ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-04-2013 ರಂದು ಒಟ್ಟು 38 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ವಾಹನ ಕಳವು ಪ್ರಕರಣ, 1 ವಂಚನೆ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 34 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 11/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 02-04-2013 ರಂದು ಪಿರ್ಯಾದಿ ಸುರೇಶ ಬಿನ್. ಬಸವೇಗೌಡ, ಚಿನಕುರುಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಚಿನಕುರುಳಿಯಲ್ಲಿ ಹಾಸನದ ನಾರಾಯಣರವರಿಗೆ ಸೇರಿದ ಚಂದನ್ ವೈನ್ಸ ಸ್ಟೋರ್ ಹತ್ತಿರ ಅಪರಿಚಿತ ವ್ಯಕ್ತಿ ಸುಸ್ತಾಗಿ ಮಲಗಿದ್ದು ಆತನನ್ನು 108 ಅಂಬುಲೇನ್ಸ್ ನಲ್ಲಿ ಚಿನಕುರಳಿ ಆಸ್ಪತ್ರೆಗೆ ಕರೆದೋಯುವಾಗ ಮೃತನಾಗಿದ್ದಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
.
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 379 ಐ.ಪಿ.ಸಿ.
ದಿನಾಂಕ: 02-04-2013 ರಂದು ಪಿರ್ಯಾದಿ ಶಿವಕುಮಾರ ಆರ್. ಬಿನ್. ಎನ್,ಎಸ್,ರಾಜು, ಶಾಂತಿನಗರ, ಪಾಂಡವಪುರ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 01-04-2013 ರಂದು ರಾತ್ರಿ ಸಮಯದಲ್ಲಿ ಶಾಂತಿನಗರ ಪಾಂಡವಪುರ ಟೌನ್ನಲ್ಲಿ ಯಾರೋ ಕಳ್ಳರು ಅವರ ಬಾಬ್ತು ಮೋಟಾರ್ ಸೈಕಲ್ ನಂ. ಕೆ.ಎ.-45-ಇ-3144, ಮಾಡಲ್ ನಂ. 2004 ರ ಹೀರೋಹೊಂಡ ಸ್ಪ್ಲೆಂಡರ್ ವಾಹನವನ್ನು ಮನೆಯಲ್ಲಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳವು ಮಾಡಿದ್ದಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 468-420 ಐ.ಪಿ.ಸಿ.
ದಿನಾಂಕ:02-04-2013ರಂದು ಪಿರ್ಯಾದಿ ಶಿವಕುಮಾರ್, ಸಿ.ಎಂ.ಓ. ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ಕೋಟರ್್. ಕೆ.ಆರ್.ಪೇಟೆ ರವರಿಗೆ ಕೆ.ಆರ್.ಪೇಟೆ ಸಿ.ಜೆ. ಮತ್ತು ಜೆ.ಎಂ.ಎಪ್.ಸಿ. ನ್ಯಾಯಾಲಯದಿಂದ ಟಪಾಲ್ ಮುಖಾಂತರ ಬಂದ ದೂರಿನ ಸಾರಂಶವೆನೆಂದರೆ ಆರೋಪಿ 1] ರೇಣುಕ. 2] ಕೃಷ್ಣಮ್ಮ. ಮಲ್ಲಪಟ್ಟಣ, ಅರಕಲಗೂಡು ತಾ|| ರವರು ನೀಢಿದ ದೂರಿನ ಸಾರಾಂಶವೇನೆಂದರೆ ಮೇಲ್ಕಂಡ ಆರೋಪಿತರು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ಸಂ 219/12 ಕಲಂ 392 ಐಪಿಸಿ ಕೇಸಿನಲ್ಲಿ ಆರೋಪಿತರಾಗಿದ್ದು ಸದರಿ ಆರೋಪಿಗಳು ಕೇಸಿನ ತನಿಖಾಧಿಕಾರಿಗಳ ಮುಂದೆ ನೀಡಿರುವ ವಿಳಾಸ ಹಾಗು ಕೆ.ಆರ್. ಪೇಟೆ ಸಿ.ಜೆ. ಮತ್ತು ಜೆಎಂಎಪ್ಸಿ ನ್ಯಾಯಾಲಯಕ್ಕೆ ಜಾಮೀನು ಪಡೆಯಲು ಸಲ್ಲಿಸಿರುವ ಚುನಾವಣಾ ಗುರುತಿನ ಚೀಟಿ ವಿಳಾಸ ವ್ಯತ್ಯಾಸ ಕಂಡು ಬಂದಿದ್ದು ನ್ಯಾಯಾಲಯ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ತನಿಖೆಯಿಂದ ವಿಳಾಸ ಸುಳ್ಳಾಗಿದ್ದು ಮತ್ತು ಎ-2 ಕೃಷ್ಣಮ್ಮ ತನ್ನ ಪತಿ ಬದುಕಿದ್ದರು ಸಹ ಮೃತಪಟ್ಟಿರುವುದಾಗಿ ಸುಳ್ಳು ಹೆಸರು ವಿಳಾಸ ನೀಡಿರುವುದು ತನಿಖೆಯಿಂದ ದೃಢಪಟ್ಟಿತ್ತೆಂದು ನ್ಯಾಯಾಲಯಕ್ಕೆ ವರದಿ ನೀಡಿದ್ದು ಸದರಿ ನ್ಯಾಯಾಲಯವು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಬಂದ ದೂರಿನ ಅನ್ವಯ ಕೇಸು ದಾಖಲಿಸಿರುತ್ತೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ:02-04-2013ರಂದು ಪಿರ್ಯಾದಿ ದೇವೇಗೌಡ ಬಿನ್. ದಾಸೇಗೌಡ, ಸಂತೆಬಾಚಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 31-03-2013 ರಂದು ಸಂಜೆ 0530 ಗಂಟೆಯಲ್ಲಿ ಸಂತೆಬಾಚಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ| ನಿಂದ ಅವರ ಹೆಂಡತಿ ರತ್ನಮ್ಮ ಕೊಂ. ದೇವೇಗೌಡ, ಸಂತೆಬಾಚಹಳ್ಳಿ ಗ್ರಾಮ ರವರು ರಾತ್ರಿ ಗ್ರಾಮದಲ್ಲಿ ಆಕರ್ೆಸ್ಟ್ರಾ ಕಾರ್ಯಕ್ರಮವಿದ್ದು ವಾಪಸ್ ಮದ್ಯರಾತ್ರಿ ಮನೆಗೆ ಬಂದು ಎಲ್ಲರೂ ಮಲಗಿದ್ದು ಬೆಳಗಿನ ಜಾವ 05.30 ಗಂಟೆಗೆ ಎದ್ದಾಗ ಪಿರ್ಯಾದಿ ಹೆಂಡತಿ ರತ್ನಮ್ಮ ಪಿರ್ಯಾದಿ ಜೊತೆಯಲ್ಲಿಯೇ ಇದ್ದು ಬೆಳಿಗ್ಗೆ 07.00 ಗಂಟೆ ವೇಳೆಗೆ ನೋಡಲಾಗಿ ಪಿರ್ಯಾದಿ ಹೆಂಡತಿ ರೂಮಿನಲ್ಲಿ ಇರಲಿಲ್ಲ. ನಂತರ ಸಮಯ 07.30 ಆದರೂ ಸಹ ತನ್ನ ಹೆಂಡತಿ ಕಾಣದ ಕಾರಣ ಮನೆಯಲ್ಲೆಲ್ಲಾ ಹುಡುಕಾಡಿ ವಿಚಾರ ಮಾಡಲಾಗಿ ಎಲ್ಲೂ ಸಿಗಲಿಲ್ಲ. ನಂತರ 08.00 ಗಂಟೆಯಾದರೂ ಎಲ್ಲೂ ಕಾಣದ ಕಾರಣ ಬಂಧುಗಳ ಮನೆಯಲ್ಲಿ, ಸ್ನೇಹಿತರ ಕಡೆಗಳಲ್ಲಿ ಎಲ್ಲಾ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment