Moving text

Mandya District Police

DAILY CRIME REPORT DATED : 20-02-2013



ಮಂಡ್ಯ. ಜಿಲ್ಲೆಯಲ್ಲಿ ದಿನಾಂಕ: 20-02-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 4 ಕಳವು ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕಳ್ಳತನ ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 454-457-511 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಸ್ ನಾಗರಾಜು, ವ್ಯವಸ್ಥಾಪಕರು, ವಿಜಯ ಬ್ಯಾಂಕ್, ಎಂ.ಸಿ ರೋಡ್, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಕಟ್ಟಡದ ಪೂರ್ವ ಗೋಡೆಯಲ್ಲಿ ಹಾಕಿರುವ ಕಬ್ಬಿಣದ ಸರಳಿನ ಗ್ರೀಲ್ನ್ನು ಯಾರೋ ದುಷ್ಕರ್ಮಿಗಳು ಮುರಿದು ಶಾಖೆಯ ಒಳಗಡೆ ನುಗ್ಗಿ ಕಳವು ಮಾಡುವ ಪ್ರಯತ್ನ ಮಾಡಿರುವುದು ಕಂಡುಬಂದಿರುತ್ತದೆ. ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳವು ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 51/13 ಕಲಂಃ 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಎಂ.ಆರ್ ಪದ್ಮನಾಭ ಬಿನ್. ರತ್ನರಾಜಯ್ಯ, 3ನೇ ಕ್ರಾಸ್, ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಕೆಎ-11-ಎಲ್-4154 ಟಿವಿಎಸ್ ಎಕ್ಸ್.ಎಲ್.ಸೂಪರ್ ಮೊಪೆಡ್ ನ್ನು, ಮಂಡ್ಯ ಜನರಲ್ ಆಸ್ಪತ್ರೆಯ ರಕ್ತ ನಿಧಿ ಮುಂಭಾಗ ನಿಲ್ಲಿಸಿ ಪುನಃ ಮಧ್ಯಾಹ್ನ 03-00 ಗಂಟೆಗೆ ಮೊಪೆಡ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೊಡಲು ನನ್ನ ಮೊಪೆಡ್ ಇರಲಿಲ್ಲ ಸಿಗಬಹುದೆಂದು ಇಲ್ಲಿಯವರೆಗೆ ಎಲ್ಲಾಕಡೆ ಹುಡುಕಾಡಿದೆನು ಮೊಪೆಡ್ ನ್ನು, ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಬಾಲಕೃಷ್ಣ, 35 ವರ್ಷ, ಒಕ್ಕಲಿಗರು, ವ್ಯವಸಾಯ, ವಡ್ಡರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿಳಿಗುಲಿ ಗ್ರಾಮದ ಸರ್ವೆ.  ನಂಬರ್ ನಲ್ಲಿ  ಒಂದು ಪಂಪ್ಸೆಟ್ ಇರುತ್ತದೆ. 100 ಅಡಿ ಉದ್ದ 3 ಇಂಚು ಅಗಲದ ಒಂದು ಕಪ್ಪು ಬಣ್ಣದ ಮಡ್ಡಿ ಪೈಪನ್ನು ನನ್ನ ಬಾವಿಯ ಏರಿಯ ಮೇಲೆ ಇಟ್ಟಿದ್ದೆ. ಪೈಪನ್ನು ಯಾರೋ ಕಳ್ಳರು ಕಳವು ಮಾಡಿಕೊಂಡರು. ಈ ಪೈಪನ್ನು ನಮ್ಮ ಗ್ರಾಮದ ಆನಂದ ಬಿನ್. ಲೇಟ್. ಮರೀಗೌಡ, ವಡ್ಡರಹಳ್ಳಿಕೊಪ್ಪಲು ಗ್ರಾಮ, ದುದ್ದ ಹೋಬಳಿ ರವರ ಮೇಲೆ ಅನುಮಾನ ಇರುತ್ತದೆ. ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಶ್ರೀನಿವಾಸೇಗೌಡ.ಸಿ.ಎನ್. ಚಿನಕುರಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಚಿಕ್ಕಭೋಗನಹಳ್ಳಿ ಗ್ರಾಮದ ಎಲ್ಲೆಯ ಸರ್ವೆ. ನಂ 83/2 ರಲ್ಲಿ ಜಮೀನು ಹೊಂದಿದ್ದು, ಸದರಿ ಜಮೀನಿನಲ್ಲಿ ಮೋಟಾರ್ ಪಂಪ್ ಸೆಟ್ ಅಳವಡಿಸಿದ್ದು, ಮೋಟಾರ್ ಪಂಪ್ ನ್ನು,  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಕಳವು ಮಾಡಿಕೊಂಡು ಹೋಗಿರುವ ಪಂಪ್ ಸೆಟ್ ನ ಅಂದಾಜು ಬೆಲೆ ಸುಮಾರು 8000/- ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ. 


4. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 379 ಐ.ಪಿ.ಸಿ.

     ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್.ಎಸ್. ಬಸವಣ್ಣ ಬಿನ್. ಶಿವನಂಜಪ್ಪ, ಹಾಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಜೀವನಕ್ಕಾಗಿ ಒಂದು ಕೆಎ-11 ಎ-1270  ಟಾಟಾ ಏಸ್ ಗೂಡ್ಸ್ ಆಟೋವನ್ನು ಇಟ್ಟುಕೊಂಡಿದ್ದು ಮನೆಮುಂದೆ ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನದ ಹಿಂಭಾಗದ ಎರಡು ಚಕ್ರಗಳು ಮತ್ತು ಬ್ಯಾಟರಿಯನ್ನು ನೆನ್ನೆ ರಾತ್ರಿ  ವೇಳೆಯಲ್ಲಿ ಯಾರೋ ಕಳ್ಳರು ಬಿಚ್ಚಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಈ ಬಗ್ಗೆ ನನ್ನ ಅಣ್ಣನಾದ ನಂಜಪ್ಪನ ಮೇಲೆ ಅನುಮಾನವಿರುತ್ತೆ. ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 40/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 20-02-2013 ರಂದು ಪಿರ್ಯಾದಿ ಡೈಸಿ ಕೋಂ. ಜೆ.ಅಂಟೋನಿ, 46ವರ್ಷ, ಮನೆ.ನಂ. ಕೆಎಲ್ 933, 9ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯವರ ಗಂಡ ಜೆ.ಅಂತೋಣಿ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಇವರು ಈ ಹಿಂದೆ ಆಗಾಗ್ಗೆ ಮನೆಬಿಟ್ಟು ಹೋಗಿ ತಿಂಗಳುಗಟ್ಟಲೆ ಹೊರಗಡೆ ಇದ್ದು ವಾಪಸ್ ಬರುವ ವಾಡಿಕೆಯಿದ್ದು ಅದರಂತೆ ಈಗಲೂ ವಾಪಸ್ ಬರುತ್ತಾರೆಂದು ತಿಳಿದು ಸುಮ್ಮನಿದ್ದೆವು. ಇದುವರೆವಿಗೂ ತಮ್ಮ ಪತಿ ವಾಪಸ್ ಮನೆಗೆ ಬಾರದ ಕಾರಣ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಜೆ.ಅಂಟೋನಿ ರವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಭಾರತೀಯ ಶಸ್ತಾಸ್ತ್ರಗಳ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 32/13 ಕಲಂ. 143-307-429 ಕೂಡ 149-149 ಐ.ಪಿ.ಸಿ. 25 & 30 ಇಂಡಿಯನ್ ಆಮ್ಸ್ ಆಕ್ಟ್.

ದಿನಾಂಕ: 20-02-2013 ರಂದು ಪಿರ್ಯಾದಿ ದಿ:-19-02-2013 ರಂದು ರಾತ್ರಿ 9 ಗಂಟೆಯಲ್ಲಿ ನಾನು ಮತ್ತು ನನ್ನ ಅಕ್ಕನ  ಮಗನಾದ ಬಿ.ಕೆ ಶಿವಕುಮಾರ್ ಇಬ್ಬರೂ ಹೋಗಿ ಪಂಪ್ಸೆಟ್ ಮನೆಯ ಮೇಲೆ ಮಲಗಿದ್ದೆವು. ನಮ್ಮ ಜೊತೆಯಲ್ಲಿ ಸಾಕಿದ ನಾಯಿಯನ್ನು ಸಹ ಕರೆದುಕೊಂಡು ಹೋಗಿ ಚೈನು ಹಾಕಿ ಕಟ್ಟಿ ಹಾಕಿ ಮಲಗಿದ್ದೆವು ಬೆಳಗಿನ ಜಾವ ಸುಮಾರು 03.15  ಗಂಟೆ ಸಮಯಕ್ಕೆ ನಾವು ಕಟ್ಟಿ ಹಾಕಿದ್ದ ನಮ್ಮ ನಾಯಿ ಇದ್ದಕ್ಕಿದಂತೆ ಜೋರಾಗಿ ಬೋಗಳುತ್ತಾ ಇತ್ತು ಆವಾಗ ದೂರದಲ್ಲಿ ಯಾರೋ 4-5 ಜನರು ನಿಂತಿದ್ದು ಅದರಲ್ಲಿ ಒಬ್ಬ ವ್ಯಕ್ತಿ ಹಣೆ ಮೇಲೆ ಬ್ಯಾಟರಿ ಲೈಟನ್ನು ಹಾಕಿಕೊಂಡಿದ್ದ ನಾಯಿ ಬೊಗಳುತ್ತಲೆ ಇತ್ತು ಆವಾಗ ನಾನು  ಅವರಿಗೆ ಯಾರು ಅಲ್ಲಿ ನಿಂತಿಕೊಂಡಿರುವುದು ಅಂತ ಕೂಗುತ್ತಾ ನಾಯಿಯನ್ನು ಕಟ್ಟಿದ್ದ ಚೈನನ್ನು ಬಿಚ್ಚಬೇಕು ಅನ್ನುವಷ್ಟರಲ್ಲಿ ಅಲ್ಲೆ  ನಿಂತಿದ್ದ 4  ಜನರಲ್ಲಿ ಯಾರೊ ಒಬ್ಬ ಬಂದೂಕಿನಿಂದ  ಕೊಲೆ ಮಾಡುವ ಉದ್ಧೇಶದಿಂದ ಗುಂಡು ಹಾರಿಸಿದನು. ನಾನು ಹಿಂದಕ್ಕೆ ಸರಿದಾಗ ಆ ಗುಂಡು ನನ್ನ ಸಾಕಿದ ನಾಯಿಗೆ ಬಿದ್ದು ನನ್ನ ಎರಡು ಕಾಲುಗಳ ಪಾದಕ್ಕೂ ಏಟು ಬಿದ್ದು ನಾಯಿಗೆ ಗುಂಡು ತಗುಲಿ ಮಿಲಮಿಲನೆ ಒದ್ದಾಡಿ ಸತ್ತು ಹೋಯಿತು, ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (XI) ಎಸ್.ಸಿ./ಎಸ್.ಟಿ. ಕಾಯಿದೆ 1989.

ದಿನಾಂಕ: 20-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ: ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಎಸ್.ಸಿ [ ಆದಿ ಕರ್ನಾಟಕ ] ಜಾತಿಗೆ ಸೇರಿದ್ದು ಅವರು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ [ ಹೆಚ್,ಐ.ವಿ. ] ಪಿಯರ್ ಆಗಿ ಕೆಲಸ  ನಿರ್ವಹಿಸುತ್ತಿದ್ದು  ಸರ್ಕಾರದಿಂದ ಗರೀಬಿ ಸೈಟ್ ನಲ್ಲಿ  ವಾಸವಾಗಿರುತ್ತೇನೆ. ನನಗೆ ನಮ್ಮ  ಗ್ರಾಮದ ನಿವಾಸಿಗಳಾದ ವಕ್ಕಲಿಗ ಜಾತಿಗೆ ಸೇರಿದ, ಶಿವಲಿಂಗಯ್ಯ, ಚಿಕ್ಕತಾಯಮ್ಮ, ಲಕ್ಷ್ಮಿ ಮತ್ತು ಗಂಗಾಮತಕ್ಕೆ ಸೇರಿದ ಪ್ರೇಮಮ್ಮ, ಬೋರಮ್ಮ ಎಂಬುವವರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ  ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ. ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತೇನೆ. ಡಾಕ್ಟರ್ ನನಗೆ ತಲೆಯನ್ನು ಸ್ಕ್ಯಾನ್ ಮಾಡಲು ಬರೆದುಕೊಟ್ಟಿರುತ್ತಾರೆ. ನನಗೆ ಯಾರ ಬೆಂಬಲವೂ ಇಲ್ಲ. ತಂದೆ, ತಾಯಿ, ಗಂಡ ತೀರಿಕೊಂಡಿರುತ್ತಾರೆ. 8 ವರ್ಷದ ಮಗನ ಜೊತೆ ಗರೀಬಿ ಸೈಟಿನಲ್ಲಿ ವಾಸವಾಗಿರುತ್ತೇನೆ. ಬೇರೆ ಕಡೆ ವಾಸ ಮಾಡಲು ಸಾಧ್ಯವಿಲ್ಲ. ನನಗೆ ಇದೇ ಗ್ರಾಮದಲ್ಲಿ ವಾಸಮಾಡಿಕೊಂಡು ನೆಮ್ಮದಿಯಿಂದ ಜೀವನ ನಡೆಸಲು ಖಾವಂದರಾದ ತಾವು ಇವರೆಲ್ಲರ ಕಿರುಕುಳದಿಂದ ನನನ್ನು ತಪ್ಪಿಸಿ ನನಗೆ ಮತ್ತು ನನ್ನ ಮಗನಿಗೆ ಪ್ರಾಣ ರಕ್ಷಣೆ ಕೋರಿ ತಮ್ಮಲ್ಲಿ ಮನವಿ ಮಾಡಿಕೊಂಡಿರುತ್ತೇನೆ. ಎಂದು ಇತ್ಯಾದಿ  ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಹೆಚ್ಬಿ ಮಂಜುನಾಥ ಬಿನ್. ಹೆಚ್. ಬೀರಯ್ಯ, ಹೇಮಾವತಿ ಬಡಾವಣೆ ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆ.ಆರ್.ಪೇಟೆ ಬಸ್ ನಿಲ್ದಾಣದ ಪಕ್ಕದಲ್ಲಿ ಅಂದರೆ ಟಿ.ಬಿ. ವೃತ್ತದಿಂದ ದುರ್ಗಾ ಭವನ್ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ಒಬ್ಬ ಅನಾಥ ಭಿಕ್ಷುಕ ಮೃತಪಟ್ಟಿರುತ್ತಾನೆ. ಈತನು ಕೆ.ಆರ್.ಪೇಟೆಯಲ್ಲಿ ಭಿಕ್ಷೆ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಈತನು ಹೊಟ್ಟೆಗೆ ಸರಿಯಾದ ಆಹಾರ ಇಲ್ಲದೆಯೋ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾನೆ. ಮೃತನ ಹೆಸರು ವಿಳಾಸ ತಿಳಿದಿರುವುದಿಲ್ಲ ಆದ್ದರಿಂದ ತಾವುಗಳು ಮುಂದಿನ ಕ್ರಮ ಕೈಗೊಳ್ಳಬಹುದೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 20-02-2013 ರಂದು ಪಿರ್ಯಾದಿ ಕುಮಾರ.ಎಂ.ಇ. ರಾಗಿಮುದ್ದನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಂದೆಯವರ ತಮ್ಮನ ಮಗನಾದ ಬಸವೇಗೌಡ, 30 ವರ್ಷ, ಎಂಬುವರಿಗೆ ಈಗ್ಗೆ ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು ಚಿಕಿತ್ಸೆ ಕೊಡಿಸಿದ್ದರೂ ಗುಣವಾಗದೆ ಇದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಹೊಟ್ಟೆ  ನೋವಿನ ಬಾಧೆಯನ್ನು ತಾಳಲಾರದೆ ತಮ್ಮ ವಾಸದ ಮನೆಯಲ್ಲಿ ಯಾವುದೋ ವಿಷಸೇವನೆ ಮಾಡಿ ಒದ್ದಾಡುತ್ತಿದ್ದು ಚಿಕಿತ್ಸೆಗಾಗಿ ಪಾಂಡವಪುರ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment