Moving text

Mandya District Police

DAILY CRIME REPORT DATED : 30-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-01-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು,  2 ಕಳವು ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಯು.ಡಿ.ಆರ್. ಪ್ರಕರಣ ಹಾಗು 5 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 457-380 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಜೆ. ಹೇಮಾವತಿ, ಅಂಗನವಾಡಿ ಕಾರ್ಯಕರ್ತೆ,  ಅರೆಚಾಕನಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅರೆಚಾಕನಹಳ್ಳಿ ಗ್ರಾಮದ ಅಂಗನವಾಡಿ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಮತ್ತು ಒಂದು ತೂಕದ ಯಂತ್ರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 25/13 ಕಲಂ. 457-380 ಐ.ಪಿ.ಸಿ.

       ದಿನಾಂಕ: 30-01-2013 ರಂದು ಪಿರ್ಯಾದಿ ಹೆಚ್.ಎನ್. ಗಣೇಶಮೂರ್ತಿ,  ಮುಖ್ಯೋಪಾಧ್ಯಾಯ, ಪದ್ಯಾ ಗೋಪನಹಳ್ಳಿ ಗ್ರಾಮರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-01-2013 ರಂದು ಯಾರೋ ಕಳ್ಳರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗವನ್ನು ಮುರಿದು ಒಳಹೋಗಿ ಸುಮಾರು 2500/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳವು ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

        ದಿನಾಂಕ: 30-01-2013 ರಂದು ಪಿರ್ಯಾದಿ ಎಸ್. ಮಹೇಶ, ಕಾಮನಕೆರೆ ಹುಂಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಫಿಯರ್ಾದಿಯ ಕೆ.ಎ-55-ಎಲ್-8080  ಹೀರೋ ಮೋಟಾರ್ ಸೈಕಲ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 379 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಎಂ.ಕೃಷ್ಣಯ್ಯ ಬಿನ್. ಮುದ್ದೀರಯ್ಯ, ಸಿದ್ದಪ್ಪಾಜಿ ದೇವಸ್ಥಾನದ ರಸ್ತೆ, 5ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರು ತಮ್ಮ ಬಾಬ್ತು ಕೆಎ-11 ಎಲ್. 1664 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000-00 ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 30-01-2013 ರಂದು ಪಿರ್ಯಾದಿ ಗಂಗಮ್ಮ ಕೋಂ. ಲೇ.ಹನುಮಂತಪ್ಪ, ಬಿಂಡಿಗನವಿಲೆ ಗ್ರಾಮರವರು ನೀಡಿದ ದೂರು ಏನೆಂದರೆ ರವರ ಮಗಳು 18ವರ್ಷ, ಪಿ.ಯು.ಸಿ. ವಿದ್ಯಾರ್ಥಿನಿ ರವರು ಕಾಲೇಜಿಗೆ ಹೊಗಿ ಬರುತ್ತೇನೆ ಎಂದು ಹೇಳಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ ಬಂದಿರುವುದಿಲ್ಲ. ಕಾಣೆಯಾಗಿರುವ ನನ್ನ ಮೊಮ್ಮಗಳನ್ನು ಪತ್ತೆ ಮಾಡಿಕೊಡಿ ಎಂದು ಫಿರ್ಯಾದಿಯವರು ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 30/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.


ದಿನಾಂಕ: 30-01-2013 ರಂದು ನಾಗರಾಜು ಬಿನ್. ಲೇಟ್. ಚನ್ನೇಗೌಡ, 50 ವರ್ಷ, ಬಿ.ಗೌಡಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ನನ್ನ ಮಗಳು 23 ವರ್ಷ, ಬಿ.ಗೌಡಗೆರೆ ಎಂಬುವವರು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೋದವಳು ಇದುವರೆಗೂ ವಾಪಸ್ ಬಂದಿರುವುದಿಲ್ಲ ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.



ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 498(ಎ)-448-323-324-504-506 ಕೂಡ34 ಐ.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಅಭಿಲಾಶಾ ಕೋಂ. ಶಂಕರ, 26 ವರ್ಷ, 1ನೇಕ್ರಾಸ್, ಹೊನಗಿರಿ ಡೈರಿ ಬೀದಿ, ಹೊಸಹಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಂಕರ ಬಿನ್ ಉಳ್ಳಕ್ಕಿ ಮಂಚಯ್ಯ, ಹೊಸಹಳ್ಳಿ ಮಂಡ್ಯ ಸಿಟಿ ರವರು ಆಗಾಗ್ಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ದೊಣ್ಣೆಯನ್ನು ಹಿಡಿದುಕೊಂಡು ಬಂದು ಬಾಯಿಗೆ ಬಂದಂತೆ ಬೈಯ್ದು ಭುಜ ಹಾಗೂ ಬೆನ್ನಿನ ಮೇಲೆ ಹೊಡೆದು ನೋವುಂಟುಮಾಡಿರುತ್ತಾನೆ.ಹಾಗೂ ಆತನ ಅಕ್ಕನ ಮಗನಾದ ಶಶಿಕುಮಾರ್ ಹೊಡೆದು ರಕ್ತಗಾಯಪಡಿಸಿರುತ್ತಾನೆ. ಹಾಗೂ ನಿನ್ನ ಕತೆಯನ್ನು ಮುಗಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ.  ಆತನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿಆರ್.ಪಿ.ಸಿ.

ದಿನಾಂಕ: 30-01-2013 ರಂದು ಪಿರ್ಯಾದಿ ಸರಸಮ್ಮ ಕೋಂ ಲೇಟ್. ರಾಜು, ನಿಡಘಟ್ಟ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಅವರ ಮಗಳು ರೂಪ ಕೋಂ. ಶೇಖರ್, ಬಸವನ ಪುರ ಗ್ರಾಮ, ಸ್ವಂತ ಊರು ಬಿ.ಗೌಡಗೆರೆ ಮಂಡ್ಯ ತಾಲ್ಲೂಕು ರವರಿಗೆ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ತೋರಿಸಿದ್ದು, ವಾಸಿಯಾಗದೆ ಇದ್ದುದ್ದರಿಂದ ಹೊಟ್ಟೆನೋವು ತಾಳಲಾರದೆ ದಿನಾಂಕ: 25-01-2013 ರಂದು ರೂಪಳು ಯಾವುದೋ ಕ್ರಿಮಿನಾಶಕದ ಔಷಧಿಯನ್ನು ಕುಡಿದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment