Moving text

Mandya District Police

DAILY CRIME REPORT DATED : 05-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-02-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ವಾಹನ ಕಳವು ಪ್ರಕರಣಗಳು,  1 ವಂಚನೆ ಪ್ರಕರಣ ಹಾಗು 6 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 05-02-2013 ರಂದು ಪಿರ್ಯಾದಿ ತಿಮ್ಮರಾಜು ಬಿನ್. ಗೋವಿಂದಪ್ಪ, 22 ವರ್ಷ, ಮಾದವರು ಕುರಿಗಳನ್ನು ಮೆಯಿಸುವ ಕೆಲಸ, ವಾಜರಹಳ್ಳಿ ಗ್ರಾಮ,  ಶಿರಾ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಅಣ್ಣ ಕೃಷ್ಣಮೂರ್ತಿ ಬಿನ್. ಗೋವಿಂದಪ್ಪ, 26 ವರ್ಷ, ಗೊಲ್ಲರ ಜನಾಂಗ, ಕುರಿಮೇಯಿಸುವ ಕೆಲಸ, ವಾಜರಹಳ್ಳಿ, ಇರುತ್ತದೆ. ಮಾತನಾಡಲು ಬರುವುದಿಲ್ಲ(ಮೂಗ), ಕಿವಿ ಕೇಳಿಸುವುದಿಲ್ಲ ಕೃಷ್ಣಮೂರ್ತಿ  ಹಾಗೂ ಮತ್ತೊಬ್ಬರು ಕುರಿಗಳನ್ನು ಮೇಯಿಸಲು ಈಗ್ಗೆ 3 ವರ್ಷದ ಹಿಂದೆ ಬಂದಿದ್ದು ಪ್ರತಿ ದಿನ ಒಂದೊಂದು ಕಡೆ ಕುರಿಗಳನ್ನು ಮೇಯಿಸಿಕೊಂಡು ಅಲ್ಲೆ ತಂಗುತ್ತಿದ್ದು ಕಾರೇಕುರ ಗ್ರಾಮದ ರಾಜು ರವರ ಜಮೀನಿನ ಬಳಿ ತಂಗಿದ್ದು ಬೆಳಗಿನ ಜಾವ ಪಿರ್ಯಾಧಿಯವರ ಅಣ್ಣ ಕೃಷ್ಣಮೂರ್ತಿ ರವರು ಇರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಆತನು ಮೂಗ ಮತ್ತು ಕಿವುಡನಾಗಿರುತ್ತಾನೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಾಹನ ಕಳವು ಪ್ರಕರಣಗಳು :

1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 379 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಕೆ.ಎಂ. ವೀರೇಗೌಡ ಬಿನ್. ಮರಿಮಾದೇಗೌಡ, ಕೋರೆಗಾಲ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 04-02-2013 ರಂದು ಸಂಜೆ 04 ಗಂಟೆಯಿಂದ 05-00 ಗಂಟೆಯವರೆಗೆ ಮಳವಳ್ಳಿ ಟೌನ್, ತಾಲ್ಲೂಕು ಕಚೇರಿಯ ಮುಂಬಾಗದಲ್ಲಿ ಅವರ ಬಾಬ್ತು ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಸದರಿ ಮೋಟಾರ್ ಸೈಕಲನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 379, ಐ.ಪಿ.ಸಿ

      ದಿನಾಂಕ: 05-02-2013 ರಂದು ಪಿರ್ಯಾದಿ ಬಿ.ವಿ ರಾಜು ಬಿನ್ ಲೇ:ವೆಂಕಟೇಗೌಡ, ನಂ.3957, 1ನೇತಿರುವು ಶಂಕರನಗರ ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಬೈಕ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ನನ್ನ ಬೈಕ್ನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 406, 379, 420, 212, 411, 109 ರೆ/ವಿ 34 ಐ.ಪಿ.ಸಿ.

ದಿನಾಂಕ:05-02-2013ರಂದು ಪಿರ್ಯಾದಿ ಶಾಂತಿಲಾಲ್ ಆಚಾಬಿನ್ ಮಾಣಿಕ್ಯಲಾಲ್ಚಂದ್ ಜೈನ್, ವಾಸ ಭಾಗ್ಯಶಾಂತಿ ನಿಲಯ, ನಂ. 1866, 6ನೇ ಕ್ರಾಸ್, ಕೆ.ಆರ್.ರಸ್ತೆ, ಸುಭಾಷ್ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರ ಮಗ ವಿಕಾಸ್ ಎಸ್. ಜೈನ್ ಎಂಬುವನಿಗೆ 1ನೇ ಆರೋಪಿ ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್  ಎಂಬುವಳನ್ನು ತಂದು ಮದುವೆ ಮಾಡಿಕೊಂಡಿದ್ದು ಮದುವೆ ಕಾಲದಲ್ಲಿ ಫಿರ್ಯಾದಿಯವರು ಸುಮಾರು 3.5 ಲಕ್ಷ ರೂ. ಖರ್ಚು  ಮಾಡಿದ್ದು ಮದುವೆ ಮಾಡಿಕೊಂಡಂದಿನಿಂದ ದಿನಾಂಕ: 08-10-2012 ರ ಅವಧಿಯಲ್ಲಿ ಆರೋಪಿ-2 ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ರವರ ಒಳಸಂಚಿನಿಂದ ಮದುವೆಯ ಕಾಲದಲ್ಲಿ ನಾವು ಆರೋಪಿ-1 ರವರಿಗೆ ನೀಡಿದ್ದಂತಹ 250 ರಿಂದ 260 ಗ್ರಾಂ ವಜ್ರ, ಚಿನ್ನ ಹಾಗೂ 275 ಗ್ರಾಂ ಬೆಳ್ಳಿಯ ವಡವೆಗಳನ್ನು ನಂಬಿಕೆ ದ್ರೋಹ ಮಾಡಿ ಮೋಸದಿಂದ ಕಳ್ಳತನದಿಂದ ಎಲ್ಲಾ ವಡವೆಗಳನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾಳೆ. ಆರೋಪಿ-2 ರವರಿಗೆ ವ್ಯಾಪಾರ ವಹಿವಾಟು ನಡೆಸಲು ನೀಡಿದ್ದ 740 ಗ್ರಾಂ ವಜ್ರ ಮತ್ತು ಚಿನ್ನದ ವಡವೆಗಳನ್ನು ವಾಪಸ್ ಕೊಡದೆ ಮೋಸ ಮಾಡಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು  ಆರೋಪಿಗಳಾದ 1] ನಿಶಾ ಆರ್ ಜೈನ್ ಬಿನ್ ರಜನೀಶ್ ಜೈನ್ 2] ಅಶೋಕ್ ಮೆಹ್ತ ಬಿನ್ಲೇಟ್ ಗೇವರ್ಚಂದ್ ಜಿ. ಮೆಹ್ತ ಎಲ್ಲರೂ ವಾಸ ನಂ. 101, ಹನುಮಂತಪ್ಪ ಲೇಔಟ್, ಸುಲ್ತಾನ್ ಪಾಳ್ಯ, ಆರ್.ಟಿ.ನಗರ್, ಬೆಂಗಳೂರು ಸಿಟಿ ರವರುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment