ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ಕೊಲೆ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳವು ಪ್ರಕರಣ :
ನಾಗಮಂಗಲ ಪುರ ಪೊಲೀಸ್ ಠಾಣೆ ಮೊ.ನಂ. 1/12 ಕಲಂ. 41 ಕ್ಲಾಸ್ (ಡಿ), 102 ಸಿ.ಆರ್.ಪಿ.ಸಿ ರೆ/ವಿ 379 ಐ.ಪಿ.ಸಿ.
ದಿನಾಂಕ: 01-01-2013 ರಂದು ಪಿರ್ಯಾದಿ ಟಿ.ಲಿಂಗರಾಜು, ಸಿ.ಹೆಚ್.ಸಿ 297, ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ ಮತ್ತು ಸಿಪಿಸಿ-311 ರವರು ಗಸ್ತಿನಲ್ಲಿದ್ದಾಗ ನಾಗಮಂಗಲ ಟೌನ್ನ ಮೈಸೂರು ರಸ್ತೆಯ ಬಳಿಯ ಜ್ಯುವೆಲರಿ ಶಾಪ್ ಹತ್ತಿರ ಒಬ್ಬ ಆಸಾಮಿ ಅನುಮಾನಾಸ್ಪದವಾಗಿ ವತರ್ಿಸುತ್ತಿದ್ದರಿಂದ ವಿಚಾರಿಸಲಾಗಿ ಅನುಮಾನ ಬಂದು ಅಂಗ ಶೋಧನೆ ಮಾಡಿದಾಗ, ಆತನ ಪ್ಯಾಂಟ್ ಜೇಬಿನಲ್ಲಿ ತುಂಡಾದ ಎರಡು ಎಳೆಯ ಚಿನ್ನದ ಚೈನು ಸಿಕ್ಕಿರುತ್ತೆ, ನಂತರ ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ನಿವೇದಿಸಿಕೊಂಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 2/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 01-01-2013 ರಂದು ಪಿರ್ಯಾದಿ ಕೆಂಪಮ್ಮ ಕೋಂ. ಪುಟ್ಟಮಾದಪ್ಪ, ಮೆಳ್ಳಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಗಂಡ ಮನೆಯಿಂದ ಹೊರಗೆ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ ಈವರಗೆ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿ ಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 302-201 ಐ.ಪಿ.ಸಿ.
ದಿನಾಂಕ: 01-01-2013 ರಂದು ಪಿರ್ಯಾದಿ ನಿಂಗೇಗೌಡ.ಡಿ.ಎಂ. ಬಿನ್. ಲೇಟ್. ಮರೀಗೌಡ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಹುಡುಗಿಯ ಶವ ಕಳ್ಳಿ ಬೇಲಿಯ ಮರೆಯಲ್ಲಿ ಅಂಗಾತವಾಗಿ ಬಿದ್ದಿದ್ದು ಮೈ ಮೇಲೆ ಕಪ್ಪು ಟೀ ಶಟರ್್, ಕಪ್ಪು ಪ್ಯಾಂಟ್ ತೊಟ್ಟಿದ್ದು ಕೇಸರಿ ಕಲ್ಲರ್ ದವಣಿ. [ವೇಲ್] ಬಿದ್ದಿದ್ದು ಕತ್ತಿನಲ್ಲಿ ಕಪ್ಪು ಮಣಿ, ಕಿವಿಯಲ್ಲಿ ರಿಂಗು, ಕಾಲಿನಲ್ಲಿ ನೀಲಿಗೆರೆಯ ಸಾಕ್ಸ್, ತೊಟ್ಟಿದ್ದು ಬಾಯಿಯಲ್ಲಿ ಹಾಗೂ ಮೂಗಿನಲ್ಲಿ ನೊರೆ ಬರುತಿತ್ತು.ಈ ಹುಡುಗಿ ಸುಮಾರು 18 ರಿಂದ 20 ವರ್ಷದಂತಿದೆ. ಈ ಶವವನ್ನು ನೋಡಿದರೆ ಯಾರೋ ದುಷ್ಕಮರ್ಿಗಳು, ಯಾವುದೋ ಉದ್ದೇಶದಿಂದ ಎಲ್ಲೋ ಕೊಲೆ ಮಾಡಿ ದೇವಸ್ಥಾನದ ಬಳಿಯ ವಿ.ಸಿ.ಲಿಂಕ್ ಚಾನಲ್ ಬಳಿಯ ಕಳ್ಳಿ ಬೇಲಿಯ ಒಳಗಡೆ ತಂದು ಬಿಸಾಕಿರುವಂತೆ ಕಂಡು ಬಂದಿರುತ್ತೆ. ಈ ಶವವನ್ನು ಒಂದು, ಎರಡು ದಿನಗಳ ಹಿಂದೆ ಹಾಕಿರುವಂತೆ ಕಂಡು ಬಂದಿರುತ್ತೆ. ಈ ಶವ ಅಪರಿಚಿತ ಹುಡುಗಿಯಾಗಿದ್ದು, ಯಾರು ಏನು ಅಂತ ಗೊತ್ತಿಲ್ಲ. ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಯುಡಿಆರ್..ನಂ. 01/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 01-01-2013 ರಂದು ಪಿರ್ಯಾದಿ ರಾಜು ಬಿನ್. ಜಾಣೇಗೌಡ, ಬೋರಾಪುರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಹೆಂಡತಿ ಕವಿತಾಳು ದಿನಾಂಕ.20-12-12ರಂದು ಸಂಜೆ4-30ರಲ್ಲಿ ತನ್ನ ಹೆಂಡತಿ ತವರು ಮನೆಯಲ್ಲಿ ಚಕ್ಕುಲಿಯನ್ನು ಸುಡುತ್ತಿದ್ದಾಗ ಮನೆಯಲ್ಲೇ ಆಟ ವಾಡುತ್ತಿದ್ದ ನನ್ನ ಮಗು ಪೂವರ್ಿಕ, 7 ತಿಂಗಳು ಪಾಪು ಒಲೆಯ ಹತ್ತಿರ ಬಂದು ಬಾಣಲಿಯನ್ನು ಆಕಸ್ಮಿಕವಾಗಿ ಕೈಯಿಂದ ಹಿಡಿದಾಗ ಆ ಬಾಣಲಿಯಲ್ಲಿ ಕಾದಿದ್ದ ಎಣ್ಣೆ ಮಗುವಿನ ಮೈ ಮೇಲೆ ಬಿದ್ದು ಗಾಯವಾಗಿದ್ದ ಪೂವರ್ಿಕಳನ್ನು ಚಿಕಿತ್ಸೆಗಾಗಿ ಮದ್ದೂರು & ಮಂಡ್ಯ ಜಿಲ್ಲಾಸ್ಪತ್ರೆಗಳಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ದಿನಾಂಕ.1-1-2013ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಮೃತಪಟ್ಟಿರುತ್ತಾಳೆ ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/12 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 01-01-2013 ರಂದು ನಟೇಶ ಬಿನ್. ಲೇಟ್. ಲಕ್ಕೇಗೌಡ, ಬೀರುವಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಅಂಗಡಿ ತೆಗೆಯಲು ಬಂದಾಗ ಯಾರೋ ಒಬ್ಬ ಅಪರಿಚಿತ ಗಂಡಸು ಮೃತಪಟ್ಟಿದ್ದು ಸುಮಾರು 40-45 ವರ್ಷ ವಯಸ್ಸಾಗಿದ್ದು ಸುಮಾರು ಒಂದು ವರ್ಷದಿಂದ ದೇವಸ್ಥಾನ ಹೇಮಗಿರಿ ಇತ್ಯಾದಿ ಕಡೆಗಳಲ್ಲಿ ಬಿಕ್ಷೆ ಮಾಡಿಕೊಂಡು ಇದ್ದು ದಿನಾಂಕ: 31-12-2012 ರಂದು ರಾತ್ರಿ ವೇಳೆಯಲ್ಲಿ ಮಲಗಿದ್ದಲ್ಲೇ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment