Moving text

Mandya District Police

DAILY CRIME REPORT DATED : 18-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  1 ಕೊಲೆ ಪ್ರಕರಣ,  1 ಕಳವು ಪ್ರಕರಣ, 3 ಮನುಷ್ಯ ಕಾಣೆಯಾದ ಪ್ರಕರಣಗಳು,  4 ಯು.ಡಿ.ಆರ್. ಪ್ರಕರಣಗಳು,  1 ರಾಬರಿ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.      


ಕಳ್ಳತನ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಸವಲಿಂಗಶೆಟ್ಟಿ, 59ವರ್ಷ, ಮುಖ್ಯೋ ಪಾಧ್ಯಾಯ ರು, ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ, ತಡಗವಾಡಿ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ರೂಮಿನ ಒಳಗೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್, ಒಂದು ಮಿಕ್ಸಿ ಹಾಗೂ ಸಾಂಬಾರಿಗೆ ತಂದು ಇಟ್ಟಿದ್ದ 10 ಪ್ಯಾಕ್ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಬೆಲೆ 5650/- ರೂ.ಆಗುತ್ತದೆ ಪತ್ತೆ ಮಾಡಿಕೊಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 454-457-380 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಪಿ.ಇಂದಿರಾ, 39 ವರ್ಷ, ಅಂಗನವಾಡಿ ಕಾರ್ಯಕರ್ತೆ,  ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಂಗನವಾಡಿ ಕೇಂದ್ರದ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು, ಒಳಗಿನ ಅಡುಗೆ ಮನೆಯ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು  ಮೀಟಿ ಮುರಿದು, ಒಂದು ಇಂಡೇನ್ ಗ್ಯಾಸ್ ಸಿಲಿಂಡರ್ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಗ್ಯಾಸ್ ಸಿಲಿಂಡರ್ನ ಬೆಲೆ ಸುಮಾರು 3000/- ರೂ. ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕೊಲೆ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 302-392-ಕೂಡ ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಎಸ್. ಮಣಿ ಬಿನ್. ಸಗಾದೇವನ್, 39 ವರ್ಷ, ವಾಸ ನಂ 400, 3 ನೇ ಕ್ರಾಸ್, ಹಾಲಹಳ್ಳಿ,  ಮಂಡ್ಯ ರವರು ನೀಡಿದ ದೂರು ಏನೆಂದರೆ ಈಗ್ಗೆ ಸುಮಾರು 3-4 ವರ್ಷಗಳ ಹಿಂದೆ ನನ್ನ ತಮ್ಮ ರವಿಗೆ ಹೊಡೆದಿದ್ದು, ಆಗ ಆರೋಪಿ-4, ಮರೇಣುಕಾ ಹಾಲಹಳ್ಳಿ ವಾಸಿ ಮಂಡ್ಯರವರು ನನ್ನ ತಮ್ಮನ ಹತ್ತಿರ ಎಷ್ಟೇ ಖರ್ಚಾದರೂ  ಕೊಲೆ ಮಾಡುತ್ತೇನೆಂದು ಹೇಳಿದ್ದ ವಿಚಾರವನ್ನು  ನನ್ನ ತಮ್ಮ ನನಗೆ ತಿಳಿಸಿದ್ದು, ಈತನ ಮೇಲೂ ಮತ್ತು ಉಳಿದ ಆರೋಪಿಗಳ ಮೇಲು ಸಹ ನನ್ನ ತಮ್ಮನ ಕೊಲೆಯ ಸಾವಿನ ಬಗ್ಗೆ ಅನುಮಾನವಿರುತ್ತದೆ. ಆರೋಪಿಗಳು  ದಿನಾಂಕ: 17-02-2013 ರಂದು ರಾತ್ರಿ 11-30 ಗಂಟೆಗೆ ಫೋನ್ ಮಾಡಿ ನನ್ನ ತಮ್ಮನನ್ನು ಕರೆಯಿಸಿಕೊಂಡು ಈ ದಿನ ದಿನಾಂಕ: 18-02-2013 ರ ಬೆಳಗಿನ ಜಾವ 05-30 ಗಂಟೆ ನಡುವೆಯಲ್ಲಿ ಹಳೆಯ ದ್ವೇಷ ಇಟ್ಟುಕೊಂಡು ಕುತ್ತಿಗೆಗೆ ಯವುದೋ ಪ್ಲಾಸ್ಟಿಕ್ ವೈರ್ನ್ನು ಬಿಗಿದು ಕೊಲೆ ಮಾಡಿ ಮೇಲ್ಕಂಡ ಉಂಗುರಗಳು, ಚೈನ್, ವಾಚ್ ಮತ್ತು ಮೊಬೈಲ್ ಹ್ಯಾಂಡ್ ಸೆಟ್ ಇವುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ 80,000-00 ರೂಗಳೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 25/13 ಕಲಂ. ಕಲಂ.  41 ಕ್ಲಾಸ್.(ಡಿ) ಕೂಡ 102 ಸಿ.ಆರ್.ಪಿ.ಸಿ. ಹಾಗೂ 379 ಐ.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಬಿ.ಸಿ.ಕುಮಾರ್, ಸಿ.ಪಿ.ಸಿ.-305, ಹಲಗೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ನಾಗರಾಜು ಬಿನ್. ಲೇಟ್. ಕಾಳನಿಂಗೇಗೌಡ, ವಯಸ್ಸು 61 ವರ್ಷ, ಒಕ್ಕಲಿಗರು, ಕೂಲಿಕೆಲಸ ವಾಸ-ಹಾಡ್ಲಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ಆರತಿ ಉಕ್ಕಡದ ಮಾರಮ್ಮ ದೇವಸ್ಥಾನದ ಬಳಿ ದೇವರ ದರ್ಶನಕ್ಕೆ ಬಂದಿದ್ದ ಮಹಿಳೆಯ ಬಳಿ ಅವರಿಗೆ ಅರಿವಿಲ್ಲದಂತೆ ಕತ್ತಿನದಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಬಂದು ಅದನ್ನು ಮಾರಾಟ ಮಾಡಲು ಹಲಗೂರಿನ ಗಣೇಶ್ ಭವನ್ ಮುಂಭಾಗದಲ್ಲಿ ನಿಂತಿದ್ದಾಗ ಆರೋಪಿಯು ಪಿರ್ಯಾದಿಯವರನ್ನು ಕಂಡು ಅನುಮಾಸ್ಪದವಾಗಿ ಓಡಲು ಪ್ರಯತ್ನಸಿದಾಗ ಪಿರ್ಯಾದಿಯವರು ಆತನನ್ನು ಹಿಡಿದು ವಿಚಾರ ಮಾಡಿದಾಗ ಆತನ ಬಳಿ ಒಂದು ಚಿನ್ನದ ಮಾಂಗಲ್ಯ ಸರ ಇದ್ದು ಇದರ ಬಗ್ಗೆ ಹೇಳಿದಾಗ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡ ಮೇರೆಗೆ ಆರೋಪಿ ಮತ್ತು ಮಾಲನ್ನು ತಂದು ಹಾಜರುಪಡಿಸಿ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ.46/13 ಕಲಂ. ಹುಡುಗ ಕಾಣೆಯಾಗಿದ್ದಾನೆ.  

     ದಿನಾಂಕ: 18-02-2013 ರಂದು ಪಿರ್ಯಾದಿ ಸುಶೀಲಮ್ಮ ಕೊಂ. ರಾಮಚಂದ್ರ, ಕೆ.ಜಿ ಕೋಡಿಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗ ಲೊಕೇಶ್ ಬಿನ್ ರಾಮಚಂದ್ರ, 12 ವರ್ಷ, 7ನೇ ತರಗತಿ ವಿದ್ಯಾಥರ್ಿ, ಮುರಾಜರ್ಿ ಸ್ಕೂಲ್, ಕೋಟೆಬೆಟ್ಟ ನಾಗಮಂಗಲ ತಾಲ್ಲೋಕು, ಸ್ವಂತ ಊರು ಕೆ.ಜಿ.ಕೊಡಹಳ್ಳಿ ಗ್ರಾಮ, ಶೀಳನೆರೆ ಹೋಬಳಿ ಕೆ.ಆರ್.ಪೇಟೆ ತಾಲ್ಲೋಕು ರವರು ದಿನಾಂಕ: 04-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ. ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 18-02-2013 ರಂದು ಪಿರ್ಯಾದಿ ನಾಗರಾಜು ಬಿನ್. ತಿಮ್ಮೇಗೌಡ, ಎಸ್.ಬಿ. ಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ತಿಮ್ಮೇಗೌಡ @ ಪುಟ್ಟೇಗೌಡ ಬಿನ್. ಚನ್ನಪಿಳ್ಳೇಗೌಡ, 65 ವರ್ಷ, ವಕ್ಕಲಿಗರು, ವ್ಯವಸಾಯ, ಸಂತೆಬಾಚಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ದಿನಾಂಕ: 12-02-2013 ರ ಹಿಂದಿನ ದಿನಗಳಲ್ಲಿ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. ಹೆಂಗಸು  ಕಾಣೆಯಾಗಿದ್ದಾಳೆ.

ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದೇಗೌಡ ಬಿನ್. ಚನ್ನೇಗೌಡ, ಕ್ಯಾತನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಜಯಮ್ಮ, 45 ವರ್ಷ, ಒಕ್ಕಲಿಗರು, ಎಣ್ಣೆಗೆಂಪು ಬಣ್ಣ, ದುಂಡುಮುಖ, 5.5 ಅಡಿ ಎತ್ತರ ಇವರು ದಿನಾಂಕ: 09-02-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲ್ಲ್ಲಿಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕಿನಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

      ದಿನಾಂಕ: 18-02-2013 ರಂದು ಪಿರ್ಯಾದಿ ಬಲರಾಮ.ಬಿ.ಎಸ್ ಬಿನ್. ಸಣ್ಣಶೆಟ್ಟಿ, ಭೈರಾಪುರ ಗ್ರಾಮ, ಶೀಳನೆರೆ ಹೋಬಳಿ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರು ಏನೆಂದರೆ ನನ್ನ ಮಗ ಬಿ.ಕೃಷ್ಣ, 14 ವರ್ಷ, 9ನೇ ತರಗತಿ, ಭೈರಾಪುರ ಗ್ರಾಮ, ಶೀಳನೆರೆ ಹೋ|| ಕೆ.ಆರ್.ಪೇಟೆ ತಾ. ರವರು ಹಾಗು ಸೋಮಶೇಖರರವರ ಮಗ ಕೆ.ಎಸ್ ಕಿರಣ್ ಕುಮಾರ್ ರವರು ಶೀಳನೆರೆ ಪ್ರೌಢಶಾಲೆಗೆ ವ್ಯಾಸಂಗಕ್ಕೆ ಹೋದವರು ಮನೆಗೆ ವಾಪಸ್ ಬಾರದ ಕಾರಣ ಇವರಿಬ್ಬರು ಕಾಣೆಯಾಗಿರುತ್ತಾರೆಂದು ಸೋಮಶೇಖರ್ ರವರು ಠಾಣೆಗೆ ದೂರು ನೀಡಿರುತ್ತಾರೆ. ನಾವು ನನ್ನ ಮಗನನ್ನು ಹುಡುಕುತ್ತಿದ್ದು ಈ ದಿವಸ ಅಂದರೆ  ದಿನಾಂಕಃ 18-02-2013 ರಂದು ಚೌಡಘಟ್ಟ ಗ್ರಾಮದ ಬಳಿ ಇರುವ ಕಾಳಮ್ಮನ ಕಟ್ಟೆಯಲ್ಲಿ ಹುಡುಗನ ಶವ ನೀರಿನಲ್ಲಿ ತೇಲುತ್ತಿರುತ್ತೆ ಎಂಬ ವಿಚಾರವನ್ನು ತಿಳಿದು ನಾವುಗಳು ಹೋಗಿ ನೋಡಲಾಗಿ ಕಟ್ಟೆಯಲ್ಲಿರುವ ಶವವು ನನ್ನ ಮಗ ಕೃಷ್ಣನಾಗಿರುತ್ತಾನೆ. ನನ್ನ ಮಗ ಕೃಷ್ಣನು ಕಟ್ಟೆಯಲ್ಲಿ ಸ್ನಾನ ಮಾಡಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾನೆ ವಿನಃ ಬೇರೆ ಯಾವುದೇ ಕಾರಣವಿರುವುದಿಲ್ಲ. ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ರಫಿಕ ಅಹಮದ್ ಬಿನ್. ಅಮೀರ್ ಪಾಷಾ, ಮೈಸೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಕುಟುಂಬ ದೊಡನೆ  ಶ್ರಿರಂಗಪಟ್ಟಣಕ್ಕೆ ಪ್ರವಾಸಕ್ಕೆ ಬಂದಿದ್ದು ಎಲ್ಲರೊಡನೆ ನೀರಿನಲ್ಲಿ ಆಟಾಡುತ್ತಿದ್ದಾಗ ಪರ್ವಿನ್  ತಾಜ್.  ಕೋಂ. ಜುಬೇರ್ ಅಹಮದ್. 23 ವರ್ಷ ರವರು ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ  ದಿನಾಂಕ: 18-02-2013  ರಂದು ಬೆಳಿಗ್ಗೆ ಶವ ಸಿಕ್ಕಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್. ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಶಶಿಕುಮಾರ್ ಬಿನ್. ಲೇಟ್. ನಾರಾಯಣ, 34 ವರ್ಷ, ಒಕ್ಕಲಿಗರು, ಹೊಟೇಲ್ ವ್ಯಾಪಾರ, ಗೋಸೇಗೌಡರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಗಂಡಸು ಸುಮಾರು 65-70 ವರ್ಷ ವಯಸ್ಸು, ದಿನಾಂಕ: 18-02-2013 ರಂದು ಮದ್ಯಾಹ್ನ 03-00 ಗಂಟೆಯ ಹಿಂದಿನ ಸಮಯದಲ್ಲ್ಲಿ, ಸ್ನಾನಘಟ್ಟಕ್ಕೆ ಹೋಗುವ ಸೇತುವೆಯ ಗೋಡೆಯ ಬಳಿ, ಶ್ರೀರಂಗಪಟ್ಟಣ ಟೌನ್. ಇಲ್ಲಿ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ.ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


4. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್..ಪಿ.ಸಿ.

     ದಿನಾಂಕ: 18-02-2013 ರಂದು ಪಿರ್ಯಾದಿ ಸಿದ್ದರಾಜು ಬಿನ್. ಲೇಟ್. ಸಿದ್ದಯ್ಯ, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ತಂದೆ ಸಿದ್ದಯ್ಯ, 75 ವರ್ಷ, ಗಾಂಧಿನಗರ, ಮಂಡ್ಯ ಸಿಟಿರವರಿಗೆ 75 ವರ್ಷ ವಯಸ್ಸಾಗಿ ಅವರ ತುಂಬಾ ಕೃಷರಾಗಿದ್ದು ಬೆಳಿಗ್ಗೆ 11-00 ಗಂಟೆ ನಂತರ ಕಾರಸವಾಡಿ ರಸ್ತೆಯಲ್ಲಿರುವ ತಮ್ಮ ಜಮೀನನ್ನು ನೋಡಿಕೊಂಡು ಬರಲು ಕಾರಸವಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಾಬರಿ ಪ್ರಕರಣ :

ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 27/13 ಕಲಂ. 392 ಐ.ಪಿ.ಸಿ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ ಕೋಂ.ಲೇಟ್ ಕೆ.ಶಿವಲಿಂಗಯ್ಯ, 32 ವರ್ಷ, ವಕ್ಕಲಿಗರು , ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ವಾಸ: ಎನ್.ಇ.ಎಸ್.ಬಡಾವಣೆ, ಮಳವಳ್ಳಿ ಔನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ. ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ. ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ,. ಇದರ ಬೆಲೆ 90,000/- ರೂ.ಗಳಾಗುತ್ತದೆ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 498(ಎ)-506 ಕೂಡ 34 ಐ.ಪಿ.ಸಿ ಮತ್ತು 3-4 ಡಿ.ಪಿ. ಕಾಯ್ದೆ.

ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಎನ್. ಪಲ್ಲವಿ ಕೋಂ. ಎಂ.ಜೆ.ಮಂಜು, 20 ವರ್ಷ, ಪರಿಶಿಷ್ಠಜಾತಿ, ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕಾದರೆ ಚಿನ್ನ, 2 ಲಕ್ಷ ಹಣವನ್ನು ಹಾಗೂ ಮೈಸೂರಿನಲ್ಲಿ ಒಂದು ಸೈಟನ್ನು ನನ್ನ ಹೆಸರಿಗೆ ತೆಗೆದುಕೊಡ ಬೇಕು ಎಂದು ಅವರ ಗಂಡ 1) ಎಂ.ಜೆ. ಮಂಜು ಬಿನ್ ಜವರಯ್ಯ, ಹಾಗು 2) ಸಾಕಮ್ಮ ಕೋಂ. ಜವರಯ್ಯ       3) ಜವರಯ್ಯ(ಗಂಟೆ)  4) ಲಾವಣ್ಯ ಬಿನ್. ಜವರಯ್ಯ, ಎಲ್ಲರೂ ಎಂ.ಬೆಟ್ಟಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು. ರವರುಗಳು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ ಎಂದು ಹಾಗೂ ಪಿರ್ಯಾಧಿಯ ಅತ್ತೆ ಸಾಕಮ್ಮ ಹಾಗೂ ಮಾವ ಜವರಯ್ಯ(ಗಂಟೆ) ಹಾಗೂ ಅವರ ನಾದಿನಿ ಲಾವಣ್ಯ ಸಹ ಇವರೊಂದಿಗೆ ಸೇರಿ ಕಿರುಕುಳ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಆರೋಪಿ-1 ರವರನ್ನು ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಲಾಗಿದೆ.

No comments:

Post a Comment