ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-04-2013 ರಂದು ಒಟ್ಟು 60 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 3 ಕಳವು ಪ್ರಕರಣಗಳು ಹಾಗು 54 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 94/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 10-04-2013 ರಂದು ಪಿರ್ಯಾದಿ ವೆಂಕಟೇಶ್ ಬಿನ್ ವೆಂಕಟಶೆಟ್ಟಿ, ಬೀಚನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ತಾಯಿ ಚೆಲುವಮ್ಮ ಕೋಂ. ಲೇಟ್. ವೆಂಕಟಶೆಟ್ಟಿ, 80ವರ್ಷ, 5 ಅಡಿ 2 ಇಂಚು ಇತ್ತರ, ರವರು 07-04-2013 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ ಅಂಚೆಭೂವನಹಳ್ಳಿ ಗ್ರಾಮದಿಂದ ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 158/13 ಕಲಂ. ಹುಡುಗಿಯರು ಕಾಣೆಯಾಗಿದ್ದಾರೆ.
ದಿನಾಂಕ:10-04-2013ರಂದು ಪಿರ್ಯಾದಿ ಪುಟ್ಟೇಗೌಡ ಬಿನ್. ಲೇಟ್. ಬೆಟ್ಟೇಗೌಡ, ಹಾಲಹಳ್ಳಿ, 3ನೇ ಕ್ರಾಸ್, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ ಮಗಳಾದ 1]ಶ್ವೇತಾ ಬಿನ್. ಬೆಟ್ಟೇಗೌಡ, 18 ವರ್ಷ, ಹಾಲಹಳ್ಳಿ , 3 ನೇ ಕ್ರಾಸ್, ಹಾಗು ಆಕೆಯ ಚಿಕ್ಕಮ್ಮಳ ಮಗಳಾದ 2] ಸುಷ್ಮಾ ಬಿನ್. ಲೇಟ್. ವೆಂಕಟೇಶ್, 18 ವರ್ಷ, ಕಾರಸವಾಡಿ ಗ್ರಾಮ, ಮಂಡ್ಯ ತಾ. ಇವರಿಬ್ಬರು ದಿನಾಂಕಃ-06-04-2013 ರಂದು ತನ್ನ ಚಿಕ್ಕಮ್ಮನ ಮನೆಯಾದ ಕಾರವಾಡಿ ಗ್ರಾಮಕ್ಕೆ ಹೋಗಿದ್ದು, ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮಳ ಮಗಳಾದ ಸುಷ್ಮಾ ಇಬ್ಬರು ಎಲ್ಲಿಗೂ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲವೆಂದು ಪೋನ್ ಮೂಲಕ ತಿಳಿಸಿದ ಮೇರೆಗೆ ನಾನು ಕಾರಸವಾಡಿ ಗ್ರಾಮಕ್ಕೆ ಹೋಗಿ ಈ ಬಗ್ಗೆ ವಿಚಾರಿಸಿ ನನ್ನ ಮಗಳು ಮತ್ತು ಆಕೆಯ ಚಿಕ್ಕಮ್ಮನ ಮಗಳಾದ ಸುಷ್ಮಾ ಇಬ್ಬರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಈ ಬಗ್ಗೆ ಅವಳ ಸ್ನೇಹಿತೆಯರ ಮನೆಯಲೆಲ್ಲಾ ಮತ್ತು ನಮ್ಮ ನೆಂಟರ ಮನೆಗಳ ಕಡೆ ವಿಚಾರಿಸಲಾಗಿ ಗೊತ್ತಿಲ್ಲವೆಂದು ತಿಳಿಸಿದ್ದು ಕಾಣೆಯಾಗಿರುವ ನಮ್ಮ ಮಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 504-506-498(ಎ)-323 ಐ.ಪಿ.ಸಿ.
ದಿನಾಂಕ: 10-04-2013 ರಂದು ಪಿರ್ಯಾದಿ ಸರೋಜ ಕೋಂ. ಶಿವಣ್ಣ, ಕುದುರಗುಂಡಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಶಿವಣ್ಣ ಮನೆಗೆ ಬಂದು ವಿನಾಕಾರಣ ಜಗಳತೆಗೆದು ಪಿರ್ಯಾದಿಯವರ ತಲೆಯ ಜುಟ್ಟು ಹಿಡಿದು ಎಳೆದಾಡಿ ಕೆಳಕ್ಕೆ ಕೆಡವಿಕೊಂಡು ಕೈಯಿಂದ ಹೊಡೆದು ಗಲಾಟೆ ಮಾಡಿದ್ದಾರೆ, ಪಿರ್ಯಾದಿಯ ಗಂಡ ಈಗ್ಗೆ 4-5 ವರ್ಷಗಳಿಂದಲೂ ಹೀಗೆ ಪ್ರತಿ ದಿನ ಕುಡಿದು ಬಂದು ಜಗಳ ತೆಗೆದು ಹೊಡೆದು-ಬಡಿಯುವುದು ಮಾಡುತ್ತಾರೆ ಹಾಗು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಮಾನಸಿಕವಾಗಿ ಹಾಗು ದೈಹಿಕವಾಗಿ ಹಿಂಸೆ ಕೊಡುತ್ತಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 163/13 ಕಲಂ. 379 ಐ.ಪಿ.ಸಿ.
ದಿನಾಂಕ: 10-04-2013 ರಂದು ಪಿರ್ಯಾದಿ ನಿಂಗಮ್ಮ ಕೋಂ. ಮಾಯಿಗಯ್ಯ, ನಗರಕೆರೆ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ಮದ್ದೂರು ಐ.ಬಿ. ವೃತ್ತದಲ್ಲಿ ಬಸ್ ನ್ನು ಇಳಿಯುವಾಗ ಪಿರ್ಯಾದಿಯವರ ಕತ್ತಿನಲ್ಲಿದ್ದ ಸುಮಾರು 36 ಗ್ರಾಂನ ಚಿನ್ನದ ಮಾಂಗಲ್ಯ ಸರವನ್ನು ಪಿರ್ಯಾದಿಯವರಿಗೆ ತಿಳಿಯದಂತೆ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ಇದರ ಅಂದಾಜು ಬೆಲೆ 1,00,000/-ರೂಗಳಾಗಬಹುದು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 166/13 ಕಲಂ. 379 ಐ.ಪಿ.ಸಿ.
ದಿನಾಂಕ: 10-04-2013 ರಂದು ಪಿರ್ಯಾದಿ ಮಾಯಮ್ಮ ಕೋಂ. ಮುಳಕಟ್ಟೆ ಸಿದ್ದಯ್ಯ, 55 ವರ್ಷ, ಯತ್ತಗದಹಳ್ಳಿ ರಸ್ತೆ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10-04-2013 ರಂದು ಪಿರ್ಯಾದಿಯವರು ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಜನರ ನೂಕು ನುಗ್ಗಲಿನಲ್ಲಿ ಬಸ್ಸನ್ನು ಹತ್ತಿ ಒಳಗಡೆ ಹೋಗಿ ಸೀಟಿನಲ್ಲಿ ಕುಳಿತುಕೊಂಡು ತನ್ನ ಕತ್ತನ್ನು ನೋಡಿಕೊಂಡಾಗ ತನ್ನ ಕತ್ತಿನಲ್ಲಿದ್ದ 27 ಗ್ರಾಂ ತೂಕದ ಒಂದು ಚಿನ್ನದ ತಾಳಿ ಮತ್ತು 4 ಚಿನ್ನದ ಗುಂಡುಗಳಿರುವ ಒಂದು ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಕೂಡಲೇ ಬಸ್ಸಿನಿಂದ ಕೆಳಗಡೆ ಇಳಿದು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಸದರಿ ಚಿನ್ನದ ಮಾಂಗಲ್ಯ ಸರವನ್ನು ಯಾರೋ ಕಳ್ಳರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜನ ಸಂದಣಿಯಲ್ಲಿ ಬಸ್ಸನ್ನು ಹತ್ತುವಾಗ ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಚಿನ್ನದ ಮಾಂಗಲ್ಯ ಸರವು ಹಗ್ಗದ ಮಾದರಿಯ ಸರವಾಗಿದ್ದು ಇದರ ಬೆಲೆ 78,300-00 ರೂಪಾಯಿಗಳಾಗುತ್ತೆ. ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 88/13 ಕಲಂ. 379 ಐ.ಪಿ.ಸಿ.
ದಿನಾಂಕ: 10-04-2013 ರಂದು ಪಿರ್ಯಾದಿ ಎಂ, ಮಾದಯ್ಯ, ಕಿರಿಯ ಇಂಜಿನಿಯರ್, ಕೆ.ಆರ್. ಪೇಟೆ ಓ&ಎಂ 3 ಘಟಕ, ಕೆ.ಆರ್ ಪೇಟೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ : 08-04-2013 ರ ರಾತ್ರಿ ವೇಳೆಯಲ್ಲಿ ಹಿರಿಕಳಲೆ ಗ್ರಾಮದ ಹತ್ತಿರ, ಕಸಬಾ ಹೋಬಳಿ, ಕೆ.ಆರ್.ಪೇಟೆ ತಾಲ್ಲೋಕು ನಲ್ಲಿ ನೀರಾವರಿ ಪಂಪ್ಸೆಟ್ನ ಆರ್ಆರ್ ಸಂಖ್ಯೆ: K2MRGIP-568 ರ ಲೈನನ್ನು ಸುಮಾರು 3 ಕಂಬಗಳ ದೂರ, ಮೂರು ತಂತಿ ಅಂದರೆ ಅಂದಾಜು 400 ಮೀಟರ್ ನಷ್ಟು ವೈರನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡುಬಂದಿದೆ. ಇದರ ಬೆಲೆ ಸುಮಾರು 9200-00 ರೂ. ಗಳಾಗುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment