Moving text

Mandya District Police

DAILY CRIME REPORT DATED : 18-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 18-04-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಎಸ್ಸಿ. ಮತ್ತು ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ,  2 ವಂಚನೆ ಪ್ರಕರಣಗಳು,   2 ರಸ್ತೆ ಅಪಘಾತ ಪ್ರಕರಣಗಳು, 4 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 20 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.        

ಎಸ್. / ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. 3 ಕ್ಲಾಸ್ (1) (X)  ಎಸ್. / ಎಸ್.ಟಿ. ಅಕ್ಟ್-1989 ಹಾಗೂ 506 ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಎ.ಡಿ. ಬೀರೇಶ, 38 ವರ್ಷ, ಆದಿಕರ್ನಾಟಕ (ಮಾದಿಗ) ಜನಾಂಗ, ಆನೆದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಎ.ಪಿ. ಮಹೇಶ @ ಆಕಾಶ್ ವಕ್ಕಲಿಗ, ಆನೆದೊಡ್ಡಿ ಗ್ರಾಮ ರವರಿಗೆ ಹಣವನ್ನು ಕೊಟ್ಟಿದ್ದು ನನಗೆ ಹಣದ ತೊಂದರೆ ಇದೆ ಎಂದು ಕೇಳಿದೆ ಆಗ ಅವನು ಏಕಾಏಕಿ ನನ್ನನ್ನು ಕರೆದು ಹಣ ಕೇಳುವಷ್ಠು ನಿನಗೆ ಕೊಬ್ಬ ಹೊಲಯ, ಮಾದಿಗ ನನ್ನ ಮಗನೆ, ಬೋಳಿಮಗನೆ, ಬಡ್ಡಿಮಗನೆ ಎಂದು ಜಾತಿ ನಿಂದನೆ ಮಾಡಿ ಬಾಯಿಗೆ ಬಂದ ಹಾಗೆ ಬೈದಿರುತ್ತಾನೆ. ನನಗೆ ಪ್ರಾಣ ಬೆದರಿಕೆ ಇರುವುದರಿಂದ ನನಗೆ ತುಂಬಾ ಭಯವಾಗುತ್ತದೆ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣಗಳು :

1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 419-468 ಐ.ಪಿ.ಸಿ. 

ದಿನಾಂಕ: 18-04-2013 ರಂದು ಪಿರ್ಯಾದಿ ಪ್ರತಾಪ್ರೆಡ್ಡಿ, ಸಿಪಿಐ, ಮಳವಳ್ಳಿ ಗ್ರಾಮಾಂತರ ವೃತ್ತ, ಮಳವಳ್ಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರವಿಕುಮಾರ್ 30ವರ್ಷ, ಚನ್ನಪಟ್ಟಣ್ಣ ಟೌನ್, ರಾಮನಗರ ಜಿಲ್ಲೆ ರವರು ಮೊ.ಸಂ.114/2012ರ ಆರೋಪಿಗಳಿಗೆ ಕೃತ್ಯವೆಸಗಲು ಮೊಬೈಲ್ ನಂ. 8431187015 ಸಿಮ್ನ್ನು ಬೇರೆಯವರ ದಾಖಲಾತಿಗಳನ್ನು ಮತ್ತು ಸಹಿಯನ್ನು ಬಳಸಿ ನೀಡಿರುತ್ತಾರೆಂದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 419-468 ಐ.ಪಿ.ಸಿ. 

ದಿನಾಂಕ: 18-04-2013 ರಂದು ಪಿರ್ಯಾದಿ ಪ್ರತಾಪ್ರೆಡ್ಡಿ, ಸಿಪಿಐ, ಮಳವಳ್ಳಿ ಗ್ರಾಮಾಂತರ ವೃತ್ತ, ಮಳವಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮಹಮ್ಮದ್ಅಲಿ, 3ನೇ ಕ್ರಾಸ್, ಗಾಳಿಪುರ, ಚಾಮರಾಜನಗರ ಟೌನ್ ರವರು ಮೊ.ಸಂ.114/2012ರ ಆರೋಪಿಗಳಿಗೆ ಕೃತ್ಯವೆಸಗಲು ಮೊಬೈಲ್ ನಂ 9663871313 ಸಿಮ್. ಬೇರೆಯವರ ದಾಖಲಾತಿಗಳನ್ನು ಮತ್ತು ಸಹಿಯನ್ನು ಬಳಸಿ ನೀಡಿರುತ್ತಾರೆಂದು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ರಸ್ತೆ ಅಪಘಾತ ಪ್ರಕರಣಗಳು :

1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 107/13 ಕಲಂ. 279-337-304[ಎ} ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಶಿವಣ್ಣ, 40ವರ್ಷ, ಚುಂಚನಹಳ್ಳಿಪಾಳ್ಯ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶೀತಲ್ಕುಮಾರ್. ಎಂ.ಜೆ. ಜೈನರು,  ಶಿಕ್ಷಕರು, ಮಾಯಸಂದ್ರ ಗ್ರಾಮ ರವರು ನಂ. ಕೆಎ-44-ಕೆ-668 ಬಜಾಜ್ ಡಿಸ್ಕವರಿ ಬೈಕನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿಗೆ ಪೆಟ್ಟಾಗಿ, ಮೋಟಾರ್ ಸೈಕಲ್ ಸವಾರ ಮೃತಪಟ್ಟಿರುತ್ತಾನೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 61/13 ಕಲಂ. 279,304(ಎ) ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಮರಿಲಿಂಗಯ್ಯ, ಕುಂಟನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ಕೆ ಎ.09-ಎಫ್-3783 ರ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ನ್ನು, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ-02-ಆರ್-5695 ರ ಮೋಟಾರ್ ಸೈಕಲ್ ಸವಾರರಿಗೆ ಡಿಕ್ಕಿ ಹೊಡೆಸಿದ ಪರಿಣಾಮೆ ಅವರಿಗೆ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 498(ಎ) ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಮಾದೇವಿ, ನಂದೀಪುರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 16-04-2013 ರಂದು ಆರೋಪಿಗಳಾದ ಯೊಗೇಶ, ಗೌರಮ್ಮ, ಶೇಖರ, ದ್ಯಾವಶೆಟ್ಟಿ, ವೈಶಾಲಿ, ಹಾಗು ಮಂಜುಳ ನಂದೀಪುರ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಇನ್ನೂ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಒತ್ತಾಯಿಸಿ ಗಂಡ ಮತ್ತು ಅತನ ಸಂಬಂಧಿಕರು ಹಿಂಸೆ ಕಿರುಕುಳ ನೀಡುತ್ತಿರುತ್ತಾರೆಂದು ಅವರುಗಳ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 498(ಎ), 323,506 ಐ.ಪಿ.ಸಿ.

ದಿನಾಂಕ: 18-04-2013 ರಂದು ಪಿರ್ಯಾದಿ ಕಾವೇರಿ @ ಕಾವ್ಯ ಬಿದರಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಗಂಡ ಆರೋಪಿ ಯರಕೇಗೌಡ @ ಗಿರೀಶ, ಬಿದರಕೆರೆ ಗ್ರಾಮ, ಬಿಂಡಿಗನವಿಲೆ ಹೋಬಳಿ ರವರು ಸಣ್ಣಪುಟ್ಟ ವಿಚಾರಗಳಿಗೆಲ್ಲಾ ನನಗೆ ಬೈದು , ಹೊಡೆದು ಮತ್ತು ಊಟ ಬಟ್ಟೆ ಕೊಡದೆ ಮಾನಸಿಕವಾಗಿ. ದೈಹಿಕವಾಗಿ ಕಿರುಕುಳ ನೀಡುತ್ತಿದ್ದು, ಈಗ ನಾನು 3 ತಿಂಗಳ ಗಭರ್ಿಣಿಯಾಗಿರುತ್ತೇನೆ. ನಿಮ್ಮ ಅಪ್ಪನ ಮನೆಯಿಂದ ಹಣ ತೆಗೆದುಕೊಂಡು ಬಾ, ಇನ್ನು ಮುಂದೆ ಉಳಿಸುವುದಿಲ್ಲ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 80/13 ಕಲಂ. 498(ಎ)-504-114-149 ಐ.ಪಿ.ಸಿ. ಕೂಡ 3 ಮತ್ತು 4 ಡಿ.ಪಿ. ಕಾಯಿದೆ.    

ದಿನಾಂಕ:18-04-2013ರಂದು ಪಿರ್ಯಾದಿ ಊ.ಎ.ರೇಖಾ, ಹಂಚೀಪುರ, ಮಳವಳ್ಳಿ ತಾಲ್ಲೋಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಆರ್..ಓ.ನಂಜುಂಡಯ್ಯ . ಆರ್.ಓ.ಬಸವರಾಜು, ಆರ್..ಓ.ನಂಜುಂಡಸ್ವಾಮಿ, ಸುಶೀಲ, ಪವಿತ್ರ, ರಾಜಮ್ಮ ಎಲ್ಲರೂ ರಾವಣಿ ಗ್ರಾಮ, ಕಸಬಾ ಹೋಬಳಿ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ನಿಮ್ಮ ತಂದೆ ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


4. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 98/13 ಕಲಂ. 143-355-324-498(ಎ) ಕೂಡ 149 ಐಪಿಸಿ ಮತ್ತು ಕಲಂ 3 ಮತ್ತು 4 ಡಿ.ಪಿ ಆಕ್ಟ್.

ದಿನಾಂಕ: 18-04-2013 ರಂದು ಪಿರ್ಯಾದಿ ಶ್ರೀಮತಿ. ವಿನೋದ, ಐಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 17-04-2013 ರಂದು ಆರೋಪಿಗಳಾದ 1]ಬಸವರಾಜು 2]ಜಯಮ್ಮ, 3] ಗೌರಮ್ಮ, 4] ತಮ್ಮಯ್ಯ, 5] ಯೋಗರಾಜು, 6] ಪಾಪು, ಹಾಗು 7]ಸುನೀಲ್ ಐಕನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದು ಪಿಯರ್ಾದಿಗೆ ಚಪ್ಪಲಿ ಕಾಲಿನಿಂದ ಒದ್ದು ಸೀಳು ಸೌದೆಯಿಂದ ಎಡಕಾಲಿಗೆ ಹೊಡೆದು ರಕ್ತಗಾಯ ಮಾಡಿ ನೀನು ನಿಮ್ಮ ತಂದೆ ಮನೆಗೆ ಹೋಗು ಇಲ್ಲಿ ಇರಬೇಡ ಎಂದು ಹೊಡೆದು ಗಲಾಟೆ ಮಾಡಿರುತ್ತಾರೆ ಅವರುಗಳ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಕೊಪ್ಪ ಪೊಲೀಸ್ ಠಾಣೆ ಮೊ.ನಂ. 73/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 18-04-2013 ರಂದು ಪಿರ್ಯಾದಿ ಶಶಿಕಲಾ, 38 ವರ್ಷ, ಸ್ಪಂದನ ಉಚಿತ ಅನಾಥಾಶ್ರಮ, ಸೋಮನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಭವಾನಿ, 13ವರ್ಷ, ಸ್ಪಂದನ, ಅನಾಥಾಶ್ರಮದಿಂದ ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment