ಮಂಡ್ಯ ಜಿಲ್ಲೆಯಲ್ಲಿ ದಿನಾಂಕ : 12-04-2013 ರಂದು ಒಟ್ಟು 42 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ, 3 ರಸ್ತೆ ಅಪಘಾತ ಪ್ರಕರಣಗಳು, 1 ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ, 1 ಯು.ಡಿ.ಅರ್. ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ವಾಹನ ಕಳವು ಪ್ರಕರಣ :
ಕೆ.ಆರ್. ಪೇಟೆ ಟೌನ್ ಠಾಣೆ ಪೊಲೀಸ್ ಠಾಣೆ ಮೊ.ನಂ. 379 ಐ.ಪಿ.ಸಿ.
ದಿನಾಂಕ: 12-04-2013 ರಂದು ಪಿರ್ಯಾದಿ ರಾಮಕೃಷ್ಣೇಗೌಡ ಕಾಳೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 04.04.13 ರಾತ್ರಿ 09-00 ಗಂಟೆಯಲ್ಲಿ ಬ್ಯಾಟೇಗೌಡ ಕಾಂಪ್ಲೆಕ್ಸ್ ಹೊಸಹೊಳಲು ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ರಾಮಕೃಷ್ಣೇಗೌಡ, ಕಾಳೇಗೌಡನಕೊಪ್ಪಲು ಗ್ರಾಮ ರವರು ಅವರ ಬಾಬ್ತು ಮೋಟಾರ್ ಸೈಕಲ್ ಕಳ್ಳತನವಾಗಿದ್ದು ಅದನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 279-304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.
ದಿನಾಂಕ: 12-04-2013 ರಂದು ಪಿರ್ಯಾದಿ ಅಭಿಷೇಕ್ ಹೆಚ್.ಜಿ. ಹೊಸಹೊಳಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವರಾಜು, ಸಿಂಗನಹಳ್ಳಿ ಗ್ರಾಮ ರವರು ಅವರ ಮೋಟಾರ್ ಸೈಕಲ್ ನಲ್ಲಿ ಬಂದು ನಂಜಮ್ಮರವರಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಅವರಿಗೆ ಪೆಟ್ಟಾಗಿರುತ್ತೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಆರೋಪಿ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 12-04-2013 ರಂದು ಪಿರ್ಯಾದಿ ದೊಡ್ಡಹೊನ್ನಯ್ಯ ಎಎಸ್ಐ, ಬೆಳ್ಳೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-04-2013 ರಂದು ಬಿ.ಜಿ.ನಗರದ ಪಕ್ಕ ಎನ್ಹೆಚ್-48 ರಸ್ತೆಯಲ್ಲಿ ಯಾವುದೊ ಅಪರಿಚಿತ ವಾಹನ ಅಪಘಾತ ಮಾಡಿ ಹೊರಟು ಹೋಗಿದ್ದು, ಪಿರ್ಯಾಧಿಯವರು ಗಾಯಾಳುವನ್ನು ಬೆಳ್ಳೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆಗಾಗಿ ದಾಖಲಿಸಿದ್ದು, ಸದರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮೃತನಾದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 279, 304[ಎ] ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 12-04-2013 ರಂದು ಪಿರ್ಯಾದಿ ಎ.ಬಿ.ಮಂಜೇಗೌಡ, 28ವರ್ಷ, ಅಳೀಸಂದ್ರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ಕೆಎಲ್-60-ಸಿ-5241ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿದಿಲ್ಲ ರವರು ಕಾರನ್ನು ಅತಿವೇಗವಾಗಿ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯು ಟನರ್್ ತೆಗೆದುಕೊಳ್ಳುತ್ತಿದ್ದ ಬೈಕಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟಿ.ರಾಮೇಗೌಡ ಸ್ಥಳದಲ್ಲೇ ಸತ್ತು ಹೊಗಿದ್ದು ಕಾರ್ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 9,39,40,4, 49, ಬಿ& ಸಿ 51, ವನ್ಯ ಪ್ರಾಣಿಗಳ ಸಂರಕ್ಷಣಾ ಕಾಯಿದೆ ಅಧಿನಿಯಮ ಕೂಡ 379 ಐ.ಪಿ.ಸಿ.
ದಿನಾಂಕ: 12-04-2013 ರಂದು ಪಿರ್ಯಾದಿ ನರೇಂದ್ರಕುಮಾರ್.ಕೆ. ಪಿ.ಎಸ್.ಐ. ಪಾಂಡವಪುರ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ರವಿ, ಮನೋಜ್ ಇಬ್ಬರೂ ಆನುವಾಳು ಗ್ರಾಮ, ಹೊಸಬಡಾವಣೆ, ಶಿಕಾರಿಪುರ ಗ್ರಾಮ ರವರುಗಳು ಹುಲಿ ಚರ್ಮವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆ ರೀತ್ಯ ಆರೋಪಿತರ ವಿರುದ್ದ ಸ್ವಯಂ ವರದಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.
ದಿನಾಂಕ: 12-04-2013 ರಂದು ಪಿರ್ಯಾದಿ ಪ್ರಮೀಳಾ 35 ವರ್ಷ, ಎನ್ ಕೋಡಿಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 09-04-2013 ರಂದು ಎನ್, ಕೋಡಿಹಳ್ಳಿ ಗ್ರಾಮದಲ್ಲಿ ಶಿವಕುಮಾರ @ ರಾಜು 44 ವರ್ಷ ರವರು ಯಾವುದೋ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಸೇವನೆ ಮಾಡಿ ಚಿಕಿತ್ಸೆ ಸಂಬಂಧ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 68/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 12-04-2013 ರಂದು ಪಿರ್ಯಾದಿ ಶಿವಣ್ಣಗೌಡ, 40 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಸಣ್ಣಪ್ಪ, 70 ವರ್ಷ, ಚಿಕ್ಕವೀರನಕೊಪ್ಪಲು ಗ್ರಾಮ ರವರು ಕಾಣೆಯಾಗಿರುವ ನಮ್ನ ತಂದೆಯವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment