ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-04-2013 ರಂದು ಒಟ್ಟು 65 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 61 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
1. ಹಲಗೂರು ಪೊಲೀಸ್ ಠಾಣೆ ಮೊ.ನಂ. 65/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 09-04-2013 ರಂದು ಪಿರ್ಯಾದಿ ರಂಗಯ್ಯ, 70ವರ್ಷ, ಕೆಂಪಯ್ಯನದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕು.ಪುಷ್ಪ, 21ವರ್ಷ, ಕೆಂಪಯ್ಯನದೊಡ್ಡಿ ಗ್ರಾಮರವರು ದಿನಾಂಕ: 08-04-2013 ರಂದು ಕಾಣೆಯಾಗಿರುತ್ತಾಳೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 93/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 09-04-2013 ರಂದು ಪಿರ್ಯಾದಿ ನಾಗರಾಜು, ದೊಡ್ಡೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಅಣ್ಣನ ಮಗನಾದ ಕುಮಾರ, 13 ವರ್ಷ, 8ನೇ ತರಗತಿ ವಿದ್ಯಾಥರ್ಿಯು ದಿನಾಂಕ: 08-04-2013 ಸಂಜೆ 6-00ಗಂಟೆಯಲ್ಲಿ, ಬೆಳ್ಳೂರು ಟೌನ್ನಿಂದ ಕಾಣೆಯಾಗಿರುತ್ತಾನೆ ಅವನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 41 ಕ್ಲಾಸ್ (ಡಿ) 102 ಸಿ.ಆರ್.ಪಿ.ಸಿ ಮತ್ತು 379 ಐ.ಪಿ.ಸಿ.
ದಿನಾಂಕ: 09-04-2013 ರಂದು ಪಿರ್ಯಾದಿ ಸಿದ್ದರಾಜು, ಸಿ.ಪಿ.ಸಿ-01, ಶ್ರೀರಂಗಪಟ್ಟಣ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸಂಶಯಾಸ್ಪದ ವ್ಯಕ್ತಿಗಳಾದ 1]ಸಂತೋಷ. ಮತ್ತು 2]ಚನ್ನಪ್ಪ ಕಲ್ಲುಕುಣಿಕೆ ಗ್ರಾಮ ರವರುಗಳು ಆಸಾಮಿಗಳು ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಮೋಟಾರ್ ಸೈಕಲ್ ನಂಬರ್ ಇರುವುದಿಲ್ಲ. ಅಸಾಮಿಗಳ ಬಳಿ ಇರುವ ಮೋಟರ್ ಸೈಕಲನ್ನು ಎಲ್ಲಿಯೋ ಕಳವು ಮಾಡಿಕೊಂಡು ಬಂದಿರುವ ಮೋಟರ್ ಸೈಕಲ್ ಆಗಿರುವ ಅನುಮಾನವಿರುವುದರಿಂದ ಪ್ರಕರಣ ದಾಖಲಿಸಿರುತ್ತೆ.
ಯು.ಡಿ.ಆರ್. ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 09-04-2013 ರಂದು ಪಿರ್ಯಾದಿ ಮಂಜುನಾಥ. ಎಸ್, ಬೇಬಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಕೆಂಚಪ್ಪ, ಬೇಬಿ ಗ್ರಾಮ, ಪಾಂಡವಪುರ ತಾ. ರವರು ಮೃತಪಟ್ಟಿರುತ್ತಾರೆ ಇದು ನೈಜ ಸಾವಲ್ಲ, ಕೊಲೆಯಾಗಿರಬಹುದೆಂದು ಶಂಕಿಸಿ ತಮಗೆ ಈ ಕಂಪ್ಲೇಟ್ ನೀಡುತ್ತಿದ್ದೇನೆ. ಮುಂದಿನ ತನಿಖೆಯನ್ನು ನಡೆಸಿ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment