Moving text

Mandya District Police

DAILY CRIME REPORT DATED : 06-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-03-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಕಳ್ಳತನ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಚುನಾವಣಾ ಮುಂಜಾಗ್ರತಾ ಪ್ರಕರಣಗಳು,  1 ರಾಬರಿ ಪ್ರಕರಣ,  4 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  9 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು  ಹಾಗು 3 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  

ಕಳ್ಳತನ ಪ್ರಕರಣಗಳು :

1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ರಾಜಪ್ಪ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಹೊಸಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ 05/03/2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಅಡುಗೆ ಮನೆಯ ಬಾಗಿಲ ಬೀಗ ಮುರಿದು  ಒಂದು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 650-00 ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 457, 380 ಐ.ಪಿ.ಸಿ.

   ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಂ ಶ್ರೀನಿವಾಸಮೂತರ್ಿ, ಮುಖ್ಯ ಶಿಕ್ಷಕರು ಕುವೆಂಪು ಶತಮಾನೋತ್ಸವ ಸರ್ಕಾರಿ  ಹಿರಿಯ ಪ್ರಾತಮಿಕ ಶಾಲೆ, ಗುತ್ತಲು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 05-03-2013 ರಂದು ಶಾಲೆಗೆ ಬೀಗ ಹಾಕಿಸಿ ಹೋಗಿದ್ದು ನಂತರ ದಿನಾಂಕ: 06-03-2013 ರಂದು ಬೆಳಿಗ್ಗೆ ಸುಮಾರು 06-00ಗೆ ಶಾಲಾ ಆವರಣದ ಕಾವಲುಗಾರ (ತಾತ್ಕಾಲಿಕ) ರವರು ನನಗೆ ದೂರವಾಣಿ ಮುಖಾಂತರ ಅಡುಗೆ ಮನೆಯ ಬೀಗವನ್ನು ಹೊಡೆದಿದ್ದಾರೆಂದು ತಿಳಿಸಿರುತ್ತಾರೆ. ತಕ್ಷಣ ಬಂದು ನೋಡಲಾಗಿ ಅಡುಗೆ ಮನೆಯಲ್ಲಿಟ್ಟಿದ ಮೂರು ಸಿಲಿಂಡರ್ ಗಳನ್ನು ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ಬೀಗ ಮುರಿದು ಕಳವು ಮಾಡಿರುವುದಾಗಿ ಕಂಡುಬಂತು ಅದರ ಅಂದಾಜು ಬೆಲೆ 4500-00 ರೂಗಳು ಆಗಿರುತ್ತದೆ ಅದ್ದರಿಂದ ನಮ್ಮ ಕಳವಾಗಿರುವ ಸಿಲಿಂಡರ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 457-380 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ. ಮಹದೇವಯ್ಯ, ಇನ್ ಚಾರ್ಜ್ ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಿಲುವಾಗಿಲು ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 05-03-2013 ರ ರಾತ್ರಿ ಯಾರೋ ಕಳ್ಳರು ಶಾಲೆಯ ಉಗ್ರಾಣ ಕೊಠಡಿಯ ಬಾಗಿಲ ಬೀಗ ಮುರಿದು ಎರಡು ಇಂಡೆನ್ ಗ್ಯಾಸ್ ಸಿಲೆಂಡರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಬೆಲೆ 1300/- ರೂ. ಅಗುತ್ತದೆ ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ಮೊ.ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಚಂದ್ರಶೆಟ್ಟಿ ಬಿನ್. ಲೇಟ್.ನಂಜಶೆಟ್ಟಿ, ಕನಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ನಾಗಶೆಟ್ಟಿ ಬಿನ್. ಲೇಟ್. ಪಾಪಶೆಟ್ಟಿ, 55 ವರ್ಷ, ಕನಗನಹಳ್ಳಿ ಗ್ರಾಮ ರವರು ಹೊಟ್ಟೆನೋವಿನ ಭಾದೆ ತಾಳಲಾರದೇ ಯಾವುದೋ ವಿಷದ ಮಾತ್ರೆ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇನ್ನಾವುದೇ ಕಾರಣ ಇರುವುದಿಲ್ಲ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಮುಂಜಾಗ್ರತಾ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಎಂ ಮೋಹನ್ ಕುಮಾರ್, ಅರಕೆರೆ ಟೌನ್ ರವರು ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


2. ಅರಕೆರೆ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಎನ್.ಎಂ. ಪೂಣಚ್ಚ, ಪಿ.ಎಸ್.ಐ. ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಶಿವಲಿಂಗಯ್ಯ ಬಿನ್. ನಿವೃತ್ತ ಕೃಷಿ ಅಧಿಕಾರಿ, ಹುಂಜನಕೆರೆ ರವರು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿಭಂಗ ಉಂಟುಮಾಡುವ ಸಂಭವವಿರುವುದರಿಂದ  ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


ರಾಬರಿ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 43/13 ಕಲಂ. 341-323-392 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಸಜೀವ್ ಕೆ, ಹಿಂದೂ ಲಾರಿ ಡ್ರೈವರ್, ಕುನ್ನೇಲ್, ಎರುಮನೆ ನಾತರ್್ ಕೊಟ್ಟಯಾಂ ಜಿಲ್ಲೆ, ಕೇರಳ ರಾಜ್ಯ. ರವರು ನೀಡಿದ ದೂರು ಏನೆಂದರೆ 20-25 ವರ್ಷ ವಯಸ್ಸಿನ 3 ಜನ ಹುಡುಗರು ಪಿರ್ಯಾದಿಯವರ ಲಾರಿಯನ್ನು ಅಡ್ಡಗಟ್ಟಿ ನಮ್ಮ ಗಾಡಿಯಲ್ಲಿ ಪೆಟ್ರೋಲ್ ಖಾಲಿಯಾಗಿದೆ ಎಂದು ಹೇಳಿ ಲಾರಿಗೆ ಹತ್ತಿ, ಪಿರ್ಯಾದಿಯವರ ಮುಖಕ್ಕೆ ಕೈಗಳಿಂದ ಹೊಡೆದು ಪಿರ್ಯಾದಿಯವರ ಹತ್ತಿರ ಇದ್ದ ಸುಮಾರು 2000/- ಸಾವಿರ ರೂ ನಗದು ಹಣ ಅವರ ಹತ್ತಿರ ಇದ್ದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಸಿಮ್ನ್ನು ಬಿಚ್ಚಿಕೊಟ್ಟು ಮತ್ತು ಕಂಡಕ್ಟರ್ ಬಳಿ ಇದ್ದ ನೋಕಿಯಾ ಕಂಪೆನಿಯ ಮೊಬೈಲನ್ನು ಕಿತ್ತುಕೊಂಡು ಅದರಲ್ಲಿದ್ದ ಸಿಮ್ನ್ನು ಬಿಚ್ಚಿಕೊಟ್ಟು ಎದುರುಗಡೆಯಿಂದ ಯಾವುದೋ ಲಾರಿ ಬರುತ್ತಿದ್ದುದನ್ನು ನೋಡಿ ಓಡಿ ಹೋಗಿರುತ್ತಾರೆ ಎಂದು ಕನ್ನಡಕ್ಕೆ ಅನುವಾದಿಸಿದ  ಹೇಳಿಕೆಯನ್ನು ಬರೆದುಕೊಂಡು ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 15[ಎ], 32[3] ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಹೆಚ್.ಎನ್.ಬಾಲು, ಪಿ.ಎಸ್.ಐ. [ಕ್ರೈಂ], ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶ್ರೀಧರ ಬಿನ್. ರಾಮಯ್ಯ, 28 ವರ್ಷ, ವ್ಯಾಪಾರ, ವಾಸ ನಂ. 1670, 3ನೇ ಕ್ರಾಸ್, ವಿದ್ಯಾನಗರ, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ಮಧ್ಯಾಹ್ನ 12-50 ಗಂಟೆಯಿಂದ 01-30 ಗಂಟೆವರೆಗೆ ಮಹಜರ್ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ನ 10 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಹಜರ್ ಸಮೇತ ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. 32 & 34 ಕೆ.ಇ ಆಕ್ಟ್.

      ದಿನಾಂಕ: 06-03-2013 ರಂದು ಪಿರ್ಯಾದಿ ಎಂ. ಮಂಜುನಾಥ್. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅಶೋಕನಗರದ ಪ್ರಶಾಂತ ಬಿನ್ ಶಿವಣ್ಣ 40 ವರ್ಷ, ಒಕ್ಕಲಿಗರು ವ್ಯವಸಾಯ, 3 ನೇ ಕ್ರಾಸ್, ನಂ 1210/1, ಅಶೋಕನಗರ, ಮಂಡ್ಯ ಸಿಟಿ. ರವರ ಮನೆಯಲ್ಲಿ ಅಕ್ರಮವಾಗಿ ಎಂದ ತಿಳಿದು ಬಂದ ಮಾಹಿತಿ ಮೇರೆಗೆ ಸಿಬ್ಬಂದಿರವರುಗಳ ಜೊತೆ ಸಕರ್ಾರಿ ಜೀಪ್ ನಂ. ಕೆ.ಎ.11. ಜಿ. 138 ರಲ್ಲಿ ಸದರಿ ಸ್ಥಳಕ್ಕೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯತುಂಬಿದ 180 ಎಂ.ಎಲ್.ನ 48  ಹೆವಾರ್ಡ್ ಚಿಯರ್ಸ್ ವಿಸ್ಕಿಯ ರಟ್ಟಿನ ಪೌಚ್ ಗಳಿರುವುದು ಕಂಡುಬಂದಿರುತ್ತೆ ಇವುಗಳ ಅಂದಾಜು ಮೌಲ್ಯ 2065/- ರೂ ಗಳಾಗುತ್ತದೆ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 59/13 ಕಲಂ. 32, 34 ಕೆಇ ಆಕ್ಟ್.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಬಿ.ಎಸ್.ಶಶಿಧರ, ಹಳೇಬೂದನೂರು ಗ್ರಾಮ ಹಾಗು ಮಧು, ಮಂಡ್ಯ ನಗರ ಸಭಾ, 9ನೇ ವಾಡರ್್ನ ಅಭ್ಯಥರ್ಿ, ಪೊಲೀಸ್ ಕಾಲೋನಿ, ಮಂಡ್ಯ. ರವರುಗಳು ವಸ್ತುಗಳನ್ನು ಇಟ್ಟುಕೊಂಡು ಬರುತ್ತಿದ್ದು ತಮ್ಮನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಆತನನ್ನು ಸುತ್ತುವರಿದು ಬ್ಯಾಗ್ ಸಮೇತ ಹಿಡಿದುಕೊಂಡು ಆತನ ವಶದಲ್ಲಿದ್ದ ಒಂದು ಪ್ಲಾಸ್ಟಿಕ್ ಬ್ಯಾಗ್ ಪರಿಶೀಲಿಸಲಾಗಿ 375 ಎಂಎಲ್ನ 5 ಸಿಗ್ನೇಚರ್ ವಿಸ್ಕಿ ಬಾಟಲ್ ಗಳಾಗಿರುತ್ತವೆ. ಇವುಗಳಲ್ಲಿ ಮದ್ಯವಿರುತ್ತದೆ. ಇವುಗಳ ಬಗ್ಗೆ ಆರೋಪಿ ಶಶಿಧರನನ್ನು ವಿಚಾರ ಮಾಡಲಾಗಿ ಆತನು ಪೊಲೀಸ್ ಕ್ವಾಟ್ರಸ್ ವಾಸಿ ಮಧು ಎಂಬುವರು ಮಂಡ್ಯ ನಗರ ಸಭಾ 9ನೇ ವಾಡರ್ಿನಿಂದ ಚುನಾವಣೆಗೆ ಸ್ಪರ್ದಿಸಿದ್ದು ಸದರಿಯವರು ತಮಗೆ ಸಂಬಂಧಿಕರಾಗಿದ್ದು ಮತದಾರರ ಮನವೊಲಿಸಿ ತಮಗೆ ಮತ ಹಾಕುವಂತೆ ಮತದಾರರಿಗೆ ಹಂಚುವಂತೆ ನೀಡಿರುತ್ತಾರೆಂದು ತಿಳಿಸಿರುತ್ತಾರೆ. ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ರಾತ್ರಿ 09-35 ರಿಂದ ರಾತ್ರಿ 10-45 ಗಂಟೆತನಕ ಮಹಜರ್ ಕ್ರಮ ಜರುಗಿಸಿ ಆಸಾಮಿ ಸಮೇತ ಮೇಲ್ಕಂಡ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುತ್ತಾರೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 15[ಎ], 32[3] ಕೆಇ ಆಕ್ಟ್ ಕೂಡ 188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್. ನ್ಯೂ ಜ್ಯೋತಿ ಬಾರ್ ರೆಸ್ಟೋರೆಂಟ್ನಲ್ಲಿ ಸಪ್ಲೈಯರ್ ಕೆಲಸ, ವಾಸ ಬಿದರಹೊಸಹಳ್ಳಿ ಗ್ರಾಮ ರವರು ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಕ್ರಮ ಜರುಗಿಸಿ ಸ್ಥಳದಲ್ಲಿ ರಟ್ಟಿನ ಬಾಕ್ಸ್ನಲ್ಲಿದ್ದ 180 ಎಂಎಲ್ ನ 7 ಓಲ್ಡ್ ತವರಿನ್ ವಿಸ್ಕಿಯಿರುವ ಟೆಟ್ರಾ ಪ್ಯಾಕ್ಗಳು, 180 ಎಂಎಲ್ ನ 3 ಹೆವಾರ್ಡ್ ಚಿಯರ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳು ಮತ್ತು ನಗದು ಹಣ 450-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ. 



ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 99/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

     ದಿನಾಂಕ: 06-03-2013 ರಂದು ಪಿರ್ಯಾದಿ ಪುಟ್ಟಲಿಂಗಯ್ಯ ಬಿನ್. ಲೇಟ್. ಸಿದ್ದೇಗೌಡ, ವ್ಯವಸಾಯ, ಹಾಗಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚೆನ್ನಮ್ಮ ವಯಸ್ಸು,  50 ವರ್ಷ, ಹಾಗಲಹಳ್ಳಿ ಗ್ರಾಮ ರವರು ದಿನಾಂಕಃ 04-03-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮನೆ ಬಿಟ್ಟು ಹೋದವರು ಈವರೆವಿಗೂ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿ ನೋಡಲಾಗಿ ಸಿಕ್ಕಿರುವುದಿಲ್ಲ. ದಯಮಾಡಿ ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 06-03-2013 ರಂದು ಪಿರ್ಯಾದಿ ಮಹಮ್ಮದ್ ಸುಹೇಲ್ ಬಿನ್. ಮೊಕ್ಬುಲ್ ಅಹಮದ್, ಸಾದತ್ ನಗರ, 2 ನೇ ಕ್ರಾಸ್, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಫಾತಿಮ ಅಯಿಷಾ ನನಗೆ ತಿಳಿಸದಯೆ ಮನೆಗೆ ಬೀಗ ಹಾಕಿಕೊಂಡು ಜೊತೆಯಲ್ಲಿ ನನ್ನ ಮಗು ಮಹಮದ್ ಯೇನ್ ನನ್ನು ಕರೆದುಕೊಂಡು ಎಲ್ಲೋ ಹೊರಟು ಹೋಗಿರುತ್ತಾಳೆ. ಕಾಣೆಯಾಗಿರುವ ನನ್ನ ಹೆಂಡತಿ ಮತ್ತು ಮಗುವನ್ನು ನಾನು ಎಲ್ಲ ಕಡೆಗಳಲ್ಲಿ ಹಾಗು ನಮ್ಮ ನೆಂಟರಿಷ್ಠರ ಮನೆಗಳಲ್ಲಿ ಹೋಗಿ ಹುಡುಕಾಡಲಾಗಿ ಆಕೆ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ಹೆಂಡತಿ ಮತ್ತು ಮಗು  ವನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

 1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ,  ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ ಕುಮಾರ್  ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಸತೀಶ, ಕಲ್ಲಹಳ್ಳಿ, ಮಂಡ್ಯ ಸಿಟಿ. 2] ಕೆ.ಬಿ.ಪ್ರಸನ್ನ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರುಗಳು ದಿನಾಂಕ: 06-03-2013 ಮದ್ಯಾಹ್ನ 11-30 ಎ.ಎಂ. ನಲ್ಲಿ ಮನೆ ನಂ. 1332/ಎ ರ ಮುಂದಿನ ರಸ್ತೆಯಲ್ಲಿ, 6ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ಇಲ್ಲಿ ಮನೆಯ ಕಾಂಪೌಂಡ್ನ ಬಳಿ ಹೋಗಿ ಕೈಯಲ್ಲಿದ್ದ ಕವರ್ ಅನ್ನು ಬಿಸಾಡಿದ್ದು ನಮಗೆ ಅನುಮಾನ ಬಂದು ತಕ್ಷಣ ಆ ವ್ಯಕ್ತಿಯನ್ನು ಪೊಲೀಸರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸತೀಶ ಬಿನ್ ಲೇಟ್ ಚಿಕ್ಕಣ್ಣ, ಎಂದು ತಿಳಿಸಿದ್ದು ಆತನು ಎಸೆದ ಕವರ್ ಅನ್ನು ನೋಡಲಾಗಿ ಅದರಲ್ಲಿ ಮತದಾರರ ಪಟ್ಟಿ ಇರುವ ಪುಸ್ತಕವಿದ್ದು ಜೊತೆಗೆ 38,530-00 ರೂ ಹಣವಿರುತ್ತದೆ. ಈ ಬಗ್ಗೆ ಸದರಿ ಆಸಾಮಿಯನ್ನು ಪ್ರಶ್ನಿಸಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಈತನು ಮತದಾರರಿಗೆ ಆಮಿಷ ಒಡ್ಡಿ ಹಣದಾಸೆ ತೋರಿ ಮತದಾರರನ್ನು ತಪ್ಪುದಾರಿಗೆ ಎಳೆಯುತ್ತಿರುವುದಾಗಿ ಕಂಡುಬಂದಿರುತ್ತದೆ ಈತನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 


4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 171[ಇ], 188 ಕೂಡ 34 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಕುಮಾರಿ ಹೆಪ್ಸಿಬಾ ರಾಣಿ, ಕೊಲರ್ಾ ಪಾಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಮತ್ತು ನಗರಸಭಾ ಚುನಾವಣಾ ಅಧಿಕಾರಿಗಳು, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಪ್ರದೀಪ್ಕುಮಾರ್ ರವರು ಮಹದೇವಮ್ಮ ಕೋಂ. ಸಂಪತ್ ಎಂಬುವರ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಲಾಗಿ ಮಹದೇವಮ್ಮ ರವರು ಆರೋಪಿಗಳಾದ ಅರುಣ್ಕುಮಾರ್ ಮತ್ತು ಶೀನಾ ಹಾಗೂ ಇನ್ನೊಬ್ಬ ವ್ಯಕ್ತಿ ಅವರ ಮನೆಗೆ ಬಂದು 4000-00 ರೂಪಾಯಿ ಹಣವನ್ನು ಕೊಟ್ಟು ತಮಗೆ ಮತ ಚಲಾಯಿಸುವಂತೆ ಕೋರಿದ್ದು ತಾವು ಹಣವನ್ನು ಬೇಡವೆಂದರೂ ಸಹ ತಮ್ಮ ಟಿ.ವಿ. ಗುರುತಿನ ಚಿಹ್ನೆಗೆ ಮತ ಚಲಾಯಿಸುವಂತೆ ಕೋರಿರುತ್ತಾರೆಂದು ಸದರಿ ಮಹದೇವಮ್ಮ ರವರು ನೀಡಿದ ಹೇಳಿಕೆಯನ್ನು ಫಿರ್ಯಾದಿಯವರು ವೀಡಿಯೋ ಮೂಲಕ ದಾಖಲಿಸಿಕೊಂಡಿದ್ದು ಸ್ಥಳದಲ್ಲೇ 4000-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುವ ಮೇಲ್ಕಂಡ ಆರೋಪಿತರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಮದ್ದೂರು ಪೊಲೀಸ್ ಠಾಣೆ ಮೊ.ನಂ. 100/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರವೀಣ ಬಿನ್ ವೆಂಕಟೇಶ, 28 ವರ್ಷ, ಒಕ್ಕಲಿಗರು, ವ್ಯವಸಾಯ, ಹಳೇ ಒಕ್ಕಲಿಗರ ಬೀದಿ. ಮದ್ದೂರು ಟೌನ್ ರವರು ರಾತ್ರಿ 09-00 ಗಂಟೆ ಸಮಯದಲ್ಲಿ ವಾರ್ಡ ನಂ-16 ರ ಮೇಗಳ ಬೀದಿಯಲ್ಲಿ ಪುರಸಭಾ  ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದ್ದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


6. ಮದ್ದೂರು ಪೊಲೀಸ್ ಠಾಣೆ ಮೊ.ನಂ. 101/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಶಂಕರ್ ಕೇಬಲ್ ಆಪರೇಟರ್, ಮೇಗಳ ಬೀದಿ ರವರು ರಾತ್ರಿ 09-45 ಗಂಟೆ ಸಮಯದಲ್ಲಿ ವಿವೇಕಾನಂದನಗರ, 1ನೇ ಕ್ರಾಸ್ ನಲ್ಲಿ,  ಪುರಸಭಾ ಚುನಾವಣೆ ಸಂಬಂಧವಾಗಿ ಮತದಾರರಿಗೆ ಹಣವನ್ನು ಹಂಚುತ್ತಿದ್ದುದರ ಮೇರೆಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


7. ಮದ್ದೂರು ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 171 (ಇ) ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಹದೇವು  ಕೂಲಿ ಕೆಲಸ, ಬೆಸ್ತರ ಬೀದಿ, 3ನೇ ಕ್ರಾಸ್, ಮದ್ದೂರು ಟೌನ್ ರವರು ರಾತ್ರಿ 10-30 ಗಂಟೆ ಸಮಯದಲ್ಲಿ ವಾರ್ಡ ನಂ-7 ರಲ್ಲಿ ಪಕ್ಷೇತರ ಅಭ್ಯರ್ಥಿ ಶೇಖರ್ ರವರಿಗೆ ಪುರಸಭಾ ಚುನಾವಣೆ ಸಂಬಂಧವಾಗಿ ಮತ ನೀಡುವ ಸಲುವಾಗಿ ಹಣ ಪಡೆದಿರುವ ಬಗ್ಗೆ ಸ್ವಯಂ ದೂರು ದಾಖಲು ಮಾಡಿರುತ್ತೆ. 


8. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಶ್ರೀಧರ್ ಬಿ.ಎಸ್. ಆರಕ್ಷಕ ಉಪ-ನಿರೀಕ್ಷಕರು, ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವುಕುಮಾರ್ ಅಡ್ಡೆನಿಂಗಯ್ಯನಕೇರಿ, ಗಂಗಾಬೀದಿ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 06-03-2013 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ಮಳವಳ್ಳಿ ಪುರ ಚುನಾವಣೆ ಸಂಬಂಧವಾಗಿ ಮೋಬೈಲ್ ನಂ 07 ರಲ್ಲಿ ಪಿರ್ಯಾದಿಯವರು ಗಸ್ತಿನಲ್ಲಿದ್ದಾಗ ಅರೋಪಿಯು 22 ನೇ ವಾರ್ಡನಲ್ಲಿ ಜೆ.ಡಿ.ಎಸ್.ಪಕ್ಷದಿಂದ ಸ್ವಧರ್ಿಸಿರುವ ದೊಡ್ಡಯ್ಯರವರ ಪರವಾಗಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 2900-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  


9. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 171[ಇ]-188 ಐ.ಪಿ.ಸಿ.

ದಿನಾಂಕ: 06-03-2013 ರಂದು ಪಿರ್ಯಾದಿ ಪಿ.ರವಿ. ಎ.ಎಸ್.ಐ. ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕಃ 06-03-2013 ರಂದು ಈ ಕೇಸಿನ ಪಿರ್ಯಾದಿಯವರು ಚುನಾವಣೆಯ ಸಂಬಂದ ಮೊಬೈಲ್ನಲ್ಲಿ ಪಿರ್ಯಾದಿಯವರು ಸಿಬ್ಬಂದಿಯವರೊಡನೆ ಗಸ್ತಿನಲ್ಲಿದ್ದು, ವಾರ್ಡ್  ನಂ. 8 ರಲ್ಲಿ ಜೆಡಿಎಸ್ ಅಭ್ಯರ್ಥಿಯ ಪರ ಮತಯಾಚಿಸಿ ಓಟು ಹಾಕುವಂತೆ ಚುನಾವಣೆ ಚೀಟಿಗಳು ಹಾಗೂ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹಂಚಿಕೆ ಮಾಡುತ್ತಿದ್ದವನ್ನು ಹಿಡಿದು ವಿಚಾರ ಮಾಡಲಾಗಿ ಆತನ ಕೈಯಲ್ಲಿ 800-00 ರೂ ನಗದು ಹಣ ಇರುತ್ತೆ, ಈತನ ಮೇಲೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment