ಮಂಡ್ಯ ಜಿಲ್ಲೆಯಲ್ಲಿ ದಿನಾಂಕ:06-02-2013ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು, 2 ವಂಚನೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನೆ ಕಳ್ಳತನ ಪ್ರಕರಣಗಳು, 1 ಅಪಹರಣ ಪ್ರಕರಣ, 1 ರಾಬರಿ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಮೇಲುಕೋಟೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಕೆ.ಅಶೋಕ ಬಿನ್. ಕೃಷ್ಣಪ್ಪಗೌಡ, 55 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಜೇಶ್ @ ರಾಜು ಬಿನ್. ಹನುಮಂತೇಗೌಡ, 24 ವರ್ಷ ಎಂಬುವವರಿಗೆ ಸುಮಾರು ದಿನಗಳಿಂದ ಹೊಟ್ಟೆನೋವು ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಮಾತ್ರೆಯನ್ನು ನುಂಗಿದ್ದು, ಬಿದ್ದು ಒದ್ದಾಡುತ್ತಿದ್ದನ್ನು ಕಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಹೊಂದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೊಪ್ಪ. ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಪುಟ್ಟೇಗೌಡ. ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕೊಪ್ಪ.ಟೌನ್ ರವರು ನೀಡಿದ ದೂರು ಏನೆಂದರೆ ಅಪರಿಚಿತ ಗಂಡಸು. ಸುಮಾರು 50ವರ್ಷ, ಹೆಸರು, ವಿಳಾಸ ಗೊತ್ತಿಲ್ಲ ಇವರು ಮಲಗಿದ್ದು, ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಬಿಂಡಿಗನವಿಲೆ ಪೊಲೀಸ್ ಠಾಣೆ ಯು.ಡಿ,ಆರ್, ನಂ. 02/13 ಕಲಂ. 174 ಸಿ,ಆರ್,ಪಿ,ಸಿ.
ದಿನಾಂಕ:06-02-2013 ರಂದು ಪಿರ್ಯಾದಿ ಕೃಷ್ಣೇಗೌಡ ಬಿನ್. ತಿರುಮಲೇಗೌಡರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎ.ಜೆ.ತಮ್ಮಣ್ಣಗೌಡ ಬಿನ್. ಲೇ.ಎನ್ .ಜಗತೀಗೌಡ ರವರು ಸಂಜೆ 5 ಗಂಟೆಯಲ್ಲಿ ಮನೆಯಲ್ಲೇ ಮೃತಪಟ್ಟಿರುತ್ತಾರೆ ಇವರು ಅಪಘಾತದಿಂದ ಮೃತಪಟ್ಟಿರುತ್ತಾರೆಯೇ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುತ್ತಾರೆಯೇ ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಯು.ಡಿ,.ಆರ್ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣಗಳು :
1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. ಕಲಂ.420 ಕೂಡ 34 ಐ.ಪಿ.ಸಿ.
ದಿನಾಂಕ:06-02-2013 ರಂದು ಪಿರ್ಯಾದಿ ಜಯಮ್ಮ ಕೋಂ ಸೋಮಣ್ಣ 28ವರ್ಷ. ಒಕ್ಕಲಿಗರು ಮನೆಕೆಲಸ, ವಾಸ ತಳಗವಾದಿ ಗ್ರಾಮ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಮಾರು 20 ರಿಂದ 25ವರ್ಷ ವಯಸ್ಸಿನವರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಚೈನು ಒಂದು ತಾಳಿ ಎರಡು ಗುಂಡು ಎರಡು ಕಾಸು ಒಟ್ಟು 40 ಗ್ರಾಂ ತೂಕದ 1.20.000 ರೂ ಬೆಲೆ ಬಾಳುವ ಒಡವೆಗಳನ್ನು ಪಾಲಿಸ್ ಮಾಡಿ ಕೊಡುವುದಾಗಿ ನಂಬಿಸಿ ಪಿರ್ಯಾದಿಯಿಂದ ಪಡೆದುಕೊಂಡು ಮೋಸ ಮಾಡಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಠಾಣೆ ಮೊ.ನಂ. 395/13 ಕಲಂ. 406-420 ಐ.ಪಿ.ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ವೈಕೆ ಜಯರಾಮು ಬಿನ್. ಕಾಳೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ವೆಂಕಟರಾಮರೆಡ್ಡಿ ರವರ ಗಮನವನ್ನು ಬೇರೆಡೆ ಸೆಳೆದು ನನ್ನ ಮೊಟಾರ್ ಸೈಕಲ್ ಮತ್ತು 35 ಗ್ರಾಂ ಚಿನ್ನವನ್ನು ತೆಗೆದುಕೊಂಡು ಹೋಗಿರುವ ವೆಂಕಟರಾಮರೆಡ್ಡಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 498[ಎ], 506 ಕೂಡ 34 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.
ದಿನಾಂಕ: 06-02-2013 ರಂದು ಪಿರ್ಯಾದಿ ಉಮ್ಮೆ ತನ್ಜೀಮ್ ಕೋಂ. ಸಾಧಿಕ್ ಪಾಷ, 18 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಸಾಧಿಕ್ಪಾಷ ಹಾಗು ಜರೀನ್ತಾಜ್, ರಫತುನ್ನಿಸಾ, ಸುಮಯ ಸುಲ್ತಾನ ರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿ ಪ್ರತಿ ದಿವಸ ವಿನಾಕಾರಣ ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದು ಎಲ್ಲರೂ ಗಂಡನನ್ನು ಬಿಟ್ಟುಬಿಡು ನೀನಗೇನು ಬೇಕು ಕೊಡುತ್ತೇವೆ, ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನೆ ಕಳ್ಳತನ ಪ್ರಕರಣಗಳು :
1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 454-457-380 ಐ.ಪಿ.ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಸುಜಾತ ಕೋಂ. ತಾಂಡವಮೂರ್ತಿ, 37ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು, ಮನೆಯ ಬಾಗಿಲು ತೆಗೆದು ಒಳಗೆ ಪ್ರವೇಶಿಸಿ, ಅಡಿಗೆ ಮನೆಯಲ್ಲಿದ್ದ ಬೀರುವಿನ ಕೀಯಿಂದ ತೆರೆದು, ಒಂದು ಜೊತೆ ಚಿನ್ನದ ಹ್ಯಾಂಗಿಂಗ್ಸ್, ಮಾಟಿ, ತಾಳಿ ಹಾಗೂ ಬೆಳ್ಳಿಯ ಪೂಜೆ ಸಾಮಾನುಗಳು, ಒಟ್ಟು 08 ಗ್ರಾಂ. ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 457-380 ಐ.ಪಿ.ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಮಹದೇವಮ್ಮ ಕೋಂ. ರಾಜು, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಮುರಿದು, ಮನೆಯಲ್ಲಿ ಮರದ ಪೆಟ್ಟಿಗೆಯಲ್ಲಿದ್ದ 3000/- ರೂ. ಮತ್ತು ಒಂದು ತಾಮ್ರದ ಹಂಡೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಬೆಲೆ 5000/- ರೂ. ಆಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 363 ಐ.ಪಿ.ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಶ್ರೀಮತಿ ಸುಶೀಲಮ್ಮ ಕೋಂ. ರಾಮಣ್ಣ, 42ವರ್ಷ, ಲಿಂಗಾಯಿತರು ಇವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ರೂಪ.ಆರ್. ಬಿನ್. ರಾಮಣ್ಣ, 18ವರ್ಷ ರವರು ದಿಃ 20-01-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಬೊಮ್ಮನಹಳ್ಳಿ ಗ್ರಾಮದಿಂದ ಕೂಲಿ ಕೆಲಸಕ್ಕೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. 394 ಐ.ಪಿ.ಸಿ.
ದಿನಾಂಕ: 06-02-2013 ರಂದು ಪಿರ್ಯಾದಿ ಆನಂದ ಬಿನ್. ನಾಗಣ್ಣ, 28 ವರ್ಷ, ಶಾಂತಿಕೊಪ್ಪಲು ಗ್ರಾಮ, ಅರಕೆರೆ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರಾತ್ರಿ 02-30 ರಿಂದ 03-00 ಗಂಟೆಯಲ್ಲಿ ಯಾರೋ ಕಳ್ಳರು ಡೋರ್ ಲಾಕ್ ನ್ನು ಮೀಟಿ ಒಳಗೆ ಬಂದು ಫಿರ್ಯಾದಿಯವರಿಗೆ ದೊಣ್ಣೆಯಿಂದ ಹೊಡೆದು, ಫಿರ್ಯಾದಿಯ ಹೆಂಡತಿಯ ಕತ್ತಿನಲ್ಲಿದ್ದ 25 ಗ್ರಾಂ. ತೂಕದ ಮಾಂಗಲ್ಯ, 5 ಗ್ರಾಂ ತಾಳಿ, ತಲಾ 1 ಗ್ರಾಮ್, 2 ಚಿನ್ನದ ಗುಂಡುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ.
No comments:
Post a Comment