ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-03-2013 ರಂದು ಒಟ್ಟು 29 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 2 ಕಳ್ಳತನ ಪ್ರಕರಣಗಳು, 1 ಎಸ್.ಸಿ/ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 2 ಕಳ್ಳತನ ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.41/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 19-03-2013 ರಂದು ಪಿರ್ಯಾದಿ ಶೋಭಾ ಕೊಂ. ಶ್ರೀನಿವಾಸ, 23ವರ್ಷ, ವಕ್ಕಲಿಗರು, ಮನೆಕೆಲಸ, ಹಂದೇನಹಳ್ಳಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಪತಿ ಶ್ರೀನಿವಾಸ 30ವರ್ಷ, ವಕ್ಕಲಿಗರು,ವ್ಯವಸಾಯ, ಹಂದೇನಹಳ್ಳಿ ಗ್ರಾಮರವರು ದಿನಾಂಕ: 14-10-2011 ರಂದು ಮನೆಯಿಂದ ಎಲ್ಲೋ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ಮತ್ತು ಮನೆಯವರು ಎಲ್ಲಾ ಕಡೆ ಹುಡುಕಾಡಿ ಪತ್ತಯಾಗದ ಕಾರಣ, ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 72/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 19-03-2013 ರಂದು ಪಿರ್ಯಾದಿ ಎನ್.ವರದರಾಜಚಾರ್ ಬಿನ್. ಲೇಟ್. ನಾರಾಯಣಚಾರ್, ವಾಸ ನಂ. 2846, ಪರಬ್ರಹ್ಮ ನಿಲಯ, 5ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರ ಅಣ್ಣ ಗೋವಿಂದರಾಜು ರವರ 22 ವರ್ಷದ, ಬಿಕಾಂ ಪದವೀಧರೆ, ವಿಶ್ವಕರ್ಮ ಜನಾಂಗ, ನಾಯಕನಪಾಳ್ಯ, ಮಾಡಬಳ್ಳ ಹೋಬಳಿ, ಮಾಗಡಿ ತಾಲ್ಲೂಕು, ರವರು ಇತ್ತೀಚೆಗೆ ಮನಶಾಂತಿ ಕಳೆದುಕೊಂಡಂತಿದ್ದು ಆಕೆಯನ್ನು ಸ್ಥಳ ಬದಲಾವಣೆ ಮಾಡುವ ಉದ್ದೇಶದಿಂದ ಸ್ವಲ್ಪ ದಿವಸ ಫಿರ್ಯಾದಿಯವರ ಮನೆಯಲ್ಲಿ ಇರಿಸಿದ್ದು ದಿನಾಂಕ: 18-03-2013 ರಂದು ಸಂಜೆ 06-00 ಗಂಟೆಯಲ್ಲಿ ಫಿರ್ಯಾದಿಯವರ ಮನೆಯಲ್ಲಿದ್ದವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹುಟ್ಟುಬಟ್ಟೆಯಲ್ಲಿ ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಇದುವರೆಗೆ ಎಲ್ಲಾ ಕಡೆ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಜಿ.ಶಾಂತಕುಮಾರಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 457-380 ಐ.ಪಿ.ಸಿ.
ದಿನಾಂಕ: 19-03-2013 ರಂದು ಪಿರ್ಯಾದಿ ವಿಜಯಾಂಭ ಕೋಂ. ಶ್ರೀನಿವಾಸ, ಎಲೆಕೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನವಾಡಿ ಕೊಠಡಿಯ ಬೀಗ ಮುರಿದು 12 ಹೆಚ್.ಪಿ. ಖಾಲಿ ಗ್ಯಾಸ್ ಸಿಲಿಂಡರ್ ಅನ್ನು ಕಳ್ಳತನ ಮಾಡಿಕೊಂಡುಹೋಗಿದ್ದು ಬೆಲೆ ಸುಮಾರು 1500/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 457 380 ಐ.ಪಿ.ಸಿ.
ದಿನಾಂಕ: 19-03-2013 ರಂದು ಪಿರ್ಯಾದಿ ಚೇತನ್.ಪಿ.ಎಸ್ ಬಿನ್ ಸುಬ್ರಮಣ್ಯರಾವ್, ಹಲಗೂರು ಟೌನ್, ಮಳವಳ್ಳಿ ತಾಃ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1]ಸತೀಶ 22ವರ್ಷ, ಗುಂಡಪ್ಪಶೆಡ್ಡ್, 2ನೇ ಕ್ರಾಸ್, ಶಿವಮೊಗ್ಗ ಹಾಗು 2]ಕೃಷ್ಣ @ ಮಲೆಬೆನ್ನೂರು ಕೃಷ್ಣ -1ನೇ ಬೀದಿ, ಬೋವಿ ಕಾಲೋನಿ, ಮಲೆಬೆನ್ನೂರು ಗ್ರಾಮ, ಹರಿಹರ ತಾಲ್ಲೂಕು ರವರುಗಳು ದಿನಾಂಕ: 29-07-2009 ರ ಬೆಳಿಗ್ಗೆ 07-00 ಗಂಟೆಗೆ ಬಂದು ನಮ್ಮ ಮನೆಯ ಬಾಗಿಲನ್ನು ತೆಗೆಯಲು ಹೋದಾಗ ಮುಂಭಾಗಿಲು ಬೀಗ ಹೊಡೆದು ಡೋರ್ ಲಾಕ್ನ್ನು ಮೀಟಿ ಯಾರೋ ಕಳ್ಳರು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಬೀರುವನ್ನು ಹೊಡೆದು ಬೀರು ಒಳಗಿದ್ದ ಒಂದು ಜೊತೆ ಚಿನ್ನದ ಡ್ರಾಪ್ಸ್ ಮತ್ತು ಜುಮುಕಿಯನ್ನು ತೆಗೆದುಕೊಂಡು ಹಿಂಬಾಗಿಲನ್ನು ತೆಗೆದು ಹೊರಗೆ ಹೋಗಿರುತ್ತಾರೆ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಹಚ್ಚಿ ಇದುವರೆವಿಗೂ ಪತ್ತೆ ಹಚ್ಚದಿದ್ದರಿಂದ ನಾನು ಹಲಗೂರು ಪೊಲೀಸ್ ಠಾಣೆಗೆ ಆ ದಿನ ದೂರು ನೀಡುತ್ತಿರುವುದಾಗಿ ದಿನಾಂಕ:17-08-2009 ರಂದು ಕೆ.ಎಂ.ದೊಡ್ಡಿ ಪೊಲೀಸರು ಕಳ್ಳರನ್ನು ಕರೆದುಕೊಂಡು ನಮ್ಮ ಮನೆಯನ್ನು ತೋರಿಸಿದರ ಮೇರೆಗೆ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಕಳ್ಳರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ/ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 66/13 ಕಲಂ. 143-147-448-504-323-324-506 ರೆ/ವಿ 149 ಐಪಿಸಿ ಮತ್ತು 3 ಕ್ಲಾಸ್ [10] ಎಸ್.ಸಿ/ ಎಸ್.ಟಿ ಪಿ.ಎ.ಆಕ್ಟ್ 1989.
ದಿನಾಂಕ: 19-03-2013 ರಂದು ಪಿರ್ಯಾದಿ ಎಂ. ಸುದರ್ಶನ್ ಬಿನ್. ಲೇ. ಮಹದೇವಸ್ವಾಮಿ, ಪರಿಶಿಷ್ಟ ಜಾತಿ, ಕಾಡುಕೊತ್ತನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ. ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿಯರ್ಾದಿಯವರ ಮನೆಯ ಹತ್ತಿರ ಪರಿಶಿಷ್ಟ ಜನಾಂಗದ ಬಸವರಾಜು ಮತ್ತು ಶಿವಕುಮಾರ್ ಎಂಬುವರಿಗೆ ಈ ಕೇಸಿನ ಆರೋಪಿಗಳಾದ 1] ನಂಜುಂಡ. 2] ಚೇತನ. 3] ಸತೀಶ, 4] ಗಿರೀಶ, 5] ಭಾಸ್ಕರ, 6] ಯುಗಾದಿ 7] ಪ್ರವೀಣ ಹಾಗು 8] ಅನಿಲ್ ಎಲ್ಲರೂ ಕಾಡುಕೊತ್ತನಹಳ್ಳಿ ಗ್ರಾಮ ರವರುಗಳು ಜಾತಿ ನಿಂದನೆ ಮಾಡಿ, ಗಲಾಟೆ ಮಾಢಿ ಹೊಡೆದು ಬೈಯ್ಯುತ್ತಿದ್ದಾಗ ಶಬ್ದ ಕೇಳಿ ಮನೆಯಿಂದ ಹೊರ ಬಂದ ಪಿಯರ್ಾದಿಯವರಿಗೆ ಮೇಲ್ಕಂಡ ಆರೋಪಿಗಳು ನಿನ್ನನ್ನು ಎಂದೋ ಮುಗಿಸಬೇಕಾಗಿತ್ತು, ಈ ದಿನ ಸಿಕ್ಕಿದ್ದೀಯೇ, ಎಂದು ಪಿರ್ಯಾದಿಯವರು ಅಂತರ್ಜಾತಿ ವಿವಾಹವಾಗಿರುವ ಹಳೆಯ ದ್ವೇಷ ಇಟ್ಟುಕೊಂಡು, ಪಿಯರ್ಾದಿಗೆ ದೊಣ್ಣೆಯಿಂದ ಹೊಡೆದು, ಅಕ್ರಮವಾಗಿ ಮನೆಗೆ ನುಗ್ಗಿ, ಪಿರ್ಯಾದಿಯ ತಾಯಿ & ಹೆಂಡತಿಗೆ ಹೀನಾ ಮಾನವಾಗಿ ಬೈಯ್ದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 379 ಐ.ಪಿ.ಸಿ.
ದಿನಾಂಕ: 19-03-2013 ರಂದು ಪಿರ್ಯಾದಿ ಎನ್.ಎಸ್. ಶಂಭುಗೌಡ, 38 ವರ್ಷ, ವಿ.ಸಿ. ಚಾನಲ್ ಕೆಳಗೆ ಅನ್ನಪೂಣರ್ೆಶ್ವರಿ ನಗರ, ಕ್ಯಾತುಂಗೆರೆ ಲೇ. ಔಟ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರು ತಮ್ಮ ಮನೆಯ ಹಿಂಭಾಗ ತಮ್ಮ ಬಾಬ್ತು ಕೆಎ-11-2873 ಕಾರನ್ನು ನಿಲ್ಲಿಸಿದ್ದು ದಿನಾಂಕಃ-18-03-2013 ರಂದು ರಾತ್ರಿ ನಿಲ್ಲಿಸಿದ್ದು ಯಾರೋ ಕಳ್ಳರು ಕಾರಿನ ಹಿಂಭಾಗದ ಗ್ಲಾಸ್ ನ್ನು ಬಿಚ್ಚಿ ಮ್ಯೂಸಿಕ್ ಸ್ಟೀರಿಯೋವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇದರ ಅಂದಾಜು ಬೆಲೆ 9200/- ರೂ ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಾಗಿರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 379 ಐ.ಪಿ.ಸಿ.
ದಿನಾಂಕ: 19-03-2013 ರಂದು ಪಿರ್ಯಾದಿ ಎಂ ರಾಜು ಬಿನ್. ಮಹದೇವಶೆಟ್ಟಿ, ಕೋಟೆ ಮಡಿವಾಳರ ಬೀದಿ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಳವಳ್ಳಿ ಅನಂತರಾಮಯ್ಯ ಸರ್ಕಲ್ ಮಾತೃಶ್ರೀ ಮೊಬೈಲ್ ಅಂಗಡಿಯ ಮುಂಬಾಗ ಮದ್ಯಾಹ್ನ 02-00 ಗಂಟೆಯ ಸಮಯದಲ್ಲಿ ನನ್ನ ಮೋಟಾರ್ ಸೈಕಲ್ ನಿಲ್ಲಿಸಿ ಮೊಬೈಲ್ ಅಂಗಡಿಯ ಒಳಕ್ಕೆ ಹೋಗಿ ವಾಪಸ್ಸು ಬಂದು ನೊಡಲಾಗಿ ನನ್ನ ಬಾಬ್ತು ಕೆ.ಎ-51 ಹೆಚ್-9536 ಮೋಟಾರ್ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಕದ್ದಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-03-2013 ರಂದು ಪಿರ್ಯಾದಿ ಸುಜಯ್.ಕೆ. ಬಿನ್. ಕೃಷ್ಣಕುಮಾರ್, ಕಡತನಾಳು ಗ್ರಾಮ, ಎಸ್.ಆರ್.ಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ಮೂತರ್ಿ ಬಿನ್ ಪುಟ್ಟಸ್ವಾಮಿ,28 ವರ್ಷ, ಬನ್ನೂರು ಗ್ರಾಮ ರವರಿಗೆ ಯಾವುದೋ ವಿಷದ ಹಾವು ಆತನ ಬಲಕಾಲಿನ ಪಾದದ ಮೇಲಿನ ಭಾಗಕ್ಕೆ ಎರಡು ಕಡೆ ಕಚ್ಚಿದ್ದು, ನಾವುಗಳು ತಕ್ಷಣ ಮೂತರ್ಿಯನ್ನು ಚಿಕಿತ್ಸೆ ಬಗ್ಗೆ ಪಾಂಡವಪುರ ಚಚರ್್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಎಂದು ವೈಧ್ಯರು ತಿಳಿಸಿದರು. ಮೃತನ ಸಾವಿಗೆ ಯಾವುದೇ ಅನು ಮಾನ ಇರುವುದಿಲ್ಲ, ಮೂರ್ತಿಗೆ ಯಾವುದೋ ವಿಷದ ಹಾವು ಕಚ್ಚಿ ಮೃತಪಟ್ಟಿರುತ್ತಾನೆ ಎಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ತಾವುಗಳು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
No comments:
Post a Comment