ದಿನಾಂಕ: 24-03-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ವಂಚನೆ/ನಂಬಿಕೆ ದ್ರೋಹ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 62/13 ಕಲಂ. 504-498(ಎ)-324-506 ಐ.ಪಿ.ಸಿ.
ದಿನಾಂಕ: 24-03-2013 ರಂದು ಪಿರ್ಯಾದಿ ಸುಮಲತಾ, ಕೃಷ್ಣಾಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಕೆ.ಎನ್.ರವಿ ಬಿನ್ ನಂಜಪ್ಪ, ಕೃಷ್ಣಾಪುರ ಗ್ರಾಮ ರವರು ಪಿರ್ಯಾದಿಯವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದ್ದು, ದಿನಾಂಕ: 23-03-2013 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಪಿರ್ಯಾದಿಯವರಿಗೆ ಆರೋಪಿತನು ನನ್ನ ಜೇಬಿನಲ್ಲಿ ಏಕೆ ಹಣವನ್ನು ತೆಗೆದುಕೊಂಡಿದ್ದಿಯಾ ಎಂದು ಜಗಳ ತೆಗೆದು ಬಾಯಿಗೆ ಬಂದಂತೆ ಬೈದು ಕಲ್ಲಿನಿಂದ ತಲೆಗೆ ರಕ್ತಗಾಯವಾಗುವಂತೆ ಹೊಡೆದು ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಗಲಾಟೆ ಮಾಡಿರುತ್ತಾನೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 24-03-2013 ರಂದು ಪಿರ್ಯಾದಿ ಸಿ. ನರಸೇಗೌಡ, ಕೆ.ಇ.ಬಿ ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 22 -03-2013 ರಂದು ಅವರ ಮಗಳು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ ಇದುವರೆಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆ ಆಗಿರುವುದಿಲ್ಲ ಆದ್ದರಿಂದ ಕಾಣೆಯಾಗಿರುವ ನವ್ಯಶ್ರೀಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ/ನಂಬಿಕೆ ದ್ರೋಹ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 112/13 ಕಲಂ. 406 ಐ.ಪಿ.ಸಿ.
ದಿನಾಂಕ: 24-03-2013 ರಂದು ಪಿರ್ಯಾದಿ ವಿ.ಕಿರಣ್ ಕುಮಾರ್, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 15-03-2013 ರಂದು ಆರೋಪಿ ವಿಶ್ವ, ಪಾಂಡವಪುರ ಟೌನ್` ನಿವಾಸಿ ಇವರು ಪಿರ್ಯಾದಿಯವರ ಹಿರೋಹೋಂಡ ಸ್ಪ್ಲಂಡರ್ ಬೈಕ್. ನಂ. ಕೆ.ಎ-11-ಕೆ-5146 ಬೈಕನ್ನು ತೆಗೆದುಕೊಂಡು ಹೊಗಿದ್ದು ತಂದುಕೊಡದೆ ನಂಬಿಕೆ ದ್ರೋಹಮಾಡಿದ್ದು ಕೊಲೆ ಬೆದರಿಕೆ ಹಾಕಿದ್ದರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment