Moving text

Mandya District Police

DAILY CRIME REPORT DATED : 07-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-03-2013 ರಂದು ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕೊಲೆ ಪ್ರಕರಣ,  1 ಸುಲಿಗೆ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  7 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  4 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಕೊಲೆ ಪ್ರಕರಣ :. 

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 448-302 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಜಯಲಕ್ಷ್ಮೀ ಕೋಂ. ಲೇ|| ಬಸವೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ನಿಂಗೇಗೌಡ, ಅಣ್ಣೇಚಾಕನಹಳ್ಳಿ ಗ್ರಾಮ ರವರು ಪಿಯರ್ಾದಿಯವರ ಮನೆಯೊಳಕ್ಕೆ ಅಕ್ರಮವಾಗಿ ನುಗ್ಗಿ ಅವನ ಹೆಂಡತಿಯ ಮೇಲೆ ಶೀಲವನ್ನು ಶಂಕಿಸಿ ಮಚ್ಚಿನಿಂದ ಹೊಡೆದು ಸಾಯಿಸಿ ಮತ್ತು ಅವಳಿಗೆ ಪವಿತ್ರಳು ಸಹಾಯ ಮಾಡುತ್ತಿರುತ್ತಾಳೆಂದು ದುರುದ್ದೇಶದಿಂದ ಇಬ್ಬರಿಗೂ ಕುತ್ತಿಗೆಗೆ, ಕೈ ಕಾಲುಗಳಿಗೆ ಹೊಡೆದು ಕೊಲೆ ಮಾಡಿರುತ್ತಾನೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಸುಲಿಗೆ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 384 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಸ್.ಎಂ. ವಿಜಯಲಕ್ಷ್ಮಿ ಕೋಂ. ಕೆಎಸ್.ಮಲ್ಲೇಗೌಡ, 48ವರ್ಷ, ಒಕ್ಕಲಿಗರು, ಕೊಪ್ಪ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರು ವಾಕಿಂಗ್ಗೆ ಹೋಗಿ ವಾಪಸ್ಸು ಬರುತ್ತಿದ್ದಾಗ 3 ಜನ ಹುಡುಗರು ಕೆಂಪು ಬಣ್ಣದ ಸಿಡಿ-100 ಸ್ಕೂಟರ್ನಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದರು. ನಾನು ಹೆದರಿಕೊಂಡು   ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅವರ ಕೈಗೆ ಕೊಟ್ಟೆ. ಮೇಲ್ಕಂಡ ಹುಡುಗರುಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ಒಡವೆಯನ್ನು ನನಗೆ ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

       ದಿನಾಂಕ: 07-03-2013 ರಂದು ಪಿರ್ಯಾದಿ ಶಾರದಮ್ಮ ಕೋಂ. ಬೋರೇಗೌಡ, 35ವರ್ಷ, ಒಕ್ಕಲಿಗರು, ಮನೆಕೆಲಸ, ಕೌಡ್ಲೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿವ್ಯ, 17ವರ್ಷ, ಮನೆಕೆಲಸ, ಒಕ್ಕಲಿಗರು,  ಕೌಡ್ಲೆ ಗ್ರಾಮ ರವರು ದಿನಾಂಕ: 04-03-2013 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ವಾಪಸ್ ಬರಲಿಲ್ಲ. ನಾನು ಎಲ್ಲಾ ಕಡೆ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 498[ಎ]-504-506 ಕೂಡ 34 ಐ.ಪಿ.ಸಿ.

      ದಿನಾಂಕ: 07-03-2013 ರಂದು ಪಿರ್ಯಾದಿ ಜಯ ಶ್ರೀ. ಕೋಂ. ರಮೇಶ, ಪೇಟೆ ಬೀದಿ, ಪಾಂಡವಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ನಮ್ಮ ಯಜಮಾನರಾದ ರಮೇಶರವರು ಊರಿಗೆ ಬಂದಾಗಲೆಲ್ಲಾ ನನಗೆ ಹೊಡೆದು ಬಡಿದು ಹಿಂಸೆ ಕಿರುಕುಳ ನೀಡುತ್ತಿದ್ದು, ಯಾವುದೇ ಸಂಭಳ ವಗೈರೆಯನ್ನು ನನಗೆ ಕೊಡುವುದಿಲ್ಲ, ಹಾಗು ಯಾವುದೇ ಸಾಮಾನನ್ನು ತಂದು ಕೊಡುವುದಿಲ್ಲ, ಹಾಗು ನನ್ನ ಮಗುವನ್ನು ಸರಿಯಾಗಿ ಮಾತನಾಡಿಸುವುದಿಲ್ಲ, ಸೂಳೆ ಮುಂಡೆ ನೀನು ಮತ್ತು ಮಗು ಇನ್ನು ಮನೆ ಬಿಟ್ಟು ಹೋಗಿಲ್ಲವಾ ಎಂದು ಬೈಯ್ದು, ಕೈಗಳಿಂದ ನನ್ನ ಬೆನ್ನಿನ ಮೇಲೆ ಹೊಡೆದರು, ಹಾಗು ಈ ದಿವಸ ನಿನ್ನನು ಹಾಗು ಮಗುವನ್ನು ಕೊಲೆ ಮಾಡಿ ನಾನು ಚೈಲಿಗೆ ಹೋಗುತ್ತೇನೆ ಎಂದುನನಗೆ ಹೊಡೆದು ಹಿಂಸೆ ನೀಡಿರುವ ನನ್ನ ಗಂಡ ರಮೇಶ್ ಹಾಗು ಅವರ ಅಕ್ಕಂದಿರಾದ ಮಹಾಲಕ್ಷ್ಮಿ ಮತ್ತು ಕಲಾವತಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಕ್ರಮ ಮದ್ಯ ಮಾರಾಟ ಪ್ರಕರಣಗಳು : 

1. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 69/13 ಕಲಂ. 171 (ಎಫ್) 188 ಕೂಡ 34 ಐ.ಪಿ.ಸಿ. ಮತ್ತು 32-34 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ರಂಗಸ್ವಾಮಿ ಪಿ.ಎಸ್.ಐ. ಟೌನ್ ಪೊಲೀಸ್ ಠಾಣೆ ಕೆ.ಆರ್. ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1)ಕೆ,ಮಂಜುನಾಥ್ ಕೋಮನಹಳ್ಳಿ 2)ಕುಮಾರ ಬ್ಯಾಲದಕೆರೆ ಕೆ,ಆರ್,ಪೇಟೆ ತಾ||  ಕೆ,ಆರ್,ಪೇಟೆ ರವರುಗಳು ಪುರಸಭೆ ಚುನಾವಣೆಯ ಸಂಬಂಧ ಯಾವುದೆ ಮದ್ಯ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಹ ಆಕ್ರಮವಾಗಿ ಮೈತ್ರಿ ಡಾಬಾದಲ್ಲಿ 23 ಬಾಟಲ್ ವಿವಿಧ ರೀತಿಯ ಮದ್ಯವನ್ನು ಶೇಖರಣೆ ಮಾಡಿ ಚುನಾವಣೆಯ ಸಂಬಂಧ ಹಂಚಲು ಶೇಖರಿಸಿಟ್ಟಿರುತ್ತಾರೆ ಇವುಗಳ ಒಟ್ಟು ಮೌಲ್ಯ 11.200/- ರೂ. ಗಳಾಗಿರುತ್ತೆ ಆರೋಪಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

        ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆರ್,ಎಂ ರಮೇಶ ಒಕ್ಕಲಿಗರು, ಸಮೃದ್ದಿ ಪ್ಯಾನ್ಸಿ ಮಾಲೀಕರು,  ವ್ಯಾಪಾರ ವಾಸ ನಂ ಡಿ 3/7 ಅಸಿಟೇಟ್ ಟೌನ್, ಮಂಡ್ಯ ರವರು ಪ್ಲಾಸ್ಟಿಕ್ ಕವರ್ನಲ್ಲಿ ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 02 ಮದ್ಯತುಂಬಿದ 180 ಎಂ.ಎಲ್. ಮತ್ತು 01 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 150 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 120-00 ರೂಗಳಾಗುತ್ತದೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 71/13 ಕಲಂ 32-34 ಕೆ.ಇ. ಆಕ್ಟ್. ಮತ್ತು 188 ಐ.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಎಂ ಮಂಜುನಾಥ. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟಪ್ಪ ಬಿನ್ ಡಿ. ವೆಂಕಟಪ್ಪ, 38 ವರ್ಷ, ಈಡಿಗ ಜನಾಂಗ, ಆಟೋ ಚಾಲಕ, ವಾಸ 10 ನೇ ಕ್ರಾಸ್, ಬೋವಿ ಕಾಲೋನಿ, ಮಂಡ್ಯ ನಗರ ರವರು ಮಂಡ್ಯ ಸಿಟಿ ಉದಯಗಿರಿ ಸರ್ಕಲ್ ನಲ್ಲಿರುವ ವಿಬಿ ಅಯ್ಯಂಗಾರ್ ಬೇಕರಿ ಮುಂದೆ ಒಬ್ಬ ಅಸಾಮಿಯು ಪ್ಲಾಸ್ಟಿಕ್ ಕವರ್ ನಲ್ಲಿ, ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಅವುಗಳನ್ನು ಹೆಚ್ಚಿನ ಬೆಲೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾನೆ ಅಂತಲು ಹಾಗು ಈ ದಿನ ಮಂಡ್ಯ ನಗರ ಸಭೆ ಚುನಾವಣೆ ಇದ್ದು ಈ ಸಂಬಂದವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮದ್ಯ ಮಾರಾಟವನ್ನು ನಿಷೇದಿಸಿದ್ದು ಅದನ್ನು ಉಲ್ಲಂಘಿಸಿ ಮೇಲ್ಕಂಡ ಆಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮವಾಗಿ 05 ಒಲ್ಡ್ ಅಡ್ಮಿರಲ್ ಪೌಚ್ ಪ್ಯಾಕೇಟ್ಗಳನ್ನು ಸಂಗ್ರಹಿಸಿಟ್ಟುಕೊಂಡು ಅವುಗಳಲ್ಲಿ 03 ಮದ್ಯತುಂಬಿದ 180 ಎಂ.ಎಲ್. ಮತ್ತು 02 ಅರ್ಧ ಮದ್ಯ ತುಂಬಿದ 180 ಎಂಎಲ್ ನ ಪೌಚ್ ಪ್ಯಾಕೇಟ್ಗಳು  ಕಂಡುಬಂತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುತ್ತೆ ಮದ್ಯದ ಬೆಲೆ ಸುಮಾರು 250 ರೂ ಹಾಗು ಮದ್ಯ ಮಾರಾಟ ಮಾಡಿದ್ದ ರೂ 135-00 ರೂಗಳಾಗುತ್ತದೆ.      ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


4. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಗೋಪಾಲ ಬಿನ್. ರಾಮೇಗೌಡ 35 ವರ್ಷ ವಕ್ಕಲಿಗರು ಜಕ್ಕನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ 30 ರಾಜಾ ವಿಸ್ಕಿ ಬಾಟೆಲ್ಗಳು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಬೆಲೆ ಸುಮಾರು 1000/- ಗಳಾಗಿರುತ್ತೆ ಆರೋಪಿತನು ಓಡಿಹೋಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


5. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ. ಆಕ್ಟ್. 

ದಿನಾಂಕ: 07-03-2013 ರಂದು ಪಿರ್ಯಾದಿ ಧನರಾಜ್ ಪಿಎಸ್.ಐ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಯೋಗೇಶ, ಹಳಿಯೂರು ಗ್ರಾಮ ಕೆ.ಆರ್.ಪೇಟೆ ತಾಲ್ಲೋಕು ರವರು ಅವರ ಆಂಗಡಿಯಲ್ಲಿ ಅಕ್ರಮವಾಗಿ ಮಧ್ಯದ ಬಾಟಲುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿ ಮತ್ತು ಸಿಬ್ಬಂದಿಯವರು ಅಂಗಡಿಯ ಮೇಲೆ ದಾಳಿಮಾಡಿ 180 ಎಂ.ಎಲ್ ನ ಓಲ್ಡ್ ಟವರಿನ್ ವಿಸ್ಕಿ 20 ಪಾಕೆಟ್ಗಳು . 90 ಎಂ.ಎಲ್ ನ ಎಂ.ಸಿ ಮ್ಯಾಕ್ಡೊವೆಲ್ ವಿಸ್ಕಿ 6 ಬಾಟೆಲ್ಗಳನ್ನು ಪಂಚಾಯ್ತಿದಾರರ ಸಮಕ್ಷಮ ದಾಳಿಮಾಡಿ ವಶಪಡಿಸಿಕೊಂಡಿದ್ದು   ಒಟ್ಟು ಬೆಲೆ ಸುಮಾರು 1200-00 ` ಗಳಾಗಿರುತ್ತೆ  ಆರೋಪಿತನು ಓಡಿಹೋಗಿರುತ್ತಾನೆ ಎಂದು ದೂರು ದಖಲಿಸಲಾಗಿದೆ. 


6. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ  ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆಂಪೇಗೌಡ ಬಿನ್. ಲೇಟ್. ಕೆಂಪೇಗೌಡ, ಬಿ.ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ; ತಾಃ ರವರ ಅಂಗಡಿಯ ಮೇಲೆ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ ಅಂದಾಜು ಬೆಲೆ 185 ರೂ.ನ 180 ಎಂ.ಎಲ್.ನ 05 ಕ್ರೌನ್ ಪೈನ್ ವಿಸ್ಕಿ ಪ್ಯಾಕೇಟ್ಗಳನ್ನು ಮತ್ತು 5 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


7. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 15(ಎ) 32 ಕ್ಲಾಸ್ 3 ಕೆ.ಇ.ಆಕ್ಟ್.

ದಿನಾಂಕ: 07-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಕುಮಾರ್ ಬಿನ್. ಸಿದ್ದಯ್ಯ. ಬಿ. ಹಟ್ನ ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಃ ರವರ ಅಂಗಡಿಯ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 176 ರೂ.ನ 180 ಎಂ.ಎಲ್.ನ 04 ಹೈವಾಡ್ಸ್ ಚಿಯರ್ಸ್ ವಿಸ್ಕಿ ಹೆಸರಿನ ಪ್ಯಾಕೇಟ್ ಗಳನ್ನು  ಮತ್ತು 4 ಖಾಲಿ ಪ್ಲಾಸ್ಟೀಕ್ ಗ್ಲಾಸ್ಗಳನ್ನು ಮತ್ತು ಒಂದು ಬ್ಯಾಗನ್ನು  ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಯು.ಡಿ.ಆರ್. ಪ್ರಕರಣ :

ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 07-03-2013 ರಂದು ಪಿರ್ಯಾದಿ ಮರೀಸ್ವಾಮಿ ಕಾವೇರಿಪುರ ಗ್ರಾಮ, ತಲಕಾಡು ಹೋಬಳಿ, ಟಿ.ನರಸೀಪುರ, ತಾ|| ಮೈಸೂರು ಜಿಲ್ಲೆ ರವರು ನೀಡಿದ ದೂರು ಏನೆಂದರೆ ನನ್ನ ಅಳಿಯ ಮಂಜು(ಜೋಗಪ್ಪ) 29 ವರ್ಷ, ಉಪ್ಪರಶೆಟ್ಟರು, ವಾಸ. ನಂ. 146, 8 ನೇ ಕ್ರಾಸ್. ಸ್ವರ್ಣಸಂದ್ರ. ಮಂಡ್ಯ ಸಿಟಿ ರವರು ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದರು, ದಿನಾಂಕ: 06-03-2013  ರಾತ್ರಿ ವೇಳೆಯಲ್ಲಿ ಪುನಹ ಕುಡಿದು ಬಂದಿದ್ದರು ಅವನನ್ನು ಹೆದರಿಸುವ ಸಲುವಾಗಿ ತನ್ನ ಮಗಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಆತ್ಮಹತ್ಯ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಸಲುವಾಗಿ ಬೆಂಕಿ ಹಚ್ಚಿಕೊಂಡಿದ್ದು ತಕ್ಷಣ ಈ ವಿಚಾರವನ್ನು ಪೋನ್ ಮೂಲಕ ತಿಳಿಸಿದರು. ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿದ್ದು ಪಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ನನ್ನ ಅಕ್ಕನ ಸಾವಿನ ಬಗ್ಗೆ ಯಾವುದೆ ಅನುಮಾನ ವಿರುವುದಿಲ್ಲ ಬಂದು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 ಚುನಾವಣ ಅಕ್ರಮ ಹಣ ಹಂಚಿಕೆ ಪ್ರಕರಣಗಳು :

1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ ನಲ್ಲಿದ್ದಾಗ,   ಸಫ್ಧರಿಯಾಬಾದ ಮೊಹಲ್ಲಾದಲ್ಲಿ  ಆರೋಪಿ ಮಂಜು ಎಂ. ಬಿನ್. ಮಾಯಿಗೌಡ, 28 ವರ್ಷ ರವರು ನಗದು ಹಣ 50,000/- ರೂಪಾಯಿಗಳು,  ಮಂಡ್ಯ ನಗರಸಭಾ ಚುನಾವಣೆಯ 26ನೇ ವಾಡರ್ಿನ ಬಣ್ಣದ 15, ಮತ್ತು ಕಪ್ಪು & ಬಿಳುಪಿನ 15 ಕರಪತ್ರಗಳನ್ನು ಇಟ್ಟುಕೊಂಡಿರುವುದು ಕಂಡುಬಂದ್ದರ ಮೇರೆಗೆ ಇತ್ಯಾದಿಯಾಗಿ ಇಂಗ್ಲೀಷ್ನಲ್ಲಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 171 ಎಫ್) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಅಹೋಬಲಯ್ಯ, ತಹಶೀಲ್ದಾರ್, ಕೆ.ಆರ್. ಪೇಟೆ ತಾ. ರವರು ನೀಡಿದ ದೂರು ಏನೆಂದರೆ ಆರೋಪಿ ಕೆ,ಬಿ ರವಿಕುಮಾರ್  ಕೆಆರ್ ಪೇಟೆ ಟೌನ್ ರವರ ಬಳಿ 15.000-00 ರೂಗಳು ಇರುತ್ತದೆ. ಇವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರಿಂದ ಹಾಗು ತಮ್ಮ ಬಳಿ ಇದ್ದ ಹಣವನ್ನು ಮತದಾರರಿಗೆ ಹಂಚಬಹುದಾದ ಸಾದ್ಯತೆ ಇದ್ದುದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲು ನೀಡಿದ ಅಜರ್ಿ ಮೇರೆಗೆ ಸದರಿ ಅಜರ್ಿಯ ಸಾರಾಂಶವು  ಅಸಂಜ್ಞೆಯ ಪ್ರಕರಣವಾದ ಕಾರಣ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿರುತ್ತೆ.


3. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 171 (ಇ) 188 ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಕೊಲರ್ಾಪಾಟಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು. ಮಂಡ್ಯ ಜಿಲ್ಲೆ. ಮಂಡ್ಯ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 07-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ 27 ನೇ ವಾರ್ಡ್, ತಿರುಮಲ ಕೃಪ ಮನೆಯ ಹತ್ತಿರ, ವಿ.ವಿ ಲೇಔಟ್, ನಲ್ಲಿ ಆರೋಪಿಗಳಾದ 1) ಶ್ರೀಮತಿ ಜಿ.ಕೆ. ರೋಹಿಣಿ.                ಶ್ರೀ ರಾಜಕುಮಾರ್,  ತಿರುಮಲ ಕೃಪ ಮನೆ, ವಿ.ವಿ. ಲೇಔಟ್, ಮಂಡ್ಯ ಸಿಟಿ ಹಾಗೂ ಇತರೆಯವರು  3 ಪಾತ್ರೆಗಳು               2 ಬಕೇಟ್ ಗಳು,  3 ಮುಚ್ಚಳ, 1 ಟೇಬಲ್, 2 ಸ್ಪೂನ್ಗಳು, ಕರಪತ್ರಗಳು, 3 ವಾಟರ್ ಕ್ಯಾನ್ಗಳನ್ನು ಇಟ್ಟುಕೊಂಡು ಊಟ ನೀಡಿ, ಕಾಂಗ್ರೇಸ್ ಅಭ್ಯಥರ್ಿಗೆ ಮತ ನೀಡುವಂತೆ ತಿಳಿಸುತ್ತಿದ್ದುದಾಗಿ ಇತ್ಯಾದಿಯಾಗಿ ಇಂಗ್ಲೀಷ್ ನಲ್ಲಿ  ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


4. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. 171 (ಇ) ಐ.ಪಿ.ಸಿ. 

ದಿನಾಂಕ: 07-03-2013 ರಂದು ಪಿರ್ಯಾದಿ ಹೆಪ್ಸಿಬಾ ರಾಣಿ, ಪ್ರೊಭೇಷನರಿ ಐ.ಎ.ಎಸ್. ಅಧಿಕಾರಿಯವರು ಹಾಗೂ ನಗರಸಭಾ ಚುನಾವಣಾ ಅಧಿಕಾರಿಗಳು ರವರು ದಿನಾಂಕ 06-03-2013 ರಂದು ಮಂಡ್ಯ ನಗರ ಸಭೆ ಚುನಾವಣೆ ಸಂಬಂದ ರೌಂಡ್ಸ್ನಲ್ಲಿದ್ದಾಗ ಎಸ್ ಡಿ ಜಯರಾಮ್ ಬಡಾವಣೆಯಲ್ಲಿ ಆರೋಪಿ ಯಲ್ಲಪ್ಪ ಬಿನ್. ಪುಟ್ಟಸ್ವಾಮಿ, 22 ವರ್ಷ, ಎಸ್.ಡಿ ಜಯರಾಮ್ ಲೇಔಟ್, ಮಂಡ್ಯ ನಗರ ರವರು 35 ವಾರ್ಡ್ ನಲ್ಲಿ  ಸ್ಪರ್ದಿಸಿರುವ ಬ್ಯಾಲೆಟ್ ಪೇಪರ್ ನಲ್ಲಿ  ಇರುವ 1 ನೇ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಿಗೆ ಜನತಾ ಮೆಟಲ್ ಮತ್ತು ಅಪ್ಲೆಯನ್ಸ್ ಬಜಾರ್ ಸ್ಟ್ರೀಟ್ ಅಂತ ಚೀಟಿಯನ್ನು ಅಂಚು ತಿದ್ದುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಅವರ ಮೇಲೆ ಕೇಸು ದಾಖಲಿಸಿರುತ್ತೆ. 

No comments:

Post a Comment