಯನ್ನು ಮಾತನಾಡಿಸಿ ಅವರ ಬಳಿ ಇದ್ದ ಚಿನ್ನದ ರೀತಿಯ ಕಾಸು ಮತ್ತು ಗುಂಡು, ತಾಳಿಯನ್ನು ತೋರಿಸಿ ತೆಗೆದುಕೊಳ್ಳಿ ಎಂದು ಪಿರ್ಯಾದಿಯ ಮೈಮುಟ್ಟಿದಾಗ ಪ್ರಜ್ಞೆ ತಪ್ಪಿದಂತಾಗಿದ್ದು ಅದಾದ ನಂತರ ಪಿರ್ಯಾದಿಯು ನೋಡಿಕೊಂಡಾಗ ಸದರಿ ಅಪರಿಚಿತ ವ್ಯಕ್ತಿಗಳು ಪಿರ್ಯಾದಿಯ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಚೈನ್ ಮತ್ತು ಕೈಯಲ್ಲಿದ್ದ 15 ಗ್ರಾಂ ತೂಕದ ಒಂದು ಚಿನ್ನದ ಬಳೆಯನ್ನು ಬಿಚ್ಚಿಕೊಂಡು ಹೋಗಿರುತ್ತಾರೆ ಅವರುಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 6/12 ಕಲಂ. 417-420 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಲಲಿತ ಕೊಂ. ರಾಘವೇಂದ್ರ, ಚೀಕನಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಗಂಡರಾಘವೇಂದ್ರ ಹಾರೋಹಳ್ಳಿ ಗ್ರಾಮ ಪಾಂಡವಪುರ ತಾ|| ರವರು ಈ ನಿನ್ನ ಮಗುವಿಗೆ ನಾನು ಕಾರಣ ಅಲ್ಲ. ಬೇರೆಯವರಿಗೆ ಗಭರ್ಿಣಿಯಾಗಿದ್ದೀ ಎಂದು ತಿಳಿಸಿ ಪಿರ್ಯಾದಿಯನ್ನು ತಮ್ಮ ತವರು ಮನೆಯಲ್ಲೆ ಬಿಟ್ಟು ಹೋಗಿದ್ದು ರಾತ್ರಿ ಸುಮಾರು 03-00 ಗಂಟೆಯಲ್ಲಿ ಪಿರ್ಯಾದಿ ಬಚ್ಚಲು ಮನೆಗೆ ಹೋದಾಗ ತಲೆ ಸುತ್ತಿ ಬಿದ್ದು ಬಿಟ್ಟಿದ್ದು ಆ ವೇಳೆ ಪಿರ್ಯಾದಿಗೆ ಗಂಡು ಮಗು ಜನಿಸಿ ಸತ್ತು ಹೋಗಿದ್ದು ಆದ ಕಾರಣ ಪಿರ್ಯಾದಿಯನ್ನು ನಂಬಿಸಿ ಮೋಸ ಮಾಡಿದ ಪಿರ್ಯಾದಿ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 457-380 ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಸುಬ್ಬಣ್ಣ ಬಿನ್ ಲೇಟ್ ಮಾದಪ್ಪ, ನಾನು ಬೇಸಾಯಕ್ಕೆಂದು ಹೈಸ್ಪೀಡ್ 5.5 ಹೆಚ್.ಪಿ. ಆಕ್ವಟಿಕ್ಸ್.  ನೀರೆತ್ತುವ ಪಂಪ್ಸೆಟ್ನ್ನು ಅಳವಡಿಸಿದ್ದು  ಪಂಪ್ಸೆಟ್ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದೆ. ಮಾರನೆ ದಿನ ಬಂದು ನೋಡಲಾಗಿ ಯಾರೋ ಕಳ್ಳರು ಬೀಗ ತೆಗೆದು ಒಳಗಡೆ ಇದ್ದ ಮೋಟಾರನ್ನು ಯಾವುದೋ ಆಯುಧದಿಂದ ಬಿಚ್ಚಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಬೆಲೆ ಸುಮಾರು 15,000/- ರೂಗಳು ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 279-304[ಎ] ಐ.ಪಿ.ಸಿ.

ದಿನಾಂಕ: 11-01-2013 ರಂದು ಪಿರ್ಯಾದಿ ಬಿ.ವಿ. ಸ್ವಾಮಿ ಬಿನ್. ವೆಂಕಟೇಗೌಡ, ಬೇವಿನಹಳ್ಳಿ ಗ್ರಾಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹೇಶ ಕೆಎ-09-ಎಫ್-3361 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮಹದೇವಯ್ಯನಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಮಹದೇವಯ್ಯ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತಿದ್ದು ಪೆಟ್ಟಾಗಿದ್ದ ಮಹದೇವಯ್ಯನನ್ನು ಅಪಘಾತ ಉಂಟು ಮಾಡಿದ ಬಸ್ಸಿನಲ್ಲಿ ಹಾಕಿಕೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ರಾತ್ರಿ 08-38 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.  

No comments:

Post a Comment