ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-03-2013 ರಂದು ಒಟ್ಟು 28 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು, 2 ರಸ್ತೆ ಅಪಘಾತ ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು, 2 ವಾಹನ ಕಳವು ಪ್ರಕರಣಗಳು, 1 ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ, 1 ಕಳ್ಳತನ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 01-03-2013 ರಂದು ಪಿರ್ಯಾದಿ ಮಹೇಂದ್ರ, ಗಣಂಗೂರು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಾಯಿ ನಂಜಮ್ಮ ಕೋಂ. ಕರೀಗೌಡ , 70 ವರ್ಷ, ಗಣಂಗೂರು ಗ್ರಾಮ ರವರು ಮದ್ದೂರಿಗೆ ಮಗಳ ಮನೆಗೆ ಹೋಗಿಬರುವುದಾಗಿ ಹೋದವರು ವಾಪಸ್ಸು ಬಂದಿಲ್ಲ ಮಗಳ ಮನೆಗೂ ಹೋಗಿರುವುದಿಲ್ಲ ಸಂಬಂಧಿಕರ ಮನೆಗೂ ಹೋಗಿರುವುದಿಲ್ಲ ಅವರನ್ನು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 01-03-2013 ರಂದು ಪಿರ್ಯಾದಿ ಕರಿಯಪ್ಪ, 39 ವರ್ಷ, ಕಿರಂಗೂರು ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಅಣ್ಣನ ಮಗ ರವಿ ಬಿನ್. ಲೇಟ್. ಮಂಜುನಾಥ, 18 ವರ್ಷ, ಒಕ್ಕಲಿಗರು, ಕಿರಂಗೂರು ಗ್ರಾಮರವರು ದಿನಾಂಕ: 28-02-2013 ರಂದು ಗ್ರಾಮದಿಂದ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಅವರನ್ನು ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 01-03-2013 ರಂದು ಪಿರ್ಯಾದಿ ಜಗದೀಶ, ಗುಮ್ಮನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ 21 ವರ್ಷದ ಮಗಳು ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿ ದೇವೆಗೌಡ, ವಕ್ಕಲಿಗರು, ಕನ್ನೇಶ್ವರನಗರ, ಕೊರಟಿಕೆರೆ ದಾಖ್ಲೆ, ಸಂತೇಬಾಚಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗ ಮಂಜೇಶ ಕುಂಬಳಕಾಯಿಯನ್ನು ತುಂಬಿಕೊಂಡು ತಾನೇ ಸ್ವತಃ ಟ್ರಾಕ್ಟರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆತನ ನಿರ್ಲಕ್ಷತೆಯಿಂದ ಟ್ರಾಕ್ಟರ್ ಆಯಾತಪ್ಪಿ ಮಗುಚಿಕೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 01-03-2013 ರಂದು ಪಿರ್ಯಾದಿ ನಾಗರಾಜನಾಯಕ, ಗೋವಿಂದಗಿರಿ ತಾಂಡ, ಕೂಡ್ಲಿಗಿ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-40-2847 ರ ಆಫೇ ಆಟೋ ಚಾಲಕ, ಹೆಸರು ವಿಳಾಸ ಗೊತ್ತಿಲ್ಲ. ಇವರು ತನ್ನ ಆಟೋವನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಒಂದೇ ಸಲ ತಿರುಗಿಸಿದ ಪರಿಣಾಮ ಮುಂಭಾಗ ಕುಳಿತಿದ್ದ ರಮೇಶ ನಾಯಕ ಆಟೋದಿಂದ ಕೆಳಕ್ಕೆ ಬಿದ್ದಾಗ ಆಟೋವಿನ ಚಕ್ರವು ತಲೆಯ ಮೇಲೆ ಹರಿದು ರಕ್ತಸ್ರಾವ ಉಂಟಾಗಿ ಚಿಕಿತ್ಸೆಗಾಗಿ ಅದೇ ಆಟೋದಲ್ಲಿ ಕಿಕ್ಕೇರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮದ್ಯೆದಲ್ಲಿ ಮೃತಪಟ್ಟಿರುತ್ತಾನೆ ಮತ್ತು ಆಟೋ ಚಾಲಕ ಆಟೋವನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ಆತನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿಯವರು ಮದ್ದೂರಿನ ಐ.ಬಿ .ವೃತ್ತದ ಸೇಟು ಬಿಲ್ಡಿಂಗ್ ನ ಹಜಾರದಲ್ಲಿ ಅವರ ತಮ್ಮ ಪ್ರಕಾಶ ಬಿನ್. ಮಲ್ಲುಶೆಟ್ಟಿ, ನೇರಳೂರು ಗ್ರಾಮ, ಚನ್ನಪಟ್ಟಣ ತಾ. ರವರ ಜೊತೆ ಮಲಗಿದ್ದು ನನ್ನ ತಮ್ಮ ಮಲಗಿದ್ದ ಜಾಗದಲ್ಲೆ ಮೃತಪಟ್ಟಿರುವುದಾಗಿ ಅವನಿಗೆ ತುಂಬಾ ಹುಷಾರಿಲ್ಲದೇ ಖಾಯಿಲೆಯಿಂದ ಬಳಲಿ ಸತ್ತಿರುವಂತೆ ಕಂಡುಬಂದಿದ್ದು, ಈತನ ಸಾವಿನ ಬಗ್ಗೆ ಬೇರೆ ಯಾವುದೇ ರೀತಿಯ ಅನುಮಾನವು ಇರುವುದಿಲ್ಲ. ಆದ್ದರಿಂದ ತಾವು ಮುಂದಿನ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿ ರಾಘವೇಂದ್ರರಾವ್, 21ವರ್ಷ, ವಿದ್ಯಾಥರ್ಿ, ವಾಸ ನಂ.1012,ಬೀಡಿ ಕಾಮರ್ಿಕರ ಕಾಲೋನಿ, ಮಂಡ್ಯ ನಗರ ರವರು ನೀಡಿದ ದೂರಿನ ವಿವರವೇನೆಂದರೆ ಮನೆ ನಂ.994ರಲ್ಲಿ ಅಪರಿಚಿತ ವ್ಯಕ್ತಿ ಮನೆಯ ಒಳಗೆ ಮೃತಪಟ್ಟು ದುವರ್ಾಸನೆ ಬರುತ್ತಿದ್ದು ಮೃತನ ಮೈಮೇಲೆ ಯಾವುದೇ ಬಟ್ಟೆಗಳಿರುವುದಿಲ್ಲ ಈತ ಯಾವುದೋ ಖಾಯಿಲೆಯಿಂದ ಬಳಲಿ ಮೃತಪಟ್ಟಿರುವಂತೆ ಕಂಡುಬಂದಿರುತ್ತೆ, ಮೃತನು ಅಪರಿಚಿತನಾಗಿದ್ದು ಹೆಸರು ವಿಳಾಸ ಗೊತ್ತಿರುವುದಿಲ್ಲ ಇತ್ಯಾದಿಯಾಗಿ ಕಾನೂನಿನ ರೀತಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 80/13 ಕಲಂ. 379 ಐ.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿ ಮಹೇಂದ್ರ ಎಂ. 1 ನೇ ಕ್ರಾಸ್, ಹೊಸಹಳ್ಳಿ ಬಡಾವಣೆ, ಮದ್ದೂರುಟೌನ್ ಅವರು ಅವರ ಬಾಬ್ತು ಕೆಎ.11-ಎಲ್-896 ಹೀರೋ ಹೋಂಡಾ ಸ್ಪ್ಲೆಂಡರ್ ಗಾಡಿಯನ್ನು ಹಾಸನ ಐಯ್ಯಂಗಾರ್ ಬೇಕರಿ ಹತ್ತಿರ, ಶಿವಪುರ, ಮದ್ದೂರು ಟೌನ್ ನ ಬಳಿ ನಿಲ್ಲಿಸಿದ್ದು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 379 ಐ.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿ ಆರ್.ರೇಣುಕಾರಾಧ್ಯ ಕೇರಾಫ್ ಕೋಮಲ, ಚಾಮುಂಡೇಶ್ವರಿನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಬಾಬ್ತು ಬಾಬ್ತು ಕೆಎ-11 ಎಲ್. 1640 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 4000/- ರಿಂದ 5000/- ರೂ. ಗಳಾಗಿರುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಪ್ರಾಣಿ ದೌರ್ಜನ್ಯ ತಡೆ ಕಾಯಿದೆ ಅಧಿನಿಯಮ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 11 [1] [ಡಿ] [ಇ] ಆಫ್ ಪ್ರಿವೆನ್ಷನ್ ಆಫ್ ಕ್ರುಯಲ್ಟಿ ಟು ಅನಿಮಲ್ ಆಕ್ಟ್ ಸೆಕ್ಷನ್ 4 & 11 ಆಫ್ ಕೌ ಸ್ಲಾಫಟರ್ ಆಕ್ಟ್ & ಕ್ಯಾಟಲ್ ಪ್ರಿವೆನ್ಷನ್ ಆಕ್ಟ್ 1964.
ದಿನಾಂಕ: 01-03-2013 ರಂದು ಪಿರ್ಯಾದುದಾರ ಬಿ.ರಾಜು, ವೃತ್ತ ನಿರೀಕ್ಷಕರು, ನಾಗಮಂಗಲ ವೃತ್ತ, ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ಬೆಳ್ಳೂರಿನ ಲ್ಯಾಂಕೋ ಚೆಕ್ ಪೋಸ್ಟ್ ಬಳಿ ಹಾಸನದ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚೆಕ್ ಮಾಡುತ್ತಿರುವಾಗ ಆರೋಪಿಗಳಾದ 1] ಕರಿಗೌಡ ವಕ್ಕಲಿಗರು, ಕೆಎ-13-ಎ-6403ರ ಐಚರ್ ಗೂಡ್ಸ್ ವಾಹನದ ಮಾಲೀಕರು, ವಾಸ ದೊಡ್ಡಯರಗನಹಳ್ಳಿಗ್ರಾಮ, 2] ಕಲ್ಲಪ್ಪ 48ವರ್ಷ, ವಕ್ಕಲಿಗರು, ಕೆಎ-13-ಎ-6403ರ ಲಾರಿ ಚಾಲಕ, ವಾಸ ದೊಡ್ಡಎರಗನಾಳು ಗ್ರಾಮ ರವರುಗಳು ಈ ಲಾರಿಯಲ್ಲಿ ಅದರಲ್ಲಿ 11 ಹಸುಗಳು, 02 ಕೋಣಗಳು ಹಾಗೂ 05 ಎಮ್ಮೆಗಳಿದ್ದು, ಸದರಿ ರಾಸುಗಳನ್ನು ಅತ್ಯಂತ ಹಿಂಸಾತ್ಮಕವಾಗಿ, ಇಕ್ಕಟ್ಟಾದ ಜಾಗದೊಳಗೆ ಇಷ್ಟು ರಾಸುಗಳಿಗೆ ನಿಲ್ಲಲು ಅಥವ ಮಲಗಲು ಸಾಕಾಷ್ಟು ಸ್ಥಳವಕಾಶ ಹಾಗೂ ಬೆಳಕು ಇಲ್ಲದೆ ಅತ್ಯಂತ ಕ್ರೂರವಾಗಿ ತುಂಬಿ, ಸದರಿ ಲಾರಿಯನ್ನು ಅದರಲಿದ್ದ ರಾಸುಗಳನ್ನು ಹಾಗೂ ಲಾರಿಯ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಹಾಜರ್ ಪಡಿಸಿ ನೀಡಿದ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457- 380 ಐ.ಪಿ.ಸಿ.
ದಿನಾಂಕ: 01-03-2013 ರಂದು ಪಿರ್ಯಾದಿ ಸಲೀಮಾಜಾನ್, ಉರ್ದು ಶಾಲೆ, ಮುಖ್ಯ ಶಿಕ್ಷಕಿ, ಗುತ್ತಲು, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಅಡುಗೆ ಮನೆಯ ಬೀಗವನ್ನು ಹೊಡೆದು ಬಿಸಿ ಊಟಕ್ಕೆ ನೀಡಿದ್ದ ಸಿಲಿಂಡರ್ ಗಳನ್ನು ಮುರಿದು ಹಾಕಿ ಎರಡು ಸಿಲಿಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂದಾಜು ಬೆಲೆ 4500/- ರೂ. ಕಳವಾಗಿರುವ ಸಿಲಿಂಡರ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment