ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಯು.ಡಿ.ಆರ್. ಪ್ರಕರಣಗಳು, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಕಳ್ಳತನ ಪ್ರಕರಣ ಹಾಗು 14 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ:21-03-2013 ರಂದು ಪಿರ್ಯಾದಿ ನಾಗರತ್ನ ಕೋಂ. ಗೋವಿಂದ, 22 ವರ್ಷ, ಕುಂಬಾರಶೆಟ್ಟರು, ತರೀಪುರಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಗೋವಿಂದರವರ ಮನೆಯಲ್ಲಿ ದವಸ ಧಾನ್ಯ ಗಳನ್ನು ಕೆಡದಂತೆ ಇಡಲು ತಂದಿಟ್ಟಿದ್ದ ಮಾತ್ರೆಗಳನ್ನು ನುಂಗಿದ್ದರಿಂದ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆ ಬಗ್ಗೆ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗೋವಿಂದ ದಿನಾಂಕಃ 21-03-2013ರಂದು ರಾತ್ರಿ 08-15 ಗಂಟೆಗೆ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 04/2013 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 21-03-2013 ರಂದು ಪಿರ್ಯಾದಿ ಪ್ರಸನ್ನ ಬಿನ್. ತಿಮ್ಮಯ್ಯ, 26 ವರ್ಷ, ಮಡಿವಾಳಸೆಟ್ಟಿ ಜನಾಂಗ, ನಿಲುವಾಗಿಲು ಗ್ರಾಮ, ಕೊಪ್ಪ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಾಘವೇಂದ್ರ ಬಿನ್ ವೆಂಕಟೇಶ, 16 ವರ್ಷ ರವರು 21-03-2013ರಂದು ನಿಲುವಾಗಿಲು ಗ್ರಾಮದಲ್ಲಿ ತೆಂಗಿನ ಮರದಲ್ಲಿ ಎಳನೀರು ಕೀಳಲು ಹೋಗಿದ್ದಾಗ ಒಂದು ತೆಂಗಿನ ಗರಿ ವಿದ್ಯುತ್ ಲೈನ್ ಗೆ, ತಗಲಿದ್ದನ್ನು ಕಟ್ ಮಾಡಿ ಸರಿಸುತ್ತಿದ್ದಾಗ ಅಕಸ್ಮಿಕವಾಗಿ ವಿದ್ಯುತ್ ಶಾಕ್ ಅಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. ಹುಡುಗ ಕಾಣಿಯಾಗಿದ್ದಾನೆ.
ದಿನಾಂಕ: 21-03-2013 ರಂದು ಪಿರ್ಯಾದಿ ಕೆ.ಎಲ್. ಚಂದ್ರಪ್ಪ ಬಿನ್. ಲಿಂಗಯ, ಕ್ಯಾತಘಟ್ಟ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಎನ್. ಟಿ.ನಂದೀಶ್, ವಯಸ್ಸು 17 ವರ್ಷ, ರವರು 19-03-13 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಕ್ಯಾತಘಟ್ಟ ಗ್ರಾಮ, ಸಿ.ಎ.ಕೆರೆ ಹೋಬಳಿ ಇಲ್ಲಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. ಹುಡುಗಿ ಕಾಣಿಯಾಗಿದ್ದಾಳೆ.
ದಿನಾಂಕ: 21-03-2013 ರಂದು ಪಿರ್ಯಾದಿ ಬಿ.ಎಂ.ಕುಮಾರ್ ಸ್ವಾಮಿ ಬಿನ್. ಮಾದಯ್ಯ ಬಿ. ಬೊಮ್ಮನದೊಡ್ಡಿ ಗ್ರಾಮ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ತಂಗಿಯು ಬೊಮ್ಮನದೊಡ್ಡಿ ಗ್ರಾಮರವರು ನಮ್ಮ ಮನೆಯಿಂದ ಕಾಣಿಯಾಗಿರುತ್ತಾಳೆ. ದುಂಡನಹಳ್ಳಿ ಗ್ರಾಮದ ಚಿಕ್ಕಲಿಂಗಯ್ಯನವರ ಮಗ ಮಹೇಂದ್ರ ಕರೆದುಕೊಂಡು ಹೋಗಿರುತ್ತಾರೆಂದು ತಿಳಿದುಬಂದಿರುತ್ತೆ. ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 152/13 ಕಲಂ. 457-380 ಐ.ಪಿ.ಸಿ.
ದಿನಾಂಕ: 21-03-2013 ರಂದು ಪಿರ್ಯಾದಿ ಅನ್ನಪೂರ್ಣ, ಅಂಗನವಾಡಿ ಕಾರ್ಯಕರ್ತೆ, ಹೊಸೂರು ಕಾಲೋನಿ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಅಂಗನಾಡಿ ಬಾಗಿಲು ಮುರಿದು ಒಂದು ಗ್ಯಾಸ್ ಸಿಲಿಂಡರ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಬೆಲೆ ರೂ.1500/- ರೂ ಬೆಲೆ ಆಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment