ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-01-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ವಂಚನೆ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ, 1 ಕಳ್ಳತನ ಪ್ರಕರಣ, 1 ಕಳವು ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-01-2013 ರಂದು ಪಿರ್ಯಾದಿ ಅಯೂಬ್ ಬಿನ್.ಲೇಟ್. ಮಹಮ್ಮದ್ ಪೀರ್, 1 ನೇ ಅಡ್ಡರಸ್ತೆ, ರವೀಂದ್ರ ರೈಸ್ ಮಿಲ್ ರಸ್ತೆ, ಸಬ್ದರಿಯಾಬಾದ್ ಮೊಹಲ್ಲಾ, ಮಂಡ್ಯ ರವರು ನೀಡಿದ ದೂರು ಏನೆಂದರೆ ಈತನು ತೆವೆಳಿಕೊಂಡು ಭಿಕ್ಷೆ ಬೇಡುವಾಗಲೋ ಅಥವಾ ಹೋಗುವಾಗಲೋ ಬಿದ್ದು ತಲೆಯಲ್ಲಿ ಹಳೆ ಗಾಯವಾಗಿದ್ದು ತಲೆಗೆ ಬಿಳಿ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡಿರುತ್ತಾನೆ. ಈತನ ಮೈಮೇಲೆ ಆಕಾಶ ಬಣ್ಣದ ಚೆಕ್ಸ್ಶಟವೆಲ್, ಸೀಮೆಂಟ್ ಕಲರ್ ಪ್ಯಾಂಟು ಇದ್ದು ಸಾದಾರಣ ಮೈಕಟ್ಟು ಉಳ್ಳವನಾಗಿರುತ್ತಾನೆ ಈತನ ಹೆಸರು ವಿಳಾಸ ತಿಳಿದು ಬಂದಿಲ್ಲಾ ಈತನು ಈ ದಿನ ದಿನಾಂಕ: 18-01-2013 ರಂದು ಬೆಳಿಗ್ಗೆ 10-30 ಘಂಟೆ ಸಮಯದಲ್ಲಿ ರವೀಂದ್ರ ರೈಸ್ ಮಿಲ್ 1 ನೇ ಕ್ರಾಸ್ ನ ಮುತ್ತೂಟ್ಫಿನ್ಕಾಪರ್, ಗೋಡೆಯ ಪಕ್ಕದ ಪ್ಲ್ಯಾಟ್ ಪಾರಂ ಮೇಲೆ ಸತ್ತುಹೋಗಿರುತ್ತಾನೆ, ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 420 ಐ.ಪಿ.ಸಿ.
ದಿನಾಂಕ: 19-01-2013 ರಂದು ಪಿರ್ಯಾದಿ ಕಿಶೋರ್, ಹೊಸಹೊಳಲು ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಕೆಎ-04-ಬಿ-5277 ಈ ಟಾಟಾ ಸುಮೋವನ್ನು ಕೆ.ಆರ್. ಪೇಟೆ ಟೌನ್ನಲ್ಲಿ ಬಾಡಿಗೆ ಓಡಿಸುತ್ತಿದ್ದೆನು. ನಾನು ಟಾಟಾ ಸುಮೋವನ್ನು ದಿನಾಂಕ: 15.12.2012 ರಂದು ಬೆಳಿಗ್ಗೆ 11.15 ಗಂಟೆಯಲ್ಲಿ ಕೆ.ಆರ್. ಪೇಟೆ ಟೌನ್ ವಾಸಿ ಇಲಿಯಾಸ್ ಎಂಬ ವ್ಯಕ್ತಿಗೆ 1.60.000/- ರೂಗಳಿಗೆ ಚಂದ್ರು, ಗೋಪಿ, ಸಮೀರ್ ಹಾಗು ಬಸವರಾಜು ರವರ ಸಮಕ್ಷಮದಲ್ಲಿ ಮಾರಾಟ ಮಾಡಿದ್ದೆನು, 25 ಸಾವಿರ ಅಡ್ವಾನ್ಸ್ ಕೊಟ್ಟು ಉಳಿದ ಬಾಕಿಯ ಮೊತ್ತವನ್ನು ಕಿಕ್ಕೇರಿಗೆ ಹೋಗಿ ತಂದು ಕೊಡುತ್ತೆನೆಂದು ಟಾಟಾ ಸುಮೋ ತೆಗೆದುಕೊಂಡು ಹೋದವನು ಇದುವರೆವಿಗು ವಾಪಸ್ಸು ಬಂದಿರುವುದಿಲ್ಲ ಆದರಿಂದ ಹಣವನ್ನು ಕೊಡದೆ ಮೋಸ ಮಾಡಿ ಟಾಟಾ ಸುಮೋ ತೆಗೆದುಕೊಂಡು ಹೋದ ಇಲಿಯಾಸ್, ಕೆಆರ್ ಪೇಟೆ ಟೌನ್ ಎಂಬವವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 19-01-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ಡಿ.ಎ.ಕೆರೆ ಗ್ರಾಮ, ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಡಿ.ಸಿ.ಪೂಜಾ, ಸುಮಾರು 14ವರ್ಷ, ಬುದ್ದಿ ಭ್ರಮಣೆಯಾಗಿದ್ದರಿಂದ ಅವರು ಆಗಾಗ ಹೊರಗಡೆ ಹೋಗಿ ಮತ್ತೆ ಕೆಲವು ದಿನಗಳ ನಂತರ ಬರುತ್ತಿದ್ದರು ಆದರೆ ಸುಮಾರು 6 ತಿಂಗಳ ಹಿಂದೆ ಮನೆಯಿಂದ ಹೊರಕ್ಕೆ ಹೋದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 279, 337, 304[ಎ] ಐ.ಪಿ.ಸಿ.
ದಿನಾಂಕ: 19-01-2013 ರಂದು ಪಿರ್ಯಾದಿ ಶ್ರಿನಿವಾಸ್ರಾಜು ಬಿನ್ ಲೇ; ವೆಂಕಟಪ್ಪ, 45 ವರ್ಷ, ಈಡಿಗ ಜನಾಂಗ ಕಾಮದೇನು ಬಾರ್ನಲ್ಲಿ ಕೆಲಸ, ವಾಸ ಬೋವಿ ಕಾಲೋನಿ, 7ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೃಷ್ಣಮೂತರ್ಿ, ಕೆ.ಎ-11, ಎಸ್-5529ರ ಹಿರೋಹೊಂಡಾ ಮೋಟಾರ್ ಸೈಕಲ್ ಚಾಲಕ, ವಾಸ ಮಂಡ್ಯ ರವರು ಮೋಟಾರ್ ಸೈಕಲನ್ನು ಅತಿವೇಗವಾಗಿ ಅಜಾಗರುಕತೆಯಿಂದ ಅಡ್ಡದಿಡ್ಡಿ ಚಾಲನೆ ಮಾಡಿಕೊಂಡು ಬಂದು ಹೆಬ್ಬಾಳಕ್ಕೆ ಕೆಡವಿದ್ದು ಸ್ನೇಹಿತರಾದ ಸತ್ಯನಾರಾಯಣ, ಶ್ರೀನಿವಾಸ್ರಾಜು ರವರುಗಳು ಒಟ್ಟಿಗೆ ಮೂರು ಜನರು ಮೋಟಾರ್ ಸೈಕಲ್ ಸಮೇತ ಹೆಬ್ಬಾಳದ ನೀರಿಗೆ ಬಿದಿದ್ದು, ಈ ಅಪಘಾತದಲ್ಲಿ ಫಿರ್ಯಾದುದಾರರಿಗೆ ಪೆಟ್ಟಾಗಿದ್ದು, ಮೋಟಾರ್ ಸೈಕಲ್ ಮಧ್ಯಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದು ಸತ್ಯನಾರಾಯಣರವರನ್ನು ಮಂಡ್ಯ ಜಿಲ್ಲಾ ಅಸ್ಪತ್ರೆಗೆ ತರಲಾಗಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಮೋಟಾರ್ ಸೈಕಲ್ ಚಾಲಕರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಎಂದು ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 457-380 ಐ.ಪಿ.ಸಿ.
ದಿನಾಂಕ: 19-01-2013 ರಂದು ಪಿರ್ಯಾದಿ ನಾಥಪ್ಪ @ ಪೂಜಾರಿ ಬಿನ್. ಲೇ||ಕೆಂಚೇಗೌಡ, 60ವರ್ಷ, ಒಕ್ಕಲಿಗರು, ಶ್ರೀ ಪಟ್ಟಲದಮ್ಮ ದೇವರಪೂಜಾರಿ, ವಾಸ ರುದ್ರಾಕ್ಷಿಪುರಗ್ರಾಮ, ಮದ್ದೂರು ತಾ||. ರವರು ನೀಡಿದ ದೂರು ಏನೆಂದರೆ ದಿನಾಂಕಃ-18-01-2013 ರಂದು ರಾತ್ರಿ ವೇಳೆಯಲ್ಲಿ ರುದ್ರಾಕ್ಷಿಪುರ ಗ್ರಾಮ ಪಟ್ಟಲದಮ್ಮದೇವಸ್ಥಾನದ ಬಾಗಿಲು ಹೊಡೆದು ದೇವಸ್ಥಾನದ ಬೀರುವಿನಲ್ಲಿದ್ದ ಸುಮಾರು 2 ಕೆಜಿ ಬೆಳ್ಳಿಯ ದೇವರ ಪೂಜಾದ ಗಿಂಡಿ ಹಾಗೂ ದೇವರ ಮೈಮೇಲೆ ಇದ್ದ 2 ಗ್ರಾಂನ ಚಿನ್ನದ 1 ತಾಳಿ ಹಾಗೂ ಒಂದೊಂದು ಗ್ರಾಂನ ಎರಡು ತಾಳಿಗಳನ್ನು ಹಾಗೂ ದೇವರ ಬೆಳ್ಳಿಯ ಕಿರೀಟ 800 ಗ್ರಾಂ ಹಾಗೂ ದೇವಸ್ಥಾನದಲ್ಲಿದ್ದ ತಾಮ್ರದ ಬಿಂದಿಗೆಯ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 2 ಲಕ್ಷದ 18,000 ರೂ ಆಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 36/13 ಕಲಂ. 379 ಐ.ಪಿ.ಸಿ.
ದಿನಾಂಕ: 19-01-2013 ರಂದು ಪಿರ್ಯಾದಿ ಸಿ.ಕೆ. ಸೋಮಶೇಖರ ಬಿನ್. ಕೆಂಪಯ್ಯ @ ಹುಚ್ಚೇಗೌಡ, ಮನೆ ನಂ. 634, ಚಾಮನಹಳ್ಳಿ ಗ್ರಾಮ, ಕಸಬಾ ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ-18-01-2013 ರಂದು ಪಿರ್ಯಾದಿಯವರು ಮದ್ದೂರು ಟೌನ್ ಮಹಾವೀರ ಟಾಕೀಸ್ ಎದುರು ಇರುವ ಮಣಪ್ಪುರಂ ಗೋಲ್ಡ್ ಲೋನ್ ಕಛೇರಿ ಬಳಿ ಅವರ ಹೀರೋ ಹೋಂಡಾ ಮೋಟಾರ್ ಬೈಕ್ (ಸ್ಪ್ಲೆಂಡರ್ ಪ್ಲಸ್) ಸಂಖ್ಯೆ ಕೆಎ-11/ಆರ್-7397 ಅನ್ನು ನಿಲ್ಲಿಸಿ ಸದರಿ ಕಛೇರಿಗೆ ಹೋಗಿದ್ದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment