Moving text

Mandya District Police

DAILY CRIME REPORT DATED : 12-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಅರ್. ಪ್ರಕರಣ,  2 ಕೊಲೆ ಪ್ರಕರಣಗಳು ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 12-02-2013 ರಂದು ಪಿರ್ಯಾದಿ ಚೆಲುವರಾಜು ಬಿನ್ ಮಲ್ಲೇಸಿಂಗ್ರಯ್ಯ, ಬಿಲ್ಲೇನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ,  ಮೂತರ್ಿ ರವರ ಹೆಂಡತಿ, 20 ವರ್ಷ ಕಾಗೇರೆ ಗ್ರಾಮ ರವರು ದಿನಾಂಕ: 02-02-2013 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಬಿಲ್ಲೇನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗಯ್ಯ ಬಿನ್. ಜವರಯ್ಯ, ಬಳ್ಳೇಕರೆ ಗ್ರಾಮ, ಸಂತೇಬಾಚಹಳ್ಳಿ ರವರು ನೀಡಿದ ದೂರು ಏನೆಂದರೆ ಅವರ ತಂದೆ ಜವರಯ್ಯ, 70 ವರ್ಷ ರವರು ಈಗ್ಗೆ 8-9 ವರ್ಷಗಳ ಹಿಂದೆ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಅರ್. ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174  ಸಿ.ಆರ್.ಪಿ.ಸಿ.

ದಿನಾಂಕ: 12-02-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ಸಿದ್ದೇಗೌಡ, 40 ವರ್ಷ, ಒಕ್ಕಲಿಗರು, ತಗ್ಗಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು, ಸುಮಾರು 80 ವರ್ಷ ರವರು ತಗ್ಗಹಳ್ಳಿ ಗ್ರಾಮದ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ  ಬಂದು ಮಲಗಿದ್ದು ಗ್ರಾಮದ ಜನರು ಊಟ ಕೊಟ್ಟರೂ ಸಹ  ಆಹಾರವನ್ನು ಸೇವಿಸುತ್ತಿರಲಿಲ್ಲ,  ಮಲಗಿದಾಗ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕೊಲೆ ಪ್ರಕರಣಗಳು  :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 302 ಕೂಡ 34 ಐ.ಪಿ.ಸಿ.

   ದಿನಾಂಕ: 12-02-2013 ರಂದು ಪಿರ್ಯಾದಿ ಶಿವಲಿಂಗ ಬಿನ್. ಲೇಟ್. ಲಾರಿನಿಂಗಪ್ಪ, ಅಣ್ಣಳ್ಳಿದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಸೋದರ ಮಾವ ಬಿ, ಕೃಷ್ಣನ ಶವವನ್ನು ಹೊರಗಡೆ ಎತ್ತುಕೊಂಡು ಬಂದು ನೋಡಲಾಗಿ ಆತನ ಮೂಗು ಮುಖ ಗಡ್ಡದ ಹತ್ತಿರ ತರಚಿದಂತಹ ಸಣ್ಣ ಸಣ್ಣ ಗಾಯಗಳು ಆಗಿರುವುದು ಕಂಡು ಬಂತು ಅದನ್ನು ನೋಡಿದರೆ ಮೇಲ್ಕಂಡ ನನ್ನ ಸೋದರ ಮಾವನ ಸಾವಿನ ಬಗ್ಗೆ ಸಂಶಯವಿರುತ್ತದೆ ಆರೋಪಿತರಾದ 1) ವರಲಕ್ಷಿ ಕೋಂ. ಲೇಟ್ ಬಿ.ಕೃಷ್ಣ ಹಾಗು  2] ಶಿವರಾಜು ಬಿನ್ ಬೊಳ್ಳಗೌಡ ರವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2.  ಅರಕೆರೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 302 ಐ.ಪಿ.ಸಿ.

     ದಿನಾಂಕ: 12-02-2013 ರಂದು ಪಿರ್ಯಾದಿ ಎನ್.ಎಸ್. ನವೀನ್. ಬಿನ್. ಶಿವಶಂಕರ್, 27 ವರ್ಷ, ನೇರಲೇಕೆರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ದುರಾತ್ಮರು ಆಯುದದಿಂದಲೇ ಅಥವಾ ಕತ್ತು ಹಿಸುಕಿ ಸಾಯಿಸಿಯೋ ಅಥವಾ ಮತ್ತಾವುದೋ ರೀತಿಯಲ್ಲಿ ಸಾಯಿಸಿದ್ದು ಕಂಡುಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment