ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-03-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ರಾಬರಿ ಪ್ರಕರಣ, 3 ಅಪಹರಣ ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಬಸರಾಳು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 324-498(ಎ) ಐ.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ಹೇಮಾವತಿ ಕೋಂ. ಪ್ರಕಾಶ್ಚಾರಿ, 21ವರ್ಷ, ಹನಗನಹಳ್ಳಿ ಗ್ರಾಮ, ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಯಜಮಾನರಾದ ಪ್ರಕಾಶಚಾರಿ ಬಿನ್. ಪಾಪಚಾರಿ, ಹನಗನಹಳ್ಳಿ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು. ಈಗ್ಗೆ 3-4 ತಿಂಗಳಿಂದ ನನ್ನ ಮೇಲೆ ಅನುಮಾನ ಪಡುತ್ತಾ ನನ್ನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿರುತ್ತಾರೆ. ದಿನಾಂಕಃ- 01-03-2013 ರಂದು ನಮ್ಮ ಹನಗಹಳ್ಳಿ ಗ್ರಾಮಕ್ಕೆ ಬಂದಿದ್ದಾಗ ಸಂಜೆ 05:00 ಗಂಟೆ ವೇಳೆ ನಮ್ಮ ಯಜಮಾನರು ಕುಡಿದು ಬಂದು ನನ್ನನ್ನು ಬೈಯ್ದುಕೊಂಡು ಲೋಪರ್ ರ್ಮುಂಡೆ, ಸೂಳೆಮುಂಡೆ ಎಂದು ನಾನು ಹಾಗೂ ಅವರು ಬೀದಿ ಹತ್ತಿರವಿದ್ದಾಗ ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ತಲೆಯ ನೆತ್ತಿಯ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಿರುತ್ತೆ.
ರಾಬರಿ ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 392 ಐ.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ಲಲಿತ ಕೋಂ. ಪುಟ್ಟಸ್ವಾಮಿ, 30 ವರ್ಷ, ಮನೆ ಕೆಲಸ, ಬಣಜಿಗ ಶೆಟ್ಟರು, ಹಗಾದೂರು ಗ್ರಾಮ, ಹಲಗೂರು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಸ್ವಂತ ಕೆಲಸದ ನಿಮಿತ್ತ ಹಗಾದೂರಿನಿಂದ ಹಲಗೂರಿಗೆ ನಡೆದುಕೊಂಡು ಬರುತ್ತಿರುವಾಗ ಹಲಗೂರು-ಹಗಾದೂರು ಮದ್ಯೆ ನಡೆದುಕೊಂಡು ಬರುವಾಗ ಹಲಗೂರು ಕಡೆಯಿಂದ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ತನ್ನ ಕತ್ತಿನಲ್ಲಿದ್ದ ರೋಲ್ಗೋಲ್ಡ್ನಲ್ಲಿದ್ದ ಸುಮಾರು 6 ಗ್ರಾಂನ 10,000/- ಬೆಲೆಯ ಮಾಂಗಲ್ಯವನ್ನು ಕಿತ್ತುಕೊಂಡು ಹೋಗಿರುತ್ತಾರೆ. ನನಗೆ ಮಾದೇಗೌಢರ ಮಗ ಶಿವಣ್ಣ ರವರು ಉಪಚರಿಸಿರುತ್ತಾರೆ. ನನ್ನ ಮಾಂಗಲ್ಯವನ್ನು ಕಿತ್ತುಕೊಂಡು ಹೋದ ಅಪರಿಚಿತ ವ್ಯಕ್ತಿಗಳನ್ನು ಪತ್ತೆಮಾಡಿ ಕಾನೂನು ರೀತಿ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಲಾಗಿರುತ್ತೆ.
ಅಪಹರಣ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 366(ಎ) ಐ.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ಮಹಮದ್ ಇಸ್ಮಾಯಿಲ್ ಬಿನ್. ಲೇಟ್. ಅಮೀರ್ ಜಾನ್, ಮಂಡ್ಯ ಸಿಟಿ, ಗೂಬೆಹಳ್ಳ, 2 ನೇ ಕ್ರಾಸ್, ಗುತ್ತಲು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಒಬ್ಬಳೇ ಮಗಳು, 15 ವರ್ಷ ವಯಸ್ಸಗಿದ್ದು ಎಸ್.ಎಸ್.ಎಲ್.ಸಿ. ವಿದ್ಯಾಬ್ಯಾಸ ಮಾಡಿಕೊಂಡಿದ್ದಳು ದಿನಾಂಕ: 01-03-2013 ರಂದು ಮಧ್ಯಾಹ್ನ 02-30 ಗಂಟೆಗೆ ಶಾಲೆಗೆ ಹೋಗುತ್ತೆನೆಂದು ಮನೆಯಿಂದ ಹೊದವಳು ಶಾಲೆ ಮುಗಿಸಿ ಮನೆಗೆ ಬರಲಿಲ್ಲ. ಈ ದಿವಸ ದಿನಾಂಕ 02-03-2013 ರಂದು ಬೆಳಿಗೆ 10-15 ಎ.ಎಂ ನಲ್ಲಿ ಮೊಬೈಲ್ ನಂಬರ್ 9611012735 ನಿಂದ ನಮ್ಮ ಮನೆಯಲ್ಲಿರುವ ಮೊಬೈಲ್ ನಂಬರ್ 8884355826 ಗೆ ಪೊನ್ ಮಾಡಿ ನನ್ನ ಹೆಸರು ಪಾಪಣ್ಣ ಎಂದು ನಿನ್ನ ಮಗಳನ್ನು ನಾನು ಕರೆದುಕೊಂಡು ಬಂದಿದ್ದು ನನ್ನ ಬಳಿ ಇದ್ದಾಳೆ ನಾನು ಮದುವೆಯಾಗುತ್ತೇನೆ ಎಂದು ಹೇಳಿ ಪೋನ್ ಕಟ್ಟು ಮಾಡಿದ ನಂತರ ನಾವು ಠಾಣೆಗೆ ಬಂದು ದೂರು ನೀಡುತ್ತಿದ್ದೆವೆ ಪಾಪಣ್ಣ ಎಂಬುವನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 33/13 ಕಲಂ. 336(ಎ) ಐ.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ಬಿ.ಎಸ್.ನಂಜೇಗೌಡ ಬಿನ್. ಶ್ರೀಕಂಠೇಗೌಡ, ಬೊಳೇನಹಳ್ಳಿ ಗ್ರಾಮ, ಮೇಲುಕೋಟೆ ರವರು ನೀಡಿದ ದೂರು ಏನೆಂದರೆ ದಿನಾಂಕ ಃ01-03-13 ರಂದು ಸಂಜೆ 06-30 ಗಂಟೆಯಲ್ಲಿ ಪಿರ್ಯಾದಿಯವರ ಮಗಳು ತಮ್ಮ ತೋಟದಿಂದ ಮನೆಯ ಕಡೆಗೆ ಹೋಗುವಾಗ ಆರೋಪಿತ ಪ್ರಸನ್ನ ಬಿನ್. ಜವರೇಗೌಡ, ಬೊಳೇನಹಳ್ಳಿ ಗ್ರಾಮ ಮೇಲುಕೋಟೆ ಹೋ, ಪಾಂಡವಪುರ ತಾ. ಪಿರ್ಯಾದಿಯವರ ಮಗಳು ಅಪ್ರಾಪ್ತ ವಯಸ್ಕಳು ಎಂದು ಗೊತ್ತಿದ್ದರೂ ಸಹ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 363 ಐ.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ರವಿ ಬಿನ್. ಲೇಟ್. ಕುಮಾರ, ಕಟ್ಟೇರಿ ಹೊಸೂರು ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ - ನಾನು ಕಟ್ಟೇರಿ ಗ್ರಾಮದ ನಿವಾಸಿಯಾಗಿದ್ದು ನನ್ನ ಮಗ ಮಹದೇವ ಸುಮಾರು 13 ವಯಸ್ಸಿನ ಹುಡುಗನಾಗಿದ್ದು ದಿಃ 28/02/013 ರಂದು ಗುರುವಾರ ಬೆಳಿಗ್ಗೆ 9-30 ಗಂಟೆಗೆ ಕಟ್ಟೇರಿ ಗ್ರಾಮದ ಶಾಲೆಗೆ [ಸಕರ್ಾರಿ] ಹೋದವನು ವಾಪಸ್ಸು ಮನೆಗೆ ಬಂದಿಲ್ಲ. ಶಾಲೆಯಲ್ಲಿ ವಿಚಾರಮಾಡಿದಾಗ ಬ್ಯಾಗನ್ನು ಇಟ್ಟು ಹೋಗಿರುತ್ತಾನೆ. ಎಂದು ಮಾಸ್ಟರ್ ತಿಳಿಸಿದರು. ಶಾಲೆಗೆ ಹೋಗುವಾಗ ಸ್ಲೂಲ್ ಯೂನಿಪಾರಂ ಧರಿಸಿರುತ್ತಾನೆ. ದಯಮಾಡಿ ತಾವು ನನ್ನ ಮಗ ಮಹದೇವನನ್ನು ಪತ್ತೆಮಾಡಿ ಕೊಡಬೇಕೆಂದು ಇತ್ಯಾದಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್ ಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 08/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ಸುಕನ್ಯ, ಡಿಂಕ ಗ್ರಾಮ, ಚಿನಕುರುಳಿ ಹೋ. ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಗಂಡ ಶೇಖರಪ್ಪ ಬಿನ್. ಲೇಟ್. ರಾಮಪ್ಪ, 50 ವರ್ಷ, ಲಿಂಗಾಯಿತರು, ವ್ಯವಸಾಯ ಮತ್ತು ಕೂಲಿ ಕೆಲಸ, ವಾಸ ಡಿಂಕಾ ಗ್ರಾಮ. ಪಾಂಡವಪುರ ತಾಃಎಂಬುವರು ಆಡು & ಕುರಿಗಳಿಗೆ ಸೊಪ್ಪನ್ನು ತರಲು ತನ್ನ ಬಾಬ್ತು ಜಮೀನಿನಲ್ಲಿದ್ದ ಬಸರಿ ಮರಕ್ಕೆ ಹತ್ತಿ ಕುಡುಗೋಲಿನಿಂದ ಸೊಪ್ಪನ್ನು ಕಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಕೆ.ಆರ್.ಆಸ್ಪತ್ರಗೆ ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಖಾಸಗಿ ಆಸ್ಪತ್ರೆಗೆ ಸೇರಿಸುವ ಸಲುವಾಗಿ ತಮ್ಮ ಮನಗೆ ಕರೆದುಕೊಂಡು ಬಂದಾಗ ತನ್ನ ಮನೆಯಲ್ಲೆ ಶೇಖರಪ್ಪರವರು ಮೃತಪಟ್ಟಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 02-03-2013 ರಂದು ಪಿರ್ಯಾದಿ ದೇವರಾಜು ಬಿನ್. ಲೇ| ಚಲುವಯ್ಯ, ಮರಳಗಾಲ ಗ್ರಾಮ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ವೈಕುಂಟಯ್ಯ ಬಿನ್ ಲೇ| ಚಲುವಯ್ಯ, 45 ವರ್ಷ ರವರು ಹೊಟ್ಟೆ ನೋವು ಜಾಸ್ತಿಯಾಗಿ ಹೊಟ್ಟೆ ನೋವಿನ ಔಷಧ ಕುಡಿಯುವ ಬದಲು ಯಾವುದೋ ಕ್ರಿಮಿನಾಷಕ ಔಷದ ಕುಡಿದು ಒದ್ದಾಡುತ್ತಿದ್ದು ತಕ್ಷಣ ಶ್ರೀರಂಗಪಟ್ಟಣ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕ.ೆ ಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 02-03-2013 ರಂದು ಪಿರ್ಯಾದಿ ರಾಜು ಬಿನ್. ನಿಂಗಯ್ಯ, 45 ವರ್ಷ, ಪರಿಶಿಷ್ಟ ಜನಾಂಗ, ಅಶೋಕನಗರ, ಜಿ,ಹೆಚ್,ರೋಡ್ , ಮಂಡ್ಯ, ಮನೆ ನಂ:1273/1 ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ ಮಗ ರವಿ ಆರ್. ರವರು ದ್ವಿತೀಯ ಪಿ,ಯು,ಸಿಯನ್ನು ಪಿ,ಇ,ಎಸ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು ಸದರಿಯವರು ದಿನಾಂಕ: 28-02-2013 ರಂದು ಬೆಳಿಗ್ಗೆ 11-15 ರ ವೇಳೆಯಲ್ಲಿ ಮನೆಯಿಂದ ಹೊರಗೆ ಹೋದವರು ಇದುವರೆವಿಗು ಬಂದಿರುವುದಿಲ್ಲಾ, ನಾವುಗಳು ನಮ್ಮ ಸಂಭಂದಿಕರ ಮನೆಗಳಲ್ಲಿ ಮತ್ತು ಬೆಂಗಳೂರು,ಮೈಸೂರುಗಳಲ್ಲಿ ಹುಡುಕಿದೆವು ಆದರೂ ಸಹ ರವಿ, ಆರ್. ರವರು ಸಿಕ್ಕಿರುವುದಿಲ್ಲಾ ಆದ್ದರಿಂದ ತಾವುಗಳು ದಯಮಾಡಿ ನಮ್ಮ ಮಗನನ್ನು ಹುಡುಕಿಕೊಡಬೇಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment