ದಿನಾಂಕ : 17-04-2013 ರಂದು ಮಂಡ್ಯ ಜಿಲ್ಲೆಯಲ್ಲಿ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳವು ಪ್ರಕರಣ, 1 ವಂಚನೆ ಪ್ರಕರಣ, 4 ಮನುಷ್ಯ ಕಾಣೆಯಾದ ಪ್ರಕರಣಗಳು, 2 ರಸ್ತೆ ಅಪಘಾತ ಪ್ರಕರಣಗಳು ಹಾಗು 19 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. 461, 380 ಐ.ಪಿ.ಸಿ.
ದಿನಾಂಕ: 17-04-2013 ರಂದು ಪಿರ್ಯಾದಿ ಎಂ.ಶಾಂತ, ಹಾಪ್ಕಾಮ್ಸ್ ಸಹಾಯಕ, ಕುವೆಂಪುನಗರ, ಮೈಸೂರು ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯಲ್ಲಿ, ಎಂ.ಸಿ ರಸ್ತೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ 1] ಎಸ್.ನಾಗೇಂದ್ರ ಗುತ್ತಲು, ಹಾಗು 2] ವಿ.ನಾಗರಾಜು ಕಾಮರ್ಿಕರ ಕಾಲೋನಿ, ಚಿಕ್ಕಮಂಡ್ಯ ರವರುಗಳು 09-04-13 ರಂದು ಎಂ.ಸಿ ರಸ್ತೆ, ಮಂಡ್ಯ ಸಿಟಿ ಯಲ್ಲಿರುವ ಹಾಪ್ಕಾಮ್ಸ್ ಸಂಸ್ಥೆಯ ಕಛೇರಿಯ ಬೀರುವನ್ನು ದಿನಾಂಕ: 09-04-2013 ರಂದು ಆರೋಪಿತರು ಹೊಡೆದು ಹಾಕಿ ದಾಖಲಾತಿಗಳನ್ನು ಹೊರಗಡೆ ತೆಗೆದು ಕಳವು ಮಾಡಿರುತ್ತಾರೆಂದು ಹಾಗೂ ಹೊಡೆದಿರುವ ಬೀರುವಿನ ನಕಲಿ ಕೀಲಿ ಕೈ ಮಾಡಿಸಿ ಬಳಕೆ ಮಾಡುತ್ತಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 190/13 ಕಲಂ. 420 ಐ.ಪಿ.ಸಿ.
ದಿನಾಂಕ: 17-04-2013 ರಂದು ಪಿರ್ಯಾದಿ ಮಾಯಣ್ಣ ಬಿನ್ ಲೇಟ್. ನೀಲಿ ಕೆಂಪಯ್ಯ, 53 ವರ್ಷ, ಬೇವಿನಹಳ್ಳಿ ಗ್ರಾಮ ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು 20-25 ವರ್ಷ ವಯಸ್ಸಿನ ಅಪರಿಚಿತ ಹುಡುಗರು ಬೆಳ್ಳಿ ಕಾಲುಮುರಿ ಹಾಗೂ ಕುಕ್ಕರನ್ನು ಪಾಲಿಶ್ ಮಾಡಿ ನಂತರ ತಮ್ಮ ಪತ್ನಿಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಪಾಲಿಶ್ ಮಾಡಲು ತೆಗೆದುಕೊಂಡಿದ್ದು ನಮ್ಮ ಗಮನವನ್ನು ಬೇರೆಡೆಗೆ ಸೆಳೆದು ನಂಬಿಸಿ ಮಾಂಗಲ್ಯ ಸರವನ್ನು ಮೋಸದಿಂದ ತೆಗೆದುಕೊಂಡು ಹೊರಟುಹೋಗಿರುತ್ತಾರೆಂದು ಇದರ ಅಂದಾಜು ಬೆಲೆ ಸುಮಾರು 85,000 ರೂಗಳಾಗಿರುತ್ತೆಂದು ಪತ್ತೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರನ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 191/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.
ದಿನಾಂಕ: 17-04-2013 ರಂದು ಪಿರ್ಯಾದಿ ಕೆ.ಎಂ.ಮಂಚೇಗೌಡ ಬಿನ್. ಲೇಟ್. ಮೂಗಿ, ಮಾದೇಗೌಡ, 48 ವರ್ಷ, ಕಾರಸವಾಡಿ ರಸ್ತೆ ರವರು ನೀಡಿದ ದೂರು ಏನೆಂದರೆ ಅವರ ಮಗಳು ಕೆ.ಎಂ.ಸುಹಾಸಿನಿ ಬಿನ್ ಮಂಚೇಗೌಡ, 18 ವರ್ಷ,ಒಕ್ಕಲಿಗರು, ಕಾರಸವಾಡಿ ಗ್ರಾಮ, ಮಂಡ್ಯ ತಾ. ರವರು ಮನೆಯಿಂದ ಎದ್ದು ಬಾಗಿಲಿಗೆ ನೀರು ಹಾಕಲು ಹೊರಗಡೆ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ನಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಸೇಹಿತರ ಮನೆಗಳಲ್ಲಿ ಹುಡುಕಿದರೂ ಸಹ ಪತ್ತೆಯಾಗಿರುವುದಿಲ್ಲವೆಂದು ಪತ್ತೆ ಕ್ರಮ ಕೋರಿ ನೀಡಿದ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 17-04-2013 ರಂದು ಪಿರ್ಯಾದಿ ರಮೇಶ ಬಿನ್. ನಂಜೇಗೌಡ, ಸಾರಂಗಿ ಗ್ರಾಮ, ಕೆ.ಆರ್. ಪೇಟೆ ತಾ|| ಮಂಡ್ಯ ಜಿಲ್ಲೆರವರು ನೀಡಿದ ದೂರು ಏನೆಂದರೆ ಅವರ ಮಗಳು ಎಸ್.ಆರ್ ದೇವಕಿ ಬಿನ್. ರಮೇಶ್, 18 ವರ್ಷ, ವಕ್ಕಲಿಗರು, ಸಾರಂಗಿ ಗ್ರಾಮ ರವರು ದಿನಾಂಕ: 15.04.2013 ರಂದು ಬೆಳಿಗ್ಗೆ 08.30 ಗಂಟೆಯಲ್ಲಿ ಸಾರಂಗಿ ಗ್ರಾಮದಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಕೆ.ಆರ್.ಪೇಟೆ ಟೌನ್ಗೆ ಹೋದವಳು ಸಂಜೆ ಆದರು ಕೂಡ ಮನೆಗೆ ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಿದರು ಪತ್ತೆಯಾಗದ ಕಾರಣ ಸಿಕ್ಕಿರುವುದಿಲ್ಲ ಪತ್ತೆಮಾಡಿ ಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 155/2013 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 17-04-2013 ರಂದು ಪಿರ್ಯಾದಿ ಪಳಿನಿ ಬಿನ್. ಲೇಟ್ ಕೆ. ಚಂದ್ರ, ಪೆನ್ಶನ್ ಕಾಲೋನಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾಯಿ ಧನಲಕ್ಷ್ಮಿ, ಪೆನ್ಶನ್ ಕಾಲೋನಿ ರವರು ದಿನಾಂಕ: 16-04-2013 ರಂದು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಲ್ ಶಿವರಾಮು ಬಿನ್. ಲಿಂಗಯ್ಯ, ಮಂಡ್ಯ ಸಿಟಿ, ಹೊಸಹಳ್ಳಿ, 6ನೇ ಕ್ರಾಸ್ (ಬಸವನಗುಡಿ ಮುಂದೆ) ವಾಸವಾಗಿರುವ ಆರ್, ಪವಿತ್ರ ಬಿನ್ ರಾಮಚಂದ್ರ, 19 ವರ್ಷ, ಮೊದಲನೇ ವರ್ಷದ ಬಿ.ಕಾಂ.ವಿದ್ಯಾರ್ಥಿನಿ, ವಾಸ ಕಾವೇರಿ ಚಂದ್ರ ದರ್ಶನ ಕಲ್ಯಾಣಮಂಟಪದ ಹತ್ತಿರ, ಕಾವೇರಿ ನಗರ, ಮಂಡ್ಯ ಸಿಟಿ ರವರು ದಿನಾಂಕ: 17-04-2013 ರಂದು ಬೆಳಿಗ್ಗೆ ಹೊಸಹಳ್ಳಿ 6 ನೇಕ್ರಾಸ್ ಬಸವನಗೂಡು ಮುಂಭಾಗದಲ್ಲಿರುವ ಪಿರ್ಯಾದಿ ಹೆಚ್.ಎಲ್ ಶಿವರಾಮು ರವರ ಮನೆಯಿಂದ ಕಾವೇರಿನಗರದ ತಂದೆ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಮನೆಗೆ ಸಂಜೆಯಾದರು ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲಾ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಮಂಡ್ಯ ಸಂಚಾರಿ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279,304 (ಎ) ಐಪಿಸಿ ಕೂಡ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 17-04-2013 ರಂದು ಪಿರ್ಯಾದಿ ಹೆಚ್.ಎಸ್.ಕೆಂಪಯ್ಯ ಬಿ.ಹೊಸೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 17-04-2013 ರಂದು ಪಂಚಲಿಂಗೇಶ್ವರ ಪೆಟ್ರೋಲ್ ಬಂಕ್ ಮುಂಭಾಗ ನಂ. ಕೆಎ-11/ಎ-5639ರ ಟಾಟಾ ಮ್ಯಾಜಿಕ್ ವಾಹನದ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಜೊತೆ ನನ್ನ ಬಲಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಜವರೇಗೌಡರ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಜವರೇಗೌಡರವರು ಕೆಳಗೆ ಬಿದ್ದಾಗ ಅಲ್ಲೇ ಜೊತೆಯಲ್ಲಿ ನಾನು ಹಾಗೂ ರಸ್ತೆಯಲ್ಲಿ ಬರುತ್ತಿದ್ದವರು ಜವರೇಗೌಡರನ್ನು ಎತ್ತಿ ಉಪಚರಿಸಿ ನೋಡಲಾಗಿ ಅವರಿಗೆ ತಲೆಗೆ, ಬಲಗೈಗೆ ಮತ್ತು ಇತರೆ ಕಡೆಗಳಿಗೆ ಪೆಟ್ಟಾಗಿದ್ದು ನಂತರ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 128/13 ಕಲಂ. 279-337-304[ಎ] ಐಪಿಸಿ ಕೂಡ 187 ಐಎಂವಿ ಕಾಯ್ದೆ.
ದಿನಾಂಕ: 17-04-2013 ರಂದು ಪಿರ್ಯಾದಿ ನಾಗೇಗೌಡ ಬಿನ್. ಸಿದ್ದೇಗೌಡ, 48 ವರ್ಷ, ರಾಯಸಮುದ್ರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 14.04.2013 ರಂದು ರಾತ್ರಿ 08.00 ಗಂಟೆಯಲ್ಲಿ, ಉಯ್ಗೋನಹಳ್ಳಿ ಹಳ್ಳದ ಹತ್ತಿರ ನಂ. ಕೆಎ-16-ಟಿ-7640 ರ ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತಿದ್ದ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋದಲ್ಲಿ ಕುಳಿತಿದ್ದ ನನಗೆ ಬಲಮೊಣಕೈಗೆ ಪೆಟ್ಟಾಯಿತು. ಕಾಂತರಾಜುಗೆ ತಲೆಗೆ ಮೈಕೈಗೆ ಪೆಟ್ಟಾಗಿ ತಲೆಯಲ್ಲಿ ರಕ್ತ ಬರುತಿತ್ತು ಕೆಆರ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಬರುತ್ತಿರುವಾಗ ಕಾಂತರಾಜು ಮೃತಪಟ್ಟಿರುತ್ತಾನೆ ಆದ್ದರಂದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment