ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-03-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಕಳ್ಳತನ ಪ್ರಕರಣ ಹಾಗು 11 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ : 11-03-2013 ರಂದು ಪಿರ್ಯಾದಿ ನಾಗರಾಜೇಗೌಡ, ಅಂಬಿಗರಹಳ್ಳಿ ಗ್ರಾಮ ರವರು ದಿನಾಂಕ: 10-03-2013 ರಂದು ಹೊಟೆಲ್ನಲ್ಲಿ ಟೀ ಮಾಡಲು ಸ್ಟೌಹತ್ತಿಸುತ್ತಿರುವಾಗ ಹೆಚ್ಚಾಗಿ ಉರಿಬಂದು ಬೆಂಕಿಯು ಪಕ್ಕದಲ್ಲಿದ್ದ ಅಳಿಯ ಲೋಕೇಶರವರಿಗೆ ಬೆಂಕಿತಗುಲಿ ಸುಟ್ಟಗಾಯಗಳಾಗಿದ್ದು ಮೈಸೂರಿನ ಸುಟ್ಟಗಾಯಗಳ ವಾರ್ಡ್ ಗೆ, ಸೇರಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೊಪ್ಪ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 11-03-2013 ರಂದು ಅಶೋಕ ಬಿನ್. ಅಂಕೇಗೌಡ, ಕೊಪ್ಪ.ಟೌನ್, ಕೊಪ್ಪ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಅಪರಿಚಿತ ಗಂಡಸು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 119/13 ಕಲಂ. 379 ಐ.ಪಿ.ಸಿ.
ದಿನಾಂಕ: 11-03-2013 ರಂದು ಪಿರ್ಯಾದಿ ಸಚ್ಚಿನ್ ಟಿ.ಡಿ. ಬಿನ್. ಲೇಟ್. ದಯಾನಂದ್, ಟಿ.ಸಿ. # 221, 2ನೇ ಕ್ರಾಸ್, ಇವರ್ಿನ್ ರಸ್ತೆ, ಮೈಸೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ತಮ್ಮ ಬಾಬ್ತು ಮೊಟಾರ್ ಸೈಕಲ್ ನಂ. ಕೆ.ಎ-55 ಹೆಚ್-7718 ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್ ನಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಬಂದಿದ್ದು ಬಂಗಾರದೊಡ್ಡಿ ನಾಲೆಯ ಬಳಿ ನಿಲ್ಲಿಸಿ ಹೋಗಿ ಸ್ನಾನ ಮಾಡಿಕೊಂಡು ವಾಪಸ್ ಬಂದು ನೋಡಿದಾಗ ಮೋಟಾರ್ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 74/13 ಕಲಂ. 454-457-380 ಐ.ಪಿ.ಸಿ.
ದಿನಾಂಕ: 11-03-2013 ರಂದು ಪಿರ್ಯಾದಿ ಸತೀಶ ಬಾಬು ಬಿನ್. ಲೇಟ್. ಶಿವಸ್ವಾಮಿ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಬಾಗಿಲು ಹೊಡೆದು ಕಳ್ಳತನ ಮಾಡಿರುತ್ತಾರೆ. ನಂತರ ಮನೆಯೊಳಗೆ ಹೋಗಿ ಕಬ್ಬಿಣದ ಬೀರನ್ನು ನೋಡಲಾಗಿ ಬೀರುವಿನ ಬಾಗಿಲು ಮೀಟಿರುವುದು ಕಂಡುಬಂದಿತ್ತು. ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಆಭರಣಗಳಾದ 1] ಚಿನ್ನದ ಕಾಸಿನ ಸರ 30 ಗ್ರಾಂ, 2] ಚಿನ್ನದ ನೆಕ್ಲೇಸು 30 ಗ್ರಾಂ 3] ಚಿನ್ನದ ಸಾದಾ ಜೈನು 40 ಗ್ರಾಂ 4] ಗಣೇಶನ ಉಂಗುರ 10 ಗ್ರಾಂ 5] ಇತರೆ 06 ಉಂಗುರಗಳು 30 ಗ್ರಾಂ ಒಟ್ಟು 140 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುತ್ತಾರೆ. ಇದರ ಬೆಲೆ ಸುಮಾರು 3.50.000/- ರೂ [ ಮೂರು ಲಕ್ಷದ ಐವತ್ತು ಸಾವಿರ ರೂ] ಆಗಿರುತ್ತದೆ. ಆರೋಪಿಗಳನ್ನು ಪತ್ತೆ ಮಾಡಿ ನಮ್ಮ ಆಭರಣಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment