ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 17-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ವಂಚನೆ/ಕಳವು ಪ್ರಕರಣ ಹಾಗು 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 02/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 17-01-2013 ರಂದು ಪಿರ್ಯಾದಿ ಹೆಚ್.ಸಿ.ರಾಜಣ್ಣ ಬಿನ್. ಲೇ ಚನ್ನೇಗೌಡ, ವಕ್ಕಲಿಗರು, ಬ್ಯಾಡರಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಒಬ್ಬ ಗಂಡಸು ನೀರು ಕುಡಿಯಲೋ, ಸ್ನಾನ ಮಾಡಲೋ ಆಕಸ್ಮಿಕವಾಗಿ ಕರೆಗೆ ಬಿದ್ದು ಮರಣ ಹೊಂದಿದ್ದು, ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದರಿಂದ ಗುರುತು ಹಚ್ಚಲು ಸಾಧ್ಯವಾಗಿರುವುದಿಲ್ಲ ಈತನ ಸಾವಿನ ಬಗ್ಗೆ ಯಾವುದೇ ಅನುಮಾನವಿರದ ಕಾರಣ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುತ್ತೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 17-01-2013 ರಂದು ಪಿರ್ಯಾದಿ ಬಿ.ಬೋರೇಗೌಡ ಬಿನ್ ಬೋರಯ್ಯ, ರಾಮ ಮಂದಿರದ ರಸ್ತೆ, ಪಾಲಹಳ್ಳಿ, ಶ್ರೀರಂಗಪಟ್ಟಣ ತಾ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಟಿ.ಪ್ರಬಾಕರ 30 ವರ್ಷ ಎಂಬುವವರು ಕೆಲಸಕ್ಕೆ ಮೈಸೂರಿಗೆ ಹೋಗುತ್ತೇನೆಂದು ಹೇಳಿ ಹೋದವನು ಕಾಣೆಯಾಗಿರುತ್ತಾನೆ. ಕಳೆದ 03 ತಿಂಗಳಿಂದಲೂ ನಮ್ಮ ಸಂಬಂದಿಕರ ಮನೆ ಮತ್ತು ಹೊರಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ತಾ. ದಿನಾಂಕ: 26-10-2012 ರಂದು ಪೋನ್ ಮಾಡಿದಾಗ ನಾನು ಎಲ್ಲೋ ದೂರವಿದ್ದೇನೆ ಬರುತ್ತೇನೆ ಎಂದು ಪೋನ್. ನಂ. 9844046298ಕ್ಕೆ ತಿಳಿಸಿದನು ಇದುವರೆವಿಗೂ ಮನೆಗೆ ಬಂದಿರುವುದಿಲ್ಲಾ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.
ದಿನಾಂಕ: 17-01-2013 ರಂದು ಪಿರ್ಯಾದಿ ವೈ.ನವನೀತ್ ಕುಮಾರ್ ಬಿನ್ ಯೇಸುದಾಸ್ 58 ವರ್ಷ, ವಿನಾಯಕ ಬಡಾವಣೆ ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಎನ್.ಶೈನಿ ಓಶಿನ್ ರವರು ಮನೆಯಿಂದ ಹೊರಗಡೆ ಹೋದವಳು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಆದ್ದರಿಂದ ನಾವು ಗಾಬರಿಗೊಂಡು ಎಲ್ಲಾ ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಎಲ್ಲೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 41[ಡಿ]-102 ಸಿಆರ್.ಪಿ.ಸಿ. ಕೂಡ 379 ಐ.ಪಿ.ಸಿ.
ದಿನಾಂಕ: 17-01-2013 ರಂದು ಪಿರ್ಯಾದಿ ಕೆ.ಲೋಕೇಶ, ಸಿಪಿಸಿ 684, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಂ.ಮಹೇಶ ರಾಜಾಜಿನಗರ, ಬೆಂಗಳೂರು ಸಿಟಿ ರವರು ಮಾರುತಿ ವ್ಯಾನನ್ನು ಎಲ್ಲಿಯೋ ಕಳವು ಮಾಡಿಕೊಂಡು ತಂದಿರಬಹುದೆಂದು ಅನುಮಾನದ ಮೇಲೆ ಮುಂದಿನ ಕ್ರಮದ ಬಗ್ಗೆ ಬೆಳಗಿನ ಜಾವ 03-30 ಗಂಟೆಗೆ ಠಾಣೆಗೆ ಹಾಜರುಪಡಿಸಿರುವುದಾಗಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 498[ಎ]-323-506 ಐ.ಪಿ.ಸಿ ಕೂಡ 3 & 4 ಡಿ.ಪಿ. ಅಕ್ಟ್.
ದಿನಾಂಕ: 17-01-2013 ರಂದು ಪಿರ್ಯಾದಿ ರಾಜಲಕ್ಷ್ಮಿ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್. ಮೊ.ನಂ. 9845091178 ರವರು ನೀಡಿದ ದೂರು ಏನೆಂದರೆ ಅವರ ಗಂಡ ಎಂ.ಹೆಚ್. ಉಮೇಶ್ ಬಿನ್ ಜಿ. ಹುಚ್ಚಯ್ಯ, ಎನ್.ಇ.ಎಸ್. ಬಡಾವಣೆ, ಮಳವಳ್ಳಿ ಟೌನ್ ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ, ಕಿರುಕುಳ ನೀಡುತ್ತಿದ್ದು ಹಾಗೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ಬಗ್ಗೆ ಪ್ರಶ್ನಿಸಲು ಹೋದಾಗ ಕತ್ತನ್ನು ಹಿಡಿದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಅದ್ದರಿಂದ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ವರದಕ್ಷಿಣಿ ಕಿರುಕುಳ ನೀಡುತ್ತಿರುವ ನನ್ನ ಗಂಡ ಉಮೇಶ್ನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ವಂಚನೆ/ಕಳವು ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 420, 379 ಐ.ಪಿ.ಸಿ.
ದಿನಾಂಕ: 17-01-2013 ರಂದು ಪಿರ್ಯಾದಿ ಶಕುಂತಲಮ್ಮ ಕೊಂ. ಲೇಟ್. ಪುಟ್ಟೇಗೌಡ, 63 ವರ್ಷ, ವಕ್ಕಲಿಗರು. ಮನೆ ಕೆಲಸ, ಕಟ್ಟೇರಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರನ್ನು ಕರೆದುಕೊಂಡು ಹೋಗಿ ಮೋಸ ಮಾಡುವ ಉದ್ದೇಶದಿಂದ ಕತ್ತಿನಲ್ಲಿ ಇದ್ದ ಮಾಂಗಲ್ಯ ಸರ ಹಾಗೂ ಕಿವಿಯಲ್ಲಿದ್ದ ಮಾಟಿಯನ್ನು ಬಿಚ್ಚಿಕೊಂಡು ನನಗೆ ಜ್ಞಾನ ತಪ್ಪಿದಂತಾಯಿತು. ನನಗೆ ಜ್ಞಾನ ಬಂದಾಗ ನನ್ನ ವಡವೆಯನ್ನು ನೋಡಿಕೊಂಡಾಗ 35 ಗ್ರಾಂ ತೂಕವುಳ್ಳ ಮಾಂಗಲ್ಯ ಸರ, ಕಿವಿಯ 5 ಗ್ರಾಂ ಮಾಟಿ, ಒಟ್ಟು 1,15,000/- ರೂ ಬೆಲೆ ಬಾಳುವ ವಡವೆಯನ್ನು ಮೋಸ ಮಾಡಿ ಕಳವು ಮಾಡಿಕೊಂಡು ಹೋಗಿರುವುದಾಗಿ ಕೊಟ್ಟ ದೂರಿನ ಮೇರೆಗೆ ತುರ್ತು ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
No comments:
Post a Comment