Moving text

Mandya District Police

DAILY CRIME REPORT DATED : 20-03-2013

  ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-03-2013 ರಂದು ಒಟ್ಟು 35 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ                 2 ವಾಹನ  ಕಳವು ಪ್ರಕರಣಗಳು,  1 ಕಳ್ಳತನ ಪ್ರಕರಣ,  3 ಮನುಷ್ಯ ಕಾಣೆಯಾದ ಪ್ರಕರಣಗಳು,  2 ಯು.ಡಿ.ಆರ್.    ಪ್ರಕರಣಗಳು,  2 ವರದಕ್ಷಿಣೆ ಕಿರುಕುಳ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣಗಳು


ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 379,  ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಎಂ.ಆರ್,ನಂದೀಶ ಬಿನ್. ಲೇಟ್ ಎಂ.ಕೆ,ರಾಮಕೃಷ್ಣ  ಮಂಡ್ಯ ರವರು ನೀಡಿದ ದೂರು  ಏನೆಂದರೆ  ದಿನಾಂಕ: 17-03-2013 ರ  ರಾತ್ರಿ  09-00 ಗಂಟೆಯಲ್ಲಿ, ಎಸ್. ಎಫ್. ಸರ್ಕಲ್  ಬಳಿ  ಇರುವ  ನಂದಿನಿ ಪಾರ್ಲರ್  ಹತ್ತಿರ  ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು  ಟಿವಿಎಸ್  ಮೊಪೆಡ್  ನಂಬರ್ ಕೆ,ಎ.-11-ಇ-ಎ-2317ನ್ನು ಕಳ್ಳತನ ಮಾಡಿರುತ್ತಾರೆ  ಕಳುವಾಗಿರುವ  ಮೊಪೆಡ್ ನ್ನು ಪತ್ತೆ ಮಾಡಿಕೊಡಬೇಕೆಂದು  ನೀಡಿದ  ದೂರಿನ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. 379 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಎಲ್. ಭಾಸ್ಕರ್ ರೆಡ್ಡಿ ಬಿನ್. ಲೇಟ್. ಎಲ್. ಬಾಲಿರೆಡ್ಡಿ, ಹುಲ್ಕೆರೆ ಕೊಪ್ಪಲು ಗ್ರಾಮ ರವರು ನೀಡಿದ  ದೂರಿನ ವಿವರವೇನೆಂದರೆ  ಯಾರೋ  ಕಳ್ಳರು ಟಿಪ್ಪರ್ ಲಾರಿ ನಂಬರ್ ಕೆ.ಎ.09, ಇ. 6131 ನ್ನು ಕಳ್ಳತನ ಮಾಡಿರುತ್ತಾರೆ,  ಕಳ್ಳತನವಾಗಿರುವ ನನ್ನ ಟಿಪ್ಪರ್ ಲಾರಿಯನ್ನು ಮತ್ತು ಕಳ್ಳನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ


ಕಳ್ಳತನ ಪ್ರಕರಣ :

ಅರಕೆರೆ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 457-380 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಕಾಂಚನಾ ಮಾಲ.ಕೆ.ಎಲ್, ಮುಖ್ಯೋಪಾಧ್ಯಾಯರು, ಸರ್ಕಾರಿ  ಪ್ರೌಢಶಾಲೆ, ದೊಡ್ಡಪಾಳ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಯಾರೋ  ಕಳ್ಳರು  ಶಾಲೆಯ ಕಂಪ್ಯೂಟರ್  ಕೊಠಡಿಯ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಕೊಠಡಿಯ ಒಳಭಾಗ ಇದ್ದ ಕಂಪ್ಯೂಟರ್ ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ  ಅಂದಾಜು ಬೆಲೆಃ 1,76,000/- ರೂ.ಗಳು ಆಗುತ್ತವೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 58/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
   
    ದಿನಾಂಕ: 20-03-2013 ರಂದು ಪಿರ್ಯಾದಿ ಪಿರ್ಯಾದಿಯವರು ನೀಡಿದ ದೂರು ಏನೆಂದರೆ ದಿನಾಂಕಃ 13-03-2013 ಬೆಳ್ಳಿಗೆ 9-00ಗಂಟೆ ವಳಗೆರೆಪುರ ಗ್ರಾಮದ ಪಿರ್ಯಾದಿಯವರ  ಮನೆಯಿಂದ ಎಂ ಡಿ ಸೈಫುಲ್ಲಾ, 15 ವರ್ಷ, ವಳಗೆರೆಪುರ ರವರು ಶಾಲೆಗೆ ಹೋಗುತ್ತೇನೆಂದು ಬೆಳಿಗ್ಗೆ 09-00 ಗಂಟೆಗೆ ಮನೆ ಬಿಟ್ಟು ಹೋದವನು ಇದುವರೆವಿಗೂ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

    ದಿನಾಂಕ: 20-03-2013 ರಂದು ಪಿರ್ಯಾದಿ ಮಂಜು ಬಿನ್ ಲೇಟ್ ಪುಟ್ಟಬಸವಚಾರಿ ಅವ್ವೇರಹಳ್ಳಿ ಗ್ರಾಮ ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕ:19-03-2013 ರಂದು ನಾಗರತ್ನಮ್ಮ ಕೋಂ. ಮಂಜು ರವರು ಶ್ರೀರಂಗಪಟ್ಟಣಕ್ಕೆ ಗಾಮರ್ೆಂಟ್ಸ್ ಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯವರೆಗೂ ವಾಪಸ್ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಹುಡುಗಿ ಕಾಣೆಯಾಗಿದಾಳೆ.

     ದಿನಾಂಕ: 20-03-2013 ರಂದು ಪಿರ್ಯಾದಿ  ಭಾಗ್ಯ ಕೊಂ. ಲೇಟ್. ಬಸವರಾಜಯ್ಯ, ವಿ.ಸಿ. ಫಾರಂ, ದುದ್ದ  ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಗೀತಾಂಜಲಿ ರವರು  ದಿನಾಂಕ: 04-03-2013 ರಂದು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಯು.ಡಿ.ಆರ್. ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ: 20-03-2013  ರಂದು ಪಿರ್ಯಾದಿ ಎನ್,ಸುಬ್ಬಯ್ಯ ಬಿನ್. ಲೇಟ್. ನೀಲೆಗೌಡ,  60ವರ್ಷ. ಒಕ್ಕಲಿಗರು, ವ್ಯವಸಾಯ, ಕ್ಯಾತೇಗೌಡನದೊಡ್ಡಿ ಗ್ರಾಮ, ಕಸಬಾ ಹೋಬಳಿ ರವರು ನೀಡಿದ ದೂರು ಏನೆಂದರೆ ಅಪರಿಚಿತ ಗಂಡಸು ಈತನಿಗೆ ಶಿಶ್ನದ ಮೇಲ್ಬಾಗ  ಹೊಟ್ಟೆಯ ಹತ್ತಿರ ಯಾವುದೋ ಆಸ್ಪತ್ರೆಯಲ್ಲಿ ಶಸ್ರ್ರ ಚಿಕಿತ್ಸೆ  ಮಾಡಿಸಿ ಮೂತ್ರದ ಪೈಪನ್ನು ಅಳವಡಿಸಿದ್ದು  ನೋವನ್ನು  ತಾಳಲಾರದೆ   ಕನಕಪುರ  ರಸ್ತೆಯ  ನಿಡಗಟ್ಟ ಬಸ್  ನಿಲ್ದಾಣದ  ಬಳಿ  ಅರೇವಾ ಎಂಬ ಕ್ರಿಮಿನಾಶಕವನ್ನು  ಸೇವನೆ ಮಾಡಿ ಸ್ಥಳದಲ್ಲಿ  ಸತ್ತು ಹೋಗಿರುವುದಾಗಿ  ಪಿರ್ಯಾದು  ನೀಡಿದ  ಮೇರೆಗೆ  ಪ್ರಕರಣ ದಾಖಲಿಸಲಾಗಿದೆ.


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ:  20-03-2013  ರಂದು ಪಿರ್ಯಾದಿ ಸಿದ್ದರಾಜು ಬಿನ್.  ಸಿದ್ದಯ್ಯ, ಹುಲ್ಲಂಬಳ್ಳಿ  ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ತಂದೆ ಸಿದ್ದಯ್ಯ, ಹುಲ್ಲಂಬಳ್ಳಿ ಗ್ರಾಮ, ಮಳವಳ್ಳಿ ತಾ|| ರವರು ದಿನಾಂಕ: 18-03-2013 ರಂದು ಜೀವನದಲ್ಲಿ ಜಿಗುಪ್ಸೆಗೊಂಡು ಕಾಳುಗಳಿಗೆ ಹಾಕುವ ಕ್ರಿಮಿನಾಶಕದ ಗುಳಿಗೆಗಳನ್ನು ಸೇವಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕಾವೇರಿ ನಸರ್ಿಂಗ್ ಹೋಂನಲ್ಲಿ ದಾಖಲಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
   

ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 498(ಎ), 506, ಕೂಡ 34 ಐ.ಪಿ.ಸಿ.      

    ದಿನಾಂಕ: 20-03-2013 ರಂದು ಪಿರ್ಯಾದಿ ರೂಪ ಕೋಂ ನಾಗಲಿಂಗೇಗೌಡ, ಸಾಹಳ್ಳೀ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ಅವರ ಗಂಡ ನಾಗ  ಲಿಂಗೇಗೌಡ ಹಾಗು ಜಯಮ್ಮ, ಸಾಹಳ್ಳೀ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಸಂಸಾರದ ವಿಚಾರದಲ್ಲಿ ಮದುವೆಯಾದಗಿನಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

 2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 46/13 ಕಲಂ. 498(ಎ), 323, 504 ಕೂಡ 34 ಐ.ಪಿ.ಸಿ.

    ದಿನಾಂಕ: 20-03-2013 ರಂದು ಪಿರ್ಯಾದಿ ಸುಧಾ ಕೋಂ ಮಹದೇವು, ನೆಲ್ಲೂರು ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಚಿಕ್ಕಕೆಂಪನ ಮಾದೇಗೌಡ, 2]ನಿಂಗಮ್ಮ, 3]ಲೋಕೇಶ, ನೆಲ್ಲೂರು ಗ್ರಾಮ, ಮಳವಳ್ಳಿ ತಾಲ್ಲೂಕು ರವರುಗಳು ಸಂಸಾರದ ವಿಚಾರದಲ್ಲಿ ಮದುವೆಯಾದಗಿನಿಂದಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಬೆದರಿಕೆ ಹಾಕುತ್ತಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ರಸ್ತೆ ಅಪಘಾತ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 45/13 ಕಲಂ. 279, 337,304(ಎ) ಐ.ಪಿ.ಸಿ. ರೆ:ವಿ 187 ಐ.ಎಂ.ವಿ ಕಾಯ್ದೆ.

    ದಿನಾಂಕ: 20-03-2013 ರಂದು ಪಿರ್ಯಾದಿ ನಾಗೇಶ ಬಿನ್ ಸಣ್ಣಮಾಯೀಗೌಡ, ವಯಸ್ಸು 28 ವರ್ಷ, ಹಾಲುಮತ, ವ್ಯವಸಾಯ,  ಕರಿಹುರಳಿ ಕೊಪ್ಪಲು  ಗ್ರಾಮ,  ಬನ್ನೂರು ಹೋಬಳಿ, ಟಿ.ಎನ್.ಪುರ  ತಾಲ್ಲೋಕು.  ಮೈಸೂರು  ಜಿಲ್ಲೆ, ಮೊ.ನಂ.9743736647  ರವರು ನೀಡಿದ ದೂರಿನ ವಿವರವೇನೆಂದರೆ  ಏಂ-11 -9579 ರ ಗೂಡ್ಸ್ ಆಟೋ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತದೆ, ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವುಗಳು ಹೋಗುತ್ತಿದ್ದ ಮೋಟಾರ್ ಸೈಕಲ್ಗೆ ಡಿಕ್ಕಿ ಮಾಡಿಸಿದ ಪರಿಣಾಮ ಮೋಟಾರ್ ಸೈಕಲ್ ಓಡಿಸುತ್ತಿದ್ದ ಬಸವರಾಜು ಮತ್ತು ನಾನು ಕೆಳಕ್ಕೆ ಬಿದ್ದಾಗ ಬಸವರಾಜುವಿಗೆ ಪೆಟ್ಟಾಗಿ ಸ್ಥಳದಲ್ಲೇ ಸತ್ತುಹೋಗಿರುತ್ತಾನೆ. ಹಾಗೂ ನನಗೆ ಬಲ ಮುಂಡಿ, ಬಲಭಾಗದ ಕಿವಿ ಹತ್ತಿರ, ಬಲಕಣ್ಣು, ಎಡಕಣ್ಣುಗಳಿಗೆ ಹಾಗೂ ಇತರೆ ಕಡೆಗಳಿಗೆ ಪೆಟ್ಟಾಗಿರುತ್ತೆ ಈ ಬಗ್ಗೆ ಪ್ರಕರಣ ದಾಖಲಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 279, 304 (ಎ), 120 (ಬಿ) ಕೂಡ 201 ಐಪಿಸಿ ಮತ್ತು 187 ಐಎಂವಿ ಆಕ್ಟ್.

    ದಿನಾಂಕ: 20-03-2013 ರಂದು ಪಿರ್ಯಾದಿ ಪೊನ್ನುಸ್ವಾಮಿ ಬಿನ್. ಲೇ|| ರಾಜು, ರವರು ನೀಡಿದ ದೂರಿನ ಸಾರಾಂಶ ವೇನೆಂದರೆ ದಿನಾಂಕ;-18/19-03-2013 ರಂದು  ಪಿರ್ಯಾದಿ ಆರೋಪಿಗಳಾದ ಲಾರಿ ಡ್ರೈವರ್ ಇತರೆ 6 ಜನರು ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯವರ ತಮ್ಮನ ಎದೆಯ ಮೇಲೆ ಹರಿಸಿದ್ದಾಗ ಫಿರ್ಯಾದಿಯವರ ತಮ್ಮ ರಕ್ತ ಕಕ್ಕಿ ಸ್ಥಳದಲ್ಲಿಯೇ ಸತ್ತುಹೋಗಿದ್ದು,  ಯಾರಿಗೂ ಗೊತ್ತಾಗುವುದು  ಬೇಡ ಪೊಲೀಸರಿಗೂ ತಿಳಿಸುವುದು ಬೇಡ ಇಲ್ಲಿಯೇ ಎಲ್ಲರೂ ಸೇರಿ ಸುಟ್ಟುಹಾಕಿಬಿಡೋಣ ಎಂದು ಹೇಳಿದಾಗ ಆರೋಪಿಗಳೆಲ್ಲರೂ ಸೇರಿಕೊಂಡು ಹೆಣವನ್ನು ರುದ್ರೇಶನ ತಂದೆ, ತಾಯಿಯನ್ನು ಸಮಾಧಿ ಮಾಡಿರುವ ಜಾಗದ ಹತ್ತಿರಕ್ಕೆ ತೆಗೆದುಕೊಂಡು ಹೋಗಿ, ಆದಿನ ರಾತ್ರಿಯೇ ಟೈರ್ ಗಳನ್ನು ಮತ್ತು ಸೌದೆ ತುಂಡುಗಳನ್ನು ಹಾಕಿ ಸುಟ್ಟು ಹಾಕಿರುತ್ತಾರೆ. ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment