Moving text

Mandya District Police

DAILY CRIME REPORT DATED : 14-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-02-2013 ರಂದು ಒಟ್ಟು 8 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಅಪಹರಣ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   

ಮನುಷ್ಯ ಕಾಣೆಯಾದ ಪ್ರಕರಣಗಳು :

1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎನ್.ಡಿ.ಪುಟ್ಟರಾಜು ಬಿನ್. ಲೇ. ದೇವೇಗೌಡ, 36ವರ್ಷ, ವಕ್ಕಲಿಗರು, ವ್ಯವಸಾಯ, ನರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಅಣ್ಣನ ಮಗಳು, 21 ವರ್ಷರವರು  ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದು ವಾಪಸ್ ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ಎಲ್ಲಾ ಕಡೆ ಹುಡುಕಾಡಿ ಪತ್ತಯಾಗದ ಕಾರಣ, ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 55/13 ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 14-02-2013 ರಂದು ಪಿರ್ಯಾದಿ ಮಾದಯ್ಯ ಬಿನ್. ಬುಯ್ಯೇಗೌಡ, 65 ವರ್ಷ, ಹಳೆಬೂದನೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ಠಾಣೆಗೆ ಹಾಜರಾಗಿ ತನ್ನ ಗಂಡು ಮಗ ಕುಂದೂರಯ್ಯ @  ಪುಟ್ಟಸ್ವಾಮಿ, 36 ವರ್ಷ ಒಕ್ಕಲಿಗರು, ಹಳೆಬೂದನೂರು ಗ್ರಾಮ, ಮಂಡ್ಯ ತಾರವರು ದಿನಾಂಕಃ-12-01-2013ರಂದು ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ಮನೆಯಿಂದ ಹೋದವನು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 31/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

      ದಿನಾಂಕ: 14-02-2013 ರಂದು ಪಿರ್ಯಾದಿ ಮೋಹನ್ಕುಮಾರ್, ಚೋಳನಹಳ್ಳಿ ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರೂಪ ಎಂಬುವವರು ನಾಗಮಂಗಲ ಕಾಲೇಜಿಗೆ ಹೋದವಳು ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಸಂಬಂದಿಕರ ಮನೆಯಲ್ಲಿ ಹುಡುಕಿ ಈ ದಿನ ದೂರು ನೀಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 366(ಎ) ಕೂಡ 34 ಐ.ಪಿ.ಸಿ.

        ದಿನಾಂಕ: 14-02-2013 ರಂದು ಪಿರ್ಯಾದಿ ವೆಂಕಟಸ್ವಾಮಿ ಬಿನ್ ಲೇ. ತವಕುಂಡಯ್ಯ, ಹನುಮಂತನಗರ, ಸಿ.ಎ.ಕೆರೆ ಹೋಬಳಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಮಗಳು ಹೆಚ್.ವಿ. ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲ ಆರೋಪಿ-1 1] ಶರ್ಮ @ ಮಲ್ಕಜ ಹಾಗು ಇತರೆ 3 ಜನರು ಎಲ್ಲರೂ ತಿಪ್ಪೂರು ಗ್ರಾಮ, ಕನಕಪುರ ತಾ..ರವರು ಪಿರ್ಯಾದಿಯವರ ಮಗಳನ್ನು ಪ್ರೀತಿಸುತ್ತಿದ್ದು ಆರೋಪಿಗಳು ಒಟ್ಟಾಗಿ ಪಿರ್ಯಾದಿಯವರ ಮಗಳನ್ನು ಅಪಹರಣ ಮಾಡಿರುವ ಗುಮಾನಿ ಇರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ರಸ್ತೆ ಅಪಘಾತ ಪ್ರಕರಣ : 

ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 279, 304 (ಎ) ಐಪಿಸಿ ರೆಃವಿ 187 ಐಎಂವಿ ಕಾಯ್ದೆ.

ದಿನಾಂಕ: 14-02-2013 ರಂದು ಪಿರ್ಯಾದಿ ಎ.ಸಿ. ಜವರಾಯಿಗೌಡ ಬಿನ್ ಚಿಕ್ಕತಿಮ್ಮಯ್ಯ, ಅಜ್ಜಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ, ಮದ್ದೂರು ತಾಲ್ಲೋಕು ರವರು ನೀಡಿದ ದೂರಿನ  ವಿವರವೇನೆಂದರೆ  ಪಿರ್ಯಾದಿ    ದೊಡ್ಡಮ್ಮನ ಮಗ ಅಪರಿಚಿತ ಲಾರಿಯ ಚಾಲಕ,  ಹೆಸರು  ವಿಳಾಸ  ತಿಳಿಯಬೇಕಾಗಿದೆ  ನಡೆದುಕೊಂಡು  ರಸ್ತೆ  ದಾಟುತ್ತಿದ್ದಾಗ  ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೋಗಲು ಯಾವುದೋ ಒಂದು ಲಾರಿಯ ಚಾಲಕ ಲಾರಿಯನ್ನು ಬಹಳ ವೇಗವಾಗಿ ಅಜಾಗರೂಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆ  ದಾಟುತ್ತಿದ್ದ ಎನ್.ಹೆಚ್. ವೆಂಕಟೇಶನಿಗೆ  ರಭಸವಾಗಿ  ಡಿಕ್ಕಿ  ಹೊಡೆಸಿ  ಲಾರಿಯನ್ನು  ನಿಲ್ಲಿಸದೆ ಹೊರಟುಹೋದ  ಚಿಕಿತ್ಸೆಗಾಗಿ  ಮದ್ದೊರು  ಸರ್ಕಾರಿ  ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ  ನಂತರ ವೈದ್ಯರ  ಸಲಹೆ  ಮೇರೆಗೆ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ  ಮಧ್ಯೆ  ಮೃತಪಟ್ಟಿರುತ್ತಾನೆಂದು  ಕೊಟ್ಟ  ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment