ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-02-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ಕಳವು ಪ್ರಕರಣ, 1 ಕೊಲೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :
ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 143-355 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. ಎಸ್.ಸಿ./ಎಸ್.ಟಿ. ಕಾಯಿದೆ 1989
ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮ ಕೊಂ. ಲೇ. ಶಂಕರ, ಮಣಿಪುರ, ಮೊಡಚಾಕನಹಳ್ಳಿಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಶಿವಲಿಂಗಯ್ಯ, ವಕ್ಕಲಿಗರು, 2]ಚಿಕ್ಕತಾಯಮ್ಮ 3] ಲಕ್ಷ್ಮಿ. 4] ಪ್ರೇಮಮ್ಮ. 5] ಬೋರಮ್ಮ ಇಲ್ಲರೂ ಮೊಡಚಾಕನಹಳ್ಳಿ ಗ್ರಾಮಸ್ಥರು ನನ್ನನ್ನು ಜಾತಿಯ ಬಗ್ಗೆ ತುಂಬಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳವನ್ನು ನೀಡಿರುತ್ತಾರೆ ಮತ್ತು ನನ್ನನ್ನು ವಿನಾಕಾರಣ ಜಗಳಕ್ಕೆ ಎಳೆದು ನನ್ನನ್ನು ಚಪ್ಪಲಿಯಿಂದ ಹೊಡೆದಿರುತ್ತಾರೆ. ಈ ರೀತಿ ದಿನ ನನಗೆ ಕಿರುಕುಳ ನೀಡಿರುತ್ತಾರೆ. ನಾನು ನೀರು ಹಿಡಿಯಲು ಹೋದರೆ ನನ್ನನ್ನು ಮುಟ್ಟಿಸಿಕೊಳ್ಳಬೇಕೆಂದು ಸುಮ್ಮ ಸುಮ್ಮನೆ ಜಗಳ ತೆಗೆಯುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-02-2013 ರಂದು ಪಿರ್ಯಾದಿ ಸೋಮಶೇಖರ ಬಿನ್. ಶಿವಯ್ಯ, ಕಾಗೇಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗ ಕೆ.ಎಸ್.ಕಿರಣ್ಕುಮಾರ್ ಬಿನ್. ಸೋಮಶೇಖರ್ ಕೆ.ಎಸ್. 14 ವರ್ಷ ಕಾಗೇಪುರ ಶವ ಸಿಕ್ಕಿರುತ್ತೆ. ಈತನ ಮೇಲೆ ಯಾವುದೇ ಬಟ್ಟೆಯಾಗಲಿ ಇತರೆ ವಸ್ತುಗಳು ಸಿಕ್ಕಿರುವುದಿಲ್ಲ ಮೃತ ಕಿರಣ್ಕುಮಾರ್ನ ಜೊತೆ ಇತರೆ 5 ಹುಡುಗರು ಹೋಗಿದ್ದು ಪಿಯರ್ಾದಿ ನನ್ನ ಮಗನಿಗೆ ಈಜು ಬರುತ್ತಿದ್ದು ಸಾವನ್ನಪ್ಪಿರುವುದು ಅನುಮಾನಸ್ಪದವಾಗಿ ಕಂಡುಬಂದಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವನ್ಯಪ್ರಾಣಿಗಳ ಸಂರಕ್ಷಣಾ ಕಾಯಿದೆ ಆಧಿನಿಯಮ ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 379 ಐಪಿಸಿ ರೆ/ವಿ ಕಲಂ 51 (1) ಅಫ್ ವೈಲ್ಡ್ ಲೈಪ್ ಪ್ರೋಟೆಕ್ಷನ್ ಆಕ್ಟ್.
ದಿನಾಂಕ: 19-02-2013 ರಂದು ಪಿರ್ಯಾದಿ ಹೆಚ್.ಎನ್.ವಿನಯ್, ಪಿ.ಎಸ್.ಐ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಅವರಿಗೆ ಬಂದ ಮಾಹಿತಿಯ ಮೇರೆಗೆ, ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಚೀಣ್ಯಾ-ಗಂಗವಾಡಿ ರಸ್ತೆಯ, ಶನಿದೇವರ ದೇವಸ್ಥಾನದ ಬಳಿ ಆರೋಪಿ ರಾಮಲಿಂಗ ಬಿನ್ ನಾಗೇಗೌಡ, 34ವರ್ಷ, ವಕ್ಕಲಿಗರು, ವ್ಯವಸಾಯ, ಹುಳ್ಳೇನಹಳ್ಳಿ ಗ್ರಾಮ ರವರು ಒಂದು ಕಾಡುಪ್ರಾಣಿಯ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡಿ ಹಣ ಪಡೆಯುವ ಸಲುವಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋಗಿತ್ತಿದ್ದವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 19-02-2013 ರಂದು ನಾಗರತ್ನಮ್ಮ ಕೋಂ. ಲೇಟ್. ಮಹೇಂದ್ರ, ಬಾಬುರಾಯನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳು ದಿನಾಂಕ: 29-01-2013 ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಸುಷ್ಮಾರವರು ಶ್ರೀರಂಗಪಟ್ಟಣಕ್ಕೆ ಹೋಗಿ ಬಟ್ಟೆ ತರುತ್ತೇನೆಂದು ಶ್ರೀರಂಗಪಟ್ಟಣಕ್ಕೆ ಹೋದವಳು ಸಂಜೆಯಾದರೂ ಸಹ ವಾಪಸ್ಸು ಮನೆಗೆ ಬಂದಿರುವುದಿಲ್ಲಾ. ನಾವು ನೆಂಟರಿಷ್ಟಟರ ಮನೆಗಳಲ್ಲಿ ಎಲ್ಲಾ ಕಡೆ ಹುಡುಕಲಾಗಿ ಇದುವರೆವಿಗೂ ನನ್ನ ಮಗಳು ಪತ್ತೆಯಾಗಿರುವುದಿಲ್ಲಾ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 379 ಐ.ಪಿ.ಸಿ.
ದಿನಾಂಕ: 19-02-2013 ರಂದು ಪಿರ್ಯಾದಿ ಪದ್ಮಮ್ಮ ಕೋಂ. ಚೆಲುವೇಗೌಡ, ವಡಿಯಾಂಡಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ: 10-02-2013 ರಂದು ಆರತಿ ಉಕ್ಕಡ ಗ್ರಾಮಕ್ಕೆ ಹೋಗಿದ್ದು ಜನ ಸಂದಣಿ ಇದ್ದು ಪೂಜೆ ಮುಗಿಸಿಕೊಂಡು ಮದ್ಯಾಹ್ನ 01-15 ಗಂಟೆ ಸಮಯದಲ್ಲಿ ತನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ನೋಡಿಕೊಳ್ಳಲಾಗಿ ಸರ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿದ್ದು ಅದು 25 ಗ್ರಾಂ. ತೂಕ ಇದ್ದು ಬೆಲೆ ಸು, 48.000/- ಆಗಿರುತ್ತೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ.392 ಐ.ಪಿ.ಸಿ.
ದಿನಾಂಕ: 18-02-2013 ರಂದು ಪಿರ್ಯಾದಿ ಎಂ.ಭಾಗ್ಯಮ್ಮ, ಜೀವಶಾಸ್ರ್ತ ವಿಭಾಗದಲ್ಲಿ ಸಹಾಯಕ ಕೆಲಸ, ಶಾಂತಿಕಾಲೇಜು, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಶಾಂತಿಕಾಲೇಜಿಗೆ ಕೆಲಸಕ್ಕೆ ಹೋಗುತ್ತಿರುವಾಗ ನೀರಿನ ಟ್ಯಾಂಕ್ ಹತ್ತಿರ ರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದನು ಆಗ ನಾನು ಕಳ್ಳನು ನನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದಾನೆ ಎಂದು ಕೂಗಿಕೊಂಡೆ ಮತ್ತು ಆತನ ಹಿಂದೆಯೇ ಓಡಿ ಹೋದೆ, ಆತನು ಮುಂದೆ ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ಕೂಟರ್ ನಲ್ಲಿ ಹತ್ತಿಕೊಂಡು ಹೋಗಿರುತ್ತಾರೆ ನನ್ನ ಕತ್ತಿನಲ್ಲಿ ತರಚಿತ ಗಾಯವಾಗಿರುತ್ತದೆ, ಮಾಂಗಲ್ಯ ಮತ್ತು ಸರ ಒಟ್ಟು 35 ಗ್ರಾಂ. ಇದರ ಬೆಲೆ 90000/- ರೂ.ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment