Moving text

Mandya District Police

Daily Crime Report of 02-01-2013




ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  3 ಯು.ಡಿ.ಆರ್. ಪ್ರಕರಣಗಳು,  1 ಮನೆ ಕಳ್ಳತನ ಪ್ರಕರಣ,  1 ಅಪಹರಣ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 



ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಅಧಿನಿಯಮ ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 447 ಐಪಿಸಿ & 192(ಎ) ಕನರ್ಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್-1964.

ದಿನಾಂಕ: 02-01-2013 ರಂದು ಪಿರ್ಯಾದಿ ಸಿ ಪ್ರಸನ್ನ ಕುಮಾರ್, ಬಿನ್. ಎಸ್.ಚಲುವಯ್ಯ, 46 ವರ್ಷ, ವಕ್ಕಲಿಗರು, ರಾಜಸ್ವ ನಿರೀಕ್ಷಕರು, ಬೆಳಗೊಳ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎನ್ ಸ್ವಾಮೀಗೌಡ ಬಿನ್ ನಂಜೇಗೌಡ, ಕೆ.ಆರ್.ಸಾಗರ ರವರು ಹೊಂಗಹಳ್ಳಿ ಸವರ್ೆ ನಂಬರ್297 ರ ಸಕರ್ಾರಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಕಟ್ಟಡ ನಿಮರ್ಿಸುತ್ತಿದ್ದು ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ


ಯು.ಡಿ.ಆರ್. ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 02-01-2013 ರಂದು ಪಿರ್ಯಾದಿ ಬೆಟ್ಟಸ್ವಾಮಿ ಬಿನ್ ಲೇ ತಿಮ್ಮಯ್ಯ, 40ವರ್ಷ,ಹಂಚಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಅಂಬಿಕಾ ಬಿನ್. ಬೆಟ್ಟಸ್ವಾಮಿ, 14ವರ್ಷ, ಹಂಚಿಪುರ ಗ್ರಾಮರವರು ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕವನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ನಾಗರಾಜ ಮೂತರ್ಿ ಬಿನ್. ವೆಂಕಟಯ್ಯ, ರಾಮಕೃಷ್ಣ ನಗರ, ಮೈಸೂರು ರವರು ನೀಡಿದ ದೂರು ಏನೆಂದರೆ ಅವರ ತಾಯಿ ಮಂಚಮ್ಮ ಕೋಂ.  ಲೇ|ವೆಂಕಟಯ್ಯ, 70 ವರ್ಷ, ಗೋಪಾಲಪುರ ಗ್ರಾಮರವರು ವಾಯು ವಿಹಾರಕ್ಕೆಂದು ಬಂದವರು ವಾಪಸ್ ಮನೆಗೆ  ಬಾರದೆ ಇದ್ದು ಎಲ್ಲಾ ಕಡೆ  ಹುಡುಕಾಡಲಾಗಿ ಈ ದಿನ ಶ್ರೀರಂಗಪಟ್ಟಣದ ಉತ್ತರ  ಕಾವೇರಿ ನದಿಯಲ್ಲಿ ಶವವು ತೇಲುತ್ತಿದ್ದು, ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 1/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಮಂಜುನಾಥ್ ಬಿನ್. ಲೇಟ್. ಶಿವಣ್ಣ, ಮಹದೇಶ್ವರಪುರ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಒಬ್ಬ ಅಪರಿಚಿತ ಹೆಂಗಸಿನ ಶವ, ಸುಮಾರು 25 ರಿಂದ 30 ವರ್ಷ, ಗುರುತು ಪತ್ತೆಯಾಗಿರುವುದಿಲ್ಲ, ವಿ.ಸಿ ನಾಲೆಯಲ್ಲಿ ಸ್ನಾನ ಮಾಡುವಾಗ ಅಥವಾ ಕಾಲುವೆಯಲ್ಲಿ ನೀರು ತೆಗೆದುಕೊಳ್ಳುವ ಸಮಯದಲ್ಲೋ ಕಾಲು ಜಾರಿ ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತದೆ.



ಮನೆ ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 454-380 ಐ.ಪಿ.ಸಿ.

ದಿನಾಂಕ: 02-01-2013 ರಂದು ಪಿರ್ಯಾದಿ ಡಿ.ಆರ್.ಲೋಕೇಶ್ಕುಮಾರ್,  ಗ್ರಾಮ ಪಂಚಾಯಿತಿ ಸದಸ್ಯರು, ದೊಡ್ಡಮುಲಗೂಡು ಗ್ರಾಮ, ಟಿ.ನರಸೀಪುರ ತಾಲ್ಲೋಕು, ಹಾಲಿ ವಾಸ ನಂ.2888, 6ನೇ ಕ್ರಾಸ್, ಗಾಂಧಿನಗರ, ಮಂಡ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-01-13 ರಂದು 3-30 ರಿಂದ 6-00 ಪಿಎಂ/ ನಂ. 2888, 6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯವರ ಅಜ್ಜಿ ಚನ್ನಮ್ಮಳು ಬಾಗಿಲು ಹಾಕಿಕೊಂಡು ಮಲಗಿದ್ದ ಮನೆಯ ಹಿಂಬಾಗಿಲನ್ನು ತಳ್ಳಿ ಒಳಗಡೆ ಬಂದು ತಮ್ಮ ಅಜ್ಜಿ ಮಲಗಿದ್ದಾಗ ಅವಳಿಗೆ ಗೊತ್ತಿಲ್ಲದಂತೆ ಎರಡು ಕೈಗಳಲ್ಲಿದ್ದ ಚಿನ್ನದ ಬಳೆಗಳನ್ನು ಮತ್ತು ಕುತ್ತಿಗೆಯಲ್ಲಿದ್ದ ಎರಡೆಳೆ ಮಾಂಗಲ್ಯ ಸರವನ್ನು ಬಿಚ್ಚಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಎರಡು ಬಳೆಗಳ ಒಟ್ಟು ತೂಕ 30 ಗ್ರಾಂ ಇರುತ್ತದೆ. ಎರಡೆಳೆ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯಿಂದ ಕೂಡಿದ್ದು ಇದರಲ್ಲಿ ಒಂದು ಚಿನ್ನದ ತಾಳಿ, ಕರಿಮಣಿ ಮತ್ತು ಹವಳಗಳು ಇರುತ್ತವೆ. ಇದರ ತೂಕ 60 ಗ್ರಾಂ ಆಗಿರುತ್ತದೆ. ಮೇಲ್ಕಂಡ ಚಿನ್ನದ ಆಭರಣಗಳ ಒಟ್ಟು ಬೆಲೆ ಸುಮಾರು 2,50,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 




No comments:

Post a Comment