ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-04-2013 ರಂದು ಒಟ್ಟು 50 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಸ್ತೆ ಅಪಘಾತ ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ, 1 ವಾಹನ ಕಳವು ಪ್ರಕರಣ, 1 ಆಕಸ್ಮಿಕ ಅಪಘಾತ ಪ್ರಕರಣ, 1 ವಂಚನೆ ಪ್ರಕರಣ, 1 ಅಪಹರಣ ಪ್ರಕರಣ ಹಾಗು 42 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣಗಳು :
1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 44/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 01-04-2013 ರಂದು ಪಿರ್ಯಾದಿ ಮಹದೇವಪ್ಪ ಬಿನ್. ಲೇ|| ಮರಿಮಾದಪ್ಪ, 55 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ 02 ಸಿ 8243 ರ ಲಾರಿ ಚಾಲಕ ಹೆಸರು ವಿಳಾಸ ತಿಳಿಯಬೇಕಾಗಿದೆ ಲಾರಿಯನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಹೀರೋಹೊಂಡಾ ಮೋಟಾರ್ ಸೈಕಲ್ ಗೆ, ಡಿಕ್ಕಿ ಹೊಡೆದು ಸುಮಾರು 15 ಅಡಿ ದೂರು ಎಳೆದುಕೊಂಡು ಹೋಗಿರುತ್ತೆ. ನಂತರ ಪಿರ್ಯಾದಿಯವರು ಹಾಗೂ ಇತರ ಜನರು 108 ಅಂಬ್ಯುಲೆನ್ಸ್ ಗೆ, ಪೋನ್ ಮಾಡಿ ಕರೆಸಿ ತಲಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಮೋಟಾರ್ ಸೈಕಲ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮದ್ದೂರು ಸಂಚಾರ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 279,304(?) ಐ.ಪಿ.ಸಿ ಕೂಡ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 01-04-2013 ರಂದು ಪಿರ್ಯಾದಿ ಮಹದೇವು ಬಿನ್. ಭದ್ರಯ್ಯ, 52 ವರ್ಷ, ಒಕ್ಕಲಿಗರು, ಹೊಟೇಲ್ನಲ್ಲಿ ಕೆಲಸ, ವಾಸ ಚನ್ನೇಗೌಡ ಬಡಾವಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 31-03-2013 ರಂದು ರಾತ್ರಿ 09-30 ಗಂಟೆಯಲ್ಲಿ ಮದ್ದೂರು ಟೌನಿನ ಚನ್ನೆಗೌಡ ಬಡಾವಣೆಯ 1ನೇ ಕ್ರಾಸ್ ನೇರದ ರಸ್ತೆಯಲ್ಲಿ ಯಾವುದೋ ಒಂದು 407 ಗೂಡ್ಸ್ ಟೆಂಪೋ ವಾಹನ ಪಿರ್ಯಾದಿಯ ಹೆಂಡತಿಗೆ ಅಪಘಾತ ಮಾಡಿ ಹೊರಟು ಹೋಗಿರುತ್ತದೆ, ತಕ್ಷಣ ಆಟೋ ಮೂಲಕ ಅವರನ್ನು ಮದ್ದೂರಿನ ಸಕರ್ಾರಿ ಆಸ್ಪತ್ರೆಗೆ ತರಲಾಗಿ ಅಲ್ಲಿನ ವೈದ್ಯರು ಪಿರ್ಯಾದಿಯವರ ಹೆಂಡತಿಯನ್ನು ಪರೀಕ್ಷಿಸಿ ಅವರು ಮೃತಪಟ್ಟಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐಎಂವಿ ಆಕ್ಟ್.
ದಿನಾಂಕ: 01-04-2013 ರಂದು ಪಿರ್ಯಾದಿ ಡಾ.ಕೆ.ಎನ್. ಉಮೇಶ ಬಿನ್. ಕೆ.ಆರ್. ನಾಗರಾಜ್ ರಾವ್, 57 ವರ್ಷ, ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-04-13 ರಂದು ಬೆಳಿಗ್ಗೆ 09-50 ಗಂಟೆಯಲ್ಲಿ ರಾಗಿಮುದ್ದನಹಳ್ಳಿ -ಕೋಡಿಶೆಟ್ಟಿಪುರ ಗ್ರಾಮದ ಮದ್ಯೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಆರೋಪಿ ಚಂದ್ರಶೇಖರ್ ರಾವ್ ನಂ. ಕೆಎ-04-ಹೆಚ್.ಎನ್-5938 ಪಲ್ಸರ್ ಮೋಟಾರ್ ಸೈಕಲ್ ಸವಾರ ಅತಿವೇಗ ಹಾಗೂ ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ರಸ್ತೆಯ ಬಲಬದಿಗೆ ಅಂದರೆ ಕಾರಿನ ಎಡಭಾಗಕ್ಕೆ ನುಗ್ಗಿ ಡಿಕ್ಕಿ ಹೊಡಿಸಿದ ಡಿಕ್ಕಿ ಹೊಡೆಸಿದ ರಭಸಕ್ಕೆ ಮೋಟಾರ್ ಸೈಕಲ್ ಹಿಂಭಾಗ ಕುಳಿತ್ತಿದ್ದವನು ಗಾಡಿಯಿಂದ ಹಾರಿ ಡಿವೈಡರ್ ಮೇಲೆ ಬಿದ್ದನು ಡಿಕ್ಕಿ ಮಾಡಿಸಿದ ಆರೋಪಿ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 11/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 01-04-2013 ರಂದು ಪಿರ್ಯಾದಿ ಬೈರೇಗೌಡ ಬಿನ್. ಲೇ| ಬೋರೇಗೌಡ, ದೊಡ್ಡಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 31-03-2013 ರಂದು ಜವರೇಗೌಡ ಬಿನ್. ಲೇಟ್. ಬೋರೇಗೌಡ, ದೊಡ್ಡಸೋಮನಹಳ್ಳಿ, 42 ವರ್ಷ ರವರು ಹೊಟ್ಟೆನೋವಿನ ಔಷಧಿ ಎಂದು ಯಾವುದೋ ಕ್ರಿಮಿನಾಶಕ ಔಷದಿಯನ್ನು ಆಕಸ್ಮಿಕವಾಗಿ ಸೇವಿಸಿದ್ದು ಚಿಕಿತ್ಸೆಗೆ ಕೆಆರ್ಪೇಟೆ ಆಸ್ಪತ್ರೆಗೆ ಸೇರಿಸಿದ್ದು ನಂತರ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 137/13 ಕಲಂ. 379 ಐ.ಪಿ.ಸಿ.
ದಿನಾಂಕ: 01-04-2013 ರಂದು ಪಿರ್ಯಾದಿ ಗಂಗಾಧರ ಬಿನ್. ಬೋರೇಗೌಡ, ಹನುಮಂತನನಗರ, ಪಾಂಡವಪುರ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:31-03-2013 ರಂದು ಹನುಮಂತನಗರ, ಪಾಂಡವಪುರ ಟೌನ್ನಲ್ಲಿ ಪಿರ್ಯಾದಿಯವರ ಬಾಬ್ತು ನಂ. ಕೆಎ-11-ಡಬ್ಲೂ-6264 ಹೀರೋಹೋಂಡಾ ಪ್ಯಾಷನ್ ಪ್ರೋ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆಕಸ್ಮಿಕ ಅಪಘಾತ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 108/13 ಕಲಂ. ಕಲಂ. 304(ಎ) ಕೂಡ 34 ಐ.ಪಿ.ಸಿ.
ದಿನಾಂಕ: 01-04-2013 ರಂದು ಪಿರ್ಯಾದಿ ಲಕ್ಷ್ಮೀ ಕೋಂ. ರಂಗಸ್ವಾಮಿ @ ರಂಗ, ಗಿರಿಜಾ ಸ್ಲಂ, ಪೌರಕಾಮರ್ಿಕರ, ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-04-13 ರಂದು ಬೆಳಿಗ್ಗೆ 07-00 ಗಂಟೆ, ಮಂಡ್ಯ ಸಿಟಿ. ಗಿರಿಜಾ ಸ್ಲಂ, ಪೌರಕಾಮರ್ಿಕರ ಕಾಲೋನಿ, ವರಲಕ್ಷ್ಮೀ ಮಿಲಿಟರಿ ಹೋಟೆಲ್ ಪಕ್ಕದಲ್ಲಿ ಪಿರ್ಯಾದಿಯವರ ಗಂಡ ಕಕ್ಕಸ್ಸು ಗುಂಡಿಯನ್ನು ಸ್ವಚ್ಚಗೊಳಿಸಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಈ ತೆರೆದ ಗುಂಡಿಯ ಒಳಗೆ ಬಿದ್ದಾಗ ಕೂಗಿಕೊಂಡಿದ್ದು ತಕ್ಷಣ ಪಕ್ಕದಲ್ಲಿದ್ದ ಸರೋಜ ಎಂಬುವವರು ಒಂದು ಉದ್ದನೆಯ ಕೋಲನ್ನು ನೀಡಿದರೂ ಸಹ ಮೇಲೆ ಬರಲಾಗದೇ ಸಾವನ್ನಪ್ಪಿರುತ್ತಾರೆ ಆದ್ದರಿಂದ ಆರೋಪಿಗಳಾದ 1.] ಸಂದೀಪ ವರಲಕ್ಷ್ಮೀ 2] ಆಯುಕ್ತರು, ನಗರ ಸಬೆ ಮಂಡ್ಯಸಿಟಿ 3] ಆರೋಗ್ಯ ನಿರೀಕ್ಷಕರು ನಗರ ಸಬೆ ಮಂಡ್ಯ ಸಿಟಿ ರವರುಗಳು ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 417, 420 ಐಪಿಸಿ.
ದಿನಾಂಕ: 01-04-2013 ರಂದು ಪಿರ್ಯಾದಿ ವರಲಕ್ಷ್ಮೀ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಶಿವಕುಮಾರ್ ರವರು ಪಿರ್ಯಾದಿರವರನ್ನು ಮದುವೆಯಾಗುತ್ತೇನೆಂದು ಹೇಳಿ ನಂಬಿಸಿ ಪ್ರೀತಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನೀನು ಪೋನು ಮಾಡಬೇಡ, ಮಾಡಿದರೆ ಕೇಸು ಹಾಕಿಸುತ್ತೇನೆ ನಿನ್ನ ಮನೆ ಹತ್ತಿರ ಜನರನ್ನು ಕಳುಹಿಸಿ ಮರ್ಯಾದೆ ತೆಗಿತೀನಿ, ನಿನ್ನನ್ನು ಯಾರು ಮದುವೆಯಾಗದ ಹಾಗೆ ಮಾಡುತ್ತೇನೆ ಎಂದು ಬೈದು ಗಲಾಟೆ ಮಾಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ನಾಗಮಂಗಲ ಟೌನ್ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. 366(ಆ) 343-506 ಕೂಡ 149 ಐ.ಪಿ.ಸಿ.
ದಿನಾಂಕ: 01-04-2013 ರಂದು ಪಿರ್ಯಾದಿ ವೆಂಕಟೇಗೌಡರ ಮಗಳು, 17 ವರ್ಷ. ಪ್ರಥಮ ಪಿಯು,ಸಿ, ವಕ್ಕಲಿಗರು. ತೊರೆಮಲ್ಲನಾಯಕನಹಳ್ಳಿ ಗ್ರಾಮ, ಯವರು ನಾಗಮಂಗಲ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಆರೋಪಿ ಲೋಕೇಶನು, ಆಟೋ ನಿಮ್ಮ ಊರಿಗೆ ಹೋಗುತ್ತಿದೆ ಎಂಧು ಹೇಳುತ್ತಿದ್ದಾಗ ನಾನು ಆಟೋದಲ್ಲಿ ಕುಳಿತುಕೊಂಡೆ ನಂತರ ಆಟೋದಲ್ಲಿ ಅನಿತಾ ಎಂಬುವವಳು ಕುಳಿತ್ತಿದ್ದು ನನ್ನ ತಲೆಯನ್ನು ಸವರಿದಾಗ ಪಿರ್ಯಾದಿಗೆ ಪ್ರಜ್ಞೆ ತಪ್ಪಿ ಲೋಕೇಶನು ಆಟೋವನ್ನು ತೋಟದ ಮನೆಯ ಕಡೆಗೆ ಓಡಿಸಿಕೊಂಡು ಹೋಗಿ ನನ್ನನ್ನು ಒಂದು ತೋಟದ ಮನೆಯಲ್ಲಿ ಇರಿಸಿರುತ್ತಾರೆ ಹಾಗು ನನಗೆ ಪ್ರಾಣ ಬೆದರಿಕೆ ಹಾಕಿರುತ್ತಾರೆ ಅವರುಗಳು ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment