Moving text

Mandya District Police

DAILY CRIME REPORT DATED : 13-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-02-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಾಬರಿ ಪ್ರಕರಣಗಳು,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳವು ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ,  1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ರಾಬರಿ ಪ್ರಕರಣಗಳು :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 392 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಚೈತ್ರ ಬಿನ್. ಶಿವನಂಜು, 18 ವರ್ಷ, ಬಿಎಸ್ಸಿ ವಿಧ್ಯಾರ್ಥಿನಿ , ಬೆಟ್ಟಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಪೀಹಳ್ಳಿ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸಂಜೆ 05-15 ಗಂಟೆಯಲ್ಲಿ ಒಂದು ಬೈಕ್ ಮೇಲೆ ಒಬ್ಬ ಅಸಾಮಿ ಕುಳಿತಿದ್ದು, ಮತ್ತೊಬ್ಬ ಕೆಳಗೆ ನಿಂತಿದ್ದು, ನಿಂತಿದ್ದ ಅಸಾಮಿ ನಮ್ಮ ಬಳಿಗೆ ಬಂದು ರೇಜರ್ ತೋರಿಸಿ, ನನ್ನ ಕತ್ತಿನಲ್ಲಿ ಹಾಕಿದ್ದ ಚಿನ್ನದ ಚೈನನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿರುತ್ತಾನೆ, ಚಿನ್ನದ ಸರವು 15 ಗ್ರಾಂ. ತೂಕವಿದ್ದು, ಇದರ ಮೌಲ್ಯ 30 ಸಾವಿರ ರೂ ಆಗುತ್ತದೆ. ಆರೋಪಿಯನ್ನು ಪತ್ತೆ ಮಾಡಿ ಚಿನ್ನದ ಸರವನ್ನು ಕೊಡಿಸಿ ಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 384 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಲಕ್ಷ್ಮಮ್ಮ ಕೋಂ. ಸಿದ್ದಯ್ಯ. ಬೆಸಗರಹಳ್ಳಿ ಅಡ್ಡರಸ್ತೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿ ಬಿನ್. ಸೋಮಯ್ಯ, ಇಗ್ಗಲೂರು ಗ್ರಾಮ, ಚನ್ನಪಟ್ಟಣ ತಾ. ರವರು ಕೋಳಿ ಫಾರಂನಲ್ಲಿ ಮಲಗಿದ್ದಾಗ ಆರೋಪಿ ಬಂದು ಚಾಕು ತೋರಿಸಿ ಅವರ ಬಳಿ ಇದ್ದ 12000=00 ರೂ ಗಳನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 498(ಎ)-504 ಕೂಡ34 ಐ.ಪಿ.ಸಿ.ಮತ್ತು ಕಲಂ4 ಡಿ.ಪಿ.ಕಾಯಿದೆ.

     ದಿನಾಂಕ: 13-02-2013 ರಂದು ಪಿರ್ಯಾದಿ ಅಂಜಲಿ ಕೋಂ. ಚಂದ್ರೇಗೌಡ, 20 ವರ್ಷ, ಒಕ್ಕಲಿಗರು, ಗೃಹಿಣಿ, ಹೊಸಕೋಟೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಚಂದ್ರೇಗೌಡ ಬಿನ್ ಲೇಟ್. ಅಂಕೇಗೌಡ ಹಾಗು ಅತ್ತೆ ಲಕ್ಷ್ಮಮ್ಮ ಕೋಂ. ಲೇಟ್ ಅಂಕೇಗೌಡ, ಇಬ್ಬರೂ ಹೊಸಕೋಟೆ ಗ್ರಾಮ ರವರುಗಳು ಪಿರ್ಯಾದಿಯವರನ್ನು ವರದಕ್ಷಿಣೆಯಾಗಿ ಎರಡು ಲಕ್ಷ ರೂ.ಗಳನ್ನು ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ಕೊಟ್ಟಿದ್ದು, ದಿಃ-12-02-2013 ರಂದು ಬೆಳಿಗ್ಗೆ 6 ಗಂಟೆಯಲ್ಲಿ ಪಿರ್ಯಾಧಿಯ ಗಂಡ ಮತ್ತು ಅತ್ತೆ ಇಬ್ಬರು ಪಿರ್ಯಾದಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಬೈದು ಮನೆಯಿಂದ ಹೊರಗೆ ನೂಕಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 36/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ. 

     ದಿನಾಂಕ: 13-02-2013 ರಂದು ಪಿರ್ಯಾದಿ ಶೀನೆಗೌಡ ಬಿನ್. ಲೇಟ್. ಯಾಲಕ್ಕಿಗೌಡ, ಕಬ್ಬಲಗೆರೆ ಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ದಿನಾಂಕ: 07-02-2013 ರಂದು ಸಂಜೆ 05-00 ಗಂಟೆಯಲ್ಲಿ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆಂದು ಹೋದವಳು ಮತ್ತೆ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ ಪತ್ತೆಮಾಡಿಕೊಡಿ ಎಂದು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

     ದಿನಾಂಕ: 13-02-2013 ರಂದು ಪಿರ್ಯಾದಿ ಎಂ.ಎಸ್.ಇಂದ್ರ ವಾಸ ನಂ. 4/10, 1ನೇ ಕ್ರಾಸ್, 1ನೇ ಮುಖ್ಯರಸ್ತೆ, ಆಜಾದ್ನಗರ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಪರ್ಸ್ ನ್ನು,  ನೋಡಲು ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದಾಗ ಅದರಲ್ಲಿ ಪಸರ್್ ಇರಲಿಲ್ಲ. ಸದರಿ ಪಸರ್್ನಲ್ಲಿಟ್ಟಿದ್ದ 12 ಗ್ರಾಂ ತೂಕದ ಲಕ್ಷ್ಮಿ ಡಾಲರ್ ಇರುವ ಹಗ್ಗದ ಮಾದರಿಯ ಚಿನ್ನದ ಚೈನ್, 5 ಗ್ರಾಂ ತೂಕದ ಹಸಿರು ಹರಳಿರುವ ಚಿನ್ನದ ಉಂಗುರ ಮತ್ತು 700-00 ರೂ. ನಗದು ಹಣವನ್ನು ಯಾರೋ ಕಳ್ಳರು ಬಸ್ಸನ್ನು ಹತ್ತುವಾಗ ಪರ್ಸ್ ಸಮೇತ ಕಳವು ಮಾಡಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 48,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :


ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

  ದಿನಾಂಕ: 13-02-2013 ರಂದು ಪಿರ್ಯಾದಿ ಮಂಜುಳ ಬೊಪ್ಪಸಮುದ್ರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-02-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಯೋಗೇಶ ಬಿನ್ ದೊಡ್ಡೈದೇಗೌಡ ಬೊಪ್ಪಸಮುದ್ರ ರವರು ಗದ್ದೆಗೆ ಹೊಡೆಯುವ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದಾಗ ಚಿಕಿತ್ಸೆಗೆ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಮಂಡ್ಯ ಜಿಲ್ಲಾ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 13-02-2013 ರಂದು ಸುಮಾರು ಸಂಜೆ 06-00 ಗಂಟೆ ಸಮಯದಲ್ಲಿ ಮೃತಪಟ್ಟಿರುವುದಾಗಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :


ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 22/13 ಕಲಂ. 353-504-506 ಕೂಡ 34 ಐಪಿಸಿ ಹಾಗೂ ಕಲಂ-3 ಕ್ಲಾಸ್() ಸಬ್ ಕ್ಲಾಸ್ (ಘಿ) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ.  

     ದಿನಾಂಕ: 13-02-2013 ರಂದು ಪಿರ್ಯಾದಿ ಎಸ್.ಜಿ ವಸಂತಕುಮಾರ್, ಸಹ ಶಿಕ್ಷಕರು, ಶ್ರೀ ಯದುಶೈಲ ಪ್ರೌಢಶಾಲೆ, ಮೇಲುಕೋಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಬಿ ನರಸಿಂಹೇಗೌಡ, 2] ಜವರೇಗೌಡ, ಕಾಡೇನಹಳ್ಳಿ, 3] ವಿ. ಮಚಂದ್ರ, ಕೊಡಗಹಳ್ಳಿ, 4] ಅನಂತರಾಮಶೆಟ್ಟ, ಮೇಲುಕೋಟೆ ರವರುಗಳು,  ಮುಖ್ಯ ಶಿಕ್ಷಕರನ್ನು ಬೈಯುತ್ತಿದ್ದರು. ಆಗ ಪಿರ್ಯಾಧಿಯನ್ನು ಆರೋಪಿ ಕೆ.ಬಿ ನರಸಿಂಹೇಗೌಡರು ಬಾರೋ ಲೋ ಬಡ್ಡಿ ಮಗನೇ ದನ ತಿನ್ನೋ ಹೊಲೆಯ ನನ್ನ ಮಕ್ಕಳಿಗೆ ಕೆಲಸ ಕೊಟ್ಟಿದ್ದೇ ತಪ್ಪಾಯ್ತು. ಕಾಲಿನ ಚಪ್ಪಲಿ  ಎಲ್ಲಿರ್ಸಬೇಕು ಅಲ್ಲೆ ಇರ್ಸಬೇಕು ಎಂದು ಕೆಂಡಾ ಮಂಡಲವಾಗಿ ಪಿರ್ಯಾದಿಯನ್ನು ಹೊಡೆಯಲು ಮುಂದಾಗಿದ್ದು, ಇದರಿಂದ ಪ್ರಾಣಭಯ ಉಂಟಾಗಿದ್ದು, ಶಾಲೆಯಲ್ಲಿ ಕಾರ್ಯನಿರ್ವಹಿಸಲು ತೊಂದರೆ ಉಂಟಾಗಿದೆ. ಆದ್ದರಿಂದ ದಯಮಾಡಿ ಆರೋಪಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 302-201 ಐ.ಪಿ.ಸಿ.

ದಿನಾಂಕ: 13-02-2013 ರಂದು ಪಿರ್ಯಾದಿ ಆನಂದೇಗೌಡ, ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ:13-02-2013ರಂದು ಮೃತನ ಶವ ಪರೀಕ್ಷಾ ವರದಿಯನ್ನು ನೀಡಿದ್ದು ಮೃತನ ಸಾವಿನ ಕಾರಣದ ಬಗ್ಗೆ  All the above injuries are antemortum in nature. And death is due to ligature strangulation '' ಎಂದು ಅಭಿಪ್ರಾಯ ಪಟ್ಟಿದ್ದು ಮೃತನನ್ನು ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಯಾವುದೋ ಸಾದನದಿಂದ ಮೃತನ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಸಾಯಿಸಿರುವುದು ವೈಧ್ಯಾಧಿಕಾರಿಗಳ ಅಭಿಪ್ರಾಯದಿಂದ ಕಂಡು ಬಂದಿರುವುದರಿಂದ ಈ ಯುಡಿಅರ್ ಪ್ರಕರಣದಲ್ಲಿ ದಿನಾಂಕ:13-02-2013 ರಂದು ಬೆಳಿಗ್ಗೆ 11-00ಗಂಟೆಯ ಸಮಯದಲ್ಲಿ ಕನರ್ಾಟಕ ಸರ್ಕಾರದ  ಪರವಾಗಿ ನಾನು ಸ್ವಯಂ ವರದಿಯನ್ನು ತಯಾರಿಸಿ ಠಾಣಾ ಮೊ.ಸಂ.  53/2013 ಕಲಂ 302-201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

No comments:

Post a Comment