Moving text

Mandya District Police

DAILY CRIME REPORT DATED : 30-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-03-2013 ರಂದು ಒಟ್ಟು 32 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  1 ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ಯು.ಡಿ.ಆರ್. ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ರಾಮಯ್ಯ ಬಿನ್. ಲೇಟ್. ಲಕ್ಕಣ್ಣ, 55ವರ್ಷ, ಕೊನೇಗೌಡನಪಾಳ್ಯ ಗಾಮ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಶ್ರೀ ನಿವಾಸ ಬಿನ್. ರಾಮಯ್ಯ, 25ವರ್ಷ, ಕೊನೇಗೌಡನಪಾಳ್ಯ ಗ್ರಾಮ, ತುಮಕೂರು ಜಿಲ್ಲೆ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯ ಮಗನಾದ ಮೃತ ಶ್ರೀನಿವಾಸನು ದೊಡ್ಡಗುಣಿ ಗ್ರಾಮದಲ್ಲಿ ತನ್ನ ಸೋದರರೊಂದಿಗೆ ಜಮೀನಿನಲ್ಲಿ ಮಣ್ಣನ್ನು ತೆಗೆಯುವಾಗ ಆಕಸ್ಮಿಕವಾಗಿ ಮಣ್ಣಿನಗುಡ್ಡೆ ಶ್ರೀನಿವಾಸ ಮೇಲೆ ಕುಸಿದು ಬಿದ್ದು, ಆತನನ್ನು ಉಪಚರಿಸಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತನಾಗಿರುತ್ತಾನೆಂದು, ಸದರಿ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನ ಇರುವುದಿಲ್ಲವೆಂದು ಹಾಗೂ ತಾವು ಬಂದು ಮೃತ ಶ್ರಿನಿವಾಸ ಶವದ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ನಂಜುಂಡ ಬಿನ್. ಎಲ್. ನಿಂಗಪ್ಪ, 42 ವರ್ಷ, ಹಾಲುಮತ, ಎಲೆಕ್ಟ್ರಿಕ್ ಗುತ್ತಿಗೆದಾರ, ತುರಹಲ್ಲಿ ಗ್ರಾಮ, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಅವರ ತಂದೆ ದಿನಾಂಕ: 29-03-2013 ರಂದು ಸಂಜೆ 06-30  ಗಂಟೆಯಲ್ಲಿ  ಶ್ರೀರಂಗಪಟ್ಟಣ ಟೌನ್ ಗಂಜಾಂ ನಲ್ಲಿರುವ  ನಾಗರಾಜಯ್ಯ ರವರು ನನ್ನ ತಮ್ಮ ಈಶ್ವರನಿಗೆ  ನಿಮ್ಮ ತಂದೆ ಎದೆ ನೋವಿನಿಂದ ಮೃತಪಟ್ಟಿರುತ್ತಾರೆ ಎಂದು ಪೋನ್ ಮಾಡಿ ತಿಳಿಸಿದ್ದು ನಾವು ತಕ್ಷಣ  ಗಂಜಾಂಗೆ ಬಂದು ನೋಡಿದೆವು ನಮ್ಮ  ತಂದೆಯವರು  ದಿನಾಂಕ: 29-03-2013 ರಂದು ಸಂಜೆ 04-30  ಗಂಟೆಯಲ್ಲಿ ಎದೆನೋವಿನಿಂದ ನಾಗರಾಜಯ್ಯ ರವರ ಜಮೀನಿನಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಅರ್. ನಂ. 19/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 30-03-2013 ರಂದು ಪಿರ್ಯಾದಿ ಕೃಷ್ಣಮೂತರ್ಿ ಬಿನ್. ಲೇಟ್: ಬೆಟ್ಟಯ್ಯ, 32 ವರ್ಷ, ಪರಿಶಿಷ್ಟ ಜಾತಿ, ಕೆಂಚನಹಳ್ಳಿ ಗ್ರಾಮ, ಕಸಬಾ ಹೋಬಳಿ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಗ 6 ವರ್ಷದ ಪ್ರೀತಮ್ ತೆಂಗಿನ ಮರದ ಕೆಳಗೆ ಆಟವಾಡುತ್ತಿದ್ದಾಗ ಅಕಸ್ಮಿಕವಾಗಿ ತೆಂಗಿನ ಮರದಿಂದ ತೆಂಗಿನ ಕಾಯಿ ತಲೆಯ ನೆತ್ತಿಯ ಮೇಲೆ ಬಿದ್ದು ಈ ಸಂಬಂದ ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯಲ್ಲಿ ಚಿಕಿತ್ಸಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 30-03-2013ರಂದು ಪಿರ್ಯಾದಿ ಶಂಕರಮ್ಮ ಕೋಂ. ದೇವರಾಜು, ಉಮ್ಮಡಹಳ್ಳಿ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರು ಏನೆಂದರೆ ದಿನಾಂಕಃ-29-03-2013ರಂದು ಈ ಕೇಸಿನ ಪಿರ್ಯಾದಿ ರವರ 18 ವರ್ಷದ ಅವರ ಅಣ್ಣನ ಮಗಳು ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 143-147-148-504-323-324-506 ರೆ/ವಿ 149 ಐಪಿಸಿ ಮತ್ತು 3 ಕ್ಲಾಸ್ [2], [5 ] [10] ಆಫ್ ಎಸ್.ಸಿ./ಎಸ್.ಟಿ ಪಿ.ಎ.ಆಕ್ಟ್ 1989.

ದಿನಾಂಕ: 30-03-2013ರಂದು ಪಿರ್ಯಾದಿ ಬಿ.ಬಸವಯ್ಯ ಬಿನ್. ಕೊಂಗಯ್ಯ, ಕಾರಕಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವಲಿಂಗೇಗೌಡ ಬಿನ್. ಮುದ್ದೇಗೌಡ, ಹಾಗೂ ಇತರೆ 18 ಜನರು ದಿನಾಂಕ;29-03-13 ರಂದು ರಾತ್ರಿ ಸುಮಾರು 9-30ಗಂಟೆ ಸಮಯದಲ್ಲಿ ಕಾರಕಹಳ್ಳಿ ಗ್ರಾಮದ ಶ್ರೀ.ಬಸವೇಶ್ವರ ದೇವಸ್ಥಾನದ ಮುತ್ತರಾಯಸ್ವಾಮಿ ಪರದಲ್ಲಿ ಉಳಿದ ಸಾಮಾನುಗಳನ್ನು ಹರಾಜಿನಲ್ಲಿ ಪಿರ್ಯಾದಿಯವರು ಬಾಗವಹಿಸಿದಾಗ ಈ ಕೇಸಿನ ಆರೋಪಿಗಳು ಪಿರ್ಯಾದಿಯವರಿಗೆ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈಯ್ದು, ಕಾರದಪುಡಿ, ಚಾಕುಗಳನ್ನು ಹಿಡಿದು ನೀವು ಹೊಲೆಯರು ದೇವಸ್ಥಾನದ ಒಳಗಡೆ ಯಾರು ನಿಮ್ಮನ್ನು ಕರೆಯಿಸಿದವರು ಎಂದು ಪಿರ್ಯಾದಿಯ ತಂದೆಗೆ ಹಾಗೂ ಇತರರಿಗೆ ಹೊಡೆದು ಬಟ್ಟೆ ಹರಿದು ಹಾಕಿ ಕೊಲೆ ಬೆದರಿಕೆ ಹಾಕಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment