Moving text

Mandya District Police

DAILY CRIME REPORT DATED : 23-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು,  2 ರಸ್ತೆ ಅಪಘಾತ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,     1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 119/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 23-03-2013 ರಂದು ಪಿರ್ಯಾದಿ ಕರಿಯಪ್ಪ @ ಬಿಕ್ಲಯ್ಯ ಬಿನ್. ಲೇಟ್. ಕರಿಯಪ್ಪ, ಆಲೆಮರದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಕರಿಯಪ್ಪ, ಬಿನ್. ಕರಿಯಪ್ಪ @  ಬಿಕ್ಲಯ್ಯ, 23ವರ್ಷ ರವರು ದಿನಾಂಕ: 20-03-2013  ರಂದು ಮದ್ಯಾಹ್ನ 02-00 ಗಂಟೆಯಲ್ಲಿ ಮಾಲಗಾರನೆಹಳ್ಳಿಯಿಂದ ನೀರು ಕುಡಿದು ಬರುವುದಾಗಿ ಮಾಲಗಾರನಹಳ್ಳಿ ಗ್ರಾಮಕ್ಕೆ ಹೋಗಿದ್ದು, ವಾಪಸ್ ಬಾರದೇ ಗ್ರಾಮಕ್ಕೂ ಹೋಗದೆ ಎಲ್ಲಿಯೋ ಕಾಣೆಯಾಗಿರುತ್ತಾನೆ ಈತನು ಬುದ್ದಿಮಾಂದ್ಯನಾಗಿರುತ್ತಾನೆ ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ. 

     ದಿನಾಂಕ: 23-03-2013 ರಂದು ಪಿರ್ಯಾದಿ ಆಯಿಷಾ ಕೋಂ. ಮಮತಾಜ್ ಖಾನ್, ಎಂ.ಎನ್.ಪಿ.ಎಂ ಸರ್ಕಲ್, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಮತಾಜ್ಖಾನ್ ಬಿನ್. ತಾಯರ್ ಖಾನ್, 27 ವರ್ಷ ರವರು ದಿನಾಂಕ:  07-01-2009 ರಂದು ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣ :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.

 ದಿನಾಂಕ: 23-03-2013 ರಂದು ಪಿರ್ಯಾದಿ ವೈ.ಎಸ್.ರಾಘವೇಂದ್ರ ಬಿನ್. ಲೇಟ್. ಸ್ವಾಮಿ, ಎಲೆಚಾಕನಹಳ್ಳಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಅಜ್ಜಿ ನಿಂಗಮ್ಮ ರವರು ಬೆಂಗಳೂರು-ಮೈಸೂರು ರಸ್ತೆಯನ್ನು ದಾಟುತ್ತಿದ್ದಾಗ ಯಾವುದೋ ವಾಹನ ವನ್ನು ಅದರ ಚಾಲಕ ಮೈಸೂರು ಕಡೆಯಿಂದ ಬೆಂಗಳೂರು ಕಡೆಗಾದಂತೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೇಲ್ಕಂಡ ನಿಂಗಮ್ಮ ರವರಿಗೆ ಡಿಕ್ಕಿ ಮಾಡಿಸಿ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿದ್ದು, ನಿಂಗಮ್ಮಳಿಗೆ ತಲೆ, ಮೈ ಕೈಗೆ ಪೆಟ್ಟಾಗಿದ್ದು ರಕ್ತ ಬರುತ್ತಿದ್ದು, 108 ಆಂಬುಲೆನ್ಸ್ನಲ್ಲಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 09-10 ಗಂಟೆಯ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 279.337.304(ಎ) ಐಪಿಸಿ ಕೂಡ 184 ಐ.ಎಂ.ವಿ. ಕಾಯ್ದೆ.

ದಿನಾಂಕ: 23-03-2013 ರಂದು ಪಿರ್ಯಾದಿ ಪ್ರಕಾಶ ಬಿನ್. ರಂಗಪ್ಪ, ರಾಮನಕೊಪ್ಪಲು ಗ್ರಾಮ, ಕೆ.ಆರ್.ಪೇಟೆ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಕೆಎ/ 13/ಇಎ/3936 ರ ಹೀರೋ ಸ್ಪ್ಲೆಂಡರ್ ಪ್ಲಸ್ ಸವಾರ ಬೈಕನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಮತ್ತು ಅಪಾಯಕಾರಿಯಾಗಿ ಓಡಿಸಿಕೊಂಡು ಬಂದು ರಾಮೇಗೌಡರವರು ಹೋಗುತ್ತಿದ್ದ ಕೆಎ-13-ಯು-7195 ಫ್ಯಾಶನ್ ಪ್ಲಸ್ ಬೈಕಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಎರಡೂ ಬೈಕಿನಲ್ಲಿದ್ದವರಿಗೆ ಪೆಟ್ಟಾಗಿ, ಅಲ್ಲೇ ರಾಮೇಗೌಡರ ಹಿಂಭಾಗ ಆಟೋವನ್ನು ಓಡಿಸಿಕೊಂಡು ಹೋಗುತ್ತಿದ್ದು ನಾನು ಕೃತ್ಯವನ್ನು ನೋಡಿ 108 ವಾಹನದಲ್ಲಿ ಶ್ರವಣಬೆಳಗೊಳ ಆಸ್ಪತ್ರೆಗೆ ಸೇರಿಸಿದ್ದು, ಶ್ರವಣಬೆಳಗೊಳ ಆಸ್ಪತ್ರೆಯ ವೈಧ್ಯಾಧಿಕಾರಿಗಳು ರಾಮೇಗೌಡರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಆರೋಪಿ ಮೋಟಾರ್ ಸೈಕಲ್ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-03-2013 ರಂದು ಪಿರ್ಯಾದಿ ಎಂ.ಕೆ.ಪುಟ್ಟಸ್ವಾಮಿ ಬಿನ್. ಕರಿಯಪ್ಪ, 43ವರ್ಷ ರವರು ನೀಡಿದ ದೂರು ಏನೆಂದರೆ ನಿಂಗರಾಜು ಬಿನ್. ರಾಮಲಿಂಗಯ್ಯ, 26ವರ್ಷ ರವರಿಗೆ ಔಷದಿ ಮಾತ್ರೆಗಳನ್ನು ತೆಗೆದುಕೊಂಡರು ಸಹ ಹೊಟ್ಟನೋವು ಗುಣಮುಖವಾಗದೇ ಇದ್ದುದರಿಂದ ರೇಷ್ಮೆ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಕುಡಿದಿದ್ದು ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದೆವು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ-23-03-2013 ರಂದು ಬೆಳಗಿನ ಜಾವ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯುಡಿಆರ್ ನಂ 17/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 23-03-2013 ರಂದು ಪಿರ್ಯಾದಿ ಶಂಕರ ಬಿನ್. ಮಣಿ, ಪಶ್ಚಿಮವಾಹಿನಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಕಾವೇರಮ್ಮ ಚೌಲ್ಟರಿ ಬಳಿ ಸುಮಾರು 70 ವರ್ಷ, ಹೆಸರು ವಿಳಾಸ ಗೊತ್ತಿಲ್ಲದ, ಅಪರಿಚಿತ ಗಂಡಸು ಸತ್ತು ಹೋಗಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 504-498(ಎ)-506 ಕೂಡ 34 ಐ.ಪಿ.ಸಿ.

ದಿನಾಂಕ:23-03-2013 ರಂದು ಪಿರ್ಯಾದಿ ವನಜಾಕ್ಷಮ್ಮ ಕೋಂ. ಮಂಜೇಗೌಡ, ಗೌಡೇನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಮಂಜೇಗೌಡ 2) ಗಿಡ್ಡಮ್ಮ 3) ವಸಂತಿ 4) ಸುರೇಶ ಎಲ್ಲರೂ ಗೌಡೇನಹಳ್ಳಿ ಗ್ರಾಮದವರು ಪಿಯರ್ಾದಿಯವರನ್ನು ಬಾಯಿಗೆ ಬಂದಂತೆ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟು ಕೊಲೆ ಬೆದರಿಕೆಯನ್ನು ಹಾಕಿ ಅವಮಾನಗೊಳಿಸಿ ನೀನು ನಮ್ಮ ಮನೆಗೆ ಬರಬೇಡ, ಇನ್ನೊಂದು ಸಲ ಬಂದರೆ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment