Moving text

Mandya District Police

DAILY CRIME REPORT DATED : 31-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 31-01-2013 ರಂದು ಒಟ್ಟು 17 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್.  ಪ್ರಕರಣಗಳು,  3 ಕಳ್ಳತನ ಪ್ರಕರಣಗಳು,  1 ರಸ್ತೆ ಅಪಘಾತ ಪ್ರಕರಣ,  1 ವಂಚನೆ ಪ್ರಕರಣ ಹಾಗು 9 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಯು.ಡಿ.ಆರ್. ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ  ಧನರಾಜ್, ಪಿಎಸ್.ಐ, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ನಂದಿಪುರ ಗ್ರಾಮದ ದೊಡ್ಡಪ್ಪ ಸಣ್ಣಪುಟ್ಟೇಗೌಡರ 3 ನೇ ಮಗ ಬಿ.ಎಸ್.ಪುಟ್ಟರಾಜು ದಿನಾಂಕ 31-01-13 ರಂದು ಜಮೀನಿಗೆ ನೀರು ಹಾಯಿಸಲು ಹೋಗಿರುವಾಗ ಮದ್ಯಾಹ್ನ 03-00 ಗಂಟೆಯಲ್ಲಿ ಯಾವುದೋ ವಿಷಪೂರಿತ ಹಾವು ಪುಟ್ಟರಾಜುವಿನ ಬಲ ಕಣಕಾಲಿನ ಬಳಿ ಕಚ್ಚಿದ್ದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಕುಬೇರಪ್ಪ ಬಿನ್ ಕುಂಟಯ್ಯ, ಡಿ.ಎಸ್.ಎಸ್. ಸಂಚಾಲಕರು, ಕೆ.ಶೆಟ್ಟಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರು ಏನೆಂದರ ಅಪರಿಚಿತ ಗಂಡಸು, ಸುಮಾರು 65 ವರ್ಷ ವಯಸ್ಸು ಯಾವುದೋ ಖಾಯಿಲೆಯಿಂದ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯುಡಿಆರ್ 01/13 ಕಲಂ-174[ಸಿ] ಸಿ.ಆರ್.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಹೆಚ್.ಎಸ್. ಚಂದ್ರ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, 37 ವರ್ಷ, ಒಕ್ಕಲಿಗರು, ಕೂಲಿ ಕೆಲಸ, ವಾಸ ಎನ್.ಹೆಚ್.209 ಮುಖ್ಯರಸ್ತೆ, ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು. ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ತನ್ನ ಅಣ್ಣ ಮಹದೇವೇಗೌಡ @ ಸುರೇಶ ಬಿನ್ ಲೇಟ್ ಹೆಚ್.ಎಸ್.ಸಿದ್ದೇಗೌಡ, ವಯಸ್ಸು ಸುಮಾರು 47 ವರ್ಷ, ಒಕ್ಕಲಿಗರು, ಅಂಗವಿಕಲ, ವಾಸ 4ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ. ಸ್ವಂತ ಸ್ಥಳ ಹಲಗೂರು ಗ್ರಾಮ, ಮಳವಳ್ಳಿ ತಾಲ್ಲೂಕು ರವರು ಮನೆಯ ಹಾಲಿನ ಮೂಲೆಯಲ್ಲಿರುವ ಮೇಲ್ಛಾವಣಿಯ ಕಬ್ಬಿಣದ ಸರಳಿನ ಕೊಂಡಿಗೆ ವಿದ್ಯುತ್ ವೈರಿನಿಂದ ನೇಣುಹಾಕಿಕೊಂಡು ಸತ್ತು ನೇತಾಡುತ್ತಿದ್ದು ಮನೆಯಲ್ಲಿ ಹೆಂಡತಿ ಮಕ್ಕಳೆಲ್ಲರೂ ಇದ್ದರು. ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನೆಯಲ್ಲಿ ಇಲ್ಲದಿದ್ದಾಗ ಪ್ರೆಸ್ ರಿಪೋರ್ಟರ್ ಶಿವಕುಮಾರ ಎಂಬುವನು ತಮ್ಮ  ಮನೆಗೆ ಬಂದು ಹೋಗುತ್ತಿರುವ ವಿಚಾರ ತಿಳಿದು ಈ ವಿಷಯವನ್ನು ಮನನೊಂದು ಅವರ ಸ್ನೇಹಿತ ಚಂದೂಪುರ ಗ್ರಾಮದ ಮಾದೇಗೌಡ ರವರಿಗೆ ಹೇಳಿಕೊಂಡಿರುವ ವಿಚಾರ ತಿಳಿದುಬಂದಿರುತ್ತದೆ. ಇದರಿಂದಲೇ ತನ್ನ ಅಣ್ಣ ಮಹದೇವೇಗೌಡ @ ಸುರೇಶನು ಮನನೊಂದು ನೇಣುಹಾಕಿಕೊಂಡು ಸತ್ತಿರುವಂತೆ ಕಂಡುಬರುತ್ತದೆ. ಆದರೂ ತನ್ನ ಅಣ್ಣನ ಸಾವಿನ ಬಗ್ಗೆ ಅನುಮಾನವಿರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರು



ಕಳ್ಳತನ ಪ್ರಕರಣಗಳು :

1. ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಪುಟ್ಟಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಡುಕೊತ್ತನಹಳ್ಳಿ ಗ್ರಾಮ,  ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ಕಾಡುಕೊತ್ತನಹಳ್ಳಿ ಗ್ರಾಮದ  ಶಾಲೆಯ ಅಡುಗೆ ಮನೆಯ ಬಾಗಿಲು ಬೀಗವನ್ನು  ಮುರಿದು ಒಳಹೋಗಿ ಸುಮಾರು 1200/-ರೂ. ಬೆಲೆ ಬಾಳುವ ಗ್ಯಾಸ್ ಸಿಲೆಂಡರ್ನ್ನು ಕಳುವು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಗ್ರಾಮಾತರ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಮಹದೇವಮ್ಮ ಬಿನ್. ಗವಿಸಿದ್ದಯ್ಯ, 40 ವರ್ಷ, ಅಂಗನವಾಡಿ ಕಾರ್ಯಕರ್ತೆ, ಹೆಮ್ಮಿಗೆ ಗ್ರಾಮ ರವರು ನೀಡಿದ ದೂರು ಏನೆಂದರೆ  ಅವರು ಕೆಲಸ ಮಾಡುತ್ತಿದ್ದ ಹೆಮ್ಮಿಗೆ 2ನೇ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು  ಕೇಂದ್ರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಹಾಕಿ ಒಳಗೆ ನುಗ್ಗಿ 2 ಕುಕ್ಕರ್ ಗಳು, 10 ತಟ್ಟೆಗಳು, 2 ಬೇಸಿನ್ ಗಳು, ಮತ್ತು 2 ಮುಚ್ಚಳಗಳು ಹಾಗೂ ತೂಕಮಾಪನ ಯಂತ್ರ ಒಟ್ಟು 6000/- ರೂ ಬೆಲೆಬಾಳು ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 26/13 ಕಲಂ. 457-380 ಐ.ಪಿ.ಸಿ.

     ದಿನಾಂಕ: 31-01-2013 ರಂದು ಪಿರ್ಯಾದಿ ಸತ್ಯನಾರಾಯಣ ಬಿನ್ ಲೇಟ್ ನರಸಿಂಹಯ್ಯ, ಗೋಸೇಗೌಡರ ಬೀದಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕಿಲರ್ೋಸ್ಕರ್ ಕಂಪನಿಯ 1 ಹೆಚ್.ಪಿ. ಪಂಪ್ಸೆಟ್ ಮೋಟರ್ 2) ಒಂದು ಕಿರ್ಲೋಸ್ಕರ್ ಕಂಪನಿಯ 2 ಹೆಚ್.ಪಿ.ಯ ಸಬ್ ಮರ್ಸಿಬಲ್  ಪಂಪ್ಸೆಟ್ ಮೋಟರ್ ಒಟ್ಟು ಬೆಲೆ ಸುಮಾರು 10,000/- ರೂ. ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 31/13 ಕಲಂ. 279-304(ಎ) ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಎಸ್.ಸುರೇಶ್ ಬಿನ್ ಲೇಟ್. ಸಣ್ಣಯ್ಯ, 32 ವರ್ಷ, ಪರಿಶಿಷ್ಟ ಜಾತಿ, ಹೊನಗಳ್ಳಿ ಮಠ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಹೆಚ್.ಬಿ.ಶ್ರೀಕಾಂತ್ ಬಿನ್. ಲೇಟ್. ಬೋರಯ್ಯ, 58 ವರ್ಷ, ಹೊನಗಳ್ಳಿ ಮಠ ಕಾಲೋನಿ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಯಂತ್ರಣ ತಪ್ಪಿ ತಾನಾಗಿಯೇ ಮೋಟಾರ್ ಸೈಕಲ್ ಸಮೇತ ಬಿದ್ದು ತೀವ್ರ ಪೆಟ್ಟಾಗಿದ್ದು, ಸದರಿಯವರನ್ನು ಕೂಡಲೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 30-1-2013 ರಂದು ರಾತ್ತಿ 11-45 ಗಂಟೆಯ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ : 

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 420 ಐ.ಪಿ.ಸಿ.

      ದಿನಾಂಕ: 31-01-2013 ರಂದು ಪಿರ್ಯಾದಿ ಚಿಕ್ಕಮಾದಮ್ಮ ಕೋಂ ಬೀರೇಗೌಡ, ಸು:55ವರ್ಷ, ಮನೆ ಕೆಲಸ, ಹಿಪ್ಪೆ ಮರದ ಬೀದಿ, ಬೆಳಕವಾಡಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ತಮ್ಮ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಯಾರೋ ಇಬ್ಬರು ಸುಮಾರು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಗಂಡಸರು ಬಂದು ಚಿನ್ನ ಮತ್ತು ಬೆಳ್ಳಿ ತೊಳೆದುಕೊಡುತ್ತೇವೆಂದು ಹೇಳಿ ಪಿರ್ಯಾದಿಯವರನ್ನು ನಂಬಿಸಿ ಮೋಸಮಾಡಿ ಮಾಂಗಲ್ಯ ಸರವನ್ನು ತೆಗೆದುಕೊಂಡಿರುತ್ತಾರೆಂದು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment