ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-04-2013 ರಂದು ಒಟ್ಟು 47 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 4 ಯು.ಡಿ.ಆರ್. ಪ್ರಕರಣಗಳು, 1 ಕಳವು ಪ್ರಕರಣ, 1 ಆತ್ಮಹತ್ಯೆ ಪ್ರಚೋದನಾ ಪ್ರಕರಣ ಹಾಗು ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು ಮತ್ತು 41 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 21/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 13-04-13 ರಂದು ಪಿರ್ಯಾದಿ ನಾಗರಾಜು ಬಿನ್. ರಾಜಪ್ಪ, 70 ವರ್ಷ, ನಯನ ಕ್ಷತ್ರಿಯ, ಚಿಕ್ಕಜೋನಿಗರ ಬೀದಿ, ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರು ಏನೆಂದರೆ ಪಿರ್ಯಾದಿ ಸುಮಾರು 80 ವರ್ಷ ಒಬ್ಬ ಅಪರಿಚಿತ ಗಂಡಸು ಸತ್ತು ಮಲಗಿರುತ್ತಾನೆ ಮೃತ ಅಪರಿಚಿತನಾಗಿದ್ದು ಯಾರೂ ಯಾವ ಊರು ಗೊತ್ತಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 13-04-13 ರಂದು ಪಿರ್ಯಾದಿ ಸಯ್ಯದ್ ಸಾಜಿದ್ ಬಿನ್ ಸಯ್ಯದ್ ಶಪಿವುಲ್ಲಾ, ಕ್ಯಾತನಹಳ್ಳಿ ರವರು ನೀಡಿದ ದೂರು ಏನೆಂದರೆ ದಿನಾಂಕ: 13-04-2013 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ, ಕೆರೆಕೋಡಿ ಹತ್ತಿರ ಸಯ್ಯದ್ ಅಮಿದ್ ಬಿನ್., ಸಯ್ಯದ್ ಶಫಿವುಲ್ಲಾ 38 ವರ್ಷ, ಕ್ಯಾತನಹಳ್ಳಿ ಗ್ರಾಮ ರವರು ಮದ್ಯಪಾನ ಮಾಡಿ ಕೆರೆಕೋಡಿ ಹತ್ತಿರ ಮೃತ ಪಟ್ಟಿದ್ದಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 13-04-13 ರಂದು ಪಿರ್ಯಾದಿ ಚರಿತ್ ಎಂ.1301, 10ನೇ ಕ್ರಾಸ್, 4ನೇಮೈನ್, ಎಚ್.ಎಸ್,ಆರ್ ಲೇ. ಔಟ್ ಬೆಂಗಳೂರು ರವರು ನೀಡಿದ ದೂರು ಏನೆಂದರೆ ಜಯಂತ್ ಲೇಟ್. ಈಶ್ವರಪ್ಪ 23 ವರ್ಷ, ಕೆ.ನಾರಾಯಣಪುರ ಕ್ರಾಸ್, ಕೊತ್ತನೂರು, ಬೆಂಗಳೂರು ರವರು ಅವರ ಸ್ನೇಹಿತರ ಜೊತೆ ಕೆರೆತಣ್ಣೂರು ಕೆರೆಯಲ್ಲಿ ಸ್ನಾನಮಾಡಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸತ್ತು ಹೋಗಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4.ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಅರ್.ಪಿ.ಸಿ.
ದಿನಾಂಕ: 13-04-13 ರಂದು ಪಿರ್ಯಾದಿ ಲಿಂಗೇಗೌಡ, ದೊಡ್ಡಗರುಡ ಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಸ್ವಾಮಿ, ದೊಡ್ಡಗರುಡ ಹಳ್ಳಿ ಗ್ರಾಮರವರು ದಿನಾಂಕ: 12-04-2013 ರಂದು ಮರ ಕಡಿಯುವಾಗ ಅಕಸ್ಮಿಕವಾಗಿ ಬಿದ್ದು ಮ್ವತ ಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 179/13 ಕಲಂ. 379 ಐ.ಪಿ.ಸಿ.
ದಿನಾಂಕ: 13-04-2013 ರಂದು ಪಿರ್ಯಾದಿ ವನವಂಗ್ಲೈನಾ ಬಿನ್. ಲಾಲ್ನಾನ್ಫೆಲಾ ರಾಲ್ಟೆ, ವಾಸ ಕೇರಾಫ್ ಸಿದ್ದಪ್ಪ, ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ ರವರು ನೀಡಿದ ದೂರು ಏನೆಂದರೆ ದಿನಾಂಕ: 12-04-2013 ರಂದು ರಾಘವೇಂದ್ರ ವೈನ್ಸ್ ಸ್ಟೋರ್ ಹಿಂಭಾಗ, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ ರವರ ರೂಮಿನಲ್ಲಿ ಗ್ಯಾಸ್ ಲೀಕೇಜ್ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಫಿರ್ಯಾದಿಯವರು ರೂಮಿನಲ್ಲಿದ್ದ ಡೆಲ್ ಕಂಪನಿಯ ಲ್ಯಾಪ್ಟಾಪ್ ಅನ್ನು ರೂಮಿನ ಹೊರಗಡೆಗೆ ತಂದಿಟ್ಟು ಪುನಃ ಬೆಂಕಿಯನ್ನು ಆರಿಸಲು ಒಳಗಡೆ ಹೋಗಿ ತಕ್ಷಣ ವಾಪಸ್ ಹೊರಗಡೆ ಬಂದು ನೋಡಲಾಗಿ ತಾನು ಇಟ್ಟಿದ್ದ ಲ್ಯಾಪ್ಟಾಪ್ ಅನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆ ಪ್ರಚೋದನಾ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 183/13 ಕಲಂ. 306 ಕೂಡ 34 ಐ.ಪಿ.ಸಿ.
ದಿನಾಂಕ: 13-04-2013 ರಂದು ಪಿರ್ಯಾದಿ ಬಿ.ಕೆ.ದೀಪಿಕ ಕೋಂ. ನರಸೇಗೌಡ, 26 ವರ್ಷ, ವಾಸ 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಲಿಂಗರಾಜು, 2] ಪುಟ್ಟಸ್ವಾಮಿ,. 3] ಮಿಲಿಟರಿ ಶ್ರೀನಿವಾಸ ಹಾಗು 4] ಮಮತ ರವರುಗಳು ವಡವೆಗಳನ್ನು ಬಿಡಿಸಿಕೊಡುವಂತೆ ಕೇಳಿದ್ದು ಇನ್ನು ಬಿಡಿಸಿಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ಆರೋಪಿತರು ಈ ದಿವಸ ಒಟ್ಟಾಗಿ ಬಂದು ಫಿರ್ಯಾದಿಯವರ ತಂದೆ ತಾಯಿಗಳಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದು ಆಗ ಅಕ್ಕಪಕ್ಕದ ಮನೆಯವರು ಗಲಾಟೆಯನ್ನು ನೋಡುತ್ತಿದ್ದು ಇದರಿಂದ ತಮ್ಮ ತಂದೆ ತಾಯಿಗಳು ಮಾನಸಿಕವಾಗಿ ನೊಂದು ಅಳುತ್ತಿದ್ದು ಈ ಅವಮಾನವನ್ನು ಸಹಿಸಲಾರದೆ ಬೆಳಿಗ್ಗೆ 11-00 ಗಂಟೆಯಲ್ಲಿ ಫಿರ್ಯಾದಿಯವರ ತಾಯಿ ಸುಜಾತ ರವರು ಸೀರೆಯಿಂದ ಕತ್ತಿಗೆ ನೇಣು ಹಾಕಿಕೊಂಡಿದ್ದು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿದ್ದು ವೈದ್ಯಾಧಿಕಾರಿಗಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಆದ್ದರಿಂದ ಆರೋಪಿಗಳ ವಿರುದ್ದ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment