ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-03-2013 ರಂದು ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ರಾಬರಿ ಪ್ರಕರಣ, 1 ಅಪಹರಣ ಪ್ರಕರಣ, 1 ಕಳ್ಳತನ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 21 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 279,304 [ಎ] ಐಪಿಸಿ ರೆ/ವಿ 187 ಐಎಂವಿ ಕಾಯ್ದೆ.
ದಿನಾಂಕ: 29-03-2013 ರಂದು ಪಿರ್ಯಾದಿ ಬಸವರಾಜು ಬಿನ್. ಮರಿಸಿದ್ದೇಗೌಡ, 31 ವರ್ಷ, ಒಕ್ಕಲಿಗರು, ವ್ಯವಸಾಯ, ಬಸವನಹಳ್ಳಿ ಗ್ರಾಮ, ಬನ್ನೂರು ಹೋಬಳಿ, ಟಿ. ನರಸಿಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿ: 28-03-2013 ರಂದು ರಾತ್ರಿ 8-40 ಗಂಟೆಯಲ್ಲಿ ಶ್ರೀರಂಗಪಟ್ಟಣ-ಬನ್ನೂರು ರಸ್ತೆ, ಮಂಡ್ಯ ಕೊಪ್ಪಲು ಬಳಿ ಆರೋಪಿ ಕೆ.ಎ-55-125 ರ ಟಿಪ್ಪರ್ ಚಾಲಕ ಚಾಲನೆ ಮಾಡಿಕೊಂಡು ಬಂದು ಗೂಡ್ಸ್ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ನವೀನ ಮತ್ತು ಕುಮಾರನಿಗೆ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ಆರೋಪಿ ಟಿಪ್ಪರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 392 ಐ.ಪಿ.ಸಿ.
ದಿನಾಂಕ: 29-03-2013 ರಂದು ಪಿರ್ಯಾದಿ ನಾಗಮಣಿ ಕೋಂ. ನಿಂಗರಾಜು, 33 ವರ್ಷ, ಗೃಹಿಣಿ, ದೊಡ್ಡಬ್ಯಾಡರಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:-29-03-13 ರಂದು ಬೆಳಿಗ್ಗೆ 11-30 ರ ಸಮಯದಲ್ಲಿ ಪಿರ್ಯಾದಿರವರು ತಮ್ಮ ಸಂಬಂಧಿಕರ ಸಾವಿಗೆ ಹೋಗಲು ಕಿರಗಂದೂರು ಗೇಟ್ ನಲ್ಲಿ ಇಳಿದು ಕಿರಗಂದೂರು ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಯಾರೋ ಇಬ್ಬರು ಅಪರಿಚಿತ ಹುಡುಗರು ಒಂದು ಬೈಕ್ ನ್ನು, ನಿಲ್ಲಿಸಿಕೊಂಡು ನಿಂತಿದ್ದವರು ನಾನು ಬರುವುದನ್ನು ನೋಡಿ ನಾನು ಸಾವಿಗೆ ಬರ್ತಿದೀನಿ ಎಂದು ಒಬ್ಬ ಮಾತನಾಡಿಕೊಂಡು ಬಂದವನೆ ನನ್ನ ಕುತ್ತಿಗೆಗೆ ಕೈ ಹಾಕಿ ನನ್ನ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಬೈಕ್ ನಲ್ಲಿ ಮಂಡ್ಯದ ಕಡೆಗೆ ಹೊರಟು ಹೋದರು. ನನ್ನ ಬಳಿ ಕಿತ್ತುಕೊಂಡು ಹೋದ ಒಂದು ರೋಲ್ಡ್ ಗೋಲ್ಡ್ ನ ಮಾಂಗಲ್ಯ ಸರ, ಹಾಗೂ ಅದರಲ್ಲಿದ್ದಚಿನ್ನದ 2 ತಾಳಿಗಳು, 1 ಕಾಸು, 2 ಗುಂಡುಗಳು, ಒಟ್ಟು 7 ಗ್ರಾಂ ತೂಕದವುಗಳು. ಒಟ್ಟು ಬೆಲೆ ಸುಮಾರು 15,000/ ರೂಗಳಾಗಿದ್ದು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 366[ಎ] ಐ.ಪಿ.ಸಿ.
ದಿನಾಂಕ: 29-03-2013 ರಂದು ಪಿರ್ಯಾದಿ ಸರ್ದಾರ್ ಬಿನ್. ಶಬ್ಬೀರ್ ಅಹಮದ್, ಮಹಾಂಕಾಳೇಶ್ವರಿ ಬಡಾವಣೆ, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ:24-03-2013 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ, ಮಹಾಂಕಾಳೇಶ್ವರಿ ಬಡಾವಣೆಯಲ್ಲಿ ಅವರ 15 ವರ್ಷದ ಹುಡುಗಿಯನ್ನು ಅಪಹರಿಸಿರುತ್ತಾರೆಂದು ಶಂಕೆಯು ನಮಗೆ ಇದೆ. ಆದ್ದರಿಂದ ತಾವುಗಳು ದಯಮಾಡಿ ಮೇಲ್ಕಂಡ ಹಾಜಿರಾ ಎಂಬುವವಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರುನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. 457-380 ಐ.ಪಿ.ಸಿ.
ದಿನಾಂಕ: 29-03-2013 ರಂದು ಪಿರ್ಯಾದಿ ಸಿರಾಜ್ ಉನ್ನೀಸಾ, ಮುಖ್ಯಶಿಕ್ಷಕಿ, ಸಕರ್ಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 28-03-2013 ರಂದು ರಾತ್ರಿ ವೇಳೆ ಶಾಲೆಯ ಕೆಲಸ ಕಾರ್ಯಗಳನ್ನು ಮುಗಿಸಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ಯಾವುದೋ ಆಯುಧದಿಂದ ಮೀಟಿ ಒಳಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ಭಾರತ್ ಕಂಪನಿಯ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 3000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 29-03-2013 ರಂದು ಪಿರ್ಯಾದಿ ಎನ್.ವಿ.ವೇಣು ಗೋಪಾಲ್ ಬಿನ್. ಎನ್.ವಿ.ಸಂತೋಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 29-03-2013 ರ ಸಂಜೆ 06-00 ಗಂಟೆಯಲ್ಲಿ ಮೈಸೂರು - ಬೆಳ್ಳೂರು ಮುಖ್ಯ ರಸ್ತೆಯಲ್ಲಿರುವ ಫಿರ್ಯಾದಿಯವರ ಬಾಬ್ತು ದಿನಸಿ ಅಂಗಡಿ ಬಳಿ ಸುಮಾರು, 50 ವರ್ಷ ವಯಸ್ಸಿನ ಅಪರಿಚಿತ ಗಂಡಸು, ಹೆಸರು ವಿಳಾಸ ಗೊತ್ತಿರುವುದಿಲ್ಲ ಇವರು ಯಾವುದೋ ಖಾಯಿಲೆಯಿಂದ ನರಳಿ ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 498[ಎ]-506 ಐ.ಪಿ.ಸಿ.
ದಿನಾಂಕ: 29-03-2013 ರಂದು ಪಿರ್ಯಾದಿ ಪೂರ್ಣಿಮ ಕೋಂ. ಸುರೇಶ್, ನಂದಾಟಾಕೀಸ್ ಹಿಂಭಾಗ, ಇಂದಿರಾ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರಿಗೆ ಅವರ ಗಂಡ ಆರೋಪಿ-1 ಸುರೇಶ ಬಿನ್. ರಾಜು ರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಆರೋಪಿ-2 ಗೌರಮ್ಮ ಬಿನ್. ರಾಜು ರವರು ಪ್ರಾಣ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment