Moving text

Mandya District Police

DAILY CRIME REPORT DATED : 08-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-03-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ,  4 ಯು.ಡಿ.ಆರ್. ಪ್ರಕರಣಗಳು,  1 ಅಪಹರಣ ಪ್ರಕರಣ,  2 ಕಳ್ಳತನ ಪ್ರಕರಣಗಳು,  2 ಚುನಾವಣಾ ಮುಂಜಾಗ್ರತಾ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ,  1 ಅಬ್ಕಾರಿ ಕಾಯಿದೆ ಪ್ರಕರಣ ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ವಾಹನ ಕಳವು ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 379 ಐ.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ಕೃಷ್ಣೇಗೌಡ. ಸಿಪಿಸಿ-678, ಕೆ.ಆರ್.ಪೇಟೆ ಟೌನ್, ಪೊಲೀಸ್ ಠಾಣೆ ದಿನಾಂಕ: 11-01-2013 ರ ಹಿಂದಿನ ದಿನಗಳಲ್ಲಿ ವಿ.ಸಿ.ಕಾಲುವೆಯ ಬಳಿ, ಪಾಂಡವಪುರ ಟೌನ್ ನಲ್ಲಿ ಆರೋಪಿಗಳಾದ 1] ಸಲೀಂ @ ಸಲ್ಮಾನ್ ಬಿನ್ ಲೇ|| ಶೇಖ್ ಅಹಮ್ಮದ್,  2] ರವಿ ಬಿನ್ ಲೇ|| ಹನುಮಂತಪ್ಪ  ಇಬ್ಬರೂ ಹಾಲಿ ವಾಸ ಸಂತೆಮಾಳ, ಕೆ.ಆರ್.ಪೇಟೆ ಟೌನ್ 3] ವಜ್ರಮುನಿ @ ವಜ್ರ ಬಿನ್ ವೆಂಕಟರಾಜು, ಸಂತೆಮಾಳ, ರವರುಗಳನ್ನು ಪಂಪ್ ಸೆಟ್ ಮೊಟಾರ್ ಮಾಲಿನ ಸಮೇತ ದಸ್ತಗಿರಿ ಮಾಡಿದ್ದು, ಸದರಿ ಕೃತ್ಯ ನಡೆದ ಸ್ಥಳವು ಪಾಂಡವಪುರ ಪೊಲೀಸ್ ಠಾಣಾ ವಾಪ್ತಿಯ ಪಾಂಡವಪುರ ಟೌನ್ ವಿಶ್ವೇಶ್ವರಯ್ಯ (ವಿ.ಸಿ.) ಕಾಲುವೆಯಲ್ಲಿ ನಡೆದಿದ್ದು ಸದರಿ ಸ್ಥಳವು ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಸದರಿ ಕೇಸಿನ ಕಡತವನ್ನು ಮಾಲಿನ ಸಮೇತ ಮುಂದಿನ ಕ್ರಮಕ್ಕಾಗಿ ವಗರ್ಾವಣೆ ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಯು.ಡಿ.ಆರ್. ಪ್ರಕರಣಗಳು : 

1. ಕೆ.ಎಂ ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ.04/2013 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ರತ್ನಮ್ಮ ಕೋಂ. ಶೇಖರ ಹೆಚ್.ಹೊಸಹಳ್ಳಿ ಗ್ರಾಮ ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರು ಏನೆಂದರೆ ಅವರ ಗಂಡ ಶೇಖರ ಬಿನ್.ಲೇಟ್. ಸುಬ್ಬಣ್ಣ, 46ವರ್ಷ, ಲಿಂಗಾಯ್ತರು, ಹೋಟೆಲ್ ಕೆಲಸ, ಹೆಚ್.ಹೊಸಹಳ್ಳಿ ಗ್ರಾಮ ರವರಿಗೆ ಆಕಸ್ಮಿಕವಾಗಿ ನಾಗರಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಕನಕಪುರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯೆ ಮೃತಪಟ್ಟಿದ್ದು ನಂತರ ಶವವನ್ನು ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ತಂದು ಇರಿಸಿ ನಂತರ ಠಾಣೆಗೆ ಬಂದು ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿಯು ನೀಡಿದ ದೂರು ಏನೆಂದರೆ ಅವರ ತಂದೆ ಮಣಿಕಂಠ ಬಿನ್. ನಟರಾಜು, ಬೊಮ್ಮೇನಹಳ್ಳಿ ಗ್ರಾಮ ರವರು ಅವರ ಮನೆಯ ಹಿಂಭಾಗದಲ್ಲಿ ಮಾಡಿರುವ ಸಮಾಧಿಯ ಹತ್ತಿರ ಸೀಬೆ ಗಿಡಕ್ಕೆ ತನ್ನ ಲುಂಗಿಯಿಂದ ತಾನೇ ತಾನಾಗಿ ನೇಣು ಹಾಕಿಕೊಂಡು ಒದ್ದಾಡುತ್ತಿದ್ದು ಪಿರ್ಯಾದಿ ಮತ್ತು ಇತರರು ಹೋಗಿ ಕೆ.ಆರ್.ಪೇಟೆ ಸರ್ಕಾರಿ  ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 10-30 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ತೀರಿಕೊಂಡಿರುತ್ತಾರೆ ಮುಂದಿನ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3.ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 08/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ನಿಂಗಯ್ಯ ಬಿನ್. ಲೇ|| ಚಿಕ್ಕಮುದ್ದಯ್ಯ, ಪರಿಶಿಷ್ಟ ಜನಾಂಗ, ಬೆಳಕವಾಡಿ ಟೌನ್, ಬಿ.ಜಿ ಪುರ ಹೋ||, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗಳು ಶಿವಮ್ಮ ಬಿನ್ ನಿಂಗಯ್ಯ, ಬೆಳಕವಾಡಿ ಟೌನ್ ರವರು ದಿನಾಂಕ: 07-03-2013 ರಂದು ಪ್ರಶಾಂತ್ ರವರ ಜಮೀನಿನಲ್ಲಿ ಕೂಲಿಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿದ್ದು, ಚಿಕಿತ್ಸೆಗಾಗಿ ಕೊಳ್ಳೆಗಾಲ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮದ್ಯೆ ಸಾವನ್ನಪ್ಪಿರುತ್ತಾರೆ ಕ್ರಮ ಕೈಗೊಳ್ಳಿ ಎಂದು ದೂರು. 


4. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ನಾಗರಾಜು ಬಿನ್ ಚನ್ನೇಗೌಡ, 42ವರ್ಷ. ಒಕ್ಕಲಿಗರು, ಉಪನ್ಯಾಸಕರು, ಕ್ಯಾತೇಗೌಡನನದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಚನ್ನೇಗೌಡರ ಜಮೀನಿನ ನೇರದ ಡ್ರೈನೇಜ್ ನಲ್ಲಿ  ಅಪರಿಚಿತ ಗಂಡಸು, ಸುಮಾರು 55 ರಿಂದ 60 ವರ್ಷ, ಹೆಸರು ವಿಳಾಸ ತಿಳಿಯಬೇಕಾಗಿದೆ, ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಅಪಹರಣ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 366(ಎ) ಐ.ಪಿ.ಸಿ.

        .ದಿನಾಂಕ: 08-03-2013 ರಂದು ಪಿರ್ಯಾದಿ ಶಾರದಮ್ಮ ಕೋಂ. ಬೋರೇಗೌಡ, 35ವರ್ಷ, ಒಕ್ಕಲಿಗರು, ಮನೆಕೆಲಸ, ಕೌಡ್ಲೆ ಗ್ರಾಮ ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ದಿನಾಂಕಃ 04-03-2013ರ ರಾತ್ರಿ 8-00 ಗಂಟೆ ಸಮಯದಲ್ಲಿ  ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣಿಯಾಗಿದ್ದು ಗ್ರಾಮದೊಳಗೆ ಹೋಗಿ  ಕೆಲವರನ್ನು  ವಿಚಾರ ಮಾಡಿದಾಗ  ನನ್ನ ಮಗಳು  ದಿವ್ಯಳನ್ನು  ನಮ್ಮ ಗ್ರಾಮದ  ಚಿಕ್ಕತಿಮ್ಮಯ್ಯನ ಮಗ  ಕುಮಾರ ಎಂಬುವವನು ಅಪಹರಿಸಿಕೊಂಡು  ಹೋಗಿರುವುದಾಗಿ ತಿಳಿದು ಬಂತು. ಈಕೆಯನ್ನು ಎಲ್ಲಿಗೆ ಅಪಹರಿಸಿಕೊಂಡು  ಹೋಗಿರುತ್ತಾನೆಂದು  ಇವರ ಇರುವಿಕೆಯ  ಸ್ಥಳ ನನಗೆ ಗೊತ್ತಿಲ್ಲಾ ಹದಿನೇಳು  (17) ವರ್ಷ ಅಪ್ರಾಪ್ತಳಾದ  ನನ್ನ ಮಗಳನ್ನು  ಅಪಹರಿಸಿಕೊಂಡು ಹೋಗಿರುವ ಮೇಲ್ಕಂಡ ಕುಮಾರರವರ ಮೇಲೆ ಕಾನೂನು  ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು : 

1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 34/13 ಕಲಂ. 457-380 ಐ.ಪಿ.ಸಿ.

.ದಿನಾಂಕ: 08-03-2013 ರಂದು ಪಿರ್ಯಾದಿ ಎಂ.ಜಿ.ಸುಬ್ರಮಣ್ಯ ಬಿನ್. ಗವೀಗೌಡ, ಎಂ.ಆರ್.ಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಕಳ್ಳರು ದಿನಾಂಕಃ 07-03-2013 ರ ರಾತ್ರಿ ವೇಳೆಯಲ್ಲಿ ಅಂಗಡಿಯ ಬಾಗಿಲಿನ ಡೋರ್ ಲಾಕನ್ನು ಯಾವುದೋ ಆಯುಧದಿಂದ ಮೀಟಿ ಅಂಗಡಿಯ ಗಲ್ಲದಲ್ಲಿ ಇಟ್ಟಿದ್ದ ಫಿರ್ಯಾದಿಯವರ ಹೆಂಡತಿಯ 30 ಗ್ರಾಂ    ಚಿನ್ನದ ಮಾಂಗಲ್ಯ ಚೈನು, 5 ಗ್ರಾಂ ಚಿನ್ನದ ಬಿಳಿಕಲ್ಲು ಓಲೆ, ಒಂದು 5 ಗ್ರಾಂ ಚಿನ್ನದ ಉಂಗುರ ಮತ್ತು ಒಂದು ಬೆಳ್ಳಿ ಕಾಲು ಚೈನು ಮತ್ತು ಸುಮಾರು 1 ರಿಂದ 1500 ರೂಗಳಷ್ಟು ಚಿಲ್ಲರೆ ಹಣವಿತ್ತು. ಮೇಲ್ಕಂಡ ಚಿನ್ನ ಮತ್ತು ಬೆಳ್ಳಿ ಸಾಮಾನುಗಳನ್ನು ಮತ್ತು ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಹಿಗ್ಗೆ ಸುಮಾರು 10-12 ವರ್ಷಗಳ ಹಿಂದೆ ಮಾಡಿಸಿದ್ದು ಇದರ ಮೌಲ್ಯ ರೂ 37500-00 ರೂಗಳಾಗಿತ್ತು 5 ಗ್ರಾಂ ಬಿಳಿಕಲ್ಲಿನ ಓಲೆ ಅಂದಾಜು ಬೆಲೆ ರೂ 12,500-00, 5 ಗ್ರಾಂ ಚಿನ್ನದ ಉಂಗುರ ರೂ 12,500-00 ಒಂದು ಬೆಳ್ಳಿ ಕಾಲುಚೈನು ರೂ 1000-00 ರೂಗಳಾಗಿರುತ್ತದೆ. ನಮ್ಮ ಅಂಗಡಿಯಲ್ಲಿ ಕಳ್ಳತನವಾಗಿರುವ ಎಲ್ಲಾ ವಸ್ತುಗಳ ಅಂದಾಜು ಮೌಲ್ಯ ರೂ 65,000-00 ರೂಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


 2. ಕೆ.ಎಂ ದೊಡ್ಡಿ ಠಾಣೆ ಮೊ.ನಂ. 56/13 ಕಲಂ. 457-380 ಐ.ಪಿ.ಸಿ.

ದಿನಾಂಕ: 08-03-2013 ರಂದು ಪಿರ್ಯಾದಿ ಡಾ.ಮಹದೇವಸ್ವಾಮಿ ಆರ್.ಪಿ. ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕೆ.ಹಳ್ಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆಯ ಬಾಗಿಲನ್ನು ತೆರೆದ ಸಂದರ್ಭದಲ್ಲಿ ಯಾರೋ ಕಳ್ಳರು ದಿನಾಂಕ:08-03-2013 ರ ಹಿಂದಿನ ರಾತ್ರಿ ವೇಳೆಯಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ ಕಾಡುಕೊತ್ತನಹಳ್ಳಿ ಆಸ್ಪತ್ರೆಯ ಹಿಂಭಾಗದ ಗೊಡೆಯ ಕಿಟಕಿಯನ್ನು ಹೊಡೆದು ಒಳನುಗ್ಗಿ ಆಸ್ಪತ್ರೆಗೆ ಸೇರಿದ 1] 32 ಇಂಚಿನ ಸೋನಿ ಎಲ್.ಸಿ.ಡಿ. ಟೆಲಿವಿಷನ್2] 3.ಡೆಲ್ಟ್ರಾನ್ ಎಲ್.ಸಿ.ಡಿ. ಸ್ಪೆಬಿಲೈಜರ್ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಚುನಾವಣಾ ಮುಂಜಾಗ್ರತಾ ಪ್ರಕರಣಗಳು :

1.ಅರೆಕೆರೆ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

      ದಿನಾಂಕ: 08-03-2013 ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಕೆ.ಮೋಹನ್ ಕುಮಾರ್ ಬಿನ್. ಕಾಮೇಗೌಡ, ದೊಡ್ಡಪಾಳ್ಯ ಗ್ರಾಮ ರವರ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ರೌಡಿ ಹಾಳೆಯನ್ನು ತೆರೆದಿದ್ದು, ಈತನು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿ ಭಂಗ ಉಂಟು ಮಾಡುವ ಸಂಭವವಿರುವುದರಿಂದ ಈತನನ್ನು ಬಂಧಿಸಿ ಅವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


2. ಅರೆಕೆರೆ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 110[ಇ] ಮತ್ತು [ಜಿ] ಸಿ.ಆರ್.ಪಿ.ಸಿ.

ದಿನಾಂಕ: 08-03-2013ರಂದು ಪಿರ್ಯಾದಿ ಎನ್.ಎಂ ಪೂಣಚ್ಚ, ಪಿ.ಎಸ್.ಐ ಅರೆಕೆರೆ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸ್ವಾಮಿ @ ಕರಿಯ @ ಕಾಳಪ್ಪ ಬಿನ್ ಲೇಟ್. ಅಣ್ಣೇಗೌಡ, 43 ವರ್ಷ, ಒಕ್ಕಲಿಗರು, ಗಜಾನನ ಬಸ್ ಕಂಡಕ್ಟರ್, ಅರಕೆರೆ ಗ್ರಾಮ ರವರು ರೂಢಿಗತ ಅಪರಾಧಿಯಾಗಿದ್ದು ಈತನ ಮೇಲೆ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನ ಮೇಲೆ ರೌಡಿ ಹಾಳೆಯನ್ನು ತೆರೆದಿದ್ದು, ಈತನು ಶ್ರೀರಂಗಪಟ್ಟಣ ಪುರಸಭೆ ಚುನಾವಣೆ ಮತ್ತು ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುಂಪುಗೂಡಿ ತೊಡಗಿ ಶಾಂತಿ ಭಂಗ ಉಂಟು ಮಾಡುವ ಸಂಭವವಿರುವುದರಿಂದ ಅವನನ್ನು ಬಂಧಿಸಿ ಈತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿರುತ್ತದೆ.


 ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. ಹೆಂಗಸು ಮತ್ತು ಮಗ ಕಾಣೆಯಾಗಿದ್ದಾರೆ.

        ದಿನಾಂಕ: 08-03-2013 ರಂದು ಪಿರ್ಯಾದಿ ಮಾರ್ಕಂಡೇಯ್ಯ ಬಿನ್. ಲೇ| ಸುಬ್ಬೇಗೌಡ,  ಸೀತಾಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಗೀತಾ  30 ವರ್ಷ.  ಸುಬ್ರಮಣ್ಯ,   9 ವರ್ಷ ರವರು ದಿನಾಂಕ: 03-03-2013 ರಂದು ತನ್ನ   ತಂದೆ  ಮನೆಯಿಂದ ಹಣ ತರುವುದಾಗಿ ಹೇಳಿ ತನ್ನ ಮಗನನ್ನು ಜೊತೆಗೆ ಕರೆದುಕೊಂಡು ಹೋದವರು ವಾಪಸ್ ಬಂದಿರುವುದಿಲ್ಲಾ ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಬ್ಕಾರಿ ಕಾಯಿದೆ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 34 ಕೆ.ಇ. ಆಕ್ಟ್.

ದಿನಾಂಕ: 08-03-2013 ರಂದು ಪಿರ್ಯಾದಿ ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ಜಗದೀಶ್ ಬಿನ್. ಮಲ್ಲಯ್ಯ ತೇಗನ ಹಳ್ಳಿ ಗ್ರಾಮರವರು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯೆ ಮಾರಾಟ ಮಾಡುತ್ತಿದ್ದು, 1242/- ರೂ, ಬೆಲೆಯ ಮದ್ಯೆವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

No comments:

Post a Comment