ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 19-02-2013.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ 256/2012
ಕಲಂ. 302,201 ಐಪಿಸಿ ಕೊಲೆ ಪ್ರಕರಣದ ಪತ್ತೆ ಬಗ್ಗೆ.
ಕಲಂ. 302,201 ಐಪಿಸಿ ಕೊಲೆ ಪ್ರಕರಣದ ಪತ್ತೆ ಬಗ್ಗೆ.
ದಿನಾಂಕಃ 15-06-2012 ರಂದು ಶ್ರೀ. ಸುಲೇಮಾನ್, ಮಂಡ್ಯ ಸಿಟಿ ರವರು ಮಂಡ್ಯ ಗ್ರಾಮಾಂತರ ಠಾಣೆಗೆ ಹಾಜರಾಗಿ ಒಂದು ಪಿರ್ಯಾದನ್ನು ನೀಡಿದ್ದು, ಮೃತ ರಾಮಮೂರ್ತಿಯು ತನ್ನ ಬಳಿ 10 ವರ್ಷಗಳಿಂದ ಸುಲ್ತಾನ್ ಬೀಡಿ ಬಂಡಲ್ ಗಳನ್ನು ತನ್ನ ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಮಂಡ್ಯ ಸುತ್ತಮುತ್ತಲ ಅಂಗಡಿಗಳಿಗೆ ವಿತರಣೆ ಮಾಡಿ, ನಂತರ ಮಂಡ್ಯ ನಗರದ ಪ್ಯಾಕ್ಟರಿ ಸರ್ಕಲ್ ನಲ್ಲಿ ಬಾಡಿಗೆ ಹೊಡೆಯುತ್ತಿದ್ದು, ದಿನಾಂಕ: 13-06-2012 ರಂದು ರಾಮಮೂರ್ತಿ ಬೀಡಿ ಬಂಡಲ್ ಗಳನ್ನು ತೆಗೆದುಕೊಂಡು ಹೋಗಲು ಬಂದಿಲ್ಲವಾದ್ದರಿಂದ ಬೆಂಗಳೂರಿನಲ್ಲಿರುವ ರಾಮಮೂರ್ತಿರವರ ಹೆಂಡತಿ ಮತ್ತು ಮಗನಿಗೆ ಪೋನ್ ಮಾಡಿ ವಿಚಾರ ತಿಳಿಸಿದೆನು, ನಂತರ ತಾನು ಮಂಡ್ಯ ಸಿಟಿಯಲ್ಲಿರುವಾಗ ದೂರವಾಣಿ ಮೂಲಕ ಸಂತೆಕಸಲಗೆರೆ ಬಳಿ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಒಂದು ಗಂಡಸಿನ ಶವ ಇರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಶವವು ರಾಮಮೂರ್ತಿಯವರದ್ದಾಗಿರುತ್ತದೆ. ಇವರನ್ನು ದಿನಾಂಕ: 12-06-2012 ರ ನಂತರ ಯಾರೋ ದುಷ್ಕರ್ಮಿಗಳು ರಾಮಮೂರ್ತಿಯ ಕತ್ತಿಗೆ ಪ್ಲಾಸ್ಟಿಕ್ ದಾರದಿಂದ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚಲು ಹಾಕಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸ್ ಅದಿಕಾರಿಗಳು ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.
ನಂತರ ಮಂಡ್ಯ ಗ್ರಾಮಾಂತರ ವೃತ್ತದ ಪ್ರಬಾರ ಪೊಲೀಸ್ ಇನ್ಸ ಪೆಕ್ಟರ್ ಶ್ರೀ. ಎನ್.ಸಿ.ನಾಗೇಗೌಡರವರು ಪ್ರಕರಣದ ತನಿಖೆಯನ್ನು ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಎ.ಎನ್. ರಾಜಣ್ಣ ರವರ ಮಾರ್ಗದರ್ಶನದಲ್ಲಿ ಮತ್ತು ಮಂಡ್ಯ ಉಪ ವಿಭಾಗದ ಡಿವೈ.ಎಸ್.ಪಿ. ರವರಾದ ಶ್ರೀಮತಿ ಡಾ.ಶೋಭಾರಾಣಿರವರ ಸಲಹೆಯಂತೆ ತನಿಖೆ ಮುಂದುವರೆಸಿ, ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸದರಿ ಪ್ರಕರಣದಲ್ಲಿ ಮೃತ ರಾಮಮೂರ್ತಿ ರವರನ್ನು ಸಂತೆ ಕಸಲಗೆರೆ ಬಳಿ ಭೂಮಿ ಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ನೀಲಗಿರಿ ತೋಪಿನ ಬಳಿ ಕೊಲೆ ಮಾಡಿ ಬಿಸಾಡಿ ಹೋಗಿದ್ದ ಆರೋಪಿಗಳಾದ 1) ಸರವಣ ಬಿನ್ ಲೇ| ಸ್ವಾಮಿ ನಾಥನ್, 27 ವರ್ಷ, ಆಟೋ ಡ್ರೈವರ್ ಕೆಲಸ, ಮನೆ ನಂ-36/1 ಸಾಯಿ ಬಾಬಾ ನಗರ, 2 ನೇ ಕ್ರಾಸ್, ಶ್ರೀರಾಂಪುರ, ಬೆಂಗಳೂರು-21, ಸ್ವಂತ ಊರು 2 ನೇ ಕ್ರಾಸ್, ಹರಿಶ್ಚಂದ್ರ ಸರ್ಕಲ್ ಹತ್ತಿರ, ಮಂಡ್ಯ ನಗರ. 2) ಜಿ. ರಾಜನ್ @ ರಾಜ ಬಿನ್ ಗಂಗಾಧರ, 29 ವರ್ಷ, ಶ್ರೀ ಬ್ಯಾಟರಿ ವರ್ಕ್ ಶಾಪ್ ನಲ್ಲಿ ಕೆಲಸ, ವಾಸ 6 ನೇ ಕ್ರಾಸ್, ಗಾಂದಿನಗರ, ಗುತ್ತಲು ರಸ್ತೆ, ಮಂಡ್ಯ ನಗರರವರುಗಳನ್ನು ದಿನಾಂಕಃ 18-02-2013 ರಂದು ಪತ್ತೆ ಮಾಡಿದ್ದು, ಆರೋಪಿಗಳು ಸದರಿ ಮೃತ ರಾಮಮೂರ್ತಿಯ ಜೊತೆಯಲ್ಲಿ ಹಳೇ ವೈಷಮ್ಯದಿಂದ ಹಾಗೂ ರಾಮಮೂರ್ತಿಯು ಆರೋಪಿಯಾದ ಜಿ. ರಾಜನ್ ರವರ ಚಿಕ್ಕಮ್ಮಳ ಮೇಲೆ ಕಣ್ಣಾಕಿರುವುದಾಗಿ ತಿಳಿದು ಬಂದ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಲು ನಿರ್ದರಿಸಿ, ಅವನದೇ ಆಟೋ ರಿಕ್ಷಾ ನಂ. ಕೆಎ-06-ಎ-2376 ಆಟೋದಲ್ಲಿ ಸಂತಕಸಲಗೆರೆ ಬಳಿ ಇರುವ ಭೂಮಿಸಿದ್ದೇಶ್ವರ ದೇವಸ್ಥಾನಕ್ಕೆ ಬಾಡಿಗೆಗೆ ಹೋಗಿಬರೋಣ ಎಂದು ಕರೆದುಕೊಂಡು ಬಂದು, ಕಾರಸವಾಡಿ, ಕೊತ್ತತ್ತಿ, ಕಡೆಗಳಲ್ಲಿ ಸುತ್ತಾಡಿ ದಿನಾಂಕ:12-06-2012 ರಂದು ಸಂಜೆ, ಪ್ಲಾಸ್ಟಿಕ್ ವೈರ್ ನಿಂದ ಕತ್ತಿಗೆ ಬಿಗಿದು, ಕತ್ತನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿ ಕೊಲೆಯನ್ನು ಮರೆಮಾಚಲು ಶವವನ್ನು ಮೇಲ್ಕಂಡ ಸ್ಥಳದಲ್ಲಿ ಬಿಸಾಡಿ, ನಂತರ ಆರೋಪಿಗಳು ಮೃತ ರಾಮಮೂರ್ತಿಯ ಆಟೋವನ್ನು ಕೆ.ಎಂ.ದೊಡ್ಡಿ ರಸ್ತೆಯ ಮೆಲ್ಲಹಳ್ಳಿ ಬಳಿ ಇರುವ ಹೆಬ್ಬಾಳದ ಬದಿಯಲ್ಲಿ ಬಿಟ್ಟು, ಹೊರಟು ಹೋಗಿದ್ದು, ಸದರಿ ಆಟೋವನ್ನು ಪತ್ತೆ ಮಾಡಿದ್ದು, ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷರಾದ ಶ್ರೀ. ಎನ್.ಸಿ.ನಾಗೇಗೌಡ, ಪ್ರೊಬೇಷನರಿ ಪಿ.ಎಸ್.ಐ. ಬ್ಯಾಟರಾಯಗೌಡ, ಸಿಬ್ಬಂದಿಯವರಾದ ರಘುಪ್ರಕಾಶ್, ಮಹೇಶ, ರಾಮಣ್ಣ, ಬೊಮ್ಮೇಗೌಡ ಜೀಪ್ ಚಾಲಕ ಡ್ರೈವರ್ ಲೋಕೇಶ್ ರವರುಗಳನ್ನು ಜಿಲ್ಲಾ ಪೊಲೀಸ್ ಅದಿಕಾರಿಗಳು ಪ್ರಶಂಶಿಸಿರುತ್ತಾರೆ.
No comments:
Post a Comment