Moving text

Mandya District Police

DAILY CRIME REPORT DATED : 18-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-01-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ                 1  ಯು.ಡಿ.ಆರ್.ಪ್ರಕರಣ,  6 ಕಳ್ಳತನ ಪ್ರಕರಣಗಳು,  3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ವರದಕ್ಷಿಣೆ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.    

ಯು.ಡಿ.ಆರ್.ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರೇಣುಕಮ್ಮ ಕೋಂ. ಲೇಟ್. ಹೆಚ್. ಮುತ್ತುರಾಯಪ್ಪ, 52 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಕಲಾವತಿ ಕೋಂ. ಆನಂದ,   30 ವರ್ಷ, ಎಂಬುವವರಿಗೆ ಈಗ್ಗೆ ಸುಮಾರು ವರ್ಷಗಳಿಂದ ತಲೆಯಲ್ಲಿ ಗೆಡ್ಡೆ ಕಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದರು ಗುಣಮುಖವಾಗಿರಲಿಲ್ಲ, ಬೆಂಕಿ ಹತ್ತಿಸಿಕೊಂಡು ಆಕಸ್ಮಿಕವಾಗಿ ಸುಟ್ಟಗಾಯಗಳಿಂದ ಮೃತಪಟ್ಟಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 13/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರಘು ಕೆ.ಎನ್. ಬಿನ್. ನಾಗರಾಜು, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅಜರ್ಿದಾರರ ಬಾಬ್ತು ಸುಮಾರು 25.000 ರೂ ಬೆಲೆ ಬಾಳುವ ಬಜಾಜ್ ಪ್ಯಾಸೆಂಜರ್ ಆಟೋ  ನಂ. ಕೆಎಲ್-10-ಎಸ್-4427 ರ ಆಟೋ ಇಂಜಿನ್  ನಂ.ಕೆಎಲ್-10-ಎಸ್-4427  ರ ಆಟೋ ಇಂಜಿನ್ ನಂ. ಎಇಎಂಬಿಕೆಎಂ12486 ಚಾಸಿಸ್ ನಂ. 24ಎಫಬಿಕೆಎಂ96388  ಆಟೋವನ್ನು ಮನೆಯ ಮುಂದೆ ಎಂದಿನಂತೆ ನಿಲ್ಲಿಸಿದ್ದು ಕಳುವಾಗಿರುವ ವಾಹನವನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಶಶಿಕಲಾ ಬಿನ್. ಈರೇಗೌಡ, ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಗವಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಪೂಜೆ ಮಾಡಿಸಲು ಬಂದಿದ್ದು ತುಂಬಾ ಜನ ಜಂಗುಳಿ ಇದ್ದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಪೂಜೆ ಮಾಡಿಸಿ ಮುಂದೆ ಬಂದು ನೋಡಿಕೊಂಡಾಗ ಪಿರ್ಯಾದಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, 1 ಜೊತೆ ಗುಂಡು ಕಳುವಾಗಿತ್ತು. ನನಗೆ ಅರಿವಿಲ್ಲದಂತೆ ಯಾರೋ ಕಳ್ಳರು ಅದನ್ನು ಅಪಹರಿಸಿರುತ್ತಾರೆ.


3. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಚಿಕ್ಕಸ್ವಾಮಿ ಬಿನ್. ಮಂಚಯ್ಯ, 30 ವರ್ಷ, ಅಣಸಾಲೆ ಗ್ರಾಮ, ಕಿರುಗಾವಲು ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆ.ಎ 11 ಯು -5094 ಟಿ.ವಿ.ಎಸ್ ಮೊಪೆಡ್ ನಲ್ಲಿ ತಾಲ್ಲೂಕು ಕಚೇರಿಗೆ ಬಂದು ಕೆಲಸದ ನಿಮಿತ್ತ ನಿಲ್ಲಿಸಿ ನಮ್ಮ ಕೆಲಸ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ನಮ್ಮ ಬಾಬ್ತು  ಟಿವಿ.ಎಸ್ ಮೊಪೆಡ್ ನಾವು ನಿಲ್ಲಿಸಿದ್ದ ಜಾಗದಲ್ಲಿ ಕಾಣಲಿಲ್ಲ ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಪುಟ್ಟೇಗೌಡ ಲೇಟ್ ನಿಂಗೇಗೌಡ, 62 ವರ್ಷ, ವ್ಯವಸಾಯ, ಒಕ್ಕಲಿಗರು, ಕಪರನಕೊಪ್ಪಲು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ತಾಲ್ಲೋಕು ಕಛೇರಿಗೆ ನನ್ನ ಬಾಬ್ತು ಮೊಪೆಡ್ ನಂಬರ್ ಕೆ.ಎ-11- ಘ- 4839 ಖಿ.ಗಿ.ಖ ಘಿಐ ಸ್ಕೂಟರ್ನಲ್ಲಿ ಮಧ್ಯಾಹ್ನ 12-30 ಗಂಟೆಯಲ್ಲಿ ಬಂದು ಸ್ಕೂಟರ್ನ್ನು ತಾಲ್ಲೋಕು ಕಛೇರಿಯ ಆವರಣದಲ್ಲಿ ನಿಲ್ಲಿಸಿ ಒಳಕ್ಕೆ ಹೋಗಿ. ಕೆಲಸ ಮುಗಿಸಿ ಮಧ್ಯಾಹ್ನ ಸುಮಾರು     01-30 ಗಂಟೆಯಲ್ಲಿ ಹೊರಕ್ಕೆ ಬಂದು ನನ್ನ ಸ್ಕೂಟರ್ನ್ನು ನೋಡಲಾಗಿ ಸ್ಕೂಟರ್ ಇರಲಿಲ್ಲ. ಯಾರೋ ಕಳ್ಳರು ನನ್ನ ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಮಹಾಲಿಂಗೇಗೌಡ ಬಿನ್. ಲೇಟ್. ದೇವೇಗೌಡ, ತಿಮ್ಮನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಜಮೀನಿನಲ್ಲಿ ಅಳವಡಿಸಿದ್ದ ಪಂಪ್ ಸೆಟ್ ಮೋಟಾರ್ನ್ನು ದಿನಾಂಕ: 11-01-2013 ರಂದು ರಾತ್ರಿ ವೇಳೆ, ಆರೋಪಿ ಬಸಪ್ಪ ಬಿನ್. ಮರಿಯಪ್ಪ, ತಾಳಶಾಸನ ಗ್ರಾಮ, ಪಾಂಡವಪುರ ತಾಲ್ಲೋಕು, ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


6. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐ.ಪಿ.ಸಿ.

     ದಿನಾಂಕ: 18-01-2013 ರಂದು ಪಿರ್ಯಾದಿ ಸಿ. ಗಜೇಂದ್ರ ಬಿನ್. ಲೇ|| ಚಿಕ್ಕತಾಯಪ್ಪ, 49 ವರ್ಷ ರವರು ನೀಡಿದ ದೂರು ಏನೆಂದರೆ ದಿನಾಂಕ: 17-01-2013 ರಂದು ಯಾರೋ ಕಳ್ಳರು ನನ್ನ ಬೈಕ್ನ್ನು ಕಳವು ಮಾಡಿ ತೆಗೆದುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೊಪ್ಪ. ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಜಯಲಕ್ಷ್ಮಿ ಕೋಂ. ಎ.ಶಿವಣ್ಣ,  40ವರ್ಷ, ಒಕ್ಕಲಿಗರು, ಮನೆಕೆಲಸ, ಕೊಪ್ಪ ಟೌನ್, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಎ.ಶಿವಣ್ಣ ಬಿನ್. ಅಂಕೇಗೌಡ @ ತಮ್ಮೇಗೌಡ, 50ವರ್ಷ, ಒಕ್ಕಲಿಗರು ದಿನಾಂಕ: 26-01-2013 ರಂದು ಮನೆಯಿಂದ ಹೊರಗೆ ಹೋದವರು ಪುನ: ಮನೆಗೆ ವಾಪಸ್ ಆಗಲಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 18-01-2013 ರಂದು ಪಿರ್ಯಾದಿ ಭ್ರಮಲಿಂಗಾಚಾರಿ ಬಿನ್. ಲೇಟ್. ಲಿಂಗಣ್ಣಚಾರಿ ರವರು ನೀಡಿದ ದೂರಿನ ವಿವರವೇನೆಂದರೆ ಬ್ರಹ್ಮೇಶ್. ಬಿನ್. ಬ್ರಹ್ಮಲಿಂಗಚಾರಿ, 18 ವರ್ಷ, ರವರು ದಿನಾಂಕ: 13/01/2013 ರಂದು ಲಕ್ಷ್ಮಿಸಾಗರ ಗ್ರಾಮದಿಂದ ಕಾಣೆಯಾಗಿರುತ್ತಾರೆ. 


3.ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. ಮನುಷ್ಯ ಕಾಣೆಯಾಗಿರುತ್ತಾನೆ.    

ದಿನಾಂಕ: 18-01-2013 ರಂದು ಪಿರ್ಯಾದಿ ಮಲ್ಲೇಶ ಬಿನ್. ಮರೀಗೌಡ, 34 ವರ್ಷ, ವ್ಯವಸಾಯ, ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ: ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ಮರೀಗೌಡ, 22 ವರ್ಷ, ದಿನಾಂಕ: 15-01-2013 ಸಂಜೆ 04-00 ಗಂಟೆಯ ಸಮಯದಲ್ಲಿ ಕೀಳಘಟ್ಟ ಗ್ರಾಮ, ಕೊಪ್ಪ ಹೋಬಳಿ, ಮದ್ದೂರು ತಾ. ರವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 498[ಎ] ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ಲತಾ.ಎನ್. ಕೋಂ ನಾಗರಾಜು, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮತ್ತು ಅವರ ಗಂಡ ನಾಗರಾಜು ಬಿನ್ ಉಗ್ರಪ್ಪ, ಹಿರೇಮರಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ಮದುವೆಯಾದ ಹೊಸದರಲ್ಲಿ ಅನ್ಯೋನ್ಯವಾಗಿದ್ದು, ನಂತರ ಗಂಡ ಶೀಲ ಶಂಕಿಸಿ ಅನುಮಾನದಿಂದ ನೋಡುವುದು ಮಾಡುತ್ತಿದ್ದು, ಜಗಳ ಮಾಡುವುದು ಮಾಡುತ್ತಿರುತ್ತಾರೆ ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳ್ಳತನ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 457-380 ಐ.ಪಿ.ಸಿ.

ದಿನಾಂಕ: 18-01-2013 ರಂದು ಪಿರ್ಯಾದಿ ರವಿಕುಮಾರ, ವೈದ್ಯಾದಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರ ಬೀರುವಳ್ಳಿಯ ಕಟ್ಟಡದೊಳಗೆ ''ಕರ್ನಾಟಕ ಹೆಲ್ತ್ ಸಿಸ್ಟಂ ಡೆವಲಪ್ ಮೆಂಟ್''   ಅಡಿಯಲ್ಲಿ ಇತ್ತೀಚಿಗಷ್ಟೆ ನೀಡಲಾಗಿದ್ದ ಕಂಪ್ಯೂಟರ್ ಸಿಸ್ಟಮ್ ನ್ನು (ಮಾನಿಟರ್, ಯುಪಿಎಸ್. ಸಿಪಿಯು. ಪ್ರಿಂಟರ್.) ಅಳವಡಿಸಲಾಗಿತ್ತು ಅಳವಡಿಸಲಾಗಿದ್ದ ಕೋಣೆಯ ಬಾಗಿಲು ಸರಳುಗಳನ್ನು ಕತ್ತರಿಸಿ ಒಳ ತೂರಿ ಕಂಪ್ಯೂಟರ್ ಸಿಸ್ಟಮ್ ಅನ್ನು ಕಳವು ಮಾಡಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment