Moving text

Mandya District Police

DAILY CRIME REPORT DATED : 10-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  14 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  2 ಯು.ಡಿ.ಆರ್. ಪ್ರಕರಣಗಳು,  1 ಕೊಲೆ ಪ್ರಕರಣ ಹಾಗು 4 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. 

ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀನಿವಾಸ ಬಿನ್. ಸುಬ್ಬಕೃಷ್ಣೇಗೌಡ, ಅಗ್ರಹಾರಬಾಚಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಶಶಿಕಲಾ ಕೊಂ. ಶ್ರೀನಿವಾಸ, 28 ವರ್ಷ, ಅಗ್ರಹಾರಬಾಚಹಳ್ಳಿ ಗ್ರಾಮ ರವರು ದಿನಾಂಕ:10-03-2013 ರ ಹಿಂದಿನ ರಾತ್ರಿ ಅವರ ಮನೆಯಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 99/13 ಕಲಂ. ಹುಡುಗ ಕಾಣೆಯಾಗಿದ್ದಾನೆ. 

ದಿನಾಂಕ: 10-03-2013 ರಂದು ಪಿರ್ಯಾದಿ ಚಂದ್ರಕಲಾ ಕೋಂ. ಶಿವಕುಮಾರ, ಕವಲಗುಂಧಿ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರು ನೀಡಿದ ದೂರು ಏನೆಂದರೆ ದಿನಾಂಕ: 08-03-2013 ರಂದು ಮದ್ಯಾಹ್ನ ಚಿನಕುರಳಿಯ ಹಾಸ್ಟಲ್ ಕುಕ್ಕರ್ ಪಿರ್ಯಾದಿಗೆ ಫೋನ್ ಮಾಡಿ ನಿಮ್ಮ ಮಗ ಗೌತಮ್ಗೌಡ. ಎಸ್. ಬಿನ್ ಶಿವಕುಮಾರ, 15 ವರ್ಷ, ಕವಲಗುಂಧಿ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ರವರು 3 ದಿನಗಳಿಂದ ಹಾಸ್ಟಲ್ಗೆ ಬಂದಿಲ್ಲ ಎಂದು ತಿಳಿಸಿದ್ದು  ನಂತರ ಪಿರ್ಯಾದಿಯು ಬಂದು ವಿಚಾರಿಸಲಾಗಿ ದಿನಾಂಕ:06-03-2013 ರಂದು ಕೆರೆತೊಣ್ಣೂರಿಗೆ ಈಜು ಹೊಡೆಯಲು ಸ್ನೇಹಿತರೊಡನೆ ಹೋಗಿ ವಾಪಸ್ ಚಿನಕುರಳಿಗೆ ಬಂದು ನಂತರ ಎಲ್ಲಿಯೋ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.   


3.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

     ದಿನಾಂಕ: 10-03-2013 ರಂದು ಪಿರ್ಯಾದಿ ಎನ್.ಮಧು ಬಿನ್ ನಿಂಗಣ್ಣ @ ನಿಂಗೇಗೌಡ, ಕಿರಗಂದೂರು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಕೆ.ಆರ್.ನವೀನ್ ಕುಮಾರ ಬಿನ್. ರಾಮೇಗೌಡ, 25 ವರ್ಷ, ಒಕ್ಕಲಿಗರು, ಇಲಾತಿ ಹಸುಗಳ ವ್ಯಾಪಾರ, ಕಿರಗಂದೂರು ಗ್ರಾಮ, ಮಂಡ್ಯ ತಾಲ್ಲೂಕು ರವರು ದಿನಾಂಕ: 06-03-2013 ರಂದು ಮದ್ಯಾಹ್ನ 03-00 ಪಿಎಂ ನಲ್ಲಿ  ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಮಂಡ್ಯ ಸಿಟಿ ಇಲ್ಲಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :

1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 34 ಕೆ.ಇ ಕಾಯ್ದೆ.

ದಿನಾಂಕ: 10-03-2013 ರಂದು ಪಿರ್ಯಾದುದಾರ ಬಿ.ಎಸ್. ಶಿವರುದ್ರ. ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ. ಕೆ.ಆರ್.ಪೇಟೆ ತಾಲೋಕು ರವರು ನೀಡಿದ ಪಿರ್ಯಾದು ಏನೆಂದರೆ ಆರೋಪಿ ಚಂದ್ರ ಬಿನ್ ನಂಜೇಗೌಡ, 35 ವರ್ಷ, ಹಾಲುಮತ ಜನಾಂಗ, ಕೋಳಿ ಅಂಗಡಿ ವ್ಯಾಪಾರ ಹಾಗೂ ವ್ಯವಸಾಯ ಕೆಲಸ, ಉದ್ದಿನಮಲ್ಲನ ಹೊಸೂರು ಕೊಪ್ಪಲು ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲೋಕು ರವರು ಅವರ ಕೋಳಿ ಅಂಗಡಿಯಲ್ಲಿ  ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲ್ಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಬ್ಯಾಟರಾಯಗಡ, ಪ್ರೊಬೇಷನರಿ ಪಿ.ಎಸ್.ಐ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಯೋಗೇಶ ಬಿನ್ ಶಂಕರೇಗೌಡ, 24 ವರ್ಷ, ಒಕ್ಕಲಿಗರು, ವ್ಯಾಪಾರ, ಚಿಕ್ಕಮಂಡ್ಯ ಗ್ರಾಮ, ಕಸಬಾ ಹೋ: ಮಂಡ್ಯ ತಾಲ್ಲೋಕು ರವರು ಸಕರ್ಾರದಿಂದ ಯಾವುದೇ ಪರವಾನಗಿ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ನಂತರ ಸದರಿ ಸ್ಥಳದಲ್ಲಿ ಇದ್ದ ಮದ್ಯ ಪ್ಯಾಕೇಟ್ಗಳನ್ನು ಪರಿಶೀಲಿಸಲಾಗಿ, 1] 90 ಎಂ.ಎಲ್.ನ. ಅಮೃತ್ ಸಿಲ್ವರ್ ರೇರ್ ಬ್ರಾಂದಿ 4 ಪ್ಯಾಕೇಟ್ಗಳು, ಮತ್ತು  2 ಖಾಲಿ ಪ್ಯಾಕೇಟ್ಗಳು. 2 ಪ್ಲಾಸ್ಟಿಕ್ ಲೋಟಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ನಂತರ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಮು ಬಿನ್. ಶಿವಗೇಗೌಡ, 49 ವರ್ಷ, ಒಕ್ಕಲಿಗರು, ಕೂಲಿಕೆಲಸ, ಚಿಕ್ಕಮಂಡ್ಯ, ಮಂಡ್ಯ ತಾ. ರವರು ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


3. ಬಸರಾಳು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎನ್. ಹರೀಶ್ ಪಿಎಸ್ಐ. ಬಸರಾಳು  ಪೋಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟೇಶ ಬಿನ್. ಕೃಷ್ಣಶೆಟ್ಟಿ  ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕುರವರು ನೀಡಿದ ದೂರು ಏನೆಂದರೆ ಗಿರಾಕಿಗಳಿಗೆ ಮದ್ಯವನ್ನು ಬಾಟಲ್ಗಳಿಂದ ಹಾಕಿಕೊಟ್ಟು ಧನಲಕ್ಷ್ಮಿ ವೈನ್ಸ್ನಲ್ಲಿ ಕುಡಿಯಲು ಅವಕಾಶ ಮಾಡಿಕೊಡುತ್ತಿದ್ದರು ಎಂಬ ಮಾಹಿತಿ ಮೇರೆಗೆ ಆತನ ಮೇಲೆ ಸ್ವಯಂ ವರದಿ ತಯಾರಿಸಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿರುತ್ತೆ,


4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 77/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

      ದಿನಾಂಕ: 10-03-2013 ರಂದು ಪಿರ್ಯಾದಿ ಎಂ.ಮಂಜುನಾಥ್. ಪಿ.ಎಸ್.ಐ. ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಭಲೇಂದ್ರ ಕುಮಾರ್ ಬಿನ್. ಮರಿಯಣ್ಣ, 37 ವರ್ಷ, ಒಕ್ಕಲಿಗರು, ವ್ಯಾಪಾರ, ವಾಸ, 1 ನೇ ಕ್ರಾಸ್, ಚಿಕ್ಕೇಗೌಡನದೊಡ್ಡಿ, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೇ  ಸಾರ್ವಜನಿಕ ಸ್ಠಳದಲ್ಲಿ ಮದ್ಯದ ಬಾಟೆಲ್ಗಳನ್ನು ಒಂದು ರಟ್ಟಿನ ಬಾಕ್ಸ್ನಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಗಾಜಿನ ಲೋಟದಲ್ಲಿ ಹಾಕಿ ಮಾರಾಟ ಮಾಡಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


5. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 38/13 ಕಲಂ. 32-34 ಕೆ.ಇ ಕಾಯಿದೆ.

     ದಿನಾಂಕ: 10-03-2013 ರಂದು ಪಿರ್ಯಾದಿ ವೆಂಕಟೇಗೌಡ, ಪಿ.ಎಸ್.ಐ. ನಾಗಮಂಗಲ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1) ಶಿವರಾಮು ಬಿನ್. ದಾಸಪ್ಪ ಮಂಚಪಟ್ಟಣ ಗ್ರಾಮ, ಹೊಣಕೆರೆ ಹೋಬಳಿ ಹಾಗು 2) ಶಿವ, ಸಾರೆಮೇಗಳ ಕೊಪ್ಪಲು ಗ್ರಾಮ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ಗಳನ್ನು ತೆಗೆದುಕೊಂಢು ಹೋಗುತ್ತಿದ್ದು ಹೆಸರು ವಿಳಾಸ ಕೇಳಿದಾಗ ಶಿವರಾಮು ಬಿನ್. ದಾಸಪ್ಪ, ಮಂಚಪಟ್ಟಣ ಗ್ರಾಮ, ಹೊಣಕೆರೆ ಹೋಬಳಿ ಮತ್ತು  ಶಿವ, ಸಾರೆಮೇಗಳ ಕೊಪ್ಪಲು ಗ್ರಾಮ ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಠಾಣೆಗೆ ಬಂದು ಠಾಣಾ ಮೊ.ನಂ. 38/2013 ಕಲಂ 32-34 ಕೆ.ಇ. ಕಾಯಿದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ. 


6. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

     ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ರಮೇಶ ಬಿನ್. ಕೆಂಪಯ್ಯ, 49 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ ನಂ.630, 2ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿ ರವರು ಸಾರ್ವಜನಿಕವಾಗಿ ಚಿಲ್ಲರೆಯಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


7. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

ದಿನಾಂಕ: 10-03-2013 ರಂದು ಪಿರ್ಯಾದಿ ಸಿ.ಬಿ.ಶಿವಣ್ಣ, ಎಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಂಕರ ಬಿನ್. ಮೊಳ್ಳೇಗೌಡ, 30 ವರ್ಷ, ಒಕ್ಕಲಿಗರು, ವ್ಯವಸಾಯ, ವಾಸ 5ನೇ ಕ್ರಾಸ್, ಮಾರುತಿನಗರ, ಗೂಬೆಹಳ್ಳ, ಗುತ್ತಲು, ಮಂಡ್ಯ ಸಿಟಿ ರವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡಿ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ರಾತ್ರಿ 07-00 ಗಂಟೆಯಿಂದ ರಾತ್ರಿ 07-45 ಗಂಟೆವರೆಗೆ ಮಹಜರ್ ಕ್ರಮ ಜರುಗಿಸಲಾಗಿದೆ. 


8. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 64/13 ಕಲಂ. 15(ಎ) 32(3) ಕೆ.ಇ. ಆಕ್ಟ್. 

      ದಿನಾಂಕ: 10-03-2013 ರಂದು ಪಿರ್ಯಾದಿ ಕೆ.ಎಸ್.ನಿರಂಜನ, ಪಿಎಸ್ಐ, ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಕಾಶ ಬಿನ್. ಪುಟ್ಟಸ್ವಾಮಿಗೌಡ, 54 ವರ್ಷ, ಈಡಿಗಗೌಡರು, ವ್ಯಾಪಾರ ಮತ್ತು ವ್ಯವಸಾಯ, ವಾಸ. ನಂ. 307, 3ನೇ ಕ್ರಾಸ್, ಶಂಕರಮಠ, ಮಂಡ್ಯ ಸಿಟಿ ರವರು ಸಾರ್ವಜನಿಕವಾಗಿ ಚಿಲ್ಲರೆಯಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾನೆಂದು ಫಿರ್ಯಾದಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ. 


9. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 15[ಎ] ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಸಿ.ಎಸ್. ರಮೇಶ ಬಿನ್ ಸ್ವಾಮೀಗೌಡ, 29ವರ್ಷ, ಒಕ್ಕಲಿಗರು,  ಚಾಕೇನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು ರವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್ನ 4 ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದವನನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕಂಡು ಅತನ ವಶದಲ್ಲಿದ್ದ  4 ರಾಜಾ ವಿಸ್ಕಿ ಬಾಟಲ್, ಪ್ಲಾಸ್ಟಿಕ್ ಕವರ್, 200 ರೂ.ನಗದು ಹಣ, ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆಾತನ ಮೇಲೆ ಪ್ರಕರಣ ದಾಖಲು ಮಾಡಿರುತ್ತೆ. 


10. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 15[ಎ] ಕೆ.ಇ.ಆಕ್ಟ್.

      ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಮುರುಳಿ@ ಮುರಾರಿ ಬಿನ್ ರಾಮಯ್ಯ, ಲಕ್ಷ್ಮಿಪುರ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು  ರವರು ಒಂದು ಪ್ಲಾಸ್ಟಿಕ್ ಕವರ್ನಲ್ಲಿ 180 ಎಂಎಲ್ನ 3ರಾಜ ವಿಸ್ಕಿ ಬಾಟೆಲ್ಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಚಿಲ್ಲರೆ ಮಾರಾಟ ಮಾಡುತ್ತಿದ್ದು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ, ಕವರ್ ಅನ್ನು ಸ್ದಳದಲ್ಲಿಯೇ ಬಿಟ್ಟು ಓಡಿಹೋಗಿದ್ದು, ನಂತರ ಪಂಚರ ಸಮಕ್ಷಮ 3 ರಾಜಾ ವಿಸ್ಕಿ ಬಾಟಲ್, ಪ್ಲಾಸ್ಟಿಕ್ ಕವರ್, ಕವರ್ನಲ್ಲಿದ್ದ 150 ರೂ. ನಗದು ಹಣ, ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಆತನ ಮೇಲೆ ಪ್ರಕರಣ ದಾಖಲು ಮಾಡಿರುತ್ತೆ.


11. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಶ್ರೀ ಎಂ.ಶಿವಣ್ಣ, ಪಿಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಚಂದ್ರಪ್ಪ ಬಿನ್. ರಂಗಪ್ಪ, ಅಂಗಡಿ ವ್ಯಾಪಾರ, ವಾಸ ತಿರುಮಲಾಪುರ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೋಕು ರವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಓಡಿಹೋಗಿದ್ದು, ಅಂಗಡಿಯನ್ನು ಪರಿಶೀಲಿಸಿದಾಗ ಆರೋಪಿ ಒಂದು ಪ್ಲಾಸ್ಟಿಕ್ ಬ್ಯಾಗ್ನಲ್ಲಿ 180 ಎಂಎಲ್ನ 30ರಾಜ ವಿಸ್ಕಿ ಬಾಟೆಲ್ಗಳನ್ನು ಹಾಗೂ 90 ಎಂಎಲ್ನ 20 ಸಿಲ್ವರ್ ಕಪ್ ಬಾಂದ್ರಿ ಪೌಚ್ಗಳನ್ನು ಯಾವುದೇ ಪರವಾನಿಗೆ ಅಂಗಡಿಯಲ್ಲಿ ಇಟ್ಟುಕೊಂಡಿದ್ದು,  ನಂತರ ಪಂಚರ ಸಮಕ್ಷಮ ಸದರಿ ಮಾಲುಗಳನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲಿಸಲಾಗಿದೆ. 


12.ನಾಗಮಂಗಲ ಗ್ರಾಮಾಂತರ ಪೊಲೀಸ್. ಠಾಣೆ ಮೊ.ನಂ. 27/13 ಕಲಂ. 15[ಎ] ಕೆ.ಇ.ಆಕ್ಟ್.

     ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ರಾಜಣ್ಣ ಬಿನ್. ಹುಚ್ಚೇಗೌಡ, ಟಿ.ಚೆನ್ನಪುರ ಗ್ರಾಮ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 240/-ರೂ ಬೆಲೆಬಾಳುವ 180 ಮಿಲಿ 4 ರಾಜಾವಿಸ್ಕಿ ಮದ್ಯವನ್ನು ಮಾರಾಟ ಮಾಡುತ್ತಿದ್ದದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ 


13. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 15[ಎ] ಕೆ.ಇ.ಆಕ್ಟ್.

ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ಶಿವಣ್ಣ ಬಿನ್. ಅಣ್ಣಮಂಚೇಗೌಡ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 120/- ರೂ ಬೆಲೆಬಾಳುವ 180 ಮಿಲಿ 4 ರಾಜಾವಿಸ್ಕಿ ಮದ್ಯವನ್ನು ಮಾರಾಟ ಮಾಡುತ್ತಿದ್ದದ್ದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ. 


14. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 29/13 ಕಲಂ. 15[ಎ] ಕೆ.ಇ.ಆಕ್ಟ್.

ದಿನಾಂಕ: 10-03-2013 ರಂದು ಪಿರ್ಯಾದಿ ಬಿ.ಕೆ.ವಿವೇಕಾನಂದ, ಮುಖ್ಯ ಪೇದೆ ನಂ.277, ರವರು ನೀಡಿದ ದೂರು ಏನೆಂದರೆ ಆರೋಪಿ ಶಂಕರ ಬಿನ್. ಅಣ್ಣಮಂಚೇಗೌಡ ರವರು ಯಾವುದೇ ಪರವಾನಿಗೆ ಇಲ್ಲದೆ ಪೆಟ್ಟಿಅಂಗಡಿಯಲ್ಲಿ ಸುಮಾರು 140/- ರೂ. ಬೆಲೆಬಾಳುವ ಮದ್ಯವನ್ನು ಮಾರಾಟ ಮಾಡುತ್ತಿದ್ದದ್ದನ್ನು ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 08/13 ಕಲಂ. 174 ಸಿ.ಆರ್.ಪಿ.ಸಿ. 

ದಿನಾಂಕ: 10-03-2013 ರಂದು ಪಿರ್ಯಾದಿ ಮಲ್ಲೇಶ, ಹೆಮ್ಮಿಗೆ ಗ್ರಾಮ, ಕಿಕ್ಕೆರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ತಮ್ಮನಾದ ಮಂಜು ರವರು ಸುಮಾರು 5 ವರ್ಷಗಳಿಂದ ವಕೀಲ ವೃತ್ತಿಯನ್ನು ಮಾಡಿಕೊಂಡು ಕೆ.ಆರ್. ಪೇಟೆ ಯಲ್ಲಿಯೇ ವಾಸವಿದ್ದು ಆಗಾಗ್ಗೆ ಪಿಯರ್ಾದಿಯವರ ಮನೆಗೆ ಬಂದು ಹೋಗುತ್ತಿದ್ದು ಹೀಗೆ 5 ದಿನಗಳಿಂದ ಯಾವಾಗಲೂ ಬೇಸರದಿಂದ ಇದ್ದು ಮಾನಸಿಕ ಖಿನ್ನತೆಗೆ ಓಳಗಾಗಿದ್ದು ಕೆರೆತೊಣ್ಣೂರು ಬೆಟ್ಟದ ಬಳಿ ಮಾನಸಿಕ ಖಿನ್ನತೆಗೆ ಓಳಗಾಗಿ ಯಾವೂದೋ ವಿಷ ಸೇವಿನೆ ಮಾಡಿ 09-03-2013 ರಂದು ರಾತ್ರಿ 08-30 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್..ಪಿ..ಸಿ.

ದಿನಾಂಕ: 10-03-2013 ರಂದು ಪಿರ್ಯಾದಿ ಜಯರಾಮ ಬಿನ್. ಲೇಟ್. ಶಿವಣ್ಣ, 47 ವರ್ಷ, ಜನರಲ್ ಸ್ಟೋರ್ ನ ಮಾಲೀಕರು, ಬೆಳ್ಳೂರು ಕ್ರಾಸ್, ಬೆಳ್ಳೂರು ಹೋಬಳಿ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಬೆಳ್ಳೂರು ಕ್ರಾಸಿನ ಫ್ಲೈ ಓವರ್ ಬ್ರಿಡ್ಜ್ ಕೆಳಭಾಗ ಮೋರಿಯ ಮೇಲ್ಭಾಗಕ್ಕೆ ಹಾಕಿರುವ ಸಿಮೆಂಟ್ ಚಪ್ಪಡಿಯ ಮೇಲೆ ಯಾರೋ ಒಬ್ಬ ಸುಮಾರು 55 ವರ್ಷ ವಯಸ್ಸಿನ ಅನಾಮಧೇಯ ಗಂಡಸು ಸತ್ತುಹೋಗಿದ್ದು ಮೃತನು ಯಾವುದೋ ಕಾಯಿಲೆಯಿಂದಲೋ ಅಥವಾ ಹಸಿವಿನಿಂದಲೋ ಬಳಲಿ ಮೃತಪಟ್ಟಂತೆ ಕಂಡು ಬರುತ್ತಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ ಪ್ರಕರಣ : 

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 302 ಐ.ಪಿ.ಸಿ.

ದಿನಾಂಕ: 10-03-2013 ರಂದು ಪಿರ್ಯಾದಿ ಲಕ್ಷ್ಮಣ ಬಿನ್. ಲೇಟ್. ನರಸಿಂಹೇಗೌಡ, ನಳ್ಳೇನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೆಂಕಟೇಶ @ ಕೋಟಿ, ನಳ್ಳೇನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ವಿನಾ ಕಾರಣ ಹಣಕ್ಕಾಗಿ ಕಲ್ಯಾಣಮ್ಮ (ಮೃತೆ) ರವರೊಡನೆ ಜಗಳ ಮಾಡಿ ಮಾನಸಿವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಕಲ್ಯಾಣಮ್ಮಳನ್ನು ಕೊಲೆ ಮಾಡಿರುವುದಾಗಿ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment